ಬೀದರ್ To ಟೀಂ ಇಂಡಿಯಾ -ಚಿಕ್ಕ ಚಾನ್ಸ್, ದೊಡ್ಡ ಇತಿಹಾಸ
ಚಕ್ರವರ್ತಿಯ ರೋಚಕ ಪಯಣ

ಚೆನ್ನೈನ ಎಸ್ಆರ್‌ಎಂ ವಿಶ್ವಿವಿದ್ಯಾಲಯದಲ್ಲಿ ಆರ್ಕಿಟೆಕ್ಟ್ ಪದವಿ ಪಡೆದಿರುವ ವರುಣ್ ಚಕ್ರವರ್ತಿಗೆ ಕ್ರಿಕೆಟ್ ಎಂದರೆ ಪಂಚ ಪ್ರಾಣವಾಗಿತ್ತು. ಹೀಗಾಗಿ ಶಾಲಾ ದಿನಗಳಲ್ಲೇ ಕ್ರಿಕೆಟ್ ಬಗ್ಗೆ ಒಲವು ಮೂಡಿತ್ತು. ಇಷ್ಟೇ ಅಲ್ಲ ಉತ್ತಮ ಪ್ರದರ್ಶನ ಮೂಲಕ ಶಾಲಾ ತಂಡ, ಕಾಲೇಜು, ವಿಶ್ವವಿದ್ಯಾಲಯ ತಂಡಗಳ ಮೂಲಕ ತಮಿಳುನಾಡು ರಾಜ್ಯ ತಂಡ ಪ್ರತಿನಿಧಿಸಿ, ಈಗ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ.
ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ಏಕದಿನ ಮಾದರಿಗೆ ಪಾದರ್ಪಣೆ ಮಾಡಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಉತ್ತಮ ದಾಳಿಗೆ ದಾಖಲೆ ನಿರ್ಮಾಣವಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದ ಕೀರ್ತಿ ವರುಣ್ ಚಕ್ರವರ್ತಿಗೆ ಸಲ್ಲಲಿದೆ. 5 ವಿಕೆಟ್ ಉರುಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ವರುಣ್ ಚಕ್ರವರ್ತಿ ದೇಶಿಯ ಮಟ್ಟದಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಾರೆ. ಆದರೆ ವರುಣ್ ಚಕ್ರವರ್ತಿ ಒಬ್ಬ ಕನ್ನಡಿಗನೂ ಹೌದ. ಕಾರಣ ಈ ಕ್ರಿಕೆಟಿಗ ಹುಟ್ಟಿದ್ದು ಕರ್ನಾಟಕದ ಬೀದರ್‌ನಲ್ಲಿ.
ಹೌದು, ವರುಣ್ ಚಕ್ರವರ್ತಿ ಹುಟ್ಟಿದ್ದು ಆಗಸ್ಟ್ 29, 1991ರಲ್ಲಿ, ಬೀದರ್‌ನಲ್ಲಿ ಹುಟ್ಟಿದ ವರುಣ್ ಚಕ್ರವರ್ತಿ ಬಾಲ್ಯದ ಕೆಲ ವರ್ಷಗಳನ್ನು ಬೀದರ್‌ನಲ್ಲೇ ಕಳೆದಿದ್ದಾರೆ. ಆದರೆ ತಂದೆ ವಿನೋದ್ ಚಕ್ರವರ್ತಿಗೆ ಸ್ಥಳಾಂತರಗೊಂಡ ಕಾರಣ ತಮಿಳುನಾಡಿನಲ್ಲಿ ಶಾಲಾ ಕಾಲೇಜು ಪೂರೈಸಿದ್ದರು. ಹೀಗಾಗಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದರು.
ವರುಣ್ ಚಕ್ರವರ್ತಿ ತಂದೆ ವಿನೋದ್ ಚಕ್ರವರ್ತಿ ಬಿಎಸ್‌ಎನ್‌ಎಲ್ ಸಂಸ್ಥಯಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿಯಾಗಿದ್ದಾರೆ. ಆರಂಭಿಕ ದಿನಗಳಲ್ಲಿ ವಿನೋದ್ ಚಕ್ರವರ್ತಿ ವೃತ್ತಿಯ ಸ್ಥಳಾಂತರದ ಕಾರಣದಿಂದ ಕೆಲ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ವಿನೋದ್ ಚಕ್ರವರ್ತಿ ಮೂಲತಹ ಚೆನ್ನೈ ಅವರು. ವಿನೋದ್ ಚಕ್ರವರ್ತಿ ತಾಯಿ ಅಂದರೆ ವರುಣ್ ಚಕ್ರವರ್ತಿ ಅಜ್ಜಿ ವಿಮಲಾ ಕೇರಳ ಮೂಲದವರು. ವಿನೋದ್ ಚಕ್ರವರ್ತಿ 1990-91ರ ಸಮಯದಲ್ಲಿ ಬೀದರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ವರುಣ್ ಚಕ್ರವರ್ತಿ ಬೀದರ್‌ನಲ್ಲಿ ಹುಟ್ಟಿದ್ದಾರೆ. ಚೆನ್ನೈನ ಎಸ್ಆರ್‌ಎಂ ವಿಶ್ವಿವಿದ್ಯಾಲಯದಲ್ಲಿ ಆರ್ಕಿಟೆಕ್ಟ್ ಪದವಿ ಪಡೆದಿರುವ ವರುಣ್ ಚಕ್ರವರ್ತಿಗೆ ಕ್ರಿಕೆಟ್ ಎಂದರೆ ಪಂಚ ಪ್ರಾಣವಾಗಿತ್ತು. ಹೀಗಾಗಿ ಶಾಲಾ ದಿನಗಳಲ್ಲೇ ಕ್ರಿಕೆಟ್ ಬಗ್ಗೆ ಒಲವು ಮೂಡಿತ್ತು. ಇಷ್ಟೇ ಅಲ್ಲ ಉತ್ತಮ ಪ್ರದರ್ಶನ ಮೂಲಕ ಶಾಲಾ ತಂಡ, ಕಾಲೇಜು, ವಿಶ್ವವಿದ್ಯಾಲಯ ತಂಡಗಳ ಮೂಲಕ ತಮಿಳುನಾಡು ರಾಜ್ಯ ತಂಡ ಪ್ರತಿನಿಧಿಸಿದ್ರು.
ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ಏಕದಿನ ಮಾದರಿಗೆ ಪಾದರ್ಪಣೆ ಮಾಡಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಉತ್ತಮ ದಾಳಿಗೆ ದಾಖಲೆ ನಿರ್ಮಾಣವಾಗಿದೆ. ಚಾಂಪಿಯನ್ಸ್ ಟ್ರೋಫಿ ಡೆಬ್ಯೂ ಸೀರಿಸ್‌ನಲ್ಲಿ ಬೆಸ್ಟ್ ಬೌಲಿಂಗ್ ಮಾಡಿದ 2ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವರುಣ್ ಚಕ್ರವರ್ತಿಯ ದಾಖಲೆ
ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್-11 ರಲ್ಲಿ ವೇಗಿ ಹರ್ಷಿತ್ ರಾಣಾ ಬದಲಿಗೆ ವರುಣ್‌ಗೆ ಅವಕಾಶ ಸಿಕ್ಕಿತು. ಈ ಅವಕಾಶವನ್ನು ವರುಣ್ ಎರಡು ಕೈಗಳಿಂದ ಬಾಚಿಕೊಂಡರು. ವರುಣ್ ಚಕ್ರವರ್ತಿ ತಮ್ಮ 10 ಓವರ್‌ಗಳಲ್ಲಿ ಕೇವಲ 42 ರನ್‌ಗಳನ್ನು ನೀಡಿ 5 ವಿಕೆಟ್ ಪಡೆದರು. ವರುಣ್ ದಾಖಲೆಗಳು ವರುಣ್ ತಮ್ಮ ಏಕದಿನ ವೃತ್ತಿಜೀವನದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 5 ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ವಿಷಯದಲ್ಲಿ ವರುಣ್ ಅವರು, ಮೊಹಮ್ಮದ್ ಶಮಿ ಮತ್ತು ಮಾಜಿ ದಿಗ್ಗಜ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. 2002ರಲ್ಲಿ ಜಹೀರ್ ಖಾನ್ ಜಿಂಬಾಬ್ವೆ ವಿರುದ್ಧ 45 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದರು. ಈ ಬಾರಿ ಮೊಹಮ್ಮದ್ ಶಮಿ ಬಾಂಗ್ಲಾದೇಶ ವಿರುದ್ಧ 53 ರನ್‌ಗಳಿಗೆ 5 ಪಡೆದಿದ್ದರು. ಈಗ ನ್ಯೂಜಿಲೆಂಡ್ ವಿರುದ್ಧ ವರುಣ್ ಚಕ್ರವರ್ತಿ 42 ರನ್‌ಗಳಿಗೆ 5 ವಿಕೆಟ್ ಉರುಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಇಬ್ಬರು ಬೌಲರ್‌ಗಳು ಒಂದೇ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆದಿರುವುದು ಇದೇ ಮೊದಲು. ವರುಣ್ ಗಿಂತ ಮೊದಲು ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದರು. ನಂತರ ವರುಣ್ ಚಕ್ರವರ್ತಿ ಕೂಡ ಐದು ವಿಕೆಟ್ ಪಡೆದರು. ಇದು ಚಾಂಪಿಯನ್ಸ್ ಟ್ರೋಫಿ ಪಂದ್ಯದ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯಾಗಿದೆ. ಒಟ್ನಲ್ಲಿ ಕ್ರಿಕೆಟ್ ಲೋಕದಲ್ಲಿ ವರುಣ್ ಚಕ್ರವರ್ತಿಯಾಗಿ ಮೆರೆಯುತ್ತಿದ್ದು,ಇವರ ಓಟ ಹೀಗೆ ಮುಂದುವರಿಯಲಿ..