ಏಜ್ ಈಸ್ ಜಸ್ಟ್ ಎ ನಂಬರ್!.. ಈಜು ಕೊಳದಲ್ಲಿ 84 ವರ್ಷದ ಅಜ್ಜಿ ಸ್ಟಂಟ್! –

40 ವರ್ಷ ದಾಟಿದ್ರೆ ಸಾಕು.. ಅಯ್ಯೋ ವಯಸ್ಸಾಯ್ತು.. ನಿಲ್ಲೋಕು ಆಗಲ್ಲ.. ಓಡಾಡೋಕು ಆಗಲ್ಲ ಅಂತಾ ಅದೆಷ್ಟೋ ಮಂದಿ ಹೇಳ್ತಾರೆ.. ಆದ್ರೆ ಇಲ್ಲೊಬ್ಬರು ವೃದ್ಧೆ ಏಜ್ ಈಸ್ ಎ ಜಸ್ಟ್ ನಂಬರ್.. ವಯಸ್ಸಾಗೋದು ದೇಹಕ್ಕಲ್ಲ.. ಮನಸ್ಸಿಗೆ ಅಂತಾ ತೋರಿಸಿಕೊಟ್ಟಿದ್ದಾರೆ. ಬರೊಬ್ಬರಿ 84 ವರ್ಷದ ವೃದ್ಧೆಯೊಬ್ಬರು ಈಜುಕೊಳದಲ್ಲಿ ಸಮ್ಮರ್ ಸಾಲ್ಟ್ ಮಾಡಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಗೌತಮ್ ಗೆ ಹೆಣ್ಣು ಹುಡುಕಿದ ಭೂಮಿ – 2ನೇ ಮದುವೆ ಮಾಡಿಸಿ ದೂರವಾಗ್ತಾಳಾ?
ಇನ್ಸ್ಟಾಗ್ರಾಮ್‌ನಲ್ಲಿ ಲುಸಿನಿಯಾ ಬ್ರಿಡ್ಜ್ ಎಂಬುವವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ, ‘ನನಗೆ ತುಂಬಾ ಅಸೂಯೆಯಾಗುತ್ತಿದೆ, ಅವಳನ್ನು ನೋಡಿ , 84 ವರ್ಷ ಮತ್ತು ಜೀವನ ಸಂಪೂರ್ಣ ತುಂಬಿದೆ. ಅವಳಿಗೆ ಒಳ್ಳೆಯದಾಗಲಿ. ಅವಳು ಕೊಳದಲ್ಲಿ ಜಿಗಿಯಲು ಬಯಸಲಿಲ್ಲ, ಅವಳು ಪಲ್ಟಿ ಹೊಡೆಯಲು ಬಯಸಿದ್ದಳು. ಆದರೆ ಆಕೆಗೆ ನೀನು ಜಿಗಿಯಬಹುದು, ಆದರೆ ಪಲ್ಟಿ ಹೊಡೆಯಲಾಗದು ಎಂದಿದ್ದರು ಆದರೆ ಆಕೆ ಪಲ್ಟಿ ಹೊಡೆದು ತೋರಿಸಿದಳು’ ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೋದಲ್ಲಿ , ವೃದ್ದೆಈಜುಕೊಳದ ಅಂಚಿನಲ್ಲಿ ಆತ್ಮವಿಶ್ವಾಸದಿಂದ ನಿಂತಿರುವುದನ್ನು ನೋಡಬಹುದು. ಈ ವಿಡಿಯೋ ಮಾಡುತ್ತಿರುವ ವ್ಯಕ್ತಿಯೂ ಬೇಡ ಎಂದು ಹೇಳಿದ್ರು ಅಜ್ಜಿಯೂ ಪಲ್ಟಿ ಹೊಡೆದು ನೀರಿಗೆ ಧುಮುಕುತ್ತಾರೆ. ಆ ವ್ಯಕ್ತಿಯೂ ಸುತ್ತಲಿನವರೊಂದಿಗೆ ಸೇರಿ ಸೇರಿ ಅಜ್ಜಿಯ ಅದ್ಭುತವಾದ ಡೈವ್ ಅನ್ನು ನೋಡಿ ಜೋರಾಗಿ ಹುರಿದುಂಬಿಸುತ್ತಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಕಾಮೆಂಟ್ ಗಳನ್ನು ಮಾಡಿದ್ದಾರೆ.
ಬಳಕೆದಾರರೊಬ್ಬರು, ‘ಆಕೆಯ ಕಾಲುಗಳೇ ಹೇಳುತ್ತಿವೆ ಆಕೆ ಎಷ್ಟು ಸಧೃಡವಾಗಿದ್ದಾಳೆ ಎಂದಿದ್ದಾರೆ. ಮತ್ತೊಬ್ಬರು, ‘ ನನಗೀಗ ಕೇವಲ 2 ವರ್ಷ ಈಗಲೇ ಕಾಲು ಗಂಟು ನೋಯಲು ಶುರುವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ನನಗೀಗ 39 ವರ್ಷ ಅಷ್ಟೇ, ಈಗಲೇ ನನಗೆ ನನ್ನ ಬೆನ್ನು ಮುರಿದಿದೆ ಎಂದೆನಿಸುತ್ತಿದೆ’ ಎಂದು ಹೇಳಿದ್ದಾರೆ. ಹೀಗೆ ಅನೇಕರು ಅಜ್ಜಿಯ ಆರೋಗ್ಯ ಹಾಗೂ ಜೀವನೋತ್ಸಾಹವನ್ನು ಹಾಡಿ ಹೊಗಳಿದ್ದಾರೆ.