ಯಾರು ಈ ಶಾಮಾ ಮೊಹ್ಮಮದ್? ‘ಕೈ’ ವಕ್ತಾರೆಯ ಬಣ್ಣ ಬಯಲು!
ದೇಶ ದ್ರೋಹಿ ಪಟ್ಟ, ಉಗಿದ ಫ್ಯಾನ್ಸ್

ಯಾರು ಈ ಶಾಮಾ ಮೊಹ್ಮಮದ್?    ‘ಕೈ’ ವಕ್ತಾರೆಯ ಬಣ್ಣ ಬಯಲು!ದೇಶ ದ್ರೋಹಿ ಪಟ್ಟ, ಉಗಿದ ಫ್ಯಾನ್ಸ್

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿರುವ ಹೊತ್ತಿನಲ್ಲೇ, ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ದೇಹ ತೂಕ ಹೆಚ್ಚಾಗಿದೆ. ಅವರೊಬ್ಬ ಭಾರತ ಕಂಡ ಅತ್ಯಂತ ಕಳಪೆ ಕ್ಯಾಪ್ಟನ್ ಎಂದು ಹೇಳಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್‌ ವಿವಾದಿತ ಹೇಳಿಕೆ ನೀಡಿದ್ದಾರೆ.  ಈ ಹೇಳಿಕೆಯನ್ನು ಮಾಜಿ ಕ್ರಿಕೆಟಿಗರು, ಬಿಜೆಪಿ ನಾಯಕರಾದಿಯಾಗಿ ಹಲವರು ಕಟುವಾಗಿ ಟೀಕಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್‌, ಟ್ವೀಟ್‌ ಅಳಿಸುವಂತೆ ಶಮಾಗೆ ಸೂಚಿಸಿದೆ. ಹಾಗಿದ್ರೆ ಈ ಶಾಮಾ ಯಾರು ಅಂತ ಮೊದಲು ನೋಡ್ಕೊಂಡು ಬರೋಣ ಬನ್ನಿ..

ಶಾಮಾ ಮೊಹಮ್ಮದ್ ಯಾರು?

ಶಮಾ ಮೊಹಮ್ಮದ್ ಮೇ 17, 1973 ರಂದು ಕೇರಳದ ಕಣ್ಣೂರು ಜಿಲ್ಲೆಯ ಚೆರುಕಲ್ಲೈನಲ್ಲಿ ಜನಿಸಿದರು. ಶಮಾ ಮೊಹಮ್ಮದ್ ಕಾಂಗ್ರೆಸ್ ವಕ್ತಾರರಾಗಿರುವುದರ ಜೊತೆಗೆ ದಂತವೈದ್ಯರೂ ಆಗಿದ್ದಾರೆ. ಕೇರಳದವರಾದ ಡಾ. ಶಮಾ ಮೊಹಮ್ಮದ್ 2015 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಶಮಾ ಕುವೈತ್‌ನ ಇಂಡಿಯನ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇದರ ನಂತರ, ಅವರು ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಡೆಂಟಲ್ ಸೈನ್ಸಸ್‌ನಲ್ಲಿ ಪದವಿ ಪಡೆದರು.

 

 ಪತ್ರಕರ್ತೆ ಆಗಿದ್ದ ಶಮಾ ಮೊಹಮ್ಮದ್

ರಾಜಕೀಯಕ್ಕೆ ಬರುವ ಮೊದಲು ಶಮಾ ಮೊಹಮ್ಮದ್ ಪತ್ರಕರ್ತೆಯಾಗಿದ್ದರು. ಅವರು ಸ್ವಲ್ಪ ಕಾಲ ಖಾಸಗಿ ಟಿವಿ ಚಾನೆಲ್‌ನಲ್ಲಿಯೂ ಕೆಲಸ ಮಾಡಿದ್ದಾರೆ. 2018 ರಲ್ಲಿ ಕಾಂಗ್ರೆಸ್ ಅವರನ್ನು ಮೊದಲ ಬಾರಿಗೆ ತನ್ನ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಆಗಿ ನೇಮಿಸಿತು. ನಂತರ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ಮಾಡಲಾಯಿತು.

 

  ಇಬ್ಬರು ಮಕ್ಕಳ ತಾಯಿ ಶಮಾ ಮೊಹಮ್ಮದ್

 

ಶಮಾ ಮೊಹಮ್ಮದ್ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ಅವರು ಇಬ್ಬರು ಮಕ್ಕಳ ತಾಯಿ. ಅವರು ಕೇರಳದ ಕಣ್ಣೂರು ಮತ್ತು ತಳಿಪರಂಬ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

 ಹೆಚ್ಚಿದ ಟೀಕೆ, ಉಲ್ಟಾ ಹೊಡೆದ ಶಾಮಾ

ರೋಹಿತ್ ಶರ್ಮಾ ಅವರ ಬಗ್ಗೆ ನೀಡಿದ ಹೇಳಿಕೆಯ ನಂತರ, ಶಮಾ ಅದರ ಬಗ್ಗೆ ಸ್ಪಷ್ಟನೆ ನೀಡುತ್ತಾ, ‘ನನ್ನ ಟ್ವೀಟ್ ಯಾರನ್ನೂ ಬಾಡಿ ಶೇಮಿಂಗ್ ಮಾಡುವ ಉದ್ದೇಶ ಹೊಂದಿರಲಿಲ್ಲ, ಆದರೆ ಆಟಗಾರರ ಫಿಟ್‌ನೆಸ್ ಬಗ್ಗೆ ಹೇಳಿದ ಸಾಮಾನ್ಯ ವಿಷಯವಾಗಿತ್ತು. ಅವರು ದಪ್ಪಗಿದ್ದಾರೆ ಎಂದು ನನಗೆ ಅನಿಸಿತು, ಆದ್ದರಿಂದ ನಾನು ಫಿಟ್‌ನೆಸ್ ದೃಷ್ಟಿಕೋನದಿಂದ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ, ಯಾರನ್ನೂ ಅಪಹಾಸ್ಯ ಮಾಡಲು ಅಲ್ಲ’ ಎಂದಿದ್ದಾರೆ.

ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದ ಬಿಜೆಪಿ

ಶಮಾ ಹೇಳಿಕೆ ಬಗ್ಗೆ ಕಿಡಿಕಾರಿರುವ ಬಿಜೆಪಿ ನಾಯಕ ಅಮಿತ್‌ ಮಾಳವೀಯ, ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್‌ 90 ಚುನಾವಣೆಯಲ್ಲಿ ಸೋತಿದೆ. ಚಾಂಪಿಯನ್‌ ಟ್ರೋಫಿಯಲ್ಲಿ ಆಡುತ್ತಿರುವ ನಮ್ಮ ತಂಡಕ್ಕೆ ಬೆಂಬಲ ನೀಡುವ ತಂಡದ ನಾಯಕನನ್ನು ಟೀಕಿಸಲಾಗುತ್ತಿದೆ. ಇದು ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ನೈತಿಕತೆ ಕುಸಿಯುವಂತೆ ಮಾಡುವ ಪೂರ್ವಯೋಜಿತ ಪ್ರಯತ್ನ’ ಎಂದಿದ್ದಾರೆ.

ರಾಜಕೀಯ ವಿಷಯವನ್ನಾಗಿ ಮಾಡಿದ್ದಕ್ಕಾಗಿ ನಾಚಿಕೆಪಡಬೇಕು

ಶಮಾ ಮೊಹಮ್ಮದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಯೋಗರಾಜ್ ಸಿಂಗ್, ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರಿಗೂ ತಮ್ಮ ದೇಶದ ಜನರು ಮತ್ತು ಕ್ರೀಡಾಪಟುಗಳ ವಿರುದ್ಧ ಮಾತನಾಡುವ ಹಕ್ಕಿಲ್ಲ. ಇದನ್ನು ಎಂದಿಗೂ ಸಹಿಸಬಾರದು ಮತ್ತು ಇದನ್ನು ಮಾಡುತ್ತಿರುವವರು ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಿದ್ದಕ್ಕಾಗಿ ನಾಚಿಕೆಪಡಬೇಕು. ನಾನೇನಾದರೂ ಪ್ರಧಾನಿಯಾಗಿದ್ದರೆ, ಆಕೆಯ ಚೀಲಗಳನ್ನು ಪ್ಯಾಕ್ ಮಾಡಿ ದೇಶ ಬಿಟ್ಟು ಹೋಗುವಂತೆ ಕೇಳುತ್ತಿದ್ದೆ’ ಎಂದು ಕಿಡಿಕಾರಿದ್ದಾರೆ.

ತಂಡದಲ್ಲಿ ಮಾಡೆಲ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ

ಕ್ರಿಕೆಟ್‌ಗೆ ಮಾನಸಿಕ ಶಕ್ತಿ ಹೆಚ್ಚು ಮುಖ್ಯವಾಗಿರುತ್ತದೆ ಮತ್ತು ಆಟಗಾರನ ದೈಹಿಕ ರೂಪಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಫಿಟ್ನೆಸ್ ಆಯ್ಕೆಯ ಮೊದಲ ಮಾನದಂಡವಾಗಿದ್ದರೆ, ತಂಡದಲ್ಲಿ ಮಾಡೆಲ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ. ನಿಮಗೆ ಸ್ಲಿಮ್ ಹುಡುಗರೇ ಬೇಕಾದರೆ, ನೀವು ಮಾಡೆಲಿಂಗ್ ಸ್ಪರ್ಧೆಗೆ ಹೋಗಿ. ಅಲ್ಲಿರುವ ಎಲ್ಲ ಮಾಡೆಲ್‌ಗಳನ್ನು ಆರಿಸಿಕೊಳ್ಳಿ. ಆದರೆ, ಇದು ಆ ರೀತಿಯ ಆಯ್ಕೆಯಲ್ಲ’ ಎಂದು ಗವಾಸ್ಕರ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ

Kishor KV