ಮಟಾಷ್ ಲೆಗ್ ಮೊಹಮ್ಮದ್ ರಿಜ್ವಾನ್ – ಪಾಕ್ ಕ್ಯಾಪ್ಟನ್ ಗೆ ಇದೆಂಥಾ ಗತಿ?
ಆಟ ಆಡಲ್ಲ.. ಇಂಗ್ಲಿಷ್ ಗೊತ್ತಿಲ್ಲ

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ಗಳಿಂದ ಸೋತರೆ, ಎರಡನೇ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತು. ಇದರೊಂದಿಗೆ ಪಾಕಿಸ್ತಾನ ಮತ್ತೊಮ್ಮೆ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿದೆ. ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದಾಗಿತ್ತು. ಅಪಾಯಕಾರಿ ಬೌಲರ್ಗಳನ್ನು ಹೊಂದಿದ್ದ ಪಾಕಿಸ್ತಾನ ತಂಡ ಬಲಿಷ್ಠವಾಗಿತ್ತು. ಆದರೂ ಪಾಕಿಸ್ತಾನ ತಂಡ ಸತತ ಎರಡು ಸೋಲುಗಳೊಂದಿಗೆ ಟೂರ್ನಿಯಿಂದ ಹೊರಗುಳಿದಿದೆ.ಇದಕ್ಕೆ ಸರಿಯಾದ ನಾಯಕತ್ವ ಇಲ್ಲದೇ ಇರೋದು ಕೂಡ ಕಾರಣವಾಗಿದೆ.
ಪಾಕ್ ಸೋಲಿಗೆ ರಿಜ್ವಾನ್ ನಿಧಾನ ಗತಿ ಬ್ಯಾಂಟಿಗ್ ಕಾರಣ
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಲು ಇಬ್ಬರು ಸ್ಟಾರ್ ಆಟಗಾರರು ಪ್ರಮುಖ ಕಾರಣ. ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ ತಮ್ಮ ನಿಧನಗತಿ ಬ್ಯಾಟಿಂಗ್ ಮೂಲಕ ನಿರಾಸೆ ಮೂಡಿಸಿದ್ರು. ಪಾಕಿಸ್ತಾನ ತಂಡಕ್ಕೆ ಅವಶ್ಯಕತೆ ಇದ್ದಾಗ ಇಬ್ಬರು ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾದರು. ನಿಧನಗತಿ ಅವರ ಬ್ಯಾಟಿಂಗ್ ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿತು. ನ್ಯೂಜಿಲೆಂಡ್ ವಿರುದ್ಧ ಬಾಬರ್ ಅಜಮ್ 90 ಎಸೆತೆಗಳಲ್ಲಿ 64 ರನ್ ಗಳಿಸಿದ್ದರು. ಇನ್ನು ರಿಜ್ವಾನ್ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳಲ್ಲಿ 91 ಎಸೆತಗಳನ್ನು ಎದುರಿಸಿ ಕೇವಲ 49 ರನ್ ಗಳಿಸಿದ್ದರು. ನಾಯಕನಾಗಿ ರಿಜ್ವಾನ್ ತಂಡವನ್ನ ಗೆಲ್ಲಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಭಾರತ ಕ್ರಿಕೆಟ್ ಸೇನೆಯನ್ನ ನೋಡಿಯೇ ಪಾಕ್ ಹೆದರಿ ಹೋಯ್ತು.. ಪಾಕಿಸ್ತಾನ ನೇತೃತ್ವದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಆದ ಸೋಲು ರಿಜ್ವಾನ್ಗೆ ಒಂದು ಕಪ್ಪುಚುಕ್ಕೆಯಾಗೇ ಉಳಿಯಲಿದೆ.
ಇಂಗ್ಲಿಷ್ ನಿಂದಲೇ ಟ್ರೋಲ್ ಆಗೋ ರಿಜ್ವಾನ್
ಬಹುತೇಕ ಪಾಕಿಸ್ತಾನ, ಬಾಂಗ್ಲಾದೇಶ, ಭಾರತದ ಕೆಲವು ಕ್ರಿಕೆಟಿಗರಿಗೆ ಇಂಗ್ಲಿಷ್ ದೊಡ್ಡ ಸಮಸ್ಯೆಯಿದೆ. ಅದರಲ್ಲೂ ಪಾಕಿಸ್ತಾನದ ಬಹುತೇಕ ಕ್ರಿಕೆಟಿಗರು ಇಂಗ್ಲಿಷ್ ಮಾತನಾಡಲು ಪರದಾಡುತ್ತಾರೆ. ಆದರೆ ವಿದೇಶಗಳಿಗೆ ಹೋದಾಗ ಪತ್ರಿಕಾಗೋಷ್ಠಿಗಳಲ್ಲಿ ಪಂದ್ಯದ ನಂತರದ ಕಾರ್ಯಕ್ರಮದಲ್ಲಿ ನಿರೂಪಕರು ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸಬೇಕಾಗುತ್ತದೆ. ಅದ್ರಲ್ಲೂ ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಇಂಗ್ಲಿಷ್ನಿಂದಲೇ ಸಂಕಷ್ಟ ಅನುಭವಿಸುವಂತೆ ಆಗುತ್ತೆ. ಇದೇ ವಿಚಾರಕ್ಕೆ ಇವರು ಹೆಚ್ಚು ಟ್ರೋಲ್ ಆಗ್ತಾರೆ.. ಇಂಗ್ಲಿಷ್ ಸರಿಯಾಗಿ ಬಾರದ ರಿಜ್ವಾನ್ ತಮ್ಮದೇ ಶೈಲಿಯಲ್ಲಿ ಮಾತನಾಡುವುದನ್ನು ನೋಡಿ ನೆಟ್ಟಿಗರು ಇಂಗ್ಲಿಷ್ ಭಾಷೆ ಇಂಗ್ಲೆಂಡ್ ನಲ್ಲಿ ಹುಟ್ಟಿ ಪಾಕಿಸ್ತಾನದಲ್ಲಿ ಸತ್ತು ಹೋಯ್ತು ಎಂದು ಸಾಕಷ್ಟು ಟ್ರೋಲ್ ಮಾಡಿದ್ದಾರೆ. ಅಲ್ಲದೇ ಪಾಕ್ ಸೋಲೋದು ಕೂಡ ಇದೇ ಕಾರಣಕ್ಕೆ.. ಗೆದ್ದರೇ ಎಲ್ಲಿ ಇಂಗ್ಲಿಷ್ನಲ್ಲಿ ಮಾತನಾಡಬೇಕಾಗುತ್ತೆ ಅಂತ ಪಂದ್ಯವನ್ನೇ ಸೋಲುತ್ತೆ ಅಂತ ಕೂಡ ಸಾಕಷ್ಟು ಜನ ಟ್ರೋಲ್ ಮಾಡುತ್ತಿದ್ದಾರೆ.
ಸುಮಾರು 27 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಮೆಂಟ್ ನಡೆಯುತ್ತಿದ್ದು, ಪಾಕಿಸ್ತಾನವೇ ಟೂರ್ನಿಯಿಂದ ಹೊರ ಬಿದ್ದಿದ್ದು, ಪಾಕ್ ಕ್ರಿಕೆಟ್ ಫಾನ್ಸ್ ಅಳುವಂತೆ ಆಗಿದೆ.. ತಂಡವನ್ನ ನಿಭಾಯಿಸುವಲ್ಲಿ ರಿಜ್ವಾನ್ ಎಲ್ಲೋ ಒಂದ್ಕಡೆ ಸೋತ್ರು ಅಂತ ಫಾನ್ಸ್ ಕೂಡ ಹೇಳುತ್ತಿದ್ದಾರೆ. ವೈಯಕ್ತಿಕವಾಗಿ ಎಷ್ಟೇ ಸಾಧನೆ ಮಾಡಿದ್ರೂ ಕೂಡ ತಂಡವನ್ನ ಗೆಲ್ಲಿಸುವಲ್ಲಿ ರಿಜ್ವಾನ್ ಫೆಲ್ಯೂರ್ ಆಗಿದ್ದಾರೆ . ಇನ್ನು 33 ವರ್ಷದ ಮೊಹಮ್ಮದ್ ರಿಜ್ವಾನ್ 9 ಟೆಸ್ಟ್ಗಳನ್ನ ಆಡಿದ್ದು 2273 ರನ್ ಗಳಿಸಿದ್ದಾರೆ. ಹಾಗೇ 88 ಓಡಿಐ ಪಂದ್ಯದಿಂದ 2572 ರನ್ ಗಳಿಸಿದ್ರೆ, 106 ಟಿ20 ಪಂದ್ಯದಿಂದ 3414 ರನ್ಗಳಿಸಿದ್ದಾರೆ. ಒಟ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡ ಮಾನ ಕಳೆದುಕೊಂಡ ಪಾಕ್ ಇನ್ನಾದ್ರೂ ಮಾನ ಉಳಿಸಿಕೊಳ್ಳುವಂತೆ ಕ್ರಿಕೆಟ್ ಆಡಬೇಕಿದೆ.