ಕೈ ಕೊಟ್ಟ ಡೈರೆಕ್ಟರ್.. ಮೊನಾಲಿಸಾ ಸಿನಿಮಾ ಬಂದ್! – ಕುಂಭಮೇಳದ ಸುಂದರಿಗೆ ಎಂಥಾ ಗತಿ?

ಸೈ ಸೈ ಮೊನಾಲಿಸಾ.. ಈ ಹಾಡಿಗೆ ರುದ್ರಾಕ್ಷಿ ಮಾರ್ತಿದ್ದ ಹುಡುಗಿಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದೇ ಮಾಡಿದ್ದು.. ಈಕೆಯ ಸೌಂದರ್ಯ, ಕಣ್ಣೋಟಕ್ಕೆ ನೆಟ್ಟಿಗರು ಫಿದಾ ಆದ್ರು.. ಕುಂಭ ಮೇಳಕ್ಕೆ ಬಂದವರೆಲ್ಲಾ ಆಕೆಯನ್ನೇ ಹುಡ್ಕೊಂಡು ಹೋಗಿ ಸೆಲ್ಫಿ ತೆಗೆದುಕೊಂಡಿದ್ದೇನು.. ಫೋಟೋ ತೆಗೆಸಿಕೊಂಡಿದ್ದೇನು.. ಅಬ್ಬಬ್ಬಾ.. ರಾತ್ರಿ ಬೆಳಗಾಗೋದ್ರಲ್ಲಿ ಮೊನಾಲಿಸಾ ದೊಡ್ಡ ಸೆಲೆಬ್ರಿಟಿಯೇ ಆಗಿಬಿಟ್ಲು.. ಅಷ್ಟೇ ಅಲ್ಲ ಬಾಲಿವುಡ್ ನಿಂದ ಆಫರ್ ಬೇರೆ ಬಂತು.. ಕೃಷ್ಣ ಸುಂದರಿ ಅಂತಾ ಫೇಮಸ್ ಆಗಿರೋ ಈಕೆಯನ್ನ ಅನೇಕ ಕಾರ್ಯಕ್ರಮಗಳಿಗೆ ಕರೆಸಿಕೊಂಡ್ರು.. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡಿರೋ ಮೊನಾಲಿಸಾಗೆ ಮೋಸ ಆಯ್ತಾ? ಸಿನಿಮಾ ನಿರ್ದೇಶಕ ಸನೋಜ್ ಮಿಶ್ರ ಆಕೆಗೆ ಸಿನಿಮಾ ಆಸೆ ತೋರ್ಸಿ ವಂಚಿಸಿದ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ಇದೀಗ ನಿರ್ದೇಶಕನ ವಿರುದ್ಧ ಅದೇ ಸಿನಿಮಾದ ನಿರ್ಮಾಪಕ ಜಿತೇಂಧರ್ ನಾರಾಯಣ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ನಿರ್ಮಾಪಕ ಆರೋಪ ಮಾಡಿದ್ಯಾಕೆ? ಮೊನಾಲಿಸಾ ಫ್ಯೂಚರ್ ಏನು? ಪದೇ ಪದೇ ಈಕೆ ಟ್ರೋಲ್ ಆಗ್ತಿರೋದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೊದಲ ಪಂದ್ಯದ ಭಾರತಕ್ಕೆ ಭರ್ಜರಿ ಜಯ – ಬಾಂಗ್ಲಾಕ್ಕೆ ಬಿಗ್ ಶಾಕ್ ನೀಡಿದ ಭಾರತ
ಮೊನಾಲಿಸಾ ಎಂದರೆ ಸಾಕು, ಇಲ್ಲಿಯವರೆಗೆ ಲಿಯೊನಾರ್ಡೊ ಡಾ ವಿಂಚಿ ಅವರು ಬಿಡಿಸಿರೋ ಹೆಣ್ಣಿನ ಚಿತ್ರ ಕಣ್ಮುಂದೆ ಬರುತ್ತಿತ್ತು. ಗೂಗಲ್ನಲ್ಲೂ ಇದೇ ಪೇಂಟಿಂಗ್ ಕಾಣಿಸುತ್ತಿತ್ತು. ಆದ್ರೀಗ ಎಲ್ಲವೂ ಬದಲಾಗಿ ಹೋಗಿದೆ. ಗೂಗಲ್ನಲ್ಲಿ ಕುಂಭಮೇಳ ಅಥವಾ ಮೊನಾಲಿಸಾ ಅಂತಾ ಸರ್ಚ್ ಮಾಡಿದ್ರೆ ಸಾಕು.. ನೀಲಿ ಕಣ್ಗಳ ಚೆಲುವೆ, ರುದ್ರಾಕ್ಷಿ ಮಾರುವ ಯುವತಿ ಮೊನಾಲಿಸಾ ಕಾಣಿಸುತ್ತಾಳೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಈಕೆಯದ್ದೇ ಕಾರುಬಾರು. ಆಕೆಯ ಸೌಂದರ್ಯಕ್ಕೆ ಎಲ್ಲರೂ ಮಾರುಹೋಗಿದ್ರು.. ಯೂಟ್ಯೂಬರ್ಗಳು ಮೊನಾಲಿಸಾಳ ಬಗ್ಗೆ ಮಾಡಿರೋ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಇದು ಆಕೆಗೆ ಎಷ್ಟರಮಟ್ಟಿಗೆ ಹಿಂಸೆಯಾಯಿತು ಎಂದರೆ ಮೊನಾಲಿಸಾ ಕಣ್ಣೀರು ಹಾಕಬೇಕಾಯ್ತು.. ನನ್ನ ನನ್ನ ಪಾಡಿಗೆ ಬಿಡಿ ಅಂದ್ಲು.. ಮುಖ ಮುಚ್ಚಿಕೊಂಡು ಓಡಾಡಿದರೂ ಯೂಟ್ಯೂಬರ್ಗಳ ಕಾಟ ತಪ್ಪಲಿಲ್ಲ. ರುದ್ರಾಕ್ಷಿ ಖರೀದಿ ಮಾಡಿ ಎಂದರೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದರು. ಅದಾದ್ಮೇಲೆ ಆಕೆ ಕುಂಭಮೇಳದಿಂದ ಊರಿಗೆ ಹೋಗೋ ತರ ಕೂಡ ಆಯ್ತು ಇವೆಲ್ಲಾ ನೋವುಗಳ ನಡುವೆಯೂ, ಕುಂಭಮೇಳದ ಕ್ರಷ್ ಆಗಿರೋ ಈ ಬೆಡಗಿಗೆ ಬಾಲಿವುಡ್ ಆಫರ್ ಸಿಕ್ತು. ಸನೋಜ್ ಮಿಶ್ರಾ ದಿ ಡೈರಿ ಆಫ್ ಮಣಿಪುರ್ ಚಿತ್ರದಲ್ಲಿ ನಾಯಕಿಯಾಗಿ ಮೊನಾಲಿಸಾ ನಟಿಸಲಿದ್ದಾಳೆ ಅಂತಾ ಅನೌನ್ಸ್ ಮಾಡಿದ್ರು.. ಅದಾದ್ಮೇಲೆ ಮೊನಾಲಿಸಾಗೆ ಯುವತಿ ಮೇಕೋವರ್ ಮಾಡಿ ಮಾಡೆಲಿಂಗ್ ಮಾಡಿಸಲಾಯ್ತು.. ಕೆಲ ಜಾಹೀರಾತುಗಳಲ್ಲಿ, ಕೆಲ ಪ್ರೊಮೋಷನಲ್ ಇವೆಂಟ್ಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಯ್ತು.. ಆದ್ರೀಗ ಮೊನಾಲಿಸಾ ಸಿನಿಮಾ ನಾಯಕಿ ಆಗೋ ಕನಸು ಭಗ್ನ ಆಗಿದೆ. ಮೊದಲ ಸಿನಿಮಾ ಚಿತ್ರೀಕರಣ ಪ್ರಾರಂಭ ಆಗೋದಿಕ್ಕೆ ಮುಂಚೆಯೇ ನಿಂತು ಹೋಗಿದೆ.
ಮೊನಾಲಿಸಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಸನೋಜ್ ಮಿಶ್ರಾ ಸಿನಿಮಾದಲ್ಲಿ ಚಾನ್ಸ್ ಕೊಡೋದಾಗಿ ಹೇಳಿದ್ರು.. ಚಿತ್ರಕ್ಕಾಗಿ ಈಗಾಗಲೇ 21 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲಾಗಿದೆ ಎಂದು ಸುದ್ದಿಯಾಗಿತ್ತು. ಅದಾದ್ಮೇಲೆ ಮೊನಾಲಿಸಾ ಮಧ್ಯ ಪ್ರದೇಶದಲ್ಲಿ ನಟನಾ ತರಬೇತಿಯಲ್ಲಿ ನಿರತವಾಗಿದ್ದು, ಅದರ ಜೊತೆಗೆ ಕಲಿಕೆಯಲ್ಲೂ ತೊಡಗಿಕೊಂಡಿದ್ದೇನೆ ಎಂದು ಅಪ್ಡೇಟ್ ಕೊಟ್ಟಿದ್ರು. ಅಲ್ಲದೆ ಸನೋಜ್ ಮಿಶ್ರಾ ತಮ್ಮನ್ನು ಮಗಳ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಯಾರೂ ಸಹ ನನ್ನ ಸುರಕ್ಷತೆ ಬಗ್ಗೆ ಆತಂಕಕ್ಕೆ ಒಳಗಾಗುವುದು ಬೇಡ ಅಂತಾ ಮೊನಾಲಿಸಾ ಹೇಳಿದ್ಲು.. ಇತ್ತೀಚೆಗೆ ಕೇರಳದ ಆಭರಣ ಮಳಿಗೆಯೊಂದರ ಉದ್ಘಾಟನೆಗೆ ಮೊನಾಲಿಸಾ ಹೋಗಿದ್ಲು.. ಆ ಕಾರ್ಯಕ್ರಮಕ್ಕೆ ಬರೋಬ್ಬರಿ 14 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾಳೆ ಎಂದು ಸುದ್ದಿಯಾಗಿತ್ತು.. ಈ ಬೆನ್ನಲ್ಲೇ ನಿರ್ಮಾಪಕ ಜಿತೇಂದ್ರ ನಾರಾಯಣ್ ಒಂದು ದೊಡ್ಡ ಬಾಂಬ್ ಸಿಡಿಸಿದ್ದಾರೆ. ದಿ ಡೈರಿ ಆಫ್ ಮಣಿಪುರ್ ಸಿನಿಮಾದ ನಿರ್ಮಾಪಕ ಜಿತೇಂಧರ್ ನಾರಾಯಣ್ ಸಿಂಗ್ ನಿರ್ದೇಶಕ ಸನೋಜ್ ಮಿಶ್ರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
ಮೊನಾಲಿಸಾ ಅಪಾಯದಲ್ಲಿದ್ದಾರೆ. ಅವರ ಜೊತೆ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದ್ದ ಸನೋಜ್ ಮಿಶ್ರಾ ಅವರ ಬಳಿ ಅಷ್ಟೊಂದು ಹಣವಿಲ್ಲ. ಅಷ್ಟೇ ಅಲ್ಲದ ಮೋನಾಲಿಸಾ ಅವನ ಬಲೆಗೆ ಸಿಲುಕಿದ್ದಾಳೆ ಎಂದು ನಿರ್ಮಾಪಕ ಜಿತೇಂದ್ರ ಆರೋಪ ಮಾಡಿದ್ದಾರೆ. ಹೌದು, ಸನೋಜ್ ಮಿಶ್ರಾ ಒಬ್ಬ ಸುಳ್ಳುಗಾರ, ಮೋಸಗಾರ, ಮಹಾನ್ ಕುಡುಕ, ಆತ ಸುಳ್ಳು ಹೇಳಿ ಹಲವರಿಗೆ ಮೋಸ ಮಾಡಿದ್ದಾನೆ. ಯುವತಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಈಗ ಕುಂಭಮೇಳ ಮೊನಲಿಸಾಗೂ ಮೋಸ ಮಾಡುತ್ತಿದ್ದಾನೆ. ಸನೋಜ್ ಮಿಶ್ರಾ ನಿರ್ದೇಶನ ಮಾಡಿರುವ ಯಾವೊಂದು ಸಿನಿಮಾ ಸಹ ಈ ವರೆಗೆ ಬಿಡುಗಡೆ ಆಗಿಲ್ಲ. ಆತ ಮೊನಲಿಸಾಳಿಗೆ ತರಬೇತಿ ನೀಡುವ ನೆಪದಲ್ಲಿ ಆಕೆಯನ್ನು ಬೇರೆ ಬೇರೆ ಇವೆಂಟ್ಗಳಿಗೆ ಕಳಿಸಿ ತಾನು ಹಣ ಮಾಡಿಕೊಳ್ಳುತ್ತಿದ್ದಾನೆ. ಮೊನಲಿಸಾಳ ಕುಟುಂಬದವರು ಆ ವ್ಯಕ್ತಿಯ ಬಗ್ಗೆ ಜಾಗೃತೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ ನಿರ್ಮಾಪಕ ಜಿತೇಂಧರ್.
ಸನೋಜ್ ಮಿಶ್ರಾ, ಮೊನಲಿಸಾಗೆ ನಟನೆಯ ತರಬೇತಿ ನೀಡುತ್ತಿರುವ ಚಿತ್ರಗಳು, ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಈಗ ನೋಡಿದರೆ ಸಿನಿಮಾದ ನಿರ್ಮಾಪಕರೇ ನಿರ್ದೇಶಕರ ವಿರುದ್ಧ ಹೀಗೋಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದೀಗ ಸಿನಿಮಾ ನಿರ್ಮಾಪಕರೇ ಈ ರೀತಿ ಆರೋಪ ಮಾಡಿರೋದು ವಿವಾದಕ್ಕೆ ಕಾರಣ ಆಗಿದೆ. ವೈರಲ್ ಸುಂದರಿ ನಿರ್ದೇಶಕನ್ನ ನಂಬಿ ಕೆಟ್ರಾ? ಮೊನಾಲಿಸಾ ಮುಂದಿನ ಭವಿಷ್ಯ ಏನು? ನಿಜಕ್ಕೂ ನಿರ್ದೇಶಕ ನಿಜಕ್ಕೂ ಮೊನಾಲಿಸಾಗೆ ಮೋಸ ಮಾಡ್ತಿದ್ದಾರಾ ಅನ್ನೋ ಗೊಂದಲ ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ಲಾರಿಟಿ ಸಿಗುತ್ತಾ? ಮೊನಾಲಿಸಾ ತೆರೆ ಮೇಲೆ ಮಿಂಚ್ತಾಳಾ ಅಂತಾ ಕಾದು ನೋಡ್ಬೇಕು.