ಮಹಾಕುಂಭ ಮೇಳವನ್ನ ‘ಏಕತೆಯ ಮಹಾಯಜ್ಞ’ ಎಂದು ಬಣ್ಣಿಸಿದ ಪ್ರಧಾನಿ ಮೋದಿ

ಮಹಾಕುಂಭ ಮೇಳವನ್ನ ‘ಏಕತೆಯ ಮಹಾಯಜ್ಞ’ ಎಂದು ಬಣ್ಣಿಸಿದ ಪ್ರಧಾನಿ ಮೋದಿ

ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾಕುಂಭ ಮೇಳ ಅಂತ್ಯಗೊಂಡಿದೆ. 45 ದಿನಗಳಲ್ಲಿ 66ಕೋಟಿಗೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಈ ಮಹಾಕುಂಭ ಮೇಳವನ್ನು ಪ್ರಧಾನಿ ಮೋದಿ ಏಕತೆಯ ಮಹಾಯಜ್ಞ ಎಂದು ಬಣ್ಣಿಸಿದ್ದಾರೆ. ಈ ಕುರಿತು ಬ್ಲಾಗ್​ ಬರೆದಿದ್ದು, ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಲು ಒಟ್ಟಾಗಿ ಬಂದ 140 ಕೋಟಿ ಭಾರತೀಯರ ಭಕ್ತಿ ಮತ್ತು ಭಾಗವಹಿಸುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾಕುಂಭ ಮೇಳ ವನ್ನು ಪ್ರಧಾನಿ ಮೋದಿ‘ ಏಕತೆಯ ಮಹಾಯಜ್ಞ’ ಎಂದು ಬಣ್ಣಿಸಿದ್ದಾರೆ. ಈ ಕುರಿತು ಬ್ಲಾಗ್​ ಬರೆದಿದ್ದು, ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಲು ಒಟ್ಟಾಗಿ ಬಂದ 140 ಕೋಟಿ ಭಾರತೀಯರ ಭಕ್ತಿ ಮತ್ತು ಭಾಗವಹಿಸುವಿಕೆಗೆ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದರು. 45 ದಿನಗಳ ಕಾಲ ನಡೆದ ಮಹಾಕುಂಭವನ್ನು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿಬಿಂಬ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಸಮಾಜದ ಎಲ್ಲಾ ವರ್ಗಗಳ ಜನರು ನಂಬಿಕೆ ಮತ್ತು ಭಕ್ತಿಯಲ್ಲಿ ಹೇಗೆ ಒಂದಾಗುತ್ತಾರೆ ಎಂಬುದನ್ನು ಒತ್ತಿ ಹೇಳಿದರು. ಈ ಕಾರ್ಯಕ್ರಮವು ಏಕ ಭಾರತ ಶ್ರೇಷ್ಠ ಭಾರತ ಎನ್ನುವ ಪರಿಕಲ್ಪನೆಯನ್ನು ಸಾಕಾರಗೊಳಿಸಿತು. ಇದು ಲಕ್ಷಾಂತರ ಭಕ್ತರ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆ ಎಂದಿದ್ದಾರೆ.

ಈ ಮಹಾಕುಂಭದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರು ಒಟ್ಟಿಗೆ ಬಂದರು. ಈ ಅವಿಸ್ಮರಣೀಯ ಏಕತೆಯ ದೃಶ್ಯವು ಕೋಟ್ಯಂತರ ಭಾರತೀಯರಿಗೆ ಆತ್ಮ ವಿಶ್ವಾಸದ ಹಬ್ಬವಾಯಿತು. ಈ ಉತ್ಸವವನ್ನು ಯಶಸ್ವಿಗೊಳಿಸುವಲ್ಲಿ ಜನರ ಪ್ರಯತ್ನಗಳು, ಸಮರ್ಪಣೆ ಮತ್ತು ದೃಢಸಂಕಲ್ಪವು ನನ್ನನ್ನು ತುಂಬಾ ಪ್ರಭಾವಿಸಿದೆ ಎಂದು ಬರೆದಿದ್ದಾರೆ.

 

Kishor KV

Leave a Reply

Your email address will not be published. Required fields are marked *