ಕುಸುಮಾ ಸ್ವಾರ್ಥ, ಭಾಗ್ಯ ಲೈಫ್ ಹಾಳು.. ತಾಂಡವ್ ಮನೆಗೆ ಬಂದ ಶ್ರೇಷ್ಠಾ
ಮನೆ ಬಿಟ್ಟ ಭಾಗ್ಯ ಏನ್ಮಾಡ್ತಾಳೆ?

ತಾಂಡವ್ ಬದಲಾಗ್ತಾನೆ ಅಂತಾ ಕುಸುಮಾ ಭಾಗ್ಯ ಏನೇನೋ ಮಾಡಿದ್ರು.. ಆದ್ರೆ ತಾಂಡವ್ ಮಾತ್ರ ಶ್ರೇಷ್ಠಾ ಹಿಂದೆನೇ ಬಿದ್ದಿದ್ದಾನೆ. ಇದೀಗ ತಾಂಡವ್ ಶ್ರೇಷ್ಠಾಳನ್ನ ಮದುವೆ ಆಗೋದಿಕ್ಕೆ ಹೊರಟ್ರೆ, ಭಾಗ್ಯ ತಾಂಡವ್ ಕಟ್ಟಿರೋ ತಾಳಿಯನ್ನ ಕಿತ್ತು ಹಾಕಿದ್ದಾಳೆ.. ಇದೀಗ ಭಾಗ್ಯ ನಿರ್ಧಾರವೇ ಸರಿ ಅಂತಾ ಕುಸುಮಾ ಕೂಡ ಹೇಳಿದ್ದಾಳೆ.. ಆದ್ರೀಗ ತಾಂಡವ್ ನಿಂದ ಅಲ್ಲ, ಕುಸುಮಾಳಿಂದ ಭಾಗ್ಯ ಲೈಫ್ ಹಾಳಾಯ್ತು ಅಂತಾ ಸುನಂದ ಕೂಗಾಡಿದ್ದಾಳೆ. ಹಾಗಾದ್ರೆ ಭಾಗ್ಯ ಲೈಫ್ ನಲ್ಲಿ ಆಟ ಆಡಿದ್ದು ಯಾರು? ತಾಂಡವಾ ಕುಸುಮಾನಾ? ತಾಳಿ ಬಿಚ್ಚಿಕೊಟ್ಟ ಭಾಗ್ಯ ಮುಂದೇನು ಮಾಡ್ತಾಳೆ? ಶ್ರೇಷ್ಠಾಳನ್ನ ಕುಸುಮಾ ಮನೆಗೆ ಸೇರಿಸಿಕೊಳ್ತಾಳಾ? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: ಕೇವಲ 8 ರನ್ನಿಂದ ಸೋತ ಇಂಗ್ಲೆಂಡ್.. ಅಫ್ಘಾನ್ಗೆ ರಣರೋಚಕ ಗೆಲುವು
ಭಾಗ್ಯ ಲಕ್ಷ್ಮೀ ಸೀರಿಯಲ್ ಮಹಾ ತಿರುವು ಪಡೆದುಕೊಂಡಿದೆ. ತಾಂಡವ್ ನ ಚೇಂಜ್ ಮಾಡ್ಬೇಕು ಅಂತಾ ಭಾಗ್ಯ ಕುಸುಮಾ ಏನೇನೋ ಪ್ರಯತ್ನ ಮಾಡಿದ್ರು.. ಭಾಗ್ಯ ದಡ್ಡಿ, ಗೌರಮ್ಮ ಇದ್ದಾಳೆ ಅಂತಾ ತಾಂಡವ್ ಸದಾ ಹೀಯಾಳಿಸ್ತಿದ್ದ.. ಹೀಗಾಗೇ ಭಾಗ್ಯ ಸ್ಕೂಲ್ ಗೆ ಹೋದ್ಲು.. ಇಂಗ್ಲಿಷ್ ಕಲಿತ್ಲು.. ಮಾರ್ಡನ್ ಡ್ರೆಸ್ ಹಾಕೊಂಡ್ಲು.. ಸ್ಟಾರ್ ಹೋಟೆಲ್ ನಲ್ಲಿ ಕೆಲಸ ಮಾಡಿದ್ಲು.. ಇಷ್ಟೆಲ್ಲಾ ಮಾಡಿದ್ರೂ ತಾಂಡವ್ ಮಾತ್ರ ಬದಲಾಗಿಲ್ಲ.. ಶ್ರೇಷ್ಠಾ ವಯ್ಯಾರಕ್ಕೆ ಮನಸೋತು.. ಆಕೆಯ ಹಿಂದೆಯೇ ಸುತ್ತುತ್ತಿದ್ದಾನೆ. ಇದೀಗ ಶ್ರೇಷ್ಠಾಳನ್ನ ಮದುವೆಯಾಗಲು ಹೊರಟಿದ್ದಾನೆ. ಈ ಹೊತ್ತಲ್ಲೇ ಭಾಗ್ಯ ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ. ಕತ್ತಲ್ಲಿದ್ದ ತಾಳಿಯನ್ನ ತೆಗೆದು ತಾಂಡವ್ ಕೈಗೆ ಇಟ್ಟಿದ್ದಾಳೆ.
ತಾಂಡವ್ ನ ಮದುವೆ ಆಗ್ಬೇಕು ಅಂತಾ ಶ್ರೇಷ್ಠ ಟ್ರೈ ಮಾಡ್ತಾ ಬಂದಿದ್ದಾಳೆ. ಆದ್ರೆ ಏನಾದ್ರೂ ಆಗಿ ಮದುವೆ ನಿಲ್ತಾ ಬಂದಿದೆ. ಇದೀಗ ಮತ್ತೆ ಶ್ರೇಷ್ಠಾ ಅತ್ತು ಗೋಗರೆದು ತಾಂಡವ್ ನ ಮದುವೆಗೆ ಒಪ್ಪಿಸಿದ್ದಾಳೆ. ಹೀಗಾಗಿ ತಾಂಡವ್ ಶ್ರೇಷ್ಠಾ ದೇವಸ್ಥಾನದಲ್ಲಿ ಮದುವೆ ಆಗಲು ಮುಂದಾಗಿದ್ದಾರೆ. ಅಷ್ಟೊತ್ತಿಗೆ ಕುಸುಮಾ ಭಾಗ್ಯಳಿಗೆ ಫೋನ್ ಮಾಡಿ ಬರಲು ಹೇಳಿದ್ದಾಳೆ. ಭಾಗ್ಯ ಬಂದು ಮದುವೆ ತಡಿತಾಳೆ ಅಂತಾ ಎಲ್ಲರೂ ಅಂದ್ಕೊಂಡ್ರೆ, ತನಗೆ ಈ ಸಂಬಂಧ ಬೇಡ ಅಂತಾ ತನ್ನ ತಾಳಿಯನ್ನ ತಾಂಡವ್ ಕೈಗೆ ಕೊಟ್ಟಿದ್ದಾಳೆ. ಭಾಗ್ಯ ನಿರ್ಧಾರವನ್ನ ಕುಸುಮಾ ಒಪ್ಪಿಕೊಂಡಿದ್ದಾಳೆ. ನಿನ್ನಿಂದ ಅತ್ತೆ ಅಂತಾ ಕರೆಸಿಕೊಳ್ಳೋ ಯೋಗ್ಯತೆ ತನಗಿಲ್ಲ.. ಇನ್ನುಮುಂದೆ ನೀನು ನನ್ನ ಸೊಸೆ ಅಲ್ಲ.. ನನ್ನ ಮಗಳು.. ಅಂತಾ ಹೇಳಿದ್ದಾಳೆ. ಆದ್ರೆ ಭಾಗ್ಯ ತಾಯಿ ಸುನಂದ ಕುಸುಮಾ ಮೇಲೆ ಕೂಗಾಡಿದ್ದಾಳೆ. ನಿಮ್ಮಿಂದಾಗಿ ತನ್ನ ಮಗಳ ಲೈಫ ಹಾಳಾಯ್ತು.. ಮಗ ಸರಿ ಇಲ್ಲ ಅಂದಾಗ ಮಗನನ್ನ ಸರಿ ದಾರಿಗೆ ತರಬೇಕು. ಅದು ಬಿಟ್ಟು ನೀವು ಭಾಗ್ಯಳನ್ನ ಸರಿ ಮಾಡಲು ಹೊರಟ್ರಿ.. ನೀವು ಸ್ವಾರ್ಥಿ.. ನಿಮ್ಮ ಮಗನ ಬಗ್ಗೆ ಮಾತ್ರ ಯೋಚನೆ ಮಾಡಿದ್ದೀರಿ.. ಅವನ ಜೀವನ ಹಾಳು ಆಗುತ್ತೆ ಅಂತಾ ಇಷ್ಟೆಲ್ಲಾ ಮಾಡಿದ್ರಿ.. ಸೊಸೆ ಜೀವನದ ಬಗ್ಗೆ ಯಾವತ್ತೂ ಯೋಚನೆ ಮಾಡಿಲ್ಲ ಅಂತಾ ರೇಗಾಡಿದ್ದಾಳೆ, ಆದ್ರೆ ಭಾಗ್ಯ ತಂದೆ ಸುನಂದಾ ಬಾಯಿ ಮುಚ್ಚಿಸಿದ್ದಾರೆ.
ಇದೀಗ ಸೀರಿಯಲ್ ನೋಡಿದ ವೀಕ್ಷಕರು ಕೂಡ ಇದನ್ನೇ ಹೇಳ್ತಿದ್ದಾರೆ. ಕುಸುಮಾ ಯಾವತ್ತೂ ತಾಂಡವ್ ಮನಸ್ಥಿತಿಯನ್ನ ಚೇಂಜ್ ಮಾಡ್ಬೇಕು ಅಂತಾ ಯೋಚಿಸಿಲ್ಲ.. ಭಾಗ್ಯಳನ್ನೇ ಬದಲಾಯಿಸಲು ಹೊರಟ್ಲು.. ತಪ್ಪು ಕುಸುಮಾಳದ್ದು.. ತಾಂಡವ್ ತಪ್ಪು ಮಾಡಿಲ್ಲ.. ಕುಸುಮಾ ಒತ್ತಾಯದಿಂದ ಮದುವೆ ಆಗಿದ್ದಾನೆ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು. ಭಾಗ್ಯ ನಿರ್ಧಾರವನ್ನೇ ಸರಿ ಅಂತಾ ಹೇಳಿದ್ದಾರೆ.. ಇಂತಹ ಗಂಡನ ಬದಲು ತಾಳಿನ ಕಿತ್ತೆಸೆದು ಹೊಸ ಜೀವನ ಆರಂಭಿಸುವುದೇ ಒಳಿತು.. ಸಮಾಜದಲ್ಲಿ ಅದೆಷ್ಟೋ ಮಹಿಳೆಯರು ಈ ಸಮಸ್ಯೆಯನ್ನ ಅನುಭವಿಸ್ತಿದ್ದಾರೆ. ಸಮಾಜ ಏನ್ ಹೇಳುತ್ತೋ ಅನ್ನೋ ಭಯದಲ್ಲೇ ಎಲ್ಲವನ್ನ ಸಹಿಸ್ಕೊಂಡು ಇದ್ದಾರೆ. ಮೋಸ ಮಾಡೋ ಗಂಡನ ಜೊತೆ ಬಾಳೋದಿಕ್ಕಿಂತ ಒಂಟಿಯಾಗಿ ಜೀವನ ನಡೆಸೋದೇ ಉತ್ತಮ ಅಂತಾ ಕಾಮೆಂಟ್ ಮಾಡಿದ್ದಾರೆ.