ಸೋತು ಗೆದ್ದ ಸ್ಟೀವ್ ಸ್ಮಿತ್! 1 ವರ್ಷ ಬ್ಯಾನ್, ಹೈಸ್ಕೂಲ್ ಫೇಲ್
ಆಸೀಸ್ ನಲ್ಲಿ ಸ್ಮಿತ್ ಅಲೆದಾಟ

ಸೋತು ಗೆದ್ದ ಸ್ಟೀವ್ ಸ್ಮಿತ್!  1 ವರ್ಷ ಬ್ಯಾನ್, ಹೈಸ್ಕೂಲ್ ಫೇಲ್ಆಸೀಸ್ ನಲ್ಲಿ ಸ್ಮಿತ್ ಅಲೆದಾಟ

ಸ್ಟೀವ್ ಸ್ಮಿತ್..  1989  ಜೂನ್ 2 ರಂದು ಆಸ್ಟ್ರೆಲಿಯಾದ  ಸಿಡ್ನಿಯಲ್ಲಿ ಹುಟ್ಟುತ್ತಾರೆ.  ಬಲಗೈ ಬ್ಯಾಟರ್ ಆದ ಸ್ಮಿತ್ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಸಾಧನೆಗಳನ್ನ ಮಾಡಿದ್ದಾರೆ.17 ನೇ ವಯಸ್ಸಿನಲ್ಲಿ ಕ್ರಿಕೆಟ್ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಆಡಲು ಶಾಲೆಯನ್ನ ಬಿಡ್ತಾರೆ. ಅಲ್ಲದೇ ಹೈಸ್ಕೂಲ್‌ನಲ್ಲಿ ಫೇಲ್ ಕೂಡ ಆಗಿದ್ದಾರೆ. ಸ್ಮಿತ್ ಚಿಕ್ಕವನಿದ್ದಾಗ ಬ್ಯಾಟಿಂಗ್ ಅನ್ನು ಇಷ್ಟಪಟ್ಟಿದ್ದರು.  ಅವರ ತ೦ದೆ ಪೀಟರ್ ಆಸ್ಟ್ರೇಲಿಯಾದವರು ಮತ್ತು ತಾಯಿ ಗಿಲ್ಲಿಯನ್ ಬ್ರಿಟಿಷ್‌ ಮೂಲದವರು. ಇದು ಇವರ ದ್ವಿಪೌರತ್ವಕ್ಕೆ ಕಾರಣ. ಸ್ಮಿತ್ ಯಾವಾಗಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರಿಂದ ಇವರ ಕುಟುಂಬ ಕೂಡ ಇವರ ಬೆಂಬಲಕ್ಕಿತ್ತು.  ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಬಹುದಿತ್ತು. ಆದ್ರೆ ಆಸ್ಟ್ರೆೇಲಿಯಾ ಕ್ರಿಕೆಟ್ ತಂಡದಲ್ಲಿ ಸ್ಮಿತ್ ಮಿಂಚುತ್ತಿದ್ದಾರೆ. 2015ರಲ್ಲಿ ಆಸೀಸ್‌ ಸರಣಿಯ ಸೋಲಿನಿ೦ದಾಗಿ ಮೈಕೆಲ್ ಕ್ಲಾರ್ಕ್ ನಿವೃತ್ತಿ ಹೊ೦ದಿದರು. ಇದರಿ೦ದ ಆಸ್ಟ್ರೇಲಿಯಾದ ಟೆಸ್ಟ್ ತಂಡದ ಪೂರ್ಣ ಸಮಯ ನಾಯಕನಾಗಿ ಸ್ಮಿತ್ ನೇಮಕಗೊಂಡರು.

ಬಲಗೈ ಲೆಗ್ ಸ್ಪಿನ್ ಮಾಡುತ್ತಿದ್ದ ಸ್ಮಿತ್ ಆರ೦ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತ೦ಡಕ್ಕೆ ಆಲ್ ರೌ೦ಡರ್ ಆಗಿ ಆಯ್ಕೆಯಾದರು. ಆದರೆ ಈಗ ಸ್ಮಿತ್ ಪ್ರಮುಖ ಬ್ಯಾಟ್ಸಮನ್ ಆಗಿ ಆಡುತ್ತಾರೆ.  2013-14ರ ಆಶಸ್ ಸರಣಿಯ ಸಮಯದಲ್ಲಿ ಸ್ಮಿತ್ ಅವರ ವೃತ್ತಿಜೀವನದ ಪ್ರಮುಖ ಘಟನೆ ಸಂಭವಿಸಿತು, ಇದು ಅವರಿಗೆ ಸಂತೋಷವನ್ನು ತಂದಿತು ಮಾತ್ರವಲ್ಲದೆ ಅವರನ್ನು ಉನ್ನತ ದರ್ಜೆಯ ಕ್ರಿಕೆಟಿಗನನ್ನಾಗಿ ಮಾಡಲು ಸಮಾಧಾನಪಡಿಸಿತು. ಈ ವೇಳೆ ಸರಣಿಯಲ್ಲಿ ಕಮಾಲ್ ಮಾಡಿ ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಾರೆ.   ಟೆಸ್ಟ್, ಏಕದಿನ ಮತ್ತು ಟಿ20ಗಳಲ್ಲಿ ಆಡುವಲ್ಲಿ ಯಶಸ್ವಿಯಾದರು.  ಜೊತೆಗೆ   ಸ್ಮಿತ್ ಅವರ ವೃತ್ತಿಜೀವನದಲ್ಲಿ ಸಾಕಷ್ಟು ಸವಾಲುಗಳನ್ನ ಎದುರಿಸಿದ್ದಾರೆ. 2018 ರಲ್ಲಿ ಬಾಲ್ ಟ್ಯಾಂಪರಿಗ್‌ ಪ್ರಕರಣದಲ್ಲಿ ಒಂದು ವರ್ಷ ಬ್ಯಾನ್ ಆಗಿದ್ರು.. ಈ ಘಟನೆ ಅವರನ್ನ ಕುಗ್ಗಿಸಿಲ್ಲ, ಮತ್ತಷ್ಟು ಬಲಿಷ್ಟನಾಗಿ ಮಾಡಿತ್ತು.  ವಿಶ್ವದ ಅಗ್ರ ಕ್ರಿಕೆಟಿಗರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಮರಳಿ ಪಡೆದರು. ತನ್ನ ಬುದ್ಧಿವಂತಿಕೆ ಮತ್ತು ಸಹ ಆಟಗಾರರ ಜೊತೆಯಿದ್ದ ಓಡನಾಟ ತನ್ನ ಬೌಲಿಂಗ್ ಬ್ಯಾಟಿಂಗ್ ಪರಾಕ್ರಮದಿಂದ ತನ್ನ ನಾಯಕತ್ವದಲ್ಲಿ ಹಲುವು ಪಂದ್ಯಗಳನ್ನ ಗೆದ್ದಿದ್ದಾರೆ.

 

 2018 ರಲ್ಲಿ ಮದುವೆಯಾದ ಸ್ಮಿತ್‌

ಸ್ಮಿತ್ 2011 ರಲ್ಲಿ ತನ್ನ ಪತ್ನಿ ಡ್ಯಾನಿ ವಿಲ್ಲೀಸ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇಬ್ಬರೂ 2017 ರಲ್ಲಿ ನ್ಯೂಯಾರ್ಕ್‌ನಲ್ಲಿ  ನಿಶ್ಚಿತಾರ್ಥ ಮಾಡಿಕೊಂಡು  2018 ರಲ್ಲಿ ಸಿಡ್ನಿಯಲ್ಲಿ ಮ್ಯಾರೇಜ್ ಆಗ್ತಾರೆ.  ವಿಲ್ಲೀಸ್ ಸಿಡ್ನಿಯ ಮ್ಯಾಕ್ವಾರಿ ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಡಬಲ್ ಸೆಂಚುರಿ

2019 ರ ಆಸೀಸ್ ಸರಣಿಯ 4 ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಮಿತ್ ಗಳಿಸಿದ ಡಬಲ್ ಸೆಂಚುರಿ ಸಖತ್ ಸದ್ದು ಮಾಡಿತ್ತು.  211 ರನ್‌ಗಳ ಅದ್ಭುತ ಇನ್ನಿಂಗ್ಸ್, ದೀರ್ಘಕಾಲ ಕ್ರೀಸ್‌ನಲ್ಲಿ ಉಳಿಯುವ  ಮೂಲಕ ತನ್ನ ತಾಕತ್ತು ಏನು ಅನ್ನೋದನ್ನ ತೋರಿಸಿದ್ರು.

2024 ರ ಹರಾಜಿನಲ್ಲಿ ಮಾರಾಟವಾಗದೆ ಸ್ಟೀವ್ ಸ್ಮಿತ್ ಈಗ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪೂರ್ಣಾವಧಿ ನಾಯಕನಾಗಿ ಸ್ಟೀವ್ ಸ್ಮಿತ್ ಮತ್ತೊಮ್ಮೆ ಆಯ್ಕೆಯಾಗುವುದಿಲ್ಲ. ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಅಮೀರ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಿಸಿದ ಅತ್ಯಂತ ಕಠಿಣ ಬೌಲರ್ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ. ವೃತ್ತಿಜೀವನದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಎರಡು ಬಾರಿ ಶೂನ್ಯಕ್ಕೆ ಔಟ್ ಮಾಡಿದ ಮೊದಲ ಬೌಲರ್ ಆರ್ ಅಶ್ವಿನ್ ಆಗಿದ್ದಾರೆ.

 ಸ್ವೀವ್ ಸ್ಮಿತ್ ದಾಖಲೆಗಳು

116 ಟೆಸ್ಟ್ ಪಂದ್ಯಗಳನ್ನ ಆಡಿರೋ ಸ್ಮಿತ್  10,200 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 35ಕ್ಕೂ ಹೆಚ್ಚು ಸೆಂಚರಿ ಮತ್ತು 3ಕ್ಕೂ ಹೆಚ್ಚು ಡಬಲ್  ಸೆಂಚುರಿ ಬಾರಿಸಿದ್ದಾರೆ. 169 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿರೋ ಸ್ವೀವ್ 5727 ರನ್ ಗಳಿಸಿದ್ದಾರೆ.  12ಕ್ಕೂ ಹಚ್ಚು ಆಫ್ ಸೆಂಚುರಿ ಹೊಡೆದಿದ್ದಾರೆ. ಇನ್ನೂ 67

ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದು,  1,000 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಒಟ್ನಲ್ಲಿ  ಸ್ವೀವ್ ಸ್ಮೀತ್ ಕ್ರಿಕೆಟ್ ಓಟ ಹೀಗೆ ಮುಂದುವರಿಯಲಿ.

 

 

 

Kishor KV

Leave a Reply

Your email address will not be published. Required fields are marked *