ರಾಜ್ಯದ ಜನರಿಗೆ ಮತ್ತೆ KMF ನಿಂದ ಶಾಕ್! – ನಂದಿನಿ ಹಾಲಿನ ದರ ಮತ್ತೆ ಹೆಚ್ಚಳ?

ರಾಜ್ಯದಲ್ಲಿ ದಿನೇ ದಿನೆ ಅಗತಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗ್ತಿದೆ. ಇದೀಗ ರಾಜ್ಯದ ಜನರಿಗೆ ಕೆಎಂಎಫ್ ಮತ್ತೆ ಶಾಕ್ ನೀಡಲು ಮುಂದಾಗಿದೆ. ನಂದಿನಿ ಹಾಲಿನ ದರ ಮತ್ತೆ ಹೆಚ್ಚಳ ಮಾಡುವ ಚಿಂತನೆ ನಡೆಸಿದೆ.
ಇದನ್ನೂ ಓದಿ : ಬಿಸಿಸಿಐಗೂ ಗೊತ್ತು RCB ಗತ್ತು – IPL ಫಸ್ಟ್ ಮ್ಯಾಚ್ ಬೆಂಗಳೂರೇ ಯಾಕೆ?
ಕೆಎಂಎಫ್ ಶೀಘ್ರದಲ್ಲೇ ಹಾಲಿನ ದರದಲ್ಲಿ ಪರಿಷ್ಕರಣೆ ಮಾಡಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಪ್ರತಿ ಲೀಟರ್ 5 ರೂಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಸಿಎಂ ಅಂಗಳದಲ್ಲಿ ನಂದಿನಿ ಹಾಲಿನ ದರ ಏರಿಕೆಯ ಪ್ರಸ್ತಾವನೆ ಇದೆ. ಮುಖ್ಯಮಂತ್ರಿಗಳ ಅನುಮತಿಗಾಗಿ ಕೆಎಂಎಫ್ ಆಡಳಿತ ಮಂಡಳಿ ಕಾಯುತ್ತಿದೆ. ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಹಾಲಿನ ದರ ಏರಿಕೆ ಆಗಲಿದೆ.
ಕೆಲವು ದಿನಗಳ ಹಿಂದೆ ಹಾಲು ದರ ಏರಿಸುವಂತೆ ಕೆಎಂಎಫ್ ಮುಂದೆ ರೈತರು ಪ್ರತಿಭಟನೆ ಮಾಡಿದ್ದರು. ಜತೆಗೆ ಹಾಲು ಒಕ್ಕೂಟಗಳಿಂದ ನಂದಿನಿ ಹಾಲಿನ ದರ ಏರಿಸುವಂತೆ ಕೆಎಂಎಫ್ಗೆ ಒತ್ತಡ ಇದೆ. ರೈತರು ಮತ್ತು ಹಾಲು ಒಕ್ಕೂಟಗಳಿಂದ ದರ ಏರಿಸುವ ಬಗ್ಗೆ ಆಗ್ರಹ ಹಿನ್ನೆಲೆಯಲ್ಲಿ ಕೆಎಂಎಫ್ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದೆ.