ಗೌತಮ್ ಗೆ ಹೆಣ್ಣು ಹುಡುಕಿದ ಭೂಮಿ – 2ನೇ ಮದುವೆ ಮಾಡಿಸಿ ದೂರವಾಗ್ತಾಳಾ?
ಡಿವೋರ್ಸ್ ಗೆ ಒಪ್ಪಿದ್ದೇಕೆ ಭೂಮಿಕಾ?

ಭೂಮಿಕಾಗೆ ಮಗು ಆಗಲ್ಲ ಅಂತಾ ಡಾಕ್ಟರ್ ಹತ್ರ ಹೇಳಿಸಿದ್ಮೇಲೆ ಶಕುಂತಲಾ ತನ್ನ ಆಟ ಶುರುಮಾಡ್ಕೊಂಡಿದ್ದಾಳೆ. ಗೌತಮ್ ಗೆ ಎರಡನೇ ಮದುವೆ ಮಾಡಿಸೋದಿಕ್ಕೆ ಎಲ್ಲಾ ತಯಾರಿ ಮಾಡ್ಕೊಂಡಿದ್ದಾಳೆ. ಭೂಮಿಕಾಗೆ ಪ್ರೆಷರ್ ಮೇಲೆ ಪ್ರೆಷರ್ ಹಾಕ್ತಿದ್ದಾಳೆ. ಇದೀಗ ಭೂಮಿಕಾ ತನ್ನ ಸವತಿ ಯಾರು ಅನ್ನೋದನ್ನ ಕೂಡ ಆಯ್ಕೆ ಮಾಡಿಕೊಂಡಿದ್ದಾಳೆ. ಅಷ್ಟಕ್ಕೂ ಭೂಮಿಕಾ ಗೌತಮ್ ಗೆ ಎರಡನೇ ಹೆಂಡ್ತಿಯಾಗಿ ಯಾರನ್ನ ಆಯ್ಕೆ ಮಾಡ್ತಾಳೆ? ಗೌತಮ್ ಎರಡನೇ ಮದುವೆಗೆ ಒಪ್ತಾನಾ? ವೀಕ್ಷಕರು ಸೀರಿಯಲ್ ಮೇಲೆ ಸಿಟ್ಟು ಮಾಡ್ಕೊಂಡಿದ್ದು ಯಾಕೆ? ಸೀರಿಯಲ್ ಸ್ಟೋರಿ ಮುಂದೇನಾಗುತ್ತೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬೀದರ್ To ಟೀಂ ಇಂಡಿಯಾ -ಚಿಕ್ಕ ಚಾನ್ಸ್, ದೊಡ್ಡ ಇತಿಹಾಸ
ವೀಕ್ಷಕರು ತುಂಬಾ ಇಷ್ಟಪಟ್ಟು ನೋಡುತ್ತಿರುವ ಸೀರಿಯಲ್ಗಳಲ್ಲಿ ಅಮೃತಧಾರೆ ಕೂಡ ಒಂದು. ಇದೀಗ ಸೀರಿಯಲ್ ಟ್ರ್ಯಾಕ್ ಮಾತ್ರ ಬೇರೆ ಕಡೆಗೆ ಸಾಗ್ತಾ ಇದೆ. ಗೌತಮ್ ಹಾಗೂ ಭೂಮಿಕಾಳನ್ನ ದೂರ ಮಾಡ್ಬೇಕು ಅಂತಾ ಶಕುಂತಲಾ ಸದಾ ಒಂದಲ್ಲ ಒಂದು ಕುಂತ್ರ ಮಾಡ್ತಿರ್ತಾಳೆ. ಇದೀಗ ಶಕುಂತಲಾ ಹೆಣೆದ ಬಲೆಯಲ್ಲಿ ಭೂಮಿಕಾ ಸಿಲುಕಿಕೊಂಡಿದ್ದಾಳೆ. ಭೂಮಿಕಾ ಪ್ರೆಗ್ನೆಂಟ್ ಅಂತಾ ಗೊತ್ತಾಗ್ತಿದ್ದಂತೆ ಶಕುಂತಲಾ ಡಾಕ್ಟರ್ ಹತ್ರ ಭೂಮಿಕಾಗೆ ಸಮಸ್ಯೆ ಇದೆ ಅಂತಾ ಹೇಳಿಸಿದ್ಲು.. ಮಗು ಮಾಡ್ಕೊಂಡ್ರೆ ಸಮಸ್ಯೆ ಆಗಿತ್ತೆ ಅಂತಾ ಹೇಳಿಸಿದ್ಲು.. ಅದಾದ್ಮೇಲೆ ಈ ಫೇಕ್ ರಿಪೋರ್ಟ್ ಭೂಮಿಕಾ ಕೈಗೆ ಸಿಗುವಂತೆ ಮಾಡಿದ್ಲು.. ಇದ್ರಿಂದಾಗಿ ಭೂಮಿಕಾ ಕಣ್ಣೀರಲ್ಲೇ ಕಾಲ ಕಳಿತಾ ಇದ್ದಾಳೆ. ಈ ಸಿಚುವೇಷನ್ ನ ಶಕುಂತಲಾ ಸರಿಯಾಗೇ ಬಳಸಿಕೊಳ್ತಿದ್ದಾಳೆ. ಭೂಮಿಕಾಗೆ ಸತ್ಯ ಗೊತ್ತಾಗ್ತಿದ್ದಂತೆ ಗೌತಮ್ ಗೆ ಎರಡನೇ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಇದೀಗ ಹೆಣ್ಣು ಹುಡುಕಿಯೂ ಆಗಿದೆ.
ಶಕುಂತಲಾ ಗೌತಮ್ ಗೆ ಎರಡನೇ ಮದುವೆ ಮಾಡಿಸೋ ಜವಾಬ್ದಾರಿಯನ್ನ ಭೂಮಿಕಾಗೆ ಕೊಟ್ಟಿದ್ದಾಳೆ. ಆಕೆಗೆ ಇದು ಇಷ್ಟ ಇಲ್ಲ ಅಂದ್ರೂ ಶಕುಂತಲಾ ಬಿಡ್ತಿಲ್ಲ.. ಪದೇ ಪದೇ ಮದುವೆ ವಿಚಾರ ತೆಗಿತಾ ಇದ್ದಾಳೆ. ಗೌತಮ್ ನ ಮದುವೆ ಒಪ್ಪಿಸು ಅಂತಾ ಹೇಳ್ತಿದ್ದಾಳೆ. ಆದ್ರೆ ಭೂಮಿಗೆ ಅಷ್ಟೊಂದು ಧೈರ್ಯ ಸಾಲ್ತಿಲ್ಲ. ಹೀಗಾಗಿ ಇನ್‌ಡೈರೆಕ್ಟ್ ಆಗಿ ನಿಮ್ಮ ಕನಸಿನ ಹುಡುಗಿ ಹೇಗಿರ್ಬೇಕು ಅಂತಾ ಗಂಡನ ಬಳಿ ಭೂಮಿ ಬಳಿ ಹೇಳಿದ್ದಾಳೆ. ಅದಕ್ಕೆ ಗೌತಮ್ ತನ್ನ ಕನಸಿನ ರಾಣಿ ಈಕೆ ಅಂತಾ ಭೂಮಿಕಾಳ ಫೋಟೋವನ್ನೇ ತೋರಿಸಿದ್ದಾಳೆ. ಇದ್ರಿಂದಾಗಿ ಭೂಮಿಕಾ ಮತ್ತೆ ಭಾವುಕಳಾಗಿದ್ದಾಳೆ. ಆದ್ರೆ ಭೂಮಿ ಗೌತಮ್ ಬಳಿ ಎರಡನೇ ಮದುವೆ ವಿಚಾರ ಹೇಳೋ ಮೊದಲೇ ಶಕುಂತಲಾ ಗೌತಮ್ ಗೆ ಹುಡುಗಿ ಹುಡುಕಿದ್ದಾಳೆ. ಭೂಮಿಕಾ ಕೂಡ ಆಕೆಯನ್ನ ಮೀಟ್ ಮಾಡಿದ್ದಾಳೆ.
ಶಕುಂತಲಾ ಮಧುರಾ ಅನ್ನೋ ಹುಡುಗಿಯನ್ನ ಭೂಮಿಕಾಗೆ ಮೀಟ್ ಮಾಡ್ಸಿದ್ದಾಳೆ. ಆಕೆಯನ್ನ ಮೀಟ್ ಆಗ್ತಿದ್ದಂತೆ ಭೂಮಿಕಾ ಕೆಲ ಪ್ರಶ್ನೆಗಳನ್ನ ಕೇಳಿದ್ದಾಳೆ. ಅದಾದ್ಮೇಲೆ ಗೌತಮ್ ಗೆ ಆಕೆ ಸರಿಯಾದ ಜೋಡಿಯಾ ಅಂತಾ ಮನಸಲ್ಲೇ ಲೆಕ್ಕಾಚಾರ ಹಾಕಿದ್ಲು.. ಬಳಿಕ ಗೌತಮ್ ಗೆ ನೀವು 100 % ಮ್ಯಾಚ್ ಆಗ್ತೀರ.. ಅಂತಾ ಹೇಳಿದ್ದಾಳೆ..
ಆದ್ರೀಗ ಸೀರಿಯಲ್ ನೋಡಿದ ವೀಕ್ಷಕರು ಮಾತ್ರ ಅಸಮಧಾನ ಹೊರ ಹಾಕಿದ್ದಾರೆ. ಭೂಮಿಕಾ ಯಾವಾಗ್ಲೂ ಲವಲವಿಕೆಯಿಂದ ಇದ್ರೇನೆ ಚೆಂದ.. ಆಕೆಯನ್ನ ಪೆದ್ದಿ ತರ ತೋರಿಸ್ಬೇಡಿ.. ಗೌತಮ್ ಅಷ್ಟು ದೊಡ್ಡ ಬಿಸಿನೆಸ್ ಮ್ಯಾನ್.. ಈ ವಿಚಾರದಲ್ಲಿ ಬೇರೆ ಡಾಕ್ಟರ್ ಹತ್ರ ತೋರಿಸ್ಬೇಕು.. ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಬೇಕು ಅಂತಾ ಗೊತ್ತಾಗಲ್ವಾ? ಇನ್ನು ಶಕುಂತಲಾ ಕೆಟ್ಟವಳು ಅನ್ನೋದು ಭೂಮಿಗೆ ಗೊತ್ತು. ಈ ವಿಚಾರದಲ್ಲಿ ಯಾಕೆ ಅವಳು ಅತ್ತೆಯನ್ನ ಬ್ಲೈಂಡ್ ಆಗಿ ನಂಬ್ತಿದ್ದಾಳೆ. ಬುದ್ದಿವಂತೆ ಭೂಮಿಕಾಳ ಬುದ್ದಿವಂತಿಗೆ ಏನಾಯ್ತು ಅಂತಾ ಪ್ರಶ್ನೆ ಮಾಡ್ತಿದ್ದಾರೆ ವೀಕ್ಷಕರು.. ಮತ್ತೆ ಕೆಲವರು ಕಾಲ ಇಷ್ಟೆಲ್ಲ ಬದಲಾಗಿದೆ, ಭೂಮಿಕಾಗೆ ಸಮಸ್ಯೆ ಇದ್ದರೂ ಐವಿಎಫ್‌ನಿಂದ ಮಗು ಪಡೆಯೋದು ಕಷ್ಟ ಅಲ್ವೇ ಅಲ್ಲ. ಅದೇ ಸವಕಲು ಯೋಚನೆಯನ್ನೇ ಹೇಳ್ತಿದ್ದೀರಲ್ಲ, ಮಕ್ಕಳಾಗಲ್ಲ ಅಂತ ಗಂಡಂಗೆ ಬೇರೆ ಮದುವೆ ಮಾಡೋದು ಎಷ್ಟು ಸರಿ.. ಇದು ಸೊಸೈಟಿ ಮೇಲೆ ಯಾವ ಪರಿಣಾಮ ಬೀರುತ್ತೆ ಅನ್ನೋ ಕಾಮನ್ ಸೆನ್ಸ್ ಸೀರಿಯಲ್ ಡೈರೆಕ್ಟರ್ ಗೆ ಇಲ್ವಾ? ಈ ಸೀರಿಯಲ್ ಆರಂಭದಿಂದಲೂ ಸದಭಿರುಚಿ ಕಥೆಗೆ, ಉತ್ತಮ ನಟನೆಗೆ ಸಾಕಷ್ಟು ಹೆಸರು ಮಾಡಿತ್ತು. ಆದ್ರೀಗ ಸೀರಿಯಲ್ ಹಳ್ಳ ಹಿಡಿತಾ ಇದೆ. ಈತರ ಟ್ವಿಸ್ಟ್ ಕೊಡೋ ಬದಲು ಸೀರಿಯಲ್ ನಿಲ್ಲಿಸಿ ಬಿಡಿ ಅಂತಾ ಕಾಮೆಂಟ್ ಮಾಡಿದ್ದಾರೆ.