ಭಾರತ ಸೇನೆಗೆ ಆನೆ ಬಲ!! – F-35 ಯುದ್ಧ ವಿಮಾನ ಹೇಗಿರಲಿದೆ?
ಪಾಕ್, ಚೀನಾಕ್ಕೆ ನಡುಕ ಶುರು!

ಭಾರತ ಸೇನೆ ವಿಶ್ವದಲ್ಲೇ ಟಾಪ್ 4 ಸ್ಥಾನದಲ್ಲಿದೆ. ಯಾರೆ ಬಂದ್ರೂ ಅವರ ಎದೆ ಸಿಳುವ ಪವರ್ ಹೊಂದಿದೆ. ನಮ್ಮ ದೇಶದಳ ಬಳಿ ಅಧುನಿಕ ಶಸಾಸ್ತ್ರಗಳಿವೆ. ಈ ನಡುವೆ ಭಾರತದ ವಾಯುಸೇನೆಗೆ ಸದ್ಯದಲ್ಲಿಯೇ ಭಾರೀ ಬ್ರಹ್ಮಾಸ್ತ್ರವೊಂದು ಬಂದು ಸೇರಲಿದೆ. ಈ ಬಗ್ಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತಕ್ಕೆ ಸದ್ಯದಲ್ಲಿಯೇ ಎಫ್-35 ಫೈಟರ್ ಜೆಟ್ ನೀಡಲು ಅಮೆರಿಕ ನಿರ್ಧಾರ ಮಾಡಿದ ಎಂದು ಹೇಳಿದ್ದಾರೆ. ಹಾಗಿದ್ರೆ ಮೋದಿ ಸರ್ಕಾರ ಎಪ್ 35 ಖರೀದಿದೆ ಓಕೆ ಅನ್ನುತ್ತಾ? ವಿಶ್ವದ ಅತ್ಯಂತ ಸುಧಾರಿತ ಫೈಟರ್ ಜೆಟ್ ಆಗಿರುವ ಎಫ್-35 ಭಾರತದ ಮಟ್ಟಿಗೆ ಹೇಗೆ ಗೇಮ್ ಚೆಂಜರ್ ಆಗುತ್ತೆ? ಬೇರೆ ಯಾವ ದೇಶಗಳಲ್ಲಿ ಈ ಫೈಟರ್ ಜೆಟ್ ಇದೆ? ಇದರ ಬೆಲೆ ಎಷ್ಟು? ಭಾರತದಲ್ಲಿ ಸದ್ಯ ಯಾವ ಹೈಟೆಕ್ ಫೈಟರ್ ಜೆಟ್ ಇದೆ?, ಅಮೆರಿಕದ ಎಷ್ಟು ಯುದ್ಧ ವಿಮಾನಗಳು ಭಾರತದ ಬಳಿ ಇದೆ ಅನ್ನೋದನ್ನ ಕ
ಭಾರದ ಬಳಿ ಸದ್ಯ 5ನೇ ಜನರೇಷನ್ ವಿಮಾನಗಳು ಇಲ್ಲ. ಆ ನಿಟ್ಟಿನಲ್ಲಿ ದೇಶಿಯವಾಗಿ 5ನೇ ತಲೆಮಾರಿನ ಯುದ್ಧ ವಿಮಾನವನ್ನು ಖಾಸಗಿ ಕಂಪನಿಗಳು ಸಹಭಾಗಿತ್ವದೊಂದಿಗೆ ತಯಾರಿಸಲು ಈಗಾಗಲೇ ಸಿದ್ಧತೆ ನಡೆಸಿದೆ. ಆದರೆ ಇದರ ನಡುವೆಯೇ ಟ್ರಂಪ್ ಈಗ ಖುಷಿಯ ಸುದ್ದಿಯನ್ನು ಹೇಳಿದ್ದು ಭಾರತದ ಸೇನೆಗೆ ಮತ್ತೊಂದು ದೊಡ್ಡ ಬಲ ಬಂದು ಸೇರಲಿದೆ. ಟ್ರಂಪ್ ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾದ ಮೇಲೆ ಮೋದಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದು, ಈ ವೇಳೆ ಉಭಯ ನಾಯಕರ ನಡುವೆ ಹಲವು ಮಾತುಕತೆಗಳಾಗಿವೆ. ಅದರಲ್ಲೂ ಪ್ರಮುಖವಾಗಿ ಭಾರತಕ್ಕೆ F-35 ಲೈಟ್ನಿಂಗ್ 2 ಯುದ್ಧ ವಿಮಾನವನ್ನು ನೀಡಲು ಅಮೆರಿಕ ಮುಂದಾಗಿದೆ. ಇದು ಐದನೇ ತಲೆಮಾರಿನ ಫೈಟರ್ ಜೆಟ್ ಆಗಿದ್ದು, ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಗೇಮ್ ಚೆಂಜರ್ ಆಗಲಿದೆ. ವಿಶ್ವದ ಅತ್ಯಂತ ಮಾರಕ, ಎಂತಹ ಪರಿಸ್ಥಿತಿಯಲ್ಲೂ ಹೋರಾಡುವ ಫೈಟರ್ ಜೆಟ್ ಆಗಿರುವ ಶತ್ರು ರಾಷ್ಟ್ರಗಳ ಎದೆಯಲ್ಲಿ ನಡುಕ ಶುರುವಾಗಿದೆ.
ಹೌದು, ಮೋದಿ ಹಾಗೂ ಟ್ರಂಪ್ ನಡುವಿನ ಮಾತುಕತೆ ಸಕ್ಸಸ್ ಆಗಿದ್ದು, ಟ್ರಂಪ್ ಎಫ್-35 ವಿಮಾನಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಭಾರತಕ್ಕೆ ಮಿಲಿಟರಿ ಉಪಕರಣಗಳ ಮಾರಾಟವನ್ನು ನಾವು ಭಾರೀ ಪ್ರಮಾಣದಲ್ಲಿ ಹೆಚ್ಚಿಸುತ್ತಿದ್ದೇವೆ. ಇದು ಎಫ್-35 ಸ್ಟೆಲ್ತ್ ಫೈಟರ್ ಜೆಟ್ಗಳನ್ನು ನಾವು ಭಾರತಕ್ಕೆ ನೀಡಲು ದಾರಿಯಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಮೋದಿ ಮುಂದೆಯೇ ಟ್ರಂಪ್ ಈ ಘೋಷಣೆ ಮಾಡಿರುವುದರಿಂದ ಅತೀ ಶೀಘ್ರದಲ್ಲಿ ಭಾರತದ ಮಿಲಿಟರಿಗೆ ಈ ಯುದ್ಧ ವಿಮಾನಗಳು ಸೇರುವ ಸಾಧ್ಯತೆ ಇದೆ. ಆದ್ರೆ ಭಾರತ ಇದಕ್ಕೆ ಇನ್ನೂ ಯಾವುದೇ ಒಪ್ಪಿಗೆ ನೀಡಿಲ್ಲ. ಇನ್ನೂಂದು ವಿಷ್ಯ ಅಂದ್ರೆ ಅಮೆರಿಕದ ಯಾವುದು ಯುದ್ಧ ವಿಮಾನಗಳು ಭಾರತದ ಬಳಿ ಇಲ್ಲ.. ಭಾರತಲ್ಲಿ ಈಗ ರಫೇಲ್ ಯುದ್ಧ ವಿಮಾನವೇ ಅತ್ಯಂತ ಸುಧಾರಿತ ಫೈಟರ್ ಜೆಟ್ ಆಗಿದ್ದು, ಅದಕ್ಕಿಂತಲೂ ಹಲವು ಪಟ್ಟು ಸುಧಾರಿತ ಎಫ್-35 ಫೈಟರ್ ಜೆಟ್ ಭಾರತದ ಸೇನೆಗೆ ಸೇರುವುದರಿಂದ ಇಂಡಿಯಾಗೆ ಆನೆಬಲ ಬಂದಂತಾಗಲಿದೆ.
F-35 ಯುದ್ಧ ವಿಮಾನ ವಿಶ್ವದ ಅತ್ಯಂತ ಸುಧಾರಿತ ಫೈಟರ್ ಜೆಟ್ ಆಗಿದ್ದು, ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಆಗಿದೆ. ಸೂಪರ್ಸಾನಿಕ್ ವೇಗದಲ್ಲಿ ಯಾರಿಗೂ ಪತ್ತೆಯಾಗದೇ ಆಪರೇಷನ್ ನಡೆಸುವ ಸಾಮರ್ಥ್ಯಕ್ಕೆ ಎಫ್-35 ಹೆಸರುವಾಸಿ. ಇದು ಸುಧಾರಿತ ಎಲೆಕ್ಟ್ರಾನಿಕ್ ವಾರ್ ಫೇರ್ ಸಿಸ್ಟಮ್, ಅತ್ಯಾಧುನಿಕ ಸೆನ್ಸಾರ್ಗಳನ್ನು, ಅಸಾಧಾರಣ ಮಾಹಿತಿ ಫ್ಯುಷನ್ಗಳನ್ನು ಹೊಂದಿದೆ. ಈ ಫೀಚರ್ಗಳು ಎಫ್-35 ಫೈಟರ್ ಜೆಟ್ ದೀರ್ಘ ವ್ಯಾಪ್ತಿಯಲ್ಲಿ ಟಾರ್ಗೆಟ್ಗಳನ್ನು ಪತ್ತೆ ಹಚ್ಚಲು ಮತ್ತು ಆಪರೇಷನ್ ನಡೆಸಲು ಅನುವು ಮಾಡಿಕೊಡಲಿದೆ. ಆಧುನಿಕ ವೈಮಾನಿಕ ಯುದ್ಧದಲ್ಲಿ ಈ ವಿಮಾನಗಳು ದೇಶಗಳಿಗೆ ಅಸಾಧಾರಣ ಆಸ್ತಿಯಾಗಲಿದೆ.
F-35 ಫೈಟರ್ ಜೆಟ್ ಸದ್ಯ ಮೂರು ಪ್ರಮುಖ ವಿಧಗಳನ್ನು ಹೊಂದಿದೆ. ಅದರಲ್ಲಿ ಮೊದಲನೇಯದು F-35A, ಇದು ಸಾಂಪ್ರದಾಯಿಕ ಟೇಕ್ಆಫ್ ಮತ್ತು ಲ್ಯಾಂಡಿಂಗ್ ಆವೃತ್ತಿಯಾಗಿದೆ. ಇದನ್ನು ಅಮೆರಿಕದ ವಾಯುಪಡೆ ಪ್ರಮುಖವಾಗಿ ಬಳಸುತ್ತಿದ್ದು, ಇದರ ಬೆಲೆ ಸುಮಾರು 80 ಮಿಲಿಯನ್ ಡಾಲರ್ ಆಗಿದೆ. ಎರಡನೇಯದು F-35B ಆಗಿದ್ದು, ಶಾರ್ಟ್ ಟೇಕ್ ಆಫ್, ವರ್ಟಿಕಲ್ ಲ್ಯಾಂಡಿಂಗ್ ಮಾಡೆಲ್ ಆಗಿದೆ. ಇದನ್ನು ಅಮೆರಿಕದ ಮೆರೈನ್ ಕಾರ್ಪ್ಸ್ ಬಳಸುತ್ತಿದ್ದು, ಇದರ ಬೆಲೆ ಸುಮಾರು 115 ಮಿಲಿಯನ್ ಡಾಲರ್ ಆಗಿದೆ. ಇನ್ನು, ಮೂರನೇದು F-35C ಆಗಿದ್ದು, ಅಮೆರಿಕದ ನೌಕಾಪಡೆಗಾಗಿ ಇದನ್ನು ಡಿಸೈನ್ ಮಾಡಲಾಗಿದ್ದು, ಕ್ಯಾರಿಯರ್ ರೀತಿಯ ಆವೃತ್ತಿಯಾಗಿದೆ. ಇದರ ಬೆಲೆ ಸುಮಾರು 110 ಮಿಲಿಯನ್ ಡಾಲರ್ ವೆಚ್ಚವಾಗಲಿದೆ. ಆದಾಗ್ಯೂ, ಖರೀದಿಸುವ ವೆಚ್ಚವನ್ನು ಮೀರಿ F-35 ಅನ್ನು ನಿರ್ವಹಿಸುವುದು ದುಬಾರಿಯಾಗಿದ್ದು, ಭಾರತದ ಸೇನೆಗೆ ಬಿಳಿಯಾನೆ ಆಗುತ್ತಾ ಎಂಬ ಆತಂಕವೂ ಇದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಿರ್ವಹಣೆಯ ಹಿನ್ನೆಲೆ ಪ್ರತಿ ಹಾರಾಟದ ವೇಳೆ ಗಂಟೆಗೆ ಸರಿಸುಮಾರು 36,000 ಡಾಲರ್ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಎಫ್ 35 ಯುದ್ಧ ವಿಮಾನ ಕೇವಲ ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ. ಲಾಕ್ಹೀಡ್ ಮಾರ್ಟಿನ್ ಕಂಪನಿ ತಯಾರಿಸುವ ಈ ಫೈಟರ್ ಜೆಟ್ ಅಮೆರಿಕದ ಹಲವು ಮಿತ್ರ ರಾಷ್ಟ್ರಗಳ ಬಳಿಯಿದೆ. ಆದ್ದರಿಂದ ಇದು ಜಾಗತಿಕ ಆಸ್ತಿ ಎಂದು ಕೂಡ ಕರೆಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದಲ್ಲಿ 72 F-35A ಫೈಟರ್ ಜೆಟ್ಗಳಿದ್ದರೆ, ಇಂಗ್ಲೆಂಡ್, ಇಟಲಿ ಮತ್ತು ನಾರ್ವೆಗಳು ಕೂಡ F-35 ಅನ್ನು ಖರೀದಿಸುತ್ತಿದ್ದು, ಅಮೆರಿಕದೊಂದಿಗೆ ಈಗಾಗಲೇ ಒಪ್ಪಂದವನ್ನು ಕೂಡ ಮಾಡಿಕೊಂಡಿವೆ. ಅಮೆರಿಕ ರಕ್ಷಣಾ ಇಲಾಖೆಯ ವಿದೇಶಿ ಮಿಲಿಟರಿ ಮಾರಾಟ ಕಾರ್ಯಕ್ರಮದ ಮೂಲಕ, ಜಪಾನ್, ದಕ್ಷಿಣ ಕೊರಿಯಾ ಮತ್ತು ಇಸ್ರೇಲ್ ಕೂಡ ಈ ಫೈಟರ್ ಜೆಟ್ಗಳನ್ನು ಬುಕ್ ಮಾಡಿವೆ.
ಟ್ರಂಪ್ ಇಟ್ಟಿರುವ ಈ ಪ್ರಸ್ತಾಪವನ್ನು ಭಾರತ ಒಪ್ಪಿಕೊಂಡರೆ F-35 ಅನ್ನು ತನ್ನ ಸೇನಾ ಬತ್ತಳಿಕೆಗೆ ಸೇರಿಸಿಕೊಂಡ ಮೊದಲ ನ್ಯಾಟೋ ಅಲ್ಲದ ರಾಷ್ಟ್ರ ಹಾಗೂ ಫೆಸಿಫಿಕ್ ಅಲ್ಲದ ಅಮೆರಿಕದ ಮಿತ್ರ ರಾಷ್ಟ್ರವಾಗಲಿದೆ. ಇದು ಭಾರತದ ವಾಯು ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವುದು ಖಂಡಿತ.
ಭಾರತವು ಪ್ರಸ್ತುತ ರಫೇಲ್ ಫೈಟರ್ ಜೆಟ್ ಅನ್ನು ಹೊಂದಿದ್ದು, 4.5 ಜನರೇಷನ್ನ ಮಲ್ಟಿ ರೋಲ್ ಯುದ್ಧ ವಿಮಾನವಾಗಿದೆ. ಇದು ಏರ್ ಟೂ ಏರ್ ಮತ್ತು ಏರ್ ಟೂ ಗ್ರೌಂಡ್ನಲ್ಲೂ ಕಾರ್ಯನಿರ್ವಹಿಸುತ್ತದೆ. ಭಾರತ ಹೊಂದಿರುವ ಅತ್ಯಂತ ಸುಧಾರಿತ ಫೈಟರ್ ಜೆಟ್ ಇದಾಗಿದ್ದು, ಫ್ರಾನ್ಸ್ನ ಯುದ್ಧ ವಿಮಾನವಾಗಿದೆ.. ಭಾರತದ ಅಗತ್ಯಕ್ಕೆ ತಕ್ಕಂತೆ ರಫೇಲ್ ಅನ್ನು ಕಸ್ಟಮೈಸ್ ಮಾಡಲಾಗಿದ್ದು, ಇದರ ಬೆಲೆ 110 ರಿಂದ 120 ಬಿಲಿಯನ್ ಡಾಲರ್ ಆಗಿದೆ. ವೈವಿಧ್ಯತೆ, ಚುರುಕುತನ ಮತ್ತು ದೃಢವಾದ ಪೇಲೋಡ್ ಸಾಮರ್ಥ್ಯಕ್ಕೆ ರಫೇಲ್ ಹೆಸರುವಾಸಿಯಾಗಿದೆ. F-35ಗಿಂತ ಭಿನ್ನವಾಗಿದ್ದರು ರಫೇಲ್ ಸುಧಾರಿತ ಸ್ಟೆಲ್ತ್ ತಂತ್ರಜ್ಞಾನವನ್ನು ಹೊಂದಿಲ್ಲ. ಆದರೆ, ಆಪರೇಷನ್ ನಡೆಸಲು ಇದು ಯಾವಾಗಲೂ ರೆಡಿಯಿದ್ದು, ಯುದ್ಧಭೂಮಿಯಲ್ಲಿ ದೊಡ್ಡ ದಾಖಲೆಯನ್ನೇ ಹೊಂದಿದೆ. ಎಫ್-35 ಫೈಟರ್ ಜೆಟ್ ಅದ್ಭುತವಾದ ಸ್ಟೆಲ್ತ್, ಸೆನ್ಸಾರ್ಗಳನ್ನು ಹೊಂದಿದೆ. ಅದರ ಜೊತೆ ಲಾಂಗ್ ರೆಂಜ್ ಸಾಮರ್ಥ್ಯಗಳನ್ನು ಹೊಂದಿದ್ದರೂ ಹೆಚ್ಚಿನ ಬೆಲೆ ಹಾಗೂ ಕಾರ್ಯಾಚರಣೆಯ ವೆಚ್ಚದೊಂದಿಗೆ ಬರಲಿದೆ.
ಇದಕ್ಕೆ ವ್ಯತಿರಿಕ್ತವಾಗಿ, ರಫೇಲ್ ಕಡಿಮೆ ಸ್ಟೆಲ್ತ್ ಆಗಿದ್ದರೂ ಹೆಚ್ಚು ಚುರುಕಾಗಿದೆ. ನಿಕಟ-ಯುದ್ಧ ಸನ್ನಿವೇಶಗಳಲ್ಲಿ ಅಸಾಧಾರಣವಾಗಿ ಕಾರ್ಯನಿರ್ವಹಿಸುತ್ತದೆ. ಬಾಹ್ಯ ಇಂಧನ ಟ್ಯಾಂಕ್ಗಳನ್ನು ಹೊಂದಿದಾಗ ದೀರ್ಘ ಯುದ್ಧ ವ್ಯಾಪ್ತಿಯನ್ನು ನೀಡುತ್ತದೆ. ಎರಡೂ ವಿಮಾನಗಳು ಅಣ್ವಸ್ತ್ರಗಳನ್ನು ನಿರ್ವಹಿಸಲು ಸಮರ್ಥವಾಗಿದೆ. ಆದರೆ F-35 ತಾಂತ್ರಿಕ ನಾವೀನ್ಯತೆಯಲ್ಲಿ ಒಂದಿಷ್ಟು ಮುಂದಿದ್ದರೆ, ಕಾರ್ಯಕ್ಷಮತೆ ಮತ್ತು ಖರ್ಚಿನ ವಿಷಯದಲ್ಲಿ ರಫೇಲ್ ಬ್ಯಾಲೆನ್ಸ್ ಆಗಿದ್ದು, ಭಾರತದ ಮಟ್ಟಿಗೆ ಒಕೆ. ಇದರ ಜೊತೆ ಎಫ್-35 ಭಾರತದ ಬತ್ತಳಿಕೆಗೆ ಸೇರಿದರೆ ಇಂಡಿಯಾಗೆ ಗೇಮ್ ಚೆೇಂಜರ್ ಆಗುವುದು ಖಂಡಿತ.
ಇದುವರೆಗೂ ಭಾರತ ರಷ್ಯಾದಿಂದ ಸುಖೋಯ್ ಯುದ್ಧ ವಿಮಾನ, ಫ್ರಾನ್ಸ್ನಿಂದ ರಫೇಲ್ ಖರೀದಿ ಮಾಡಿತ್ತು. ಇದರಿಂದಾಗಿ 5ನೇ ತಲೆಮಾರಿನ ಫೈಟರ್ ಜೆಟ್ ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ರಷ್ಯಾ ವಿರೋಧಿಸುವ ನೆಪದಲ್ಲಿ ಅಮೆರಿಕಾ ಭಾರತಕ್ಕೆ ಎಫ್-16 ಮತ್ತು ಎಫ್-35 ಯುದ್ಧ ವಿಮಾನವನ್ನು ನೀಡಿರಲಿಲ್ಲ. ಈಗ ಭಾರತಕ್ಕೆ ಎಫ್-35 ಯುದ್ಧ ವಿಮಾನ ನೀಡಲು ನಿರ್ಧರಿಸಿದ ಡೋನಾಲ್ಡ್ ಟ್ರಂಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಭಾರತಕ್ಕೆ ಅಮೆರಿಕ F-35 ಫೈಟರ್ ಜೆಟ್ ಅನ್ನು ನೀಡಿದರೆ ವಾಯು ರಕ್ಷಣಾ ಕ್ಷೇತ್ರದಲ್ಲಿ ಇಂಡಿಯಾ ಹಲವು ಪಟ್ಟು ಮುಂದೆ ಹೋಗಲಿದೆ. ಆದರೆ, ಎಫ್-35 ಖರೀದಿಗೆ ಅನೇಕ ಅಂಶಗಳು ಮೋದಿ ಸರ್ಕಾರಕ್ಕೆ ಸವಾಲಾಗುವ ಸಾಧ್ಯತೆಯಿದೆ. ಪ್ರಮುಖವಾಗಿ ವೆಚ್ಚ ಮತ್ತು ನಿರ್ವಹಣೆ ಸವಾಲಾಗಲಿದೆ. F-35 ಹೆಚ್ಚು ಬೆಲೆ ಹೊಂದಿದ್ದು, ದುಬಾರಿ ಆಪರೇಷನಲ್ ಕಾಸ್ಟ್ ಅನ್ನು ಹೊಂದಿದೆ. ಅದಲ್ಲದೇ F-35 ನ ಮೂಲಸೌಕರ್ಯ ಮತ್ತು ತರಬೇತಿಗಾಗಿ ಅತ್ಯಾಧುನಿಕ ನಿರ್ವಹಣೆಯನ್ನು ಹೊಂದಬೇಕಾಗುತ್ತದೆ. ರನ್ವೇಗಳನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಎಫ್-35 ಆಫರ್ ಅನ್ನು ಭಾರತ ಒಪ್ಪಿಕೊಂಡರೆ ದೀರ್ಘಕಾಲದ ರಕ್ಷಣಾ ಸಂಬಂಧಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಭಾರತಕ್ಕೆ ಯುದ್ಧ ವಿಮಾನಗಳನ್ನು ರಷ್ಯಾ ಪೂರೈಸುತ್ತಿದ್ದು, ಅದರ ಮೇಲೆ ಎಫೆಕ್ಟ್ ಆಗುವ ಸಾಧ್ಯತೆ ಇದೆ.
ಟ್ರಂಪ್ ಭಾರತಕ್ಕೆ ಎಫ್-35 ಫೈಟರ್ ಜೆಟ್ಗಳ ಆಫರ್ ನೀಡಿದ್ದಾರೆ. ಇದು ಭಾರತ ಹಾಗೂ ಅಮೆರಿಕ ರಕ್ಷಣಾ ಸಂಬಂಧಗಳ ಪ್ರಗತಿಯಲ್ಲಿ ದಿಟ್ಟ ಹೆಜ್ಜೆಯಾಗಿದೆ. F-35 ಸಾಟಿಯಿಲ್ಲದ ಮತ್ತು ಮುಂದುವರಿದ ಯುದ್ಧ ಸಾಮರ್ಥ್ಯಗಳನ್ನು ನೀಡುತ್ತದೆಯಾದರೂ ಹೆಚ್ಚಿನ ವೆಚ್ಚದ ಕಾರಣ ಇದು ಭಾರತಕ್ಕೆ ಎಷ್ಟು ಅಗತ್ಯ ಎಂಬುದನ್ನು ಕೂಡ ನೋಡಬೇಕು. ಈ ನಡುವೆ ಚೀನಾ 6ನೇ ತಲೆಮಾರಿನ ಫೈಟರ್ ಜೆಟ್ಗಳ ಪ್ರಯೋಗ ಮಾಡುತ್ತಿರುವಾಗ ಭಾರತ ಐದನೇ ತಲೆಮಾರಿನ ಯುದ್ಧ ವಿಮಾನದ ಕಡೆ ಮುಖ ಮಾಡಬೇಕಾ ಅಥವಾ ಹೊಸ 6ನೇ ತಲೆಮಾರಿನ ಫೈಟರ್ ಜೆಟ್ಗಳಿಗಾಗಿ ಕಾಯಬೇಕಾ ಎಂಬ ದ್ವಂದ್ವವೂ ಕೂಡ ಭಾರತೀಯ ರಕ್ಷಣಾ ಸಮುದಾಯವನ್ನು ಕಾಡುತ್ತಿದೆ. ಒಟ್ನಲ್ಲಿ ಅಮೆರಿಕಾ ಏನೂ F-35 ಕೊಡೋಕೆ ರೆಡಿಯಿದೆ, ಆದ್ರೆ ಇದನ್ನ ಖರೀದಿ ಮಾಡಿದ್ರೆ ಭಾರತಕ್ಕೆ ಎಷ್ಟು ಲಾಭ ಅನ್ನೋದನ್ನ ಲೆಕ್ಕಹಾಕಿ ಮುಂದಿನ ಹೆಜ್ಜೆಯನ್ನ ಇಡಬೇಕಿದೆ. ನಮಸ್ಕಾರ..