ಸುಬ್ಬಾ- ಸುಬ್ಬಿ ದೂರ.. ದೂರ..! ಕೋರ್ಟ್ನಲ್ಲಿ ಮಾತಿಲ್ಲ, ಕಥೆಯಿಲ್ಲ
ವಿಜಯಲಕ್ಷ್ಮೀ ಫುಲ್ ಹ್ಯಾಪಿ!

ಸುಬ್ಬಾ- ಸುಬ್ಬಿ ದೂರ.. ದೂರ..! ಕೋರ್ಟ್ನಲ್ಲಿ ಮಾತಿಲ್ಲ, ಕಥೆಯಿಲ್ಲವಿಜಯಲಕ್ಷ್ಮೀ ಫುಲ್ ಹ್ಯಾಪಿ!

ದರ್ಶನ್ ಮತ್ತು ಪವಿತ್ರಗೌಡ ನಡುವೆ ಸಾಕಷ್ಟು ಸಲುಗೆ ಇತ್ತು.. ದರ್ಶನ್ ವಿಜಯಲಕ್ಷ್ಮಿಗಿಂತ ಹೆಚ್ಚಾಗಿ ಪವಿತ್ರಗೌಡ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದ್ರೆ ಯಾವಾಗ ರೇಣುಕಾಸ್ವಾಮಿ ಮರ್ಡರ್ ಆಯ್ತೋ ಅವಾಗಿಂದ ದರ್ಶನ್ ಮತ್ತು ಪವಿತ್ರಗೌಡ ನಾನೊಂದು ತೀರ ನೀನೊಂದು ತೀರ ಎನ್ನುವಂತೆ ಇದ್ದಾರೆ.  ಇಬ್ಬರ ಮಧ್ಯೆ ಇದ್ದ ಬಾಂಧವ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ 17ರ ಜನ ಅರೆಸ್ಟ್ ಆಗಿ 6 ತಿಂಗಳ ಕಾಲ ಕಂಬಿ ಎಣಿಸಿದ್ರು.  ಇವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಷರತ್ತುಗಳ ಪ್ರಕಾರ ಪ್ರತಿ ತಿಂಗಳು ಕೋರ್ಟ್​ಗೆ ಹಾಜರಿ ಹಾಕಬೇಕಿತ್ತು. ಹೀಗಾಗಿ ಬೆಂಗಳೂರಿನ 57ನೇ ಸಿಸಿಹೆಚ್​ ಕೋರ್ಟ್​ನಲ್ಲಿ 17 ಆರೋಪಿಗಳ ವಿಚಾರಣೆ ನಡೆದಿದೆ. ಮೊದಲು ಜಡ್ಜ್​​ ಎಲ್ಲಾ ಆರೋಪಿಗಳ ಹೆಸರು ಕರೆದಿದ್ದಾರೆ.

ಕೋರ್ಟ್‌ನಲ್ಲಿ ಮಾತನಾಡದ ದರ್ಶನ್ ಪವಿತ್ರಾ

ಎಲ್ಲಾ 17 ಜನ ಆರೋಪಿಗಳು ಕೋರ್ಟ್‌ಗೆ ಆಗಮಿಸಿದ್ದರು. ಎಲ್ಲರ ಹಾಜರಾತಿಯನ್ನು ಕೋರ್ಟ್ ಸಿಬ್ಬಂದಿ ದಾಖಲಿಸಿಕೊಂಡರು. ಆ ಬಳಿಕ ಕೋರ್ಟ್​ನಲ್ಲಿ ಆರೋಪಿ ದರ್ಶನ್​​, ಪವಿತ್ರಾಗೌಡ ಮುಖಾಮುಖಿ ಆಗಿದ್ದಾರೆ. ಕೋರ್ಟ್​ನಲ್ಲಿ ಮುಖಾಮುಖಿ ಆದರೂ ಇಬ್ಬರೂ ಮಾತನಾಡಿಲ್ಲ. ಕಳೆದ ಬಾರಿ ಕೋರ್ಟ್​ಗೆ ಬಂದಾಗ ದರ್ಶನ್ ಹಾಗೂ ಪವಿತ್ರಾ ಪರಸ್ಪರ ಸಂಭಾಷಣೆ ನಡೆಸಿಕೊಂಡಿದ್ದರು. ಈ ಬಾರಿ ಕೋರ್ಟ್​ನಲ್ಲಿ ಮಾತನಾಡಿಲ್ಲ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ವಿಚಾರಣೆ ನಡೆಸಿದ ಬಳಿಕ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಕೋರ್ಟ್ ಮುಂದೂಡಿದೆ. ಇಲ್ಲಿ ದರ್ಶನ್ ಮಾತನಾಡುತ್ತಾರೆ ಅಂತ ಪವಿತ್ರಗೌಡ ಬಹಳ ಕಾತುರದಿಂದ ಕಾಯುತ್ತಿದ್ದರು.. ಆದ್ರೆ ದರ್ಶನ್ ಪವಿತ್ರಗೌಡ ಕಡೆ ಮುಖ ಎತ್ತಿ ಕೂಡ ನೋಡಿಲ್ಲ.. ಹೇಗ್ ಇದ್ಯಾ ಅನ್ನೋದನ್ನೂ ಕೇಳಿಲ್ಲ.. ಹಾಗೇ ಪವಿತ್ರಗೌಡ ಕೂಡ ದರ್ಶನ್‌ರನ್ನ ಮಾತನಾಡಿಸುವ ಪ್ರಯತ್ನ ಮಾಡಿಲ್ಲ.. ಇಬ್ಬರು ಮತನಾಡಿದ್ರೆ ಮತ್ತೆ ದೊಡ್ಡ ಸುದ್ದಿಯಾಗುತ್ತೆ ಅನ್ನೋ ಕಾರಣಕ್ಕೊ.. ಅಥವಾ ಇಷ್ಟು ಆಗಿದ್ದು ಸಾಕು ಇನ್ನೂ ಪವಿತ್ರಗೌಡ ಸಹವಾಸ ಸಾಕು ಅನ್ನೋ ಕಾರಣಕ್ಕೋ ದರ್ಶನ್ ಮಾತನಾಡಿಸಿಲ್ಲ.. ಮತನಾಡಿದ್ರು ಚರ್ಚೆ ಆಗುತ್ತೆ.. ಮತನಾಡಿಲ್ಲ ಅಂದ್ರು ಚರ್ಚೆ ಆಗುತ್ತೆ.. ಹಾಗಾಗಿ ದರ್ಶನ್ ಪವಿತ್ರಗೌಡರಿಂದ ದೂರನೇ ಉಳಿದಿದ್ದಾರೆ..  ಜನವರಿ 10ರಂದು ನಡೆದಿದ್ದ ಕೋರ್ಟ್ ವಿಚಾರಣೆ ವೇಳೆಯೂ ದರ್ಶನ್- ಪವಿತ್ರಾ ಮುಖಾಮುಖಿ ಆಗಿದ್ದರು. ಈ ವೇಳೆ ಇಬ್ಬರೂ ಮಾತನಾಡಿದ್ದರು. ಆದರೆ ಈ ಬಾರಿ ಮಾತನಾಡಿಲ್ಲ. ಆರ್ಆರ್ ನಗರದ ಮನೆಯಿಂದ ದರ್ಶನ್ ಕೋರ್ಟ್ಗೆ ಹೊರಟಾಗ ಕೆಲ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದರು. ದರ್ಶನ್ ಕೈ ಕುಲುಕಿ ಅಭಿಮಾನಿಗಳು ವಿಶ್ ಮಾಡಿದ್ದರು. ಕೆಲವರು ನೆಚ್ಚಿನ ನಟನ ಕಾಲಿಗೆ ಎರಗಿದ್ದರು. ಆ ಬಳಿಕ ಕಾರ್ ಏರಿ ಸೆಷನ್ಸ್ ಕೋರ್ಟ್ಗೆ ದರ್ಶನ್ ಆಗಮಿಸಿದ್ದರು.

  ದರ್ಶನ್ ಜೈಲಿಗೆ ಹೋಗಿದ್ದು ವಿಜಯಲಕ್ಷ್ಮೀಗೆ  ಪ್ಲೆಸ್ ಆಯ್ತಾ?

ಇನ್ನೂ ದರ್ಶನ್ ಮರ್ಡರ್‌ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದು ಒಂದು ತರ ವಿಜಯಲಕ್ಷ್ಮೀ ಅವರಿಗೆ ಒಳ್ಳಯದ್ದೇ ಆಯ್ತು.. ಯಾಕಂದ್ರೆ ದರ್ಶನ್ ಈ ಕೇಸ್‌ಗೂ ಮೊದಲು ಹೆಂಡತಿ ಜೊತೆ ಅಷ್ಟೇಕ್ಕೆ ಅಷ್ಟೆ ಅನ್ನೋ ರೀತಿಯಲ್ಲಿ ಇದ್ದರು.. ಯಾವಾಗ ಗಂಡನನ್ನ ಬಿಡಿಸೋಕೆ ವಿಜಯಲಕ್ಷ್ಮೀ ಒದ್ದಾಡಿದ್ರೋ,ಗಂಡನ ಪರವಾಗಿ ನಿಂತ್ರೋ ಅವಾಗ ದರ್ಶನ್‌್ಗೆ ಹೆಂಡತಿ ಮೇಲೆ ಪ್ರೀತಿ ಜಾಸ್ತಿಯಾಗಿ, ಪವಿತ್ರಗೌಡ ಗೆಳೆತನಕ್ಕೆ ಬ್ರೇಕ್ ಬಿದ್ದಿದೆ. ಇದ್ರಿಂದ ಇವರ ಸಂಸಾರ ಚೆನ್ನಾಗಿ ಆಗಿದೆ.. ಫಾನ್ಸ್‌ ಕೂಡ ದರ್ಶನ್ ಅವರ ಸಂಸಾರ ಚೆನ್ನಾಗಿ ಇರಲಿ ಅಂತ ಹರಿಸಿ ಹಾರೈಸುತ್ತಿದ್ದಾರೆ.

 ಆರೋಪಿಗಳ ಮೇಲೆ ಪೊಲೀಸರ ಒತ್ತಡ!

ನಾಲ್ಕು ಜನ ಆರೋಪಿಗಳಿಗೆ ಮಾಫಿ ಸಾಕ್ಷಿಗೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ದರ್ಶನ್ ಪರ ವಕೀಲರಾದ ಸುನಿಲ್ ಆರೋಪಿಸಿದ್ದಾರೆ. ಇತರೆ ಆರೋಪಿಗಳಿಗೂ ಅಪ್ರೂವ್ ಆಗುವಂತೆ ಪೊಲೀಸರು ಹೇಳುತ್ತಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಡ್ಜ್ ಜೈಶಂಕರ್ “ನೀವು ಈ ಬಗ್ಗೆ ಅರ್ಜಿ ಹಾಕಿದರೆ ವಿಚಾರಣೆ ನಡೆಸಬಹುದು” ಎಂದಿದ್ದಾರೆ. ಅರ್ಜಿ ಹಾಕಲು ಕೋರ್ಟ್ ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ . ಒಟ್ನಲ್ಲಿ ದರ್ಶನ್ ಮತ್ತು ಪವಿತ್ರಗೌಡ ಹಳೆಯದನ್ನ ಮರೆತು ಹೊಸ ಜೀವನ ಕೊಟ್ಟಿಕೊಳ್ಳುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *