ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಆಹಾರ ಇಲಾಖೆಯಿಂದ ಶಾಕ್! – ಸಿಹಿ ತಿಂಡಿ ತಯಾರಿಕೆ ಅಂಗಡಿಗಳ ಮೇಲೆ ರೇಡ್‌

ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಆಹಾರ ಇಲಾಖೆಯಿಂದ ಶಾಕ್! – ಸಿಹಿ ತಿಂಡಿ ತಯಾರಿಕೆ ಅಂಗಡಿಗಳ ಮೇಲೆ ರೇಡ್‌

ರಾಜ್ಯದಲ್ಲಿ ಈಗ ಆಹಾರ ಇಲಾಖೆ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ. ಈಗಾಗಲೇ ಇಡ್ಲಿ, ಗೋಬಿ, ಕಲ್ಲಂಗಡಿ ಸೇರಿದಂತೆ ಅನೇಕ‌ ಆಹಾರಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದು, ಕೆಲವೊಂದು ಆಹಾರ ಪದಾರ್ಥಗಳಲ್ಲಿ ಹಾನಿಕಾರ ಅಂಶ ಪತ್ತೆಯಾಗಿದೆ. ಈ ಬೆನ್ನಲ್ಲೇ ಆಹಾರ ಇಲಾಖೆ ಅಧಿಕಾರಿಗಳು ಸಿಹಿ ತಿಂಡಿ ತಯಾರಿಸುವ ಅಂಗಡಿಗಳ ಮೇಲೂ ರೈಡ್‌ ಮಾಡಿದ್ದಾರೆ.

ಇದನ್ನೂ ಓದಿ: 2023ರ ಸೇಡು ತೀರಿಸುತ್ತಾ ಭಾರತ? – ಆಸಿಸ್ ನ ಈ ಮೂವರೇ ಡೇಂಜರಸ್  

ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್ ಎದುರಾಗಿದೆ. ಹೋಟೆಲ್​ಗಳಲ್ಲಿ ರೆಡಿಮೆಡ್ ಹೋಳಿಗೆ ತಯಾರಿಸಲು ಪ್ಲಾಸ್ಟಿಕ್ ಬಳಕೆ ಮಾಡ್ತಿರೋದು ಕಂಡು ಬಂದಿದೆ. ಇದರ ಬೆನ್ನಲ್ಲೇ ಅಲರ್ಟ್​ ಆದ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುತ್ತಿರುವುದು ಪತ್ತೆಯಾಗಿದೆ. ಮೈಸೂರಿನ ಎರಡು ಅಂಗಡಿಗಳಿಗೆ ನೋಟಿಸ್​ ನೀಡಿದ್ದಾರೆ.

ಹೋಳಿಗೆ ತಯಾರಿಸಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮಾಡಲಾಗ್ತಿದೆ. ಬಿಸಿ ಬಿಸಿ ಹೋಳಿಗೆಯನ್ನು ತಯಾರಿಸಿ ಬಳಿಕ ಅದನ್ನು ಪ್ಲಾಸ್ಟಿಕ್​ ಕವರ್​ನಿಂದ ಮುಚ್ಚಲಾಗುತ್ತೆ. ಹೀಗೆ ಮಾಡಿದ್ರೆ ಪ್ಲಾಸ್ಟಿಕ್​ಗೆ ಶಾಖದಿಂದ ಕೆಮಿಕಲ್ ಹೊರಸೂಸಿ ಕ್ಯಾನ್ಸರ್​ಗೆ ಕಾರಣ ಆಗ್ಬಹುದು. ಹೀಗಾಗಿ ಪ್ಲಾಸ್ಟಿಕ್ ಬಳಸಿದ್ರೆ ವಿಷಕಾರಿ ಅಂಶ ಹೋಳಿಗೆ ಸೇರಿವ ಸಾಧ್ಯತೆ ಇದೆ. ಇದರಿಂದ ಹೋಳಿಗೆಗೆ ಪ್ಲಾಸ್ಟಿಕ್​ ಬಳಸಬಾರದು ಎಂದು ಸೂಚನೆ ನೀಡಿದ್ದಾರೆ. ಇನ್ನು ಈಗಾಗಲೇ ಆಹಾರ ಪದಾರ್ಥಗಳ ತಯಾರಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಆಹಾರ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Shwetha M

Leave a Reply

Your email address will not be published. Required fields are marked *