ಸೆಮೀಸ್ ಗೆ ಕಾಲಿಟ್ಟ ಆಸ್ಟ್ರೇಲಿಯಾ – ನಾಲ್ಕನೇ ಹಂತಕ್ಕೇರಲು ಆಫ್ಘನ್ ಗೆ ಇದೆ ಒಂದು ಚಾನ್ಸ್!

ಚಾಂಪಿಯನ್ಸ್ ಟ್ರೋಫಿಯ ಶುಕ್ರವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ವು. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಅಫ್ಘನ್ ಪಡೆ 273 ರನ್ಗಳನ್ನ ಸ್ಕೋರ್ ಮಾಡಿತ್ತು. ಈ ಸ್ಕೋರ್ ಚೇಸ್ ಮಾಡಿದ ಕಾಂಗರೂಪಡೆ 12.5 ಓವರ್ಗಳಲ್ಲೇ 109 ರನ್ ಕಲೆ ಹಾಕಿತ್ತು. ಟ್ರಾವಿಸ್ ಹೆಡ್ ಅಂತೂ ಭರ್ಜರಿ ಫಾರ್ಮ್ನಲ್ಲಿದ್ರು. ಅವ್ರ ಬ್ಯಾಟಿಂಗ್ ಅಬ್ಬರ ನೋಡ್ತಿದ್ರೆ ಆಸಿಸ್ ಪಡೆಯೇ ವಿನ್ ಆಗೋ ಥರ ಕಾಣ್ತಿತ್ತು. ಆದ್ರೆ ಅಷ್ಟ್ರಲ್ಲೇ ಎಂಟ್ರಿ ಕೊಟ್ಟ ಮಳೆ ಎಲ್ಲರ ಲೆಕ್ಕಾಚಾರಗಳನ್ನ ಉಲ್ಟಾ ಪಲ್ಟಾ ಮಾಡಿತು. ಅಫಘಾನಿಸ್ತಾನ ವಿರುದ್ಧದ ‘ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತಿದ್ದು ತಲಾ ಒಂದೊಂದು ಅಂಕಗಳನ್ನ ನೀಡಲಾಯ್ತು. ಈ ಮೂಲಕ ಸ್ಟೀವನ್ ಸ್ಮಿತ್ ಬಳಗ ಸೆಮೀಸ್ಗೆ ಲಗ್ಗೆ ಇಟ್ಟಿದೆ. ಆದ್ರೆ ಇದೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಒಂದು ಕೆಟ್ಟ ದಾಖಲೆ ಬರೆದಿದೆ.
ಇದನ್ನೂ ಓದಿ : RCB ಹ್ಯಾಟ್ರಿಕ್ ಸೋಲು.. ಪ್ಲೇಆಫ್ ಹೋಗಲ್ವಾ? – ಓವರ್ ಕಾನ್ಫಿಡೆನ್ಸ್ ನಿಂದಲೇ ಎಡವಿದ್ರಾ?
ಇನ್ನು ಇದೇ ಪಂದ್ಯದಲ್ಲಿ ಆಸ್ಚ್ರೇಲಿಯಾ ಹೀನಾಯ ದಾಖಲೆಗೆ ಪಾತ್ರವಾಗಿದ್ದು, ಚಾಂಪಿಯನ್ಸ್ ಟ್ರೋಫಿ ಇತಿಹಾಸ ಕಳದೆ ದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಬರೊಬ್ಬರಿ 37 ರನ್ ಎಕ್ಸ್ ಟ್ರಾ ನೀಡಿದ್ದು, ಈ ಪೈಕಿ 17 ವೈಡ್, ಬೈಸ್ 5 ಮತ್ತು ಲೆಗ್ ಬೈಸ್ ರೂಪದಲ್ಲಿ 15ರನ್ ನೀಡಲಾಗಿದೆ. ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ 3ನೇ ದುಬಾರಿ ಹೆಚ್ಚುವರಿ ರನ್ ನೀಡಿಕೆಯಾಗಿದೆ. ಇದಕ್ಕೂ ಮೊದಲು 2004ರಲ್ಲಿ ಕೀನ್ಯಾ ವಿರುದ್ಧ ಭಾರತ ತಂಡ 42 ರನ್ ಗಳನ್ನು ಹೆಚ್ಚುವರಿಯಾಗಿ ನೀಡಿತ್ತು. ಇದು ಮೊದಲ ಸ್ಥಾನದಲ್ಲಿದ್ದು, 2002ರಲ್ಲಿ ಶ್ರೀಲಂಕಾ ವಿರುದ್ಧ ನೆದರ್ಲೆಂಡ್ 38ರನ್ ನೀಡಿತ್ತು. ಇದು 2ನೇ ಸ್ಥಾನದಲ್ಲಿದೆ.
ಸದ್ಯ ಈಗ ಬಿ ಗ್ರೂಪ್‌ನಲ್ಲಿ ಆಸ್ಟ್ರೇಲಿಯಾ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾ 3 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. 3 ಅಂಕ ಪಡೆದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿದ್ದರೂ ಅಫ್ಘಾನಿಸ್ತಾನ ಸೆಮಿಗೆ ಹೋಗುವ ಅವಕಾಶ ಈಗಲೂ ಇದೆ. ಅದು ಹೇಗಂದ್ರೆ ಸದ್ಯ ಈಗ ದಕ್ಷಿಣ ಆಫ್ರಿಕಾ 2.140 ರನ್ ರೇಟ್ ಹೊಂದಿದ್ದರೆ ಅಫ್ಘಾನಿಸ್ತಾನ -0.990 ರನ್ ರೇಟ್ ಹೊಂದಿದೆ. ಮಾರ್ಚ್ 1 ಶನಿವಾರ ಕರಾಚಿಯಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಜಯಗಳಿಸುವುದು ಮಾತ್ರವಲ್ಲ ಭಾರೀ ಅಂತರದಿಂದ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಮೊದಲು ಬ್ಯಾಟ್ ಮಾಡಿದರೆ ಇಂಗ್ಲೆಂಡ್ ಕನಿಷ್ಟ 207 ರನ್‌ಗಳ ಅಂತರದಿಂದ ಜಯಗಳಿಸಬೇಕಾಗುತ್ತದೆ. ಒಂದು ವೇಳೆ ಚೇಸಿಂಗ್ ಮಾಡಿದರೆ ಇಂಗ್ಲೆಂಡ್ ಗುರಿಯನ್ನು 11.1 ಓವರ್‌ಗಳಲ್ಲಿ ಹೊಡೆಯಬೇಕಾಗುತ್ತದೆ. ಆದ್ರೆ ಈ ಥರ ಆಗೋದು ಕಷ್ಟಸಾಧ್ಯ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದರೆ ಆಫ್ರಿಕಾಗೆ 1 ಅಂಕ ಸಿಗುತ್ತದೆ. ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಅಫ್ರಿಕಾ 4 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರುತ್ತದೆ. ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಕೊನೆಯ ಲೀಗ್ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಸೋತವರ ಜೊತೆ ಸೆಮಿಫೈನಲ್ ಆಡಲಿದೆ.