ಪಾಕಿಸ್ತಾನದ ವಿರುದ್ಧ ಕಿಂಗ್ ಕೊಹ್ಲಿ ರಣಾರ್ಭಟ – ಏಕಾಂಗಿಯಾಗಿ ನಿಂತು ಪಂದ್ಯ ಗೆಲ್ಲಿಸಿದ್ದಾರೆ ವಿರಾಟ್

ಭಾರತ ಮಾತ್ರವಲ್ಲ. ಇಡೀ ಜಗತ್ತೇ ಸೂಪರ್ ಸಂಡೇ ನಡೆದ ಟೀಂ ಇಂಡಿಯಾ ವರ್ಸಸ್ ಪಾಕಿಸ್ತಾನ ನಡುವಿನ ಮ್ಯಾಚ್ನ ಎಂಜಾಯ್ ಮಾಡಿದೆ. ಅದ್ರಲ್ಲೂ ಭಾರತದ ಗೆಲುವಿನ ಜೊತೆ ಅತೀ ಹೆಚ್ಚು ಖುಷಿ ನೀಡಿದ್ದು ಕಿಂಗ್ ವಿರಾಟ್ ಕೊಹ್ಲಿಯವ್ರ ಸೆಂಚುರಿ. ಈ ಸೆಂಚುರಿ ಮೂಲಕವೇ ತನ್ನನ್ನೇಕೆ ಚೇಸಿಂಗ್ ನ ಕಿಂಗ್ ಅಂತಾ ಕರೀತಾರೆ ಅನ್ನೋದನ್ನ ಸಾಬೀಗು ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷಗಳನ್ನು ಕಂಪ್ಲೀಟ್ ಮಾಡಿರೋ ವಿರಾಟ್ ಇದೀಗ ವಿಶ್ವಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಪಟ್ಟಿಗೆ ಸೇರಿದ್ದಾರೆ. ಏಕದಿನ ಮತ್ತು ಟಿ20ಐಗಳಲ್ಲಿ ಚೇಸಿಂಗ್ ಮಾಡುವಾಗ ಕೊಹ್ಲಿ ಏಕಾಂಗಿಯಾಗಿ ನಿಂತು ಭಾರತವನ್ನ ಗೆಲ್ಲಿಸಿರೋದು ಇದು 5ನೇ ಬಾರಿ.
ಇದನ್ನೂ ಓದಿ : ಪಾಕ್ ಅಭಿಮಾನಿಗಳೇ.. 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕಾಗೋದಿಲ್ಲ! – ವೈರಲ್ ಆಯ್ತು ಬ್ಲಿಂಕಿಟ್ ಮೀಮ್!
ಪಾಕಿಸ್ತಾನದ ವಿರುದ್ಧದ ಯಶಸ್ವಿ ಚೇಸಿಂಗ್‌ನಲ್ಲಿ ಕೊಹ್ಲಿ ಅವರ ಮೊದಲ ಬೆಸ್ಟ್ ಇನ್ನಿಂಗ್ಸ್ ಅಂದ್ರೆ 2012 ರಲ್ಲಿ ನಡೆದ ಏಷ್ಯಾಕಪ್ ಪಂದ್ಯ. ಈ ಪಂದ್ಯದಲ್ಲಿ ಕೇವಲ 148 ಎಸೆತಗಳಲ್ಲಿ ಅದ್ಭುತ 183 ರನ್ ಗಳಿಸಿದ್ರು.. ಭಾರತ ಆ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದಿತು. ಹಾಗೇ 2012 ರಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ, ಕೊಹ್ಲಿ ಅಜೇಯ 78 ರನ್ ಗಳಿಸುವ ಮೂಲಕ ಭಾರತವು ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿಸುವಂತೆ ಮಾಡಿದ್ರು. ಟೀಂ ಇಂಡಿಯಾ ಬೌಲರ್‌ಗಳು ಪಾಕಿಸ್ತಾನವನ್ನು 128 ರನ್‌ಗಳಿಗೆ ಆಲೌಟ್ ಮಾಡಿದ್ರು. ಚೇಸಿಂಗ್ಗೆ ಇಳಿದ ಭಾರತದ ಪರ ಕೊಹ್ಲಿ 78 ರನ್ ಗಳಿಸಿದ್ದು, ಇನ್ನೂ 18 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ಮುಟ್ಟಿಸಿದ್ರು. ಇನ್ನು 2016 ರಲ್ಲಿ ಭಾರತದಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ, ಕೊಹ್ಲಿ ಅಜೇಯ 55 ರನ್ ಗಳಿಸುವ ಮೂಲಕ ಈಡನ್ ಗಾರ್ಡನ್ಸ್‌ನಲ್ಲಿ ಭಾರತಕ್ಕೆ ಆರು ವಿಕೆಟ್‌ಗಳ ಜಯ ತಂದುಕೊಟ್ಟರು. ಭಾರತ ಬೌಲರ್‌ಗಳ ಒಗ್ಗಟ್ಟಿನ ಬೌಲಿಂಗ್ ನಿಂದ ಪಾಕಿಸ್ತಾನ 5 ವಿಕೆಟ್‌ಗೆ 118 ರನ್ ಅಷ್ಟೇ ಗಳಿಸಿತ್ತು. ಈ ಸ್ಕೋರ್ ಬೆನ್ನತ್ತಿದ ಭಾರತದ ಪರ 3 ನೇ ಸ್ಲಾಟ್ನಲ್ಲಿ ಕಣಕ್ಕಿಳಿದ ಕೊಹ್ಲಿ ಅದ್ಭುತ ಅರ್ಧಶತಕ ಗಳಿಸಿ ಭಾರತವನ್ನು ಗೆಲ್ಲಿಸಿದ್ರು. ಅದ್ರಲ್ಲೂ 2022ರಲ್ಲಿ ಮೆಲ್ಬರ್ನ್ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯವನ್ನಂತೂ ಮರೆಯೋಕೆ ಚಾನ್ಸೇ ಇಲ್ಲ. ಆವತ್ತು ಪಾಕಿಸ್ತಾನ ಫಸ್ಟ್ ಬ್ಯಾಟಿಂಗ್ ಮಾಡಿ 159 ರನ್ಸ್ ಸ್ಕೋರ್ ಮಾಡಿತ್ತು. ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್ ಮನ್ಸ್ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದ್ರು. ಬಟ್ ಆವತ್ತು ಸಿಂಗಲ್ ಷೇರ್ನಂತೆ ನಿಂತು ಭಾರತವನ್ನ ಗೆಲ್ಲಿಸಿದ್ದು ಇದೇ ವಿರಾಟ್ ಕೊಹ್ಲಿ. ಜಸ್ಟ್ 53 ಎಸೆತಗಳಲ್ಲಿ ಬರೋಬ್ಬರಿ 82 ರನ್ ಚಚ್ಚಿ ನಾಟೌಟ್ ಆಗಿದ್ರು. ಈ ಮೂಲಕ ಭಾರತ 20 ಓವರ್ಗಳಲ್ಲಿ 160 ರನ್ ಕಲೆ ಹಾಕಿತ್ತು. ಈ ಮ್ಯಾಚ್ನಲ್ಲಿ ಹಾರ್ದಿಕ್ ಪಾಂಡ್ಯ 40 ರನ್, ಸೂರ್ಯಕುಮಾರ್ ಯಾದವ್ 15 ರನ್ ಗಳಿಸಿದ್ದು ಬಿಟ್ರೆ ಉಳಿದವ್ರೆಲ್ಲಾ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದ್ರು. ಬಟ್ ಇಂಥಾ ಹೈಪ್ರೆಶರ್ ಟೈಮಲ್ಲಿ ನಿಂತು ಆಡಿದ್ದು ವಿರಾಟ್ ಒಬ್ರೇ. ಕೊನೇ ಓವರ್ನಲ್ಲಿ ಹ್ಯಾರಿಸ್ ರೌಫ್ ಗೆ ಬ್ಯಾಟ್ ಟು ಬ್ಯಾಕ್ ಸಿಕ್ಸರ್ ಚಚ್ಚಿದರು. ಈಗ್ಲೂ ಕೂಡ ಈ ಪಂದ್ಯದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೇ ಇರ್ತಾವೆ. ಇದೀಗ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಸೆಂಚುರಿ ಬಾರಿಸೋ ಮೂಲಕ ಪಾಕ್ಗೆ ಮಣ್ಣು ಮುಕ್ಕಿಸಿದ್ದಾರೆ.
ಹೀಗೆ ಎಲ್ಲಾ ಮಾದರಿಯಲ್ಲಿ ಕಿಂಗ್ ಕೊಹ್ಲಿ ಪಾಕ್ ತಂಡಕ್ಕೆ ವಿರಾಟ ದರ್ಶನ ಮಾಡಿಸಿದ್ದಾರೆ. ಬದ್ಧವೈರಿಗಳ ವಿರುದ್ಧ ಆಡಿರೋ 17 ಪಂದ್ಯಗಲ್ಲಿ 778 ರನ್ ಕಲೆ ಹಾಕಿದ್ದಾರೆ. 59.84ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ಗಳಿಸಿರೋ ಕೊಹ್ಲಿ, 2 ಅರ್ಧಶತಕ ಮತ್ತು 4 ಭರ್ಜರಿ ಶತಕಗಳನ್ನ ಸಿಡಿಸಿದ್ದಾರೆ. ಹಾಗೇ ಟಿ20 ಮಾದರಿಯಲ್ಲೂ ಪಾಕಿಸ್ತಾನ ವಿರುದ್ಧ ಆಡಿದ 11 ಟಿ20 ಪಂದ್ಯಗಳಿಂದ 70.28ರ ಬ್ಯಾಟಿಂಗ್ ಎವರೇಜ್ನಲ್ಲಿ ಬರೋಬ್ಬರಿ 492 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 5 ಹಾಫ್ಸೆಂಚುರಿ ಹೊಡೆದಿದ್ದಾರೆ.

ನೋಡಿರಿ

