ವಿಶ್ವದ ಶ್ರೀಮಂತ ದೇವಸ್ಥಾನ ಯಾವೆಲ್ಲಾ? – 2ನೇ ಸ್ಥಾನದಲ್ಲಿ ತಿಮ್ಮಪ್ಪ, NO.1 ಯಾರು?

ನಮ್ಮ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ 500,000 ಕ್ಕೂ ಹೆಚ್ಚು ದೇವಾಲಯಗಳಿವೆ. ಇದು ಈ ನೆಲದ ಶ್ರೀಮಂತ ಧಾರ್ಮಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಇಂತಹ ದೇವಾಲಯಗಳಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ಕೋಟಿಗಟ್ಟಲೆ ಆಸ್ತಿ ಹಣ ಚಿನ್ನದ ಸಂಗ್ರಹವಿದೆ. ಬನ್ನಿಹಾಗಿದ್ರೆ ದೇಶದ ಶ್ರೀಮಂತ ದೇವಾಲಯಗಳುನ್ನ ನೋಡೋಣ ಬನ್ನಿ..
ಇದನ್ನೂ ಓದಿ: ದೇಶದ ಟಾಪ್ 10 ಪ್ರಭಾವಿ ವ್ಯಕ್ತಿಗಳು ಯಾರೆಲ್ಲಾ?
ವಿಶ್ವದ ಶ್ರೀಮಂತ ದೇವಾಲಯ ಶ್ರೀ ಪದ್ಮನಾಭಸ್ವಾಮಿ ದೇವಾಲಯ
ಭಾರತದ ಕೇರಳದ ರಾಜಧಾನಿ ತಿರುವನಂತಪುರಂನದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯ ಶ್ರೀವಿಷ್ಣುವಿಗೆ ಸಮರ್ಪಿತವಾಗಿದೆ. ಈ ದೇವಾಲಯದ ಒಟ್ಟು ವಿಶ್ವದ ಶ್ರೀಮಂತ ದೇವಾಲಯ ನಂ.1 ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇವಾಲಯ ಮೌಲ್ಯ 1,20,000 ಕೋಟಿ. ಇದು ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪದ್ಮನಾಭಸ್ವಾಮಿ ದೇವಸ್ಥಾನ ವಿಶ್ವದಲ್ಲಿಯೇ ಅತೀ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿದ್ದು, ಕೆಲವು ವರ್ಷಗಳ ಹಿಂದೆ ಲೆಕ್ಕ ಹಾಕಿದಾಗ ಸುಮಾರು 90 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಮುತ್ತು-ರತ್ನಗಳಿಂದ ಮಾಡಲ್ಪಟ್ಟ ಅಪೂರ್ವ ಆಭರಣಗಳ ಬೃಹತ್ ಸಂಗ್ರಹವೇ ದೇವಸ್ಥಾನದಲ್ಲಿ ಪತ್ತೆಯಾಗಿತ್ತು. ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇಗುಲದಲ್ಲಿ ಎ, ಬಿ, ಸಿ, ಡಿ, ಇ ಮತ್ತು ಎಫ್ ಎಂಬ ಕೊಠಡಿಗಳಿದೆ. ಈ 6 ರಲ್ಲಿ 5 ಖಜಾನೆಗಳಲ್ಲಿ ಮಾತ್ರ ಪರಿಶೀಲನೆ ನಡೆದಿದ್ದು, ‘ಬಿ’ ಖಜಾನೆಯಲ್ಲಿ ಏನಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ತಿರುಪತಿ ತಿಮ್ಮಪ್ಪ ಕೂಡ ಶ್ರೀಮಂತ ದೇವರು
ಆಂಧ್ರಪ್ರದೇಶ ಆಂಧ್ರಪ್ರದೇಶದ ತಿರುಮಲ ಬೆಟ್ಟಗಳಲ್ಲಿ ನೆಲೆಸಿರುವ ತಿರುಪತಿ ಬಾಲಾಜಿ ದೇವಸ್ಥಾನವು ವಿಶ್ವದ ಅತಿ ದೊಡ್ಡ ಮತ್ತು ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ವೈಷ್ಣವ ಪಂಥದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಈ ದೇವಾಲಯವು ಪ್ರತಿ ವರ್ಷ ಕೋಟ್ಯಾಂತರ ಭಕ್ತರನ್ನು ಆಕರ್ಷಿಸುತ್ತದೆ. ದೇಶದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಭಕ್ತರು ಪ್ರತಿ ವರ್ಷ ಸುಮಾರು 650 ಕೋಟಿ ರೂ. ಲಡ್ಡುಗಳ ಪ್ರಸಾದ ಮಾರಾಟದಿಂದ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ತಿರುಪತಿ ದೇವಸ್ಥಾನವು ವಿಷ್ಣುವಿನ ಅವತಾರವೆಂದು ನಂಬಲಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ದೇವಸ್ಥಾನವು ಒಂಬತ್ತು ಟನ್ ಚಿನ್ನ ಮತ್ತು 14,000 ಕೋಟಿ ರೂಪಾಯಿಗಳ ಸ್ಥಿರ ಠೇವಣಿಗಳನ್ನು ವಿವಿಧ ಬ್ಯಾಂಕ್ಗಳಲ್ಲಿ ಹೊಂದಿದೆ ಎಂದು ನಂಬಲಾಗಿದೆ.
ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಕೋಟಿ ಕೋಟಿ ಆಸ್ತಿ
ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಸ್ಥಾನ ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ದಿನನಿತ್ಯ ಲಕ್ಷಾಂತರ ಭಕ್ತರು ಆಗಮಿಸಿ ಬಾಬಾನ ದರ್ಶನ ಪಡೆಯುತ್ತಾರೆ. ಆದರೆ ಈ ದೇವಾಲಯಕ್ಕೆ ಭಕ್ತರಿಂದ ಬರುತ್ತಿರುವ ಯಥೇಚ್ಛವಾದ ಕಾಣಿಕೆ ನೀಡುತ್ತಾರೆ. ಶ್ರೀಮಂತ ದೇಗುಲದಗಳ ಪೈಕಿ ಮೂರನೇ ಸ್ಥಾನ ಸಾಯಿಬಾಬಾ ದೇವಾಲಯದಲ್ಲ್ ವರದಿಯ ಪ್ರಕಾರ ದೇವಾಲಯದ ಬ್ಯಾಂಕ್ ಖಾತೆಗೆ ಸುಮಾರು 1,800 ಕೋಟಿ ರೂಪಾಯಿ ಜಮಾ ಆಗಿದೆ. ಪ್ರತಿವಾರ ಬರೋಬ್ಬರಿ 14 ಲಕ್ಷ ನಾಣ್ಯಗಳು ದೇವಸ್ಥಾನದ ಹುಂಡಿಗೆ ಕಾಣಿಕೆಯಾಗಿ ಬೀಳುತ್ತಿವೆ. ದೇವಾಲಯದಲ್ಲಿ 380 ಕೆಜಿ ಚಿನ್ನ, 4,428 ಕೆಜಿ ಬೆಳ್ಳಿ, ಡಾಲರ್ ಮತ್ತು ಪೌಂಡ್ನಂತಹ ವಿದೇಶಿ ಕರೆನ್ಸಿಗಳ ರೂಪದಲ್ಲಿ ದೊಡ್ಡ ಮೊತ್ತದ ಹಣವು ಠೇವಣಿಯಾಗಿದೆ. 2017ರಲ್ಲಿ ರಾಮ ನವಮಿಯ ಸಂದರ್ಭದಲ್ಲಿ ಅಪರಿಚಿತ ಭಕ್ತರೊಬ್ಬರು ದೇವಸ್ಥಾನಕ್ಕೆ 12 ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದರು. ಈ ದೇವಸ್ಥಾನಕ್ಕೆ ವರ್ಷಂಪ್ರತಿ ಸುಮಾರು 350 ಕೋಟಿ ದೇಣಿಗೆ ಬರುತ್ತದೆ.
ಭಕ್ತರನ್ನ ಸೆಳೆಯುತ್ತೆ ವೈಷ್ಣೋ ದೇವಿ ದೇವಾಲಯ
ತ್ರಿಕೂಟ ಪರ್ವತಗಳ ಒಳಗೆ ಮತ್ತು ಜಮ್ಮುವಿನಿಂದ 61 ಕಿಲೋಮೀಟರ್ ದೂರದಲ್ಲಿರುವ ವೈಷ್ಣೋ ದೇವಿ ದೇವಾಲಯವು ಪ್ರತಿ ವರ್ಷ ಹತ್ತಾರು ಹಿಂದೂ ಭಕ್ತರನ್ನು ಸೆಳೆಯುವ ಒಂದು ಪಾಲಿಸಬೇಕಾದ ಯಾತ್ರಾ ಸ್ಥಳವಾಗಿದೆ. ಜೊತೆಗೆ ಇದು ಶಕ್ತಿ ಪೀಠ ದೇವಾಲಯಗಳಲ್ಲಿ ಒಂದಾಗಿದೆ. ಒಂದು ವರದಿಯ ಪ್ರಕಾರ ಪ್ರತಿ ವರ್ಷ 500 ಕೋಟಿ ರೂಪಾಯಿ ಆದಾಯವನ್ನು ಈ ಶಕ್ತಿಪೀಠ ಗಳಿಸುತ್ತದೆ.ಪ್ರತಿ ವರ್ಷ ಸುಮಾರು 80 ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ತಿರುಪತಿಯ ನಂತರ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯವಾಗಿ ಇದು ಗುರುತಿಸಿಕೊಂಡಿದೆ.
ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಾಲಯ 5ನೇ ಶ್ರೀಮಂತ ದೇವಾಲಯ
ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಾಲಯವು ದೇಶದ ಐದನೇ ಶ್ರೀಮಂತ ದೇವಾಲಯವಾಗಿದೆ. ಇವು ದೇಶದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.ಈ ದೇವಾಲಯದಲ್ಲಿ ಕಪ್ಪು ಶಿಲೆಯ ಗಣೇಶ ವಿಗ್ರಹವಿದ್ದು, ಇದು ಸುಮಾರು 200 ವರ್ಷಗಳಷ್ಟು ಪುರಾತನವಾದದ್ದು.ಇಲ್ಲಿ ಪ್ರತಿದಿನ 25 ಸಾವಿರದಿಂದ 2 ಲಕ್ಷದವರೆಗೂ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯದ ವಾರ್ಷಿಕ ಆದಾಯ 48 ಕೋಟಿಯಿಂದ 125 ಕೋಟಿಯಷ್ಟು ಇದೆ. ಇಲ್ಲಿನ ಮುಖ್ಯ ದೇವಾಲಯದ ಗುಮ್ಮಟಕ್ಕೆ 3.5 ಕೆಜಿಯ ಬಂಗಾರದ ಕೋಟ್ ಮಾಡಲಾಗಿದೆ. ಇವು ಟಾಪ್ 5 ಶ್ರೀಮಂತ ದೇವಾಲಯಗಳು.