ಅಯ್ಯೋ.. ಗಾಂಧಿಗೆ ಇಂದೆಂಥಾ ಸ್ಥಿತಿ!!- ಬಿಯರ್ ಬಾಟಲ್ ಮೇಲೆ ಗಾಂಧಿ!!
ಮದ್ಯ ವಿರೋಧಿಸಿದವರಿಗೆ ಅನ್ಯಾಯ!!

ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸುವುದರ ಜೊತೆಗೆ ಮದ್ಯ ಮುಕ್ತ ಸಮಾಜದ ಕನಸು ಕಂಡಿದ್ದವರು ಗಾಂಧೀಜಿ. ಗಾಂಧಿ ಜಯಂತಿ ದಿನ ದೇಶದ ಯಾವುದೇ ಬಾರ್ ಓಪನ್ ಇರಲ್ಲ.. ಮಾಂಸ ಕೂಡ ಮಾರಾಟ ಮಾಡಲ್ಲ.. ಗಾಂಧಿ ರಾಮ ರಾಜ್ಯದ ಕನಸು ಕಂಡವರು ಗಾಂಧಿ.. ಅವರು ಮದ್ಯ ಸೇವನೆಯನ್ನ ವಿರೋಧ ಮಾಡುತ್ತಿದ್ದರು.. ಆದ್ರೆ ಯಾವುದನ್ನ ವಿರೋಧ ಮಾಡುತ್ತಿದ್ದರೋ ಅದರ ಮೇಲೆ ಗಾಂಧಿ ಫೋಟೋ ರಾರಾಜಿಸುತ್ತಿದೆ..
ಮದ್ಯ ಕಂಪೆನಿಯೊಂದು ತನ್ನ ಬಿಯರ್ ಕ್ಯಾನ್‌ಗಳಲ್ಲಿ ಮದ್ಯ ಮುಕ್ತ ಸಮಾಜದ ಕನಸು ಕಂಡಿದ್ದ ಗಾಂಧೀಜಿಯವರ ಫೋಟೋವನ್ನು ಪ್ರಿಂಟ್ ಮಾಡಿಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಬಿಯರ್ ಕ್ಯಾನ್‌ನಲ್ಲಿ ಮಹಾತ್ಮ ಗಾಂಧೀಜಿ ಫೋಟೋ ಕಂಡು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾದ ಬ್ರೂವರೀಸ್ ತನ್ನ ಬಿಯರ್ ಕ್ಯಾನ್ ಮೇಲೆ ಮಹಾತ್ಮ ಗಾಂಧಿಯವರ ಫೋಟೋವನ್ನ ಹಾಕಿರುವುದಕ್ಕೆಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಕಳೆದ ಒಂದು ವಾರದಿಂದ ಈ ಬಗ್ಗೆ ಜನ ಚರ್ಚೆ ಮಾಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಕ್ರಮವನ್ನು ಖಂಡಿಸಿ ಹಲವರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಗಾಂಧೀಜಿ ಅವರು ಮದ್ಯಪಾನ ವಿರೋಧಿಯಾಗಿದ್ದರು.. ಆದ್ರೆ ಬಿಯರ್ ಮೇಲೆ ಅವರ ಫೋಟೋ ಹಾಕಿರುವುದು ಸರಿ ಅಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ರಷ್ಯಾದ ಬಿಯರ್ ಕ್ಯಾನ್‌ನಲ್ಲಿ ಮಹಾತ್ಮ ಗಾಂಧಿಯವರ ಚಿತ್ರವನ್ನು ಪ್ರಿಂಟ್ ಮಾಡಿಸಿದ್ದು, ಇದೀಗ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ, ರೆವರ್ಟ್ ಬ್ರಾಂಡ್‌ನ ಹೇಜಿ ಐಪಿಎ ಬಿಯರ್ ಕ್ಯಾನ್‌ಗಳಲ್ಲಿ ಗಾಂಧಿಯವರ ಫೋಟೋ ಮತ್ತು ಸಹಿಯನ್ನು ಮುದ್ರಿಸಲಾಗಿದೆ. ಈ ಬಿಯರ್ ಕ್ಯಾನ್ ಫೋಟೋ ಭಾರೀ ವೈರಲ್ ಆಗಿದ್ದು, ಮದ್ಯ ಮುಕ್ತ ಸಮಾಜದ ಕನಸು ಕಂಡ ಗಾಂಧೀಜಿಯವರಿಗೆ ಮಾಡಿದ ಅವಮಾನವಿದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮೊದಲಲ್ಲ ಈ ಹಿಂದೆ ಅಮೆರಿಕಾದ ಕಂಪೆನಿಯೊಂದು ತಮ್ಮ ಬಿಯರ್ ಬಾಟಲ್‌ಗಳ ಮೇಲೆ ಗಾಂಧೀಜಿ ಭಾವಚಿತ್ರವನ್ನು ಮುದ್ರಿಸಿತ್ತು. ಈ ಬಗ್ಗೆ ಹೈದರಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ ನಂತರ ಅಮೆರಿಕದ ಕಂಪನಿ ತನ್ನ ಬಿಯರ್ ಉತ್ಪನ್ನಗಳಿಂದ ಗಾಂಧಿಯವರ ಚಿತ್ರವನ್ನು ತೆಗೆದುಹಾಕಿ ಕ್ಷಮೆಯಾಚಿಸಿತ್ತು
ಒಡಿಶಾದ ರಾಜಕೀಯ ನಾಯಕ ಸುಪರ್ಣೋ ಸತ್ಪತಿ ಅವರು X ನಲ್ಲಿ ಈ ಬಗ್ಗೆ ಫೋಸ್ಟ್ ಹಾಕಿದ ಮೇಲೆ ಈ ವಿಷ್ಯ ಸಕಷ್ಟು ಚರ್ಚೆ ಆಗುತ್ತಿದೆ. ಇನ್ನು ಈ ವಿಷಯದ ಬಗ್ಗೆ ರಷ್ಯಾ ಸರ್ಕಾರದೊಂದಿಗೆ ಚರ್ಚಿಸಬೇಕೆಂದು ಸುಪರ್ಣೋ ಸತ್ಪತಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿನಂತಿಸಿದ್ದರು. ರೆವರ್ಟ್ ಸಾರಾಯಿ ಸ್ಥಾವರದ ಬಿಯರ್‌ಗೆ ಮಹಾತ್ಮ ಗಾಂಧಿ ಅವರ ಹೆಸರನ್ನು ಇಡಲಾಗಿದೆ. ಆ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಗಾಂಧೀಜಿ ಶಾಂತಿ ಮತ್ತು ಅಹಿಂಸೆಯ ಜಾಗತಿಕ ಸಂಕೇತವಾಗಿದ್ದು, ಅವರನ್ನು ಮದ್ಯದೊಂದಿಗೆ ಜೋಡಿಸುವುದು ಸೂಕ್ತವಲ್ಲ ಎಂದು ಬರೆಯಲಾಗಿತ್ತು. ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಕೂಡ ಬಂದಿವೆ.
ಈ ಪೋಸ್ಟ್‌ಗೆ ಕಾಮೆಂಟ್‌ಗಳು ತೀರಾ ಕಠಿಣವಾಗಿ ಬಂದಿವೆ. ನಿಮ್ಮ ಈ ಕ್ರಮವು ಭಾರತದ ಮೌಲ್ಯಗಳು ಮತ್ತು ಜನರನ್ನು ಅವಮಾನಿಸಿದಂತೆ ಎಂದು ಹೇಳಲಾಗಿದೆ. ಮದ್ಯದ ಜಾಹೀರಾತುಗಳಲ್ಲಿ ಗಾಂಧೀಜಿಯವರ ಚಿತ್ರವನ್ನು ಈ ಹಿಂದೆಯೂ ಬಳಸಲಾಗಿದೆ. 2019ರಲ್ಲಿ, ಇಸ್ರೇಲ್‌ನ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಲು ಇಸ್ರೇಲಿ ಮದ್ಯದ ಕಂಪನಿಯೊಂದು ಮದ್ಯದ ಬಾಟಲಿಗಳ ಮೇಲೆ ಗಾಂಧೀಜಿಯವರ ಚಿತ್ರವನ್ನು ಮುದ್ರಿಸುವ ಮೂಲಕ ಭಾರಿ ವಿವಾದಕ್ಕೆ ಕಾರಣವಾಯಿತು. ಆದಾಗ್ಯೂ, ಘಟನೆಗೆ ಸಾರಾಯಿ ಕಂಪನಿ ಕ್ಷಮೆಯಾಚಿಸಿದೆ.
ಮದ್ಯ ಸೇವನೆ ವಿರೋಧಿಸಿದ ಗಾಂಧಿ
ಇನ್ನು ಮಹಾತ್ಮ ಗಾಂಧೀಜಿ ಅವರು ಭಾರತದ ಗ್ರಾಮೀಣ ಶೈಲಿಯ ಜೀವನಶೈಲಿಗೆ ಆದ್ಯತೆ ನೀಡಿದ್ದು, ಗ್ರಾಮಗಳ ಅಭಿವೃದ್ಧಿಯನ್ನು ಒತ್ತಿ ಹೇಳುತ್ತಿದ್ದರು. ಈ ವೇಳೆ ಗ್ರಾಮೀಣ ಭಾಗದಲ್ಲಿ ದೊಡ್ಡ ಪಿಡುಗು ಆಗಿದ್ದ ಸಾರಾಯಿ ಅಥವಾ ಮದ್ಯ ಸೇವನೆಯನ್ನು ವಿರೋಧಿಸಿ ಮಹಿಳೆಯರನ್ನು ಕೂಡ ಬೆಂಬಲಿಸಿದ್ದರು. ಹೀಗಾಗಿ, ಭಾರತದಲ್ಲಿ ಯಾವುದೇ ಮದ್ಯದ ಅಂಗಡಿಗಳಿಗೂ ಗಾಂಧೀಜಿ ಹೆಸರನ್ನು ಇಡುವುದಿಲ್ಲ. ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್, ಮದ್ಯದಂಗಡಿ, ಮಾಂಸಾಹಾರ ಅಂಗಡಿಗಳಿಗೆ ಗಾಂಧಿ ಹೆಸರನ್ನು ಇಡುವುದಿಲ್ಲ. ಆದರೆ, ಇದೀಗ ರಷ್ಯಾ ಬ್ರೇವರೀಸ್ ಒಂದು ಬಿಯರ್ ಬ್ರ್ಯಾಂಡ್‌ಗೆ ಮಹಾತ್ಮ ಜಿ ಎಂದು ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.