RCB ಹ್ಯಾಟ್ರಿಕ್ ಸೋಲು.. ಪ್ಲೇಆಫ್ ಹೋಗಲ್ವಾ? – ಓವರ್ ಕಾನ್ಫಿಡೆನ್ಸ್ ನಿಂದಲೇ ಎಡವಿದ್ರಾ?  

RCB ಹ್ಯಾಟ್ರಿಕ್ ಸೋಲು.. ಪ್ಲೇಆಫ್ ಹೋಗಲ್ವಾ? – ಓವರ್ ಕಾನ್ಫಿಡೆನ್ಸ್ ನಿಂದಲೇ ಎಡವಿದ್ರಾ?  

ವುಮೆನ್ಸ್ ಪ್ರೀಮಿಯರ್ ಲೀಗ್​​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ತವರಿನಲ್ಲೇ ಹ್ಯಾಟ್ರಿಕ್ ಸೋಲು ಕಂಡಿದೆ. ಮೂರಕ್ಕೆ ಮೂರೂ ಪಂದ್ಯಗಳಲ್ಲೂ ತನ್ನದೇ ತಪ್ಪಿಂದ ಪಂದ್ಯ ಕೈ ಚೆಲ್ಲಿದೆ ಅಂದ್ರೂ ಕೂಡ ತಪ್ಪಿಲ್ಲ. ಹಾಲಿ ಚಾಂಪಿಯನ್ ಆಗಿರೋ ಬೆಂಗಳೂರು ಸದ್ಯ ಪ್ಲೇಆಫ್​ಗೆ ಎಂಟ್ರಿ ಕೊಡುತ್ತೋ ಇಲ್ವೋ ಅನ್ನೋ ಚರ್ಚೆ ಶುರುವಾಗಿದೆ.

ಇದನ್ನೂ ಓದಿ : B ಗ್ರೂಪ್ ಸೆಮೀಸ್ ಲೆಕ್ಕಾಚಾರವೇನು – ಭಾರತಕ್ಕೆ ನಾಕೌಟ್ ಎದುರಾಳಿ ಯಾರು?

ಗುಜರಾತ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆರ್​ಸಿಬಿ ಪರ ಯಾವ ಬ್ಯಾಟರ್ ಕೂಡ ಕೈ ಹಿಡೀಲಿಲ್ಲ. ಮಂದಾನ 20 ಬಾಲ್ ಫೇಸ್ ಮಾಡಿ ಜಸ್ಟ್ 10 ರನ್, ಡೇನಿ ವ್ಯಾಟ್ 4 ರನ್.. ಇನ್ನು ಕಳೆದ ಎರಡು ಪಂದ್ಯಗಳಲ್ಲೂ ಅತ್ಯದ್ಭುತ ಬ್ಯಾಟಿಂಗ್ ಮಾಡಿದ್ದ ಎಲ್ಲಿಸ್ ಪೆರ್ರಿ ನಿನ್ನೆ ಮ್ಯಾಚಲ್ಲಿ ಡಕ್ ಔಟ್. ಬಹುಶಃ ನಾನ್ ಎಷ್ಟೇ ರನ್ ಹೊಡೆದ್ರೂ ಇವ್ರು ಸೋಲ್ತಾರೆ ಬಿಡು ಅಂತಾ ಸುಮ್ನಾದ್ರೋ ಏನೋ. ಯಾಕಂದ್ರೆ ಬೆಂಗಳೂರಲ್ಲಿ ನಡೆದ ಮುಂಬೈ ಮತ್ತು ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಆದ್ರೂ ಕೊನೆಗೆ ಮ್ಯಾಚ್ ಸೋತ್ರು. ಅದ್ರಲ್ಲೂ ಯುಪಿ ವಿರುದ್ಧದ ಸೂಪರ್ ಓವರ್ ಪಂದ್ಯವನ್ನ ತಾವೇ ಕೈಯ್ಯಾರೆ ಚೆಲ್ಲಿದ್ರು.  ಇನ್ನು ಕನಿಕಾ ಅಹುಜಾ 33 ರನ್, ರಾಘ್ವಿ ಬಿಸ್ಟ್ 22 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್ ಆಯ್ತು. ಕೊನೆಗೆ 12 ಎಕ್ಸ್​ಟ್ರಾ ರನ್​ ಸೇರಿದಂತೆ  20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್​​ಗಳಿಸಿತ್ತು. 120 ಬಾಲ್​ನಲ್ಲಿ 125 ರನ್ ಚೇಸ್ ಮಾಡೋದು ಗುಜರಾತ್​ಗೆ ಕಷ್ಟ ಅನ್ನಿಸ್ಲೇ ಇಲ್ಲ.

126 ರನ್​​ಗಳ ಸಾಧಾರಣ ಗುರಿ ಬೆನ್ನಟ್ಟಿದ ಜೈಂಟ್ಸ್ ಗೆ ಆರಂಭದಲ್ಲೇ ಆಘಾತ ಎದುರಾಯ್ತು. ಪವರ್​​ ಪ್ಲೇನಲ್ಲಿ  6 ಓವರ್​ಗಳಲ್ಲಿ ಕೇವಲ 30 ರನ್​​ಗಳಿಸಿತ್ತು. ದಯಾಳನ್ ಹೇಮಲತಾ 11 ರನ್​ಗಳಿಸಿ ಔಟ್ ಆದರು. ಇವರ ಬೆನ್ನಲ್ಲೇ ಬೆತ್ ಮೂನಿ 14 ರನ್, ಹರ್ಲೀನ್ ಡಿಯೋಲ್ 5 ರನ್ ಗೆ ವಿಕೆಟ್ ಒಪ್ಪಿಸಿದ್ರು. ಸೋ ಈ ಟೈಮಲ್ಲಿ ಮ್ಯಾಚ್ ಆರ್ ಸಿಬಿ ಕಡೆಎ ಟರ್ನ್ ಆಯ್ತಾ ಅನ್ನಿಸ್ತು. ಬಟ್ ನಾಯಕಿ ಆಶ್ಲೀ ಗಾರ್ಡ್ನರ್​ ಹಾಗೂ ಲಿಚ್​​ಫೀಲ್ಡ್ ಇಬ್ಬರು 5ನೇ ವಿಕೆಟ್​ಗೆ 36 ಎಸೆತಗಳಲ್ಲಿ 51 ರನ್​​ಗಳ ಜೊತೆಯಾಟ ನಡೆಸಿದರು.  ಆಶ್ಲೀ ಗಾರ್ಡ್ನರ್ 58 ರನ್ ಸಿಡಿಸಿ ಬೆಂಗಳೂರು ತಂಡಕ್ಕೆ ಶಾಕ್ ಕೊಟ್ರು. ಪರಿಣಾಮ 16.3 ಓವರ್​ಗಳಲ್ಲೇ ಗುಜರಾತ್ ತಂಡ ಟಾರ್ಗೆಟ್ ರೀಚ್ ಆಯ್ತು.

ಡಬ್ಲ್ಪೂಪಿಎಲ್ ನಲ್ಲಿ ಒಟ್ಟು ಐದು ತಂಡಗಳು ಮಾತ್ರ ಭಾಗವಹಿಸಿಸೋದು ನಿಮ್ಗೆಲ್ಲಾ ಗೊತ್ತೇ ಇದೆ. ಸದ್ಯ ಮುಂಬೈ ಇಂಡಿಯನ್ಸ್ ಹೊರೆತುಪಡಿಸಿ ಎಲ್ಲಾ ತಂಡಗಳು ತಲಾ 5 ಪಂದ್ಯಗಳನ್ನಾಡಿವೆ. ಮುಂಬೈ ಆಡಿರುವ 4 ಪಂದ್ಯಗಳಲ್ಲೇ 3ರಲ್ಲಿ ಗೆದ್ದು ಟೇಬಲ್ ಟಾಪರ್ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ 5 ಪಂದ್ಯಗಳಲ್ಲಿ 3 ಜಯ ಸಾಧಿಸಿ 6 ಅಂಕಗಳಿಸಿ 2ನೇ ಸ್ಥಾನದಲ್ಲಿದೆ. ಆರ್​​ಸಿಬಿ, ಯುಪಿ ವಾರಿಯರ್ಸ್​ ಹಾಗೂ ಗುಜರಾತ್ ಜೈಂಟ್ಸ್  ತಲಾ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿದ್ದು ನೆಟ್​ ರನ್​ರೇಟ್​​ ಆಧಾರದ ಮೇಲೆ ಆರ್ ಸಿಬಿ ಮೂರನೇ ಸ್ಥಾನದಲ್ಲಿದೆ. ಯುಪಿ ವಾರಿಯರ್ಸ್ 4, ಗುಜರಾತ್ ಜೇಂಟ್ಸ್ 5ನೇ ಸ್ಥಾನದಲ್ಲಿದೆ.

ಸದ್ಯ ಆಡಿರುವ 5 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ್ದು ಮೂರು ಪಂದ್ಯಗಳಲ್ಲಿ ಸೋತಿದೆ. ಇನ್ನು ಮೂರು ಪಂದ್ಯಗಳು ಉಳಿದಿದ್ದು ಈ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಗೆಲ್ಲಲೇಬೇಕಿದೆ. ಮಾರ್ಚ್ 1 ಅಂದ್ರೆ ನಾಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ನಡೆಯಲಿದೆ. ಆ ನಂತ್ರ ಮಾರ್ಚ್ 8ಕ್ಕೆ ಯುಪಿ ವಾರಿಯರ್ಸ್ ವಿರುದ್ಧ, ಮಾರ್ಚ್ 11ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಟ ನಡೆಸ್ಬೇಕಿದೆ. ಮುಂದಿನ ಈ ಮೂರೂ ಪಂದ್ಯಗಳಲ್ಲಿ ಗೆದ್ರೆ ಮಾತ್ರವೇ ಪ್ಲೇಆಫ್​ಗೆ ಎಂಟ್ರಿ ಕೊಡೋ ಚಾನ್ಸಸ್ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಉಳಿದ ತಂಡಗಳ ರಿಸಲ್ಟ್ ಮೇಲೆಯೂ ಇದು ನಿರ್ಧಾರವಾಗಲಿದೆ. ಮಾರ್ಚ್ 15ರಂದು ಫೈನಲ್ ಪಂದ್ಯ ನಡೆಯಲಿದೆ.

ಹಾಲಿ ಚಾಂಪಿಯನ್ ತಂಡ, ಮೊದಲ ಎರಡು ಪಂದ್ಯಗಳಲ್ಲೇ ಭರ್ಜರಿ ಗೆಲುವು, ಹೋಮ್ ಗ್ರೌಂಡ್​ನಲ್ಲೇ ಮ್ಯಾಚಸ್.. ಹೀಗೆ ಸಾಲು ಸಾಲು ಅಡ್ವಾಂಟೇಜಸ್ ಇದ್ರೂ ರಾಯಲ್ ಚಾಲೆಂಜರ್ಸ್ ಬೆಂಗಳುರು ಆಟಗಾರ್ತಿಯರು ಬೆಂಗಳೂರಲ್ಲಿ ಒಂದೂ ಪಂದ್ಯ ಗೆಲ್ಲೋಕೆ ಆಗ್ಲಿಲ್ಲ. ಅದ್ರಲ್ಲೂ ಈ ಮೂರೂ ಮ್ಯಾಚ್​ಗಳಲ್ಲೂ ಟಾಸ್ ಸೋತಿರೋದು ಮತ್ತೊಂದು ವಿಶೇಷ. ಮುಂಬೈ ತಂಡದ ವಿರುದ್ಧ ಬೆಂಗಳೂರಲ್ಲಿ ಫಸ್ಟ್ ಮ್ಯಾಚ್ ನಡೆದಾಗ ಟಾಸ್ ಗೆದ್ದ ಮುಂಬೈ ಕ್ಯಾಪ್ಟನ್ ಬೌಲಿಂಗ್ ಆಯ್ಕೆ ಮಾಡ್ಕೊಂಡ್ರು. ಯುಪಿ ವಾರಿಯರ್ಸ್ ವಿರುದ್ಧವೂ ಫಸ್ಟ್ ಬ್ಯಾಟಿಂಗ್ ಮಾಡೋ ಅವಕಾಶವೇ ಸಿಕ್ಕಿತ್ತು. ಇದೀಗ ಗುಜರಾತ್ ವಿರುದ್ಧವೂ ಕೂಡ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡ್ಬೇಕಾಯ್ತು. ಹೀಗೆ ಮೂರಕ್ಕೆ ಮೂರು ಪಂದ್ಯಗಳಲ್ಲೂ ಫಸ್ಟ್ ಬ್ಯಾಟ್ ಬೀಸಿದಂತ ಬೆಂಗಳೂರು ಗರ್ಲ್ಸ್​​ಗೆ ತಮ್ಮ ಸ್ಕೋರ್​ನ ಡಿಫೈನ್ ಮಾಡ್ಕೊಳ್ಳೋಕೆ ಆಗ್ಲಿಲ್ಲ. ಅದ್ರಲ್ಲೂ ಯುಪಿ ವಿರುದ್ಧದ ಪಂದ್ಯವನ್ನ ಸೂಪರ್ ಓವರ್​ನಲ್ಲಿ ತಾವೇ ಕೈಯ್ಯಾರ ಸೋತ್ರು. ಬಹುಶಃ ಬೆಂಗಳೂರು ಟೀಮ್​ಗೆ ಓವರ್ ಕಾನ್ಫಿಡೆನ್ಸ್ ಜಾಸ್ತಿ ಆಯ್ತು ಅನ್ಸುತ್ತೆ.

Shantha Kumari

Leave a Reply

Your email address will not be published. Required fields are marked *