ಚಾಂಪಿಯನ್ಸ್ ಟ್ರೋಫಿಗೆ ಉ*ಗ್ರರ ಕಣ್ಣು! ವಿದೇಶಿಗರ ಕಿಡ್ನ್ಯಾಪ್, ಸುಲಿಗೆ!!
ISKP ಪ್ಲ್ಯಾನ್, ಪಾಕ್ ಗಾನ್!!

ಸುಮಾರು 3 ದಶಕಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿಯೊಂದನ್ನು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ. ಈಗಾಗಲೇ ದಿವಾಳಿ ಎದ್ದಿರುವ ಪಾಕಿಸ್ತಾನಕ್ಕೆ ಹಾಗೂ ಪಾಕ್ ಕ್ರಿಕೆಟ್ ಮಂಡಳಿಗೆ ಐಸಿಸಿಯ ಈ ಟೂರ್ನಿ ಉಸಿರಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬುದು ಆಯೋಜಕ ಅಭಿಪ್ರಾಯವಾಗಿತ್ತು. ಆದರೆ ಇಲ್ಲಿಯವರೆಗೆ ನಡೆದಿರುವ ಪಂದ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಹೊರತುಪಡಿಸಿ ಉಳಿದ ಪಂದ್ಯಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಮೈದಾನಕ್ಕೆ ಬಂದಿಲ್ಲ. ಇದು ಆಯೋಜಕರ ಟೆನ್ಷನ್‌ಗೆ ಕಾರಣವಾಗಿದೆ. ಈ ನಡುವೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಭಯೋತ್ಪಾದಕ ದಾಳಿಯ ಭಯ ಆವರಿಸಿದೆ. ಐಎಸ್‌ಕೆಪಿ ಭಯೋತ್ಪಾದಕ ಗುಂಪು ಚಾಂಪಿಯನ್ಸ್ ಟ್ರೋಫಿಯನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬಂದಿರುವ ವಿದೇಶಿಗರನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿವೆ ಎಂಬ ಮಾಹಿತಿ ಪಾಕ್ ಗುಪ್ತಚರ ಇಲಾಖೆಗೆ ಸಿಕ್ಕಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ ಮೇಲೆ ಉಗ್ರರ ಕಣ್ಣು!
ವಾಸ್ತವವಾಗಿ ಇದೇ ಭಯೋತ್ಪಾದಕ ದಾಳಿಯ ಭಯದಿಂದ ಪಾಕಿಸ್ತಾನದಲ್ಲಿ ಯಾವುದೇ ಮಹತ್ವದ ಈವೆಂಟ್ಗಳನ್ನು ಆಯೋಜಿಸಲು ಐಸಿಸಿ ಹಿಂದೇಟು ಹಾಕುತ್ತಿತ್ತು. ಇದರ ಜೊತೆಗೆ ಲಂಕಾ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ ಯಾವ ಕ್ರಿಕೆಟ್ ತಂಡವೂ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲು ಮುಂದೆ ಬರುತ್ತಿರಲಿಲ್ಲ. ಆದರೆ ಸೂಕ್ತ ಭದ್ರತೆ ಕಲ್ಪಿಸುವ ಭರವಸೆ ಸಿಕ್ಕ ಬಳಿಕ ಇದೀಗ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಾಗುತ್ತಿದೆ. ಆದರೆ ಈ ಟೂರ್ನಿ ಆರಂಭವಾಗಿ ಕೆಲವೇ ದಿನಗಳು ಕಳೆದಿರುವಾಗ ಈ ಟೂರ್ನಿಯ ಮೇಲೆ ಭಯೋತ್ಪಾದಕರ ಕರಿನೆರಳು ಆವರಿಸಿದೆ.
ISKP ಪ್ಲ್ಯಾನ್ ಏನು?
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ವಿದೇಶಿಯರನ್ನು ಅಪಹರಿಸಿ ಸುಲಿಗೆ ಮಾಡಲು ISKP ಸಂಚು ರೂಪಿಸಿದೆ ಎಂಬ ಮಾಹಿತಿ ಪಾಕಿಸ್ತಾನದ ಗುಪ್ತಚರ ಬ್ಯೂರೋಗೆ ಸಿಕ್ಕಿದೆ. ಈ ಭಯೋತ್ಪಾದಕ ಗುಂಪು ನಿರ್ದಿಷ್ಟವಾಗಿ ಚೀನ ಮತ್ತು ಅರಬ್ ನಾಗರಿಕರನ್ನು ಗುರಿಯಾಗಿಸಿಕೊಂಡಿದೆಯಂತೆ. ಈ ದೇಶಗಳ ಸಂದರ್ಶಕರು ಆಗಾಗ್ಗೆ ಬಳಸುವ ಬಂದರುಗಳು, ವಿಮಾನ ನಿಲ್ದಾಣಗಳು, ಕಚೇರಿಗಳು ಮತ್ತು ವಸತಿ ಪ್ರದೇಶಗಳ ಮೇಲೆ ಕಣ್ಣಿಟ್ಟಿವೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಭಾರತೀಯ ಏಜೆನ್ಸಿಗಳು ಕೂಡ ಇಂತಹ ದಾಳಿಯ ಸಾಧ್ಯತೆಯ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿವೆ.
ವಿದೇಶಿಯರನ್ನು ಅಪಹರಿಸಿ ಹಣ ಸುಲಿಗೆ
ಭಯೋತ್ಪಾದಕರು ಚಾಂಪಿಯನ್ಸ್ ಟ್ರೋಫಿಯನ್ನು ವೀಕ್ಷಿಸಲು ಬರುವ ವಿದೇಶಿಯರನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಮುಂದಾಗಿವೆ ಎಂಬ ಮಾಹಿತಿಯನ್ನು ಪಾಕ್ ಗುಪ್ತಚರ ಇಲಾಖೆಗೆ ಭಾರತೀಯ ಏಜೆನ್ಸಿಗಳು ನೀಡಿವೆ ಎಂದು ಹೇಳಲಾಗುತ್ತಿದೆ. ಇನ್ನು ISKP ಇದು ಜಿಹಾದಿ ಗುಂಪು.. ಇದು ಇಸ್ಲಾಮಿಕ್ ಸ್ಟೇಟ್‌ನ ಪ್ರಾದೇಶಿಕ ಶಾಖೆಯಾಗಿದ್ದು, ದಕ್ಷಿಣ-ಮಧ್ಯ ಏಷ್ಯಾದಲ್ಲಿ, ಮುಖ್ಯವಾಗಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ. ಇದುವರೆಗೂ ಭಯೋತ್ಪಾದಕ ದಾಳಿಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಬಂದಿಲ್ಲವಾದರೂ, ಈ ಗಂಭೀರ ಸ್ವರೂಪದ ಬೆದರಿಕೆಯನ್ನು ನಿರ್ಲಕ್ಷಿಸಿದರೆ ಪಾಕಿಸ್ತಾನ ವಿಶ್ವ ಮಟ್ಟದಲ್ಲಿ ಮಾನ ಹರಾಜು ಆಗುತ್ತೆ..