1,800 ಕೋಟಿ ವೆಚ್ಚ.. ಸಿಕ್ಕಿದ್ದು ಬಿಡಿಗಾಸು – ಪಾಕ್ ತಂಡದಲ್ಲಿ ಸೋತ ಪ್ಲೇಯರ್ಸ್ ಗೆ ಗೇಟ್ ಪಾಸ್?

ಆರ್ಥಿಕತೆ ಪಾತಾಳ ಸೇರಿದೆ. ರಾಜಕೀಯ ಅದೋಗತಿಗೆ ತಲುಪಿದೆ. ಬಡವರು, ಬಗ್ರು ದಿನಕ್ಕೊಂದೊತ್ತು ಊಟ ಸಿಕ್ರೂ ಸಾಕು ಅಂತಿದ್ದಾರೆ. ಇಂಥಾ ಸ್ಥಿತಿಯಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಾಂಪಿಯನ್ಸ್ ಟ್ರೋಫಿ ಹೊಣೆ ಹೊತ್ತು ನೀರಿನಂತೆ ಹಣ ಖರ್ಚು ಮಾಡಿತ್ತು. ಸ್ಟೇಡಿಯಮ್ಗಳ ನವೀಕರಣಕ್ಕಾಗಿ ಹಣ ಸುರಿದಿತ್ತು. ಬಟ್ ಈಗ ಖಜಾನೆ ಕಳ್ಕೊಂಡಿರೋ ಪಾಕ್ಗೆ ಬಿಡಿಗಾಸು ಸಿಕ್ತಿದೆ. ಇದೇ ಈಗ ಪಾಕ್ ಸರ್ಕಾರಕ್ಕೂ ತಲೆಬಿಸಿ ತಂದಿಟ್ಟಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಲೀಗ್ ಹಂತದಲ್ಲೇ ಹೊರಬಿದ್ದಿದ್ದು ಆತಿಥೇಯ ತಂಡಕ್ಕೆ ಮುಖಭಂಗವಾಗಿದೆ. 29 ವರ್ಷಗಳ ಐಸಿಸಿ ಟೂರ್ನಿಯೊಂದನ್ನು ಆಯೋಜಿಸಿದ್ದ ಪಿಸಿಬಿ ಮುಖಭಂಗ ಅನುಭವಿಸಿದೆ. ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಮುಗ್ಗರಿಸಿದ್ದ ಪಾಕ್ಗೆ ಮೂರನೇ ಪಂದ್ಯ ಆಡೋಕೂ ಅವಕಾಶ ಸಿಗ್ಲಿಲ್ಲ. ಮೂರು ಪಂದ್ಯಗಳಿಂದ ಕೇವಲ ಒಂದು ಅಂಕದೊಂದಿಗೆ ಎ ಗುಂಪಿನಲ್ಲಿ ಕೊನೇ ಸ್ಥಾನ ಪಡೆದಿದೆ.
ಇದನ್ನೂ ಓದಿ : ಪಾಕ್ ಫ್ಯಾನ್ಸ್ ಗೆ ಸಿಕ್ಕಿದ್ದೇ 1 ಮ್ಯಾಚ್ – ಬಾಂಗ್ಲಾಗಿಂತ ಕಡೆಯಾದ ಪಾಕ್ ಜರ್ನಿ!
ಬಿ ಗುಂಪಿನಲ್ಲಿ ಪಂದ್ಯಗಳು ಮುಗಿದ ಮೇಲೆ ಅಂತಿಮ ಪಾಯಿಂಟ್ಸ್ ಟೇಬಲ್ ರೆಡಿಯಾಗಲಿದೆ. ಪಾಕ್ ಲಿಸ್ಟ್ನಲ್ಲಿ ಕೊನೆಗೆ ಹೋಗಲಿದೆ. ಹೋಂ ಗ್ರೌಂಡ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿ ತೀವ್ರ ಮುಖಭಂಗ ಅನುಭವಿಸಿದೆ. ತಂಡದ ಪರ್ಫಾಮೆನ್ಸ್ ಬಗ್ಗೆ ಈಗಾಗ್ಲೇ ಪಾಕಿಸ್ತಾನದ ಮಾಜಿ ಆಟಗಾರರು ತೀವ್ರವಾಗಿ ಟೀಕೆ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಹೋಸ್ಟಿಂಗ್ ನೇಷನ್ ಲೀಗ್ ಹಂತದಲ್ಲೇ ಹೊರಬಿದ್ದಿರೋರು ಹಾಗೇ ಒಂದೂ ಪಂದ್ಯವನ್ನ ಗೆಲ್ಲದೇ ಇರೋ ಬಗ್ಗೆ ಸಾಕಷ್ಟು ಟ್ರೋಲ್ ಮಾಡಲಾಗ್ತಿದೆ.
ಈ ಟೂರ್ನಿ ಆಯೋಜನೆಗೂ ಮುನ್ನ ಪಾಕಿಸ್ತಾನಕ್ಕೆ ಫೈನಾನ್ಶಿಯಲ್ ಪ್ರಾಬ್ಲಮ್ಸ್ ತುಂಬಾನೇ ಇತ್ತು. ಸುಮಾರು 29 ವರ್ಷಗಳ ನಂತರ ಐಸಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದೂ ಪಂದ್ಯ ಗೆಲ್ಲಲಿಲ್ಲ. ಇದರ ಜೊತೆಗೆ ಟೂರ್ನಿ ಆಯೋಜಿಸಲು 1800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಆದ್ರೆ ಇಷ್ಟೆಲ್ಲಾ ಖರ್ಚು ಮಾಡಿದ್ರೂ ಪಾಕಿಸ್ತಾನಕ್ಕೆ ತನ್ನ ತಂಡದ ಆಟವನ್ನು ಕೇವಲ 16 ಗಂಟೆಗಳ ಕಾಲ ಮಾತ್ರ ಕಣ್ತುಂಬಿಕೊಳ್ಳಲು ಸಾಧ್ಯವಾಗಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ 3 ಪಂದ್ಯಾವಳಿಯ ಸ್ಥಳಗಳ ಕ್ರೀಡಾಂಗಣಗಳನ್ನು ನವೀಕರಿಸಲು 1800 ಕೋಟಿ ಪಾಕಿಸ್ತಾನಿ ರೂಪಾಯಿಗಳು ಅಂದರೆ ಸುಮಾರು 560.93 ಕೋಟಿ ಭಾರತೀಯ ರೂಪಾಯಿಗಳನ್ನು ಖರ್ಚು ಮಾಡಿದೆ. ಇಷ್ಟೆಲ್ಲಾ ಮಾಡಿದ್ರೂ ತವರಿನಲ್ಲಿ ಪಾಕ್ ಟೀಮ್ಗೆ ಆಡಲು ಸಿಕ್ಕಿದ್ದು ಒಂದೇ ಮ್ಯಾಚ್. ಸುಮಾರು 8 ಗಂಟೆಗಳ ಕಾಲ ನಡೆದಿದ್ದ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ, ತನ್ನ ಮುಂದಿನ ಪಂದ್ಯವನ್ನು ಟೀಂ ಇಂಡಿಯಾ ವಿರುದ್ಧ ಕೇವಲ 8 ಗಂಟೆಗಳಲ್ಲಿ ಸೋತಿತ್ತು. ಅಂದ್ರೆ ಎರಡೂ ಪಂದ್ಯಗಳಿಂದ 16 ಗಂಟೆಗಳಷ್ಟೇ ಕ್ರೀಡಾಂಗಣದಲ್ಲಿ ಆಡಿದೆ. ಮೂರನೇ ಪಂದ್ಯ ಮಳೆಯಿಂದ ರದ್ದಾಯ್ತು.
ಪಾಕ್ ತಂಡದ ಸೋಲು ಬರೀ ಫ್ಯಾನ್ಸ್ ಮತ್ತು ಕ್ರಿಕೆಟರ್ಸ್ಗೆ ಮಾತ್ರವಲ್ಲ. ಅಲ್ಲಿನ ಸರ್ಕಾರಕ್ಕೂ ತೀವ್ರ ಮುಜುಗರ ತಂದಿದೆ. ಹೀಗಾಗಿ ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕಳಪೆ ಪ್ರದರ್ಶನದ ಗಮನ ಹರಿಸಿದ್ದು, ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕ್ಯಾಬಿನೆಟ್ ಮತ್ತು ಸಂಸತ್ತಿನಲ್ಲಿಯೂ ಚರ್ಚೆಯಾಗುವ ಸಾಧ್ಯತೆಯಿದೆ. ಸಂಸತ್ತಿನಲ್ಲಿ ಚರ್ಚಿಸಲು ಉದ್ದೇಶಿಸಿದ್ದಾರೆ ಎಂದು ಪ್ರಧಾನಿಯ ರಾಜಕೀಯ ಮತ್ತು ಸಾರ್ವಜನಿಕ ವ್ಯವಹಾರಗಳ ಸಹಾಯಕ ರಾಣಾ ಸನಾವುಲ್ಲಾ ಹೇಳಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪಾಕಿಸ್ತಾನ ಪರ್ಫಾಮೆನ್ಸ್ ತೀರಾ ಕೆಳ ಮಟ್ಟಕ್ಕೆ ಹೋಗ್ತಿರೋದೇ ಪಿಸಿಬಿ ಮ್ಯಾನೇಜ್ಮೆಂಟ್ ಮತ್ತು ಅಲ್ಲಿನ ಸರ್ಕಾರದ ನಿದ್ದೆಗೆಡಿಸಿದೆ.