ರೆಬಲ್ ಸ್ಟಾರ್ ಆಸೆ ಈಡೇರಿಸಿದ ರಾಕಿ ಭಾಯ್! – ಅಭಿಷೇಕ್ ಮಗನಿಗೆ ವಿಶೇಷ ಉಡುಗೊರೆ ಕೊಟ್ಟ ಯಶ್‌

ರೆಬಲ್ ಸ್ಟಾರ್ ಆಸೆ ಈಡೇರಿಸಿದ ರಾಕಿ ಭಾಯ್! – ಅಭಿಷೇಕ್ ಮಗನಿಗೆ ವಿಶೇಷ ಉಡುಗೊರೆ ಕೊಟ್ಟ ಯಶ್‌

ಕನ್ನಡದ ರೆಬೆಲ್‌ ಸ್ಟಾರ್‌ ದಿ.ಅಂಬರೀಶ್‌ ಅವರ ಮೊಮ್ಮಗನ ನಾಮಕರಣಕ್ಕೆ ಸಿದ್ಧವಾಗಿದೆ. ಈ ಹೊತ್ತಲ್ಲೇ ಅಂಬಿ ಆಸೆಯನ್ನ ರಾಕಿಂಗ್‌ ಸ್ಟಾರ್‌ ಯಶ್‌ ಈಡೇರಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು! – ಚಾಂಪಿಯನ್ಸ್​ ಟ್ರೋಫಿ ಫೈನಲ್​ಗೆ ಟೀಮ್​ ಇಂಡಿಯಾ

ರಾಕಿಂಗ್ ಸ್ಟಾರ್ ಯಶ್  ಅಂಬರೀಷ್ ಜೊತೆ ವಿಶೇಷ ನಂಟು ಹೊಂದಿದ್ದಾರೆ. ಹೀಗಾಗೇ ಸುಮಲತಾ ಆಯೋಜನೆ ಮಾಡುವ ವಿಶೇಷ ಕಾರ್ಯಕ್ರಮಗಳಿಗೆ ಯಶ್ ಬಂದೇ ಬರುತ್ತಾರೆ.  ಇದೀಗ ಅಂಬರೀಷ್ ಆಸೆಯನ್ನು ಯಶ್ ಅವರು ಈಡೇರಿಸಿದ್ದಾರೆ. ದೇಶಿ ಸಂಸ್ಕೃತಿ ಸಾರುವ ಹಾಗೂ ಪಾರಂಪರಿಕ ಹೆಮ್ಮೆಯ ಪ್ರತೀಕವಾಗಿರುವ ಕಲಘಟಗಿ ತೊಟ್ಟಿಲನ್ನ ಯಶ್‌ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಯಶ್ ಅವರಿಗೆ ಆಯಿರಾ ಜನಿಸಿದಾಗ ಎಲ್ಲ ಕಡೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಆಗ ಅಂಬರೀಷ್ ಕೂಡ ಇದ್ದರು. ಯಶ್ ಮಗಳಿಗೆ ಕಲಘಟಗಿ ತೊಟ್ಟಿಲನ್ನು ರೆಬೆಲ್ ಸ್ಟಾರ್ ಅಂಬರೀಷ್ ಮಾಡಿಸಿಕೊಟ್ಟಿದ್ದರು. ಇದನ್ನು ಯಶ್ ಅವರು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈಗ ಅವರು ಕೂಡ ವಿಶೇಷ ತೊಟ್ಟಿಲು ಮಾಡಿಸಿ ಅಭಿಷೇಕ್ ಮನೆಗೆ ಕಳುಹಿಸಿದ್ದಾರೆ. ಇದೀಗ ಕಲಘಟಗಿಯಿಂದ ತೊಟ್ಟಿಲು ಮಾಡಿಸಿ ಅಭಿಷೇಕ್ ಮನೆ ತಲುಪಿಸಿದ್ದಾರೆ. ಇದು ಯಶ್ ಹಾಗೂ ಅಂಬಿ ಅಭಿಮಾನಿಗಳಿಗೆ ಖುಷಿ ನೀಡಿದೆ.

ಅಭಿಷೇಕ್​ಗೆ ಮಗು ಆದ ಬಳಿಕ ಕಲಘಟಗಿ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ತೂಗಿಸಬೇಕು ಎಂಬ ಆಸೆ ಅಂಬರೀಷ್ ಅವರದ್ದಾಗಿತ್ತು. ಆ ಮಾತನ್ನು ಯಶ್ ನೆನಪಿನಲ್ಲಿಟ್ಟುಕೊಂಡಿದ್ದರು. ಅಭಿಷೇಕ್​ಗೆ ಮಗು ಜನಿಸುತ್ತಿದ್ದಂತೆ ತೊಟ್ಟಿಲು ಮಾಡೋಕೆ ಆರ್ಡರ್ ಕೊಟ್ಟಿದ್ದರು ಎನ್ನಲಾಗಿದೆ. ಯಶ್ ಅವರು ಈಗ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *