RCB ಫ್ಯಾನ್ಸ್ ಗೆ ನಮ್ಮ ಮೆಟ್ರೋದಿಂದ ಗುಡ್‌ನ್ಯೂಸ್! – ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳಂದು ಮೆಟ್ರೋ ಸೇವೆ ವಿಸ್ತರಣೆ

WPL ಹಬ್ಬ ಈಗಾಗ್ಲೇ ಶುರುವಾಗಿದೆ. ಆರ್‌ಸಿಬಿ ಮಹಿಳಾ ಆಟಗಾರರು ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿದ್ದಾರೆ. ಈ ಬಾರಿಯೂ ಕಪ್ ನಮ್ದೇ ಅಂತಾ ಆರ್‌ಸಿಬಿ ಫ್ಯಾನ್ಸ್ ಹೇಳ್ತಿದ್ದಾರೆ. ಇದೀಗ WPL ಪಂದ್ಯಗಳು ಬೆಂಗಳೂರಿನಲ್ಲೂ ನಡೆಯಲಿದೆ. ಇದೀಗ ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೋ ಗುಡ್‌ನ್ಯೂಸ್ ಕೊಟ್ಟಿದೆ.
ಇದನ್ನೂ ಓದಿ: ಮಾರ್ಚ್ 8ರೊಳಗೆ ಮಹಿಳೆಯರ ಖಾತೆಗೆ 2500 ಹಣ- ಬರವಸೆ ನೀಡಿದ ಸಿಎಂ
ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಮೆಟ್ರೋ ರೈಲು ಸೇವೆ ವಿಸ್ತರಿಸಲಾಗಿದೆ. ಫೆ.21, 22, 24, 25, 26, 27, 28 ಹಾಗೂ ಮಾ.01 ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಕೆಟ್ ಪಂದ್ಯಗಳಿಗೆ ಪ್ರಯಾಣಿಸಲು ಮತ್ತು ಹಿಂತಿರುಗಲು ವ್ಯವಸ್ಥೆ ಮಾಡಲಾಗಿದೆ.
ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗಿದೆ. ಚಲ್ಲಘಟ್ಟ, ವೈಟ್‌ಫೀಲ್ಡ್, ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿAದ ಕೊನೆಯ ರೈಲು ಸೇವೆ ರಾತ್ರಿ 11:20 ರ ವರೆಗೆ ಹಾಗೂ ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 11:55 ಕ್ಕೆ ಹೊರಡಲಿದೆ. ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ಗಳು (ಎನ್‌ಸಿಎಂಸಿ) ಹಾಗೂ ಟೋಕನ್‌ಗಳನ್ನು ಬಳಸಿ ಪ್ರಯಾಣಿಸಬಹುದು.