RCB ಆಟಗಾರ್ತಿ ಸಲಿಂಗ ಪ್ರೇಮ! – ಸ್ನೇಹಿತೆ ಜೊತೆ ಡೇನಿಯಲ್ ವ್ಯಾಟ್‌ ಲವ್
ಕಿಂಗ್‌ ಕೊಹ್ಲಿಗೂ ಪ್ರಪೋಸ್‌ ಮಾಡಿದ್ರಾ?

RCB ಆಟಗಾರ್ತಿ ಸಲಿಂಗ ಪ್ರೇಮ! – ಸ್ನೇಹಿತೆ ಜೊತೆ ಡೇನಿಯಲ್ ವ್ಯಾಟ್‌ ಲವ್ಕಿಂಗ್‌ ಕೊಹ್ಲಿಗೂ ಪ್ರಪೋಸ್‌ ಮಾಡಿದ್ರಾ?

ಒಂದ್ಸಲ ಕಪ್‌ ಗೆದ್ದು ಅಭಿಮಾನಿಗಳ ಮನಗೆದ್ದಿದ್ದ ಆರ್‌ಸಿಬಿ ಗರ್ಲ್ಸ್‌ ಈಗ ಮತ್ತೊಮ್ಮೆ ಕಪ್‌ ಗೆಲ್ಲೋ ತವಕದಲ್ಲಿದ್ದಾರೆ. 17 ವರ್ಷಗಳಿಂದ ನಮ್ಮ ಬಾಯ್ಸ್‌ ಒಂದೇ ಒಂದು ಕಪ್‌ ಗೆದ್ದಿಲ್ಲ ಅನ್ನೋ ಕೊರಗು ಅಭಿಮಾನಿಗಳನ್ನ ಕಾಡ್ತಿದೆ.. ಆದ್ರೆ ನಮ್ಮ ಗರ್ಲ್ಸ್‌ ಎರಡನೇ ಬಾರಿಗೆ ಕಪ್‌ ಮೇಲೆ ಕಣ್ಣಿದ್ದಾರೆ. ಈ ಸಲವೂ ಎದುರಾಳಿಗಳಿಗೆ ಟಫ್‌ ಫೈಟ್‌ ಕೊಡ್ತಿರೋ ಆರ್‌ಸಿಬಿ ಸಿಂಹಿಣಿಯರು, ಈ ಸಲವೂ ಕಪ್‌ ನಮ್ದೇ ಅಂತಾ ಹೇಳ್ತಿದ್ದಾರೆ. ನಮ್ಮ ಆರ್‌ಸಿಬಿ ಆಟಗಾರ್ತಿಯರು ಆಟದ ಜೊತೆಗೆ ಬ್ಯೂಟಿಯಿಂದಲೂ ಸಖತ್‌ ಸೌಂಡ್‌ ಮಾಡ್ತಿದ್ದಾರೆ. ಯಾವ ಬಾಲಿವುಡ್‌ ಹಿರೋಯಿನ್ ಗಳಿಗೂ ಕಡಿಮೆ ಇಲ್ಲ ಬಿಡಿ. ಇದೀಗ ಆರ್‌ಸಿಬಿ ಆಟಗಾರ್ತಿ ಡೇನಿಯಲ್ ವ್ಯಾಟ್‌ ಆಟದ ಜೊತೆಗೆ , ತಮ್ಮ ಲವ್‌ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ಇವ್ರ ಲವ್‌ ಸ್ಟೋರಿ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ. ಇವ್ರು ಮದುವೆ ಆಗಿರೋದು ಅವ್ರ ಸ್ನೇಹಿತೆಯನ್ನೇ!

ಇದನ್ನೂ ಓದಿ: FBI ನಿರ್ದೇಶಕರಾಗಿ ಭಾರತ ಮೂಲದ ಕಾಶ್ ಪಟೇಲ್ ಆಯ್ಕೆ- ಭಗವದ್ಗೀತೆಯ ಮೇಲೆ ಕೈ ಇಟ್ಟು ಪ್ರಮಾಣ ವಚನ

ಡೇನಿಯಲ್ ವ್ಯಾಟ್‌.. ಈ ಹೆಸ್ರು ಕೇಳಿದ ತಕ್ಷಣ ಕ್ರಿಕೆಟ್‌ ಪ್ರೇಮಿಗಳಿಗೆ 2014 ರಲ್ಲಿ ನಡೆದ ಅದೊಂದು ಘಟನೆ ನೆನಪಾಗುತ್ತೆ.. ಟೀಮ್​ ಇಂಡಿಯಾ ಸ್ಟಾರ್​ ಆಟಗಾರ  ವಿರಾಟ್​ ಕೊಹ್ಲಿಗೆ ಸಾರ್ವಜನಿಕವಾಗಿ ಪ್ರಪೋಸ್ ಮಾಡಿ ಸಂಚಲನ ಸೃಷ್ಟಿಸಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ವಿರಾಟ್‌ ಕೊಹ್ಲಿಗೆ ಪ್ರಪೋಸ್‌ ಮಾಡಿದ್ರು.. ತನಗೆ ವಿರಾಟ್‌ ಕೊಹ್ಲಿ ಅಂದ್ರೆ ಪಂಚಪ್ರಾಣ. ನನ್ನನ್ನು ಮದುವೆಯಾಗು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬರ್ಕೊಂಡಿದ್ರು.. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು.. ಆದ್ರೀಗ ಡೇನಿಯಲ್‌ ವ್ಯಾಟ್‌ ನಮ್ಮ ಆರ್ ಸಿಬಿ ತಂಡದಲ್ಲಿ ಸ್ಥಾನ ಪಡ್ಕೊಂಡಿದ್ದಾರೆ. ಹೌದು, ಇಂಗ್ಲೆಂಡ್‌ ಮಹಿಳಾ ತಂಡದ  ಪ್ರಮುಖ ಅಲ್‌ರೌಂಡರ್‌ ಆಗಿರೋ ಈಕೆ ಈಗ WPL ನಲ್ಲೂ ಸಖತ್‌ ಸೌಂಡ್‌ ಮಾಡ್ತಿದ್ದಾರೆ.. 2024 ರಲ್ಲಿ ಯುಪಿ ವಾರಿಯರ್ಸ್ ತಂಡದ ಮೂಲಕ WPL ಗೆ ಎಂಟ್ರಿ ಕೊಟ್ಟಿದ್ದ ವ್ಯಾಟ್‌ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ್ರು. ಈ ವರ್ಷದ WPL ಟೂರ್ನಿಯಲ್ಲಿ ಡೇನಿಯಲ್‌ ಆರ್‌ಸಿಬಿ ತಂಡ ಪಾಲಾಗಿದ್ದಾರೆ 30 ಲಕ್ಷ ರೂಪಾಯಿಗೆ ಆರ್‌ಸಿಬಿ ಫ್ರಾಂಚೈಸಿ ಡೇನಿಯಲ್‌ ಅವರನ್ನ ಖರೀದಿಸಿದೆ. ಇದೀಗ ಆರ್‌ಸಿಬಿ ತಂಡದ ಭಾಗವಾಗಿರುವ ಡೇನಿಯಲ್‌ ವ್ಯಾಟ್‌ ಈ ವರೆಗಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೈದಾನದಲ್ಲಿ ಡೇನಿಯಲ್‌ ಆಟ ಆಡ್ತಿದ್ದಂತೆ ಆಕೆಯ ಲವ್‌ ಲೈಫ್‌ ಕೂಡ ಸಖತ್‌ ಸದ್ದು ಮಾಡ್ತಿದೆ. ಅಂದ್ಹಾಗೆ ಡೇನಿಯಲ್‌ ಅವರದ್ದು ಸಲಿಂಗ ಪ್ರೇಮ.. ಆಕೆ ತನ್ನ ಸ್ನೇಹಿತೆಯನ್ನೇ ಮದುವೆ ಆಗಿದ್ದಾರೆ.

ಹೌದು.. ಡೇನಿಯಲ್‌ ವ್ಯಾಟ್‌ ಅವರದ್ದು ಸಲಿಂಗ ಪ್ರೇಮ.. ಬಹುಕಾಲದ ಗೆಳತಿ ಜಾರ್ಜಿ ಹಾಡ್ಜ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ರು.. ಆದ್ರೆ ಈ ವಿಚಾರ ಯಾರಿಗೂ ಗೊತ್ತಿರ್ಲಿಲ್ಲ.. ಇವರ ಮದುವೆಗೂ ಮುನ್ನ ಡೇನಿಯಲ್‌ ಹೆಸರು ಜೊತೆ ಕೆಲ ಕ್ರಿಕೆಟರ್ಸ್‌ ಹೆಸರು ತಳುಕು ಹಾಕಿಕೊಂಡಿತ್ತು.. ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್ ತೆಂಡೂಲ್ಕರ್, ಚಹಲ್‌ ಜೊತೆ ಡೇಟಿಂಗ್‌ ನಡೆಸ್ತಿದ್ದಾರೆ ಎಂಬ ಗಾಸಿಪ್‌ ಹರಿದಾಡಿತ್ತು. ಅಷ್ಟೇ ಅಲ್ಲ ಅವರಿಬ್ಬರು ಒಟ್ಟಿಗೆ ಇರೋ ಫೋಟೋ ಕೂಡ ಸೋಶಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿತ್ತು. ಬಳಿಕ ಅವರಿಬ್ಬರು ಫ್ರೆಂಡ್ಸ್‌  ಅಂತಾ ಹೇಳಲಾಯ್ತು.. ಇವೆಲ್ಲದ್ರ ನಡುವೆಯೇ ಡೇನಿಯಲ್‌ ತಮ್ಮ ಫ್ಯಾನ್ಸ್‌ ಶಾಕಿಂಗ್‌ ನ್ಯೂಸ್‌ ಕೊಟ್ಟಿದ್ರು.. ಕಳೆದ ವರ್ಷ ಮಾರ್ಚ್‌ ನಲ್ಲಿ ತನ್ನ ಗೆಳತಿಯನ್ನೇ ಮದುವೆ ಆಗಿರೋದಾಗಿ ಅನೌನ್ಸ್‌  ಮಾಡಿದ್ರು..  ಬಹುಕಾಲದ ಗೆಳತಿ ಜಾರ್ಜಿ ಹಾಡ್ಜ್ ಅವರನ್ನ ಮದುವೆ ಆಗಿದ್ದೇನೆ ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ರು..

ಹೌದು, ಡೇನಿಯಲ್‌ ವ್ಯಾಟ್‌ ತಮ್ಮ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿದ್ದು ಜಾರ್ಜಿ ಹಾಡ್ಜ್ ಅವರನ್ನ.. ಜಾರ್ಜಿ ಹಾಡ್ಜ್ CAA ಬೇಸ್ ಮಹಿಳಾ ಫುಟ್ಬಾಲ್ ತಂಡದ ಮುಖ್ಯಸ್ಥರಾಗಿದ್ದಾರೆ. ಡೇನಿಯಲ್ ಮತ್ತು ಜಾರ್ಜಿ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅದಾದ ಬಳಿಕ ಇವರಿಬ್ಬರು ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.  33 ವರ್ಷದ ಡೇನಿಯಲ್ ವ್ಯಾಟ್ ಇಂಗ್ಲೆಂಡ್ ಪರ 110 ಏಕದಿನ ಮತ್ತು 156 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕ್ರಮವಾಗಿ ಏಕದಿನ ಪಂದ್ಯಗಳಲ್ಲಿ 1907   ಮತ್ತು ಟಿ20 ಪಂದ್ಯಗಳಲ್ಲಿ 2726  ರನ್​ ಕಲೆಹಾಕಿದ್ರು. ಅಲ್ಲದೆ ಈ ವೇಳೆ ಒಟ್ಟು 73 ವಿಕೆಟ್​ಗಳನ್ನು ಕಬಳಿಸಿದ್ರು. ಇದೀಗ WPL ನಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದು, ಉತ್ತಮ ಪ್ರದರ್ಶನ ನೀಡ್ತಿದ್ದಾರೆ.

Shwetha M