ವಿಜಯಲಕ್ಷ್ಮೀ ಕಂಟ್ರೋಲ್ನಲ್ಲಿ ದಾಸ!? ಎಲ್ಲದ್ದಕ್ಕೂ ಹೆಂಡತಿ ಪರ್ಮೀಶನ್ ಬೇಕಾ?
ದರ್ಶನ್ ಅಕ್ಕಪಕ್ಕ ಇದ್ದವರೇ ಚೇಂಜ್

ವಿಜಯಲಕ್ಷ್ಮೀ ಕಂಟ್ರೋಲ್ನಲ್ಲಿ ದಾಸ!?   ಎಲ್ಲದ್ದಕ್ಕೂ ಹೆಂಡತಿ ಪರ್ಮೀಶನ್ ಬೇಕಾ?ದರ್ಶನ್ ಅಕ್ಕಪಕ್ಕ ಇದ್ದವರೇ   ಚೇಂಜ್

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ದರ್ಶನ್  ಬೇಲ್ ತಗೊಂಡ್ ಹೊರಗೆ ಇದ್ದಾರೆ. ಬೆನ್ನು ನೋವಿನ ಸಮಸ್ಯೆಯಲ್ಲೂ ಸಿನಿಮಾ ಕೆಲಸಗಳ ಬಗ್ಗೆ ಕೂಡ ಚರ್ಚೆ ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೇ ಕೋರ್ಟ್,​ ದರ್ಶನ್​ಗೆ ಸಿಕ್ಕ ಜಾಮೀನು ಷರತ್ತನ್ನು ಸಡಿಲಗೊಳಿಸಿದೆ. ಬೆಂಗಳೂರು-ಮೈಸೂರು, ಬಾಂಬೆ-ಡೆಲ್ಲಿ ಅಂತ ಓಡಲು ಪರ್ಮೀಶನ್ ಸಿಕ್ಕಿದೆ. ಆದ್ರೆ ಯಾರೇ ದರ್ಶನ್ ಅವರನ್ನು ಭೇಟಿಯಾಗ್ಬೇಕು ಅಂದ್ರೂ ವಿಜಯಲಕ್ಷ್ಮೀ ಪರ್ಮೀಶನ್ ಬೇಕೇ ಬೇಕಂತೆ..

ಇದನ್ನೂ ಓದಿ: ಅಯ್ಯೋ.. ಮೀನು ಹಿಡಿದು ಜೀವವೇ ಹೋಯ್ತು- ತಮಾಷೆಯೇ ಜೀವ ಹೋಗುವಂತೆ ಮಾಡ್ತಾ?

ಬೆನ್ನು ನೋವಿನಿಂದ ನರಳುತ್ತಿರೋ ದರ್ಶನ್ ಡೆವಿಲ್ ಶೂಟಿಂಗ್ ಸ್ಟಾರ್ಟ್ ಮಾಡೋಕೆ ಕಾಯುತ್ತಿದ್ದಾರೆ.. ದರ್ಶನ್ ಬರ್ತ್​ ಡೇ ದಿನ ರಿಲೀಸ್ ಆದ ಡೆವಿಲ್ ಟೀಸರ್​ಗೆ ಬಿಗ್ ಪಾಸಿಟಿವ್​ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರತಂಡ ಕೂಡ ಖುಷ್ ಆಗಿದೆ. ಸಿನಿಮಾವನ್ನು ಶೀಘ್ರದಲ್ಲೇ ತೆರೆಗೆ ತರುವ ಪ್ಲಾನ್ ಮಾಡ್ತಿದೆ. ಇದರ ನಡುವೆ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ದರ್ಶನ ಸುತ್ತಾ ಇದ್ದ ಹಳೇ ಸಿಬ್ಬಂದಿಗೆ ಗೇಟ್​ ಪಾಸ್ ನೀಡಿದ್ದು, ಹೊಸ ರೂಲ್ಸ್​ ತರಲಾಗಿದೆ.

ಜಾಮೀನು ಪಡೆದು ನಟ ದರ್ಶನ್ ಹೊರಗೆ ಬಂದ್ಮೇಲೆ ಯಾರನ್ನು ಭೇಟಿಯಾಗುತ್ತಿಲ್ಲ.. ಹಾಗೊಮ್ಮೆ.. ಹೀಗೊಮ್ಮೆ ಕಾಣಿಸಿಕೊಳ್ಳುವುದು ಬಿಟ್ರೆ, ಹೆಚ್ಚು ಸೌಂಡ್ ಮಾಡುತ್ತಿಲ್ಲ. ಇನ್ನೂ ದರ್ಶನ್ ಸುತ್ತ ವಿಜಯಲಕ್ಷ್ಮಿ ಅವರು ಬಿಗಿ ಬಂದೋಬಸ್ತ್ ಮಾಡಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಶೂಟಿಂಗ್ ವಿಚಾರ ಸಂಬಂಧ ಮಾತುಕತೆ ನಡೀತಿದೆ. ಆದ್ರೆ ಸ್ನೇಹಿತರು ಆಪ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭೇಟಿ ಮಾಡ್ತಿಲ್ಲ. ದರ್ಶನ್ ಭೇಟಿ ಮಾಡೋದಕ್ಕೂ ಕೂಡ ವಿಜಯಲಕ್ಷ್ಮಿ ಪರ್ಮೀಶನ್​ ತೆಗೆದುಕೊಳ್ಳಬೇಕಂತೆ. ವಿಜಯಲಕ್ಷ್ಮಿ ಅನುಮತಿ ಪಡೆದೇ ದರ್ಶನ್ ಅವರನ್ನು ಭೇಟಿಯಾಗಬೇಕು  ಅಂತ ಹೇಳಲಾಗುತ್ತಿದೆ.

ಕೊಲೆ ಕೇಸ್​ ಮೇಲೆ ನಟ ದರ್ಶನ್ ಜೈಲು ಸೇರಿದ ಮೇಲೆ ಮುಗೀತು ಈ ನಟನ ಸಿನಿ ಕೆರಿಯರ್ ಎನ್ನುವ ಮಾತು ಸ್ಯಾಂಡಲ್​ವುಡ್ ಅಂಗಳದಲ್ಲೇ ಕೇಳಿ ಬಂದಿತ್ತು. ಜೈಲಿಂದ ಹೊರಗೆ ಬಂದ್ಮೇಲೆ ಅಭಿಮಾನಿಗಳು ದರ್ಶನ್​ನನ್ನು ಒಪ್ಪಿಕೊಂಡ ರೀತಿ ನೋಡಿ ಅನೇಕರು ಶಾಕ್ ಆಗಿದ್ದಾರೆ. ಅದೇ ಅಭಿಮಾನ, ಅದೇ ಕ್ರೇಜ್​ ಈಗಲೂ ಇದೆ. ಇದನ್ನೆಲ್ಲಾ ನೋಡಿದ ವಿಜಯಲಕ್ಷ್ಮಿ ಗಂಡ ತಪ್ಪು ಮಾಡದಂತೆ ತಡೆಯಲು ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಸ್ಥಾನಮಾನ ಉಳಿಸಲು ವಿಜಯಲಕ್ಷ್ಮಿ ಕೆಲ ನಿರ್ಧಾರ ತೆಗೆದುಕೊಂಡಿದ್ದಾರಂತೆ.

 ಹಳೇ ಸಿಬ್ಬಂದಿಗಳಿಗೆ ಗೇಟ್‌ಪಾಸ್

ರೇಣುಕಾಸ್ವಾಮಿ ಕೊಲೆಗೂ ಮೊದಲಿನಿಂದ ದರ್ಶನ್ ಸುತ್ತ-ಮುತ್ತ ಇದ್ದ ಸಿಬ್ಬಂದಿಗಳಿಗೆ ವಿಜಯಲಕ್ಷ್ಮಿ ಗೇಟ್ ಪಾಸ್ ಕೊಟ್ಟಿದ್ದಾರೆ. ದರ್ಶನ್ ಮ್ಯಾನೇಜರ್, ಮನೆ ಕೆಲಸದವರು, ನಾಯಿಗಳ ಆರೈಕೆ ಮಾಡುತ್ತಿದ್ದವರು, ಸೆಕ್ಯೂರಿಟಿಗಳು, ಡ್ರೈವರ್​ ಗಳು ಸೇರಿದಂತೆ ಅನೇಕರನ್ನು ಕೆಲಸದಿಂದ ತೆಗೆದು ಹೊಸಬರನ್ನು ವಿಜಯಲಕ್ಷ್ಮಿ ಅವರೇ ನೇಮಿಸಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಸಾಮ್ರಾಜ್ಯವೆಲ್ಲಾ ಇದೀಗ ವಿಜಯಲಕ್ಷ್ಮಿ ಕಂಟ್ರೋಲ್ ನಲ್ಲಿದೆ ಎನ್ನಲಾಗ್ತಿದೆ. ದರ್ಶನ್​ ಸಿನಿಮಾ ವಿಚಾರಗಳನ್ನೆಲ್ಲಾ  ಸಹೋದರ ದಿನಕರ್ ತೂಗುದೀಪ್ ಅವರೇ ನೋಡಿಕೊಳ್ತಿದ್ದಾರಂತೆ. ಅಷ್ಟೇ ಕೋರ್ಟ್ ಬಿಟ್ರೆ ಮತ್ತೆಲ್ಲಿ ಕೂಡ ಪವಿತ್ರಗೌಡರನ್ನ ದರ್ಶನ್ ಭೇಟಿಯಾಗಿಲ್ಲ. ವಿಜಯಲಕ್ಷ್ಮೀ ಹಿಡಿತದಲ್ಲಿ ಇರೋ ತನಕ ಅದು ಸಾಧ್ಯವಿಲ್ಲ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.. ಒಟ್ನಲ್ಲಿ ದರ್ಶನ್ ಅವರಿಗೆ ಒಂದು ಒಳ್ಳೆಯ ಚಾನ್ಸ್ ಸಿಕ್ಕಿದ್ದು, ವಿಜಯಲಕ್ಷ್ಮೀ ಎಲ್ಲವನ್ನೂ ಕಂಟ್ರೋಲ್ ಮಾಡಿ ಗಂಡನ ಬೆನ್ನಿಗೆ ನಿಂತಿದ್ದು ಒಳ್ಳೆಯ ವಿಷ್ಯ..

 

Kishor KV

Leave a Reply

Your email address will not be published. Required fields are marked *