ಭಾಗ್ಯ ಶೆಫ್ ಅಲ್ಲ ಜೋಕರ್!? – ತಾಂಡವ್ ಗಾಳಕ್ಕೆ ಬಿದ್ದ ತನ್ವಿ
ಸೀರಿಯಲ್ ಕತೆಗೆ ಗೊತ್ತು ಗುರಿ ಇಲ್ವಾ?

ಭಾಗ್ಯ ಲಕ್ಷ್ಮೀ ಸೀರಿಯಲ್ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಕನ್ನಿಕಾ ಕುತಂತ್ರದಿಂದ ಭಾಗ್ಯ ಕೆಲಸ ಕಳೆದುಕೊಳ್ಳುವಂತೆ ಆಗಿತ್ತು.. ಎಲ್ಲಿ ಹೋಗಿ ಕೆಲಸ ಕೇಳಿದ್ರೂ ಯಾರು ಕೊಡೋದಿಕ್ಕೆ ರೆಡಿಯಿಲ್ಲ.. ಭಾಗ್ಯ ಇನ್ನು ಹೊಸ ರೆಸ್ಟೋರೆಂಟ್ ಓಪನ್ ಮಾಡ್ಬೋದು ಅಂತಾ ಸೀರಿಯಲ್ ಫ್ಯಾನ್ಸ್ ಅಂದ್ಕೊಂಡಿದ್ರು.. ಆದ್ರೀಗ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ. ಭಾಗ್ಯ ಈಗ ಜೋಕರ್ ಆಗಿದ್ದಾಳೆ.. ಹಾಗಾದ್ರೆ ಭಾಗ್ಯ ಹೊಸ ಕೆಲಸವನ್ನ ಮನೆಯವರು ಒಪ್ಪಿಕೊಳ್ತಾರಾ? ತಾಂಡವ್ ಮುಂದೇನು ಮಾಡ್ತಾನೆ? ಸೀರಿಯಲ್ ಫ್ಯಾನ್ಸ್ ಸಿಟ್ಟಾಗಿದ್ದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ; ಪಂತ್, ಅಯ್ಯರ್ ವೇತನಕ್ಕಿಂತ ಕಡಿಮೆ – ಚಾಂಪಿಯನ್ಸ್ ಟ್ರೋಫಿ ಗೆದ್ದವರಿಗೆ ಬಹುಮಾನ ಎಷ್ಟು?
ಭಾಗ್ಯ ಯಾವಾಗ ಡಿವೋರ್ಸ್ ಕೊಟ್ಲೋ.. ಅವಾಗ ನಾನು ಭಾಗ್ಯ ಅನ್ನೋ ಅಭಿಯಾನ ಬೇರೆ ಶುರುವಾಯ್ತು.. ಇನ್ನುಮುಂದೆ ಅಳುಮುಂಜಿ ಭಾಗ್ಯ ಅಲ್ಲ.. ರೆಬಲ್ ಭಾಗ್ಯ.. ಆಕೆ ದೊಡ್ಡ ಶೆಫ್ ಆಗ್ತಾಳೆ.. ತಾಂಡವ್ ಭಾಗ್ಯ ಕಡೆ ವಾಲ್ತಾನೆ ಅಂತಾ ಎಲ್ಲರೂ ಅಂದ್ಕೊಂಡಿದ್ರು. ಆದ್ರೆ ಭಾಗ್ಯಗೆ ಸಂಕಷ್ಟು ಮುಗಿಯೋ ತರ ಕಾಣ್ತಿಲ್ಲ.. ಇದೀಗ ಭಾಗ್ಯ ಕೆಲಸ ಕಳೆದುಕೊಂಡಿದ್ದಾಳೆ.. ಮಕ್ಕಳ ಸ್ಕೂಲ್ ಫೀಸ್, ಮನೆಯ ಖರ್ಚು, ಇವೆಲ್ಲವನ್ನ ನಿಭಾಯಿಸೋದು ಹೇಗೆ ಅನ್ನೋ ಚಿಂತೆಯಲ್ಲಿದ್ದಾಳೆ.. ಕೆಲಸ ಕೇಳಿಕೊಂಡು ಹೋದ್ರೂ ಆಕೆಗೆ ಯಾರೂ ಕೆಲ್ಸ ಕೊಡ್ತಿಲ್ಲ.. ಇದಕ್ಕಾಗಿ ಭಾಗ್ಯ ದೊಡ್ಡ ಹೆಜ್ಜೆ ಇಟ್ಟಿದ್ದಾಳೆ.
ಹೌದು, ಕೆಲಸ ಕಳೆದುಕೊಂಡಿದ್ದ ಭಾಗ್ಯ ಬಾಳಲ್ಲಿ ಬದಲಾವಣೆ ಗಾಳಿ ಬೀಸಿದೆ. ಭಾಗ್ಯಲಕ್ಷ್ಮೀ ಹೊಸ ಅಧ್ಯಾಯ ಶುರುವಾಗಿದ್ದು, ಎಷ್ಟೋ ನೊಂದ ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿ ಭಾಗ್ಯ ಪಾತ್ರ ತಲೆಯತ್ತಿ ನಿಲ್ಲಲಿದೆ. ಇದೀಗ ಭಾಗ್ಯ ಹೊಸ ಕೆಲಸಕ್ಕೆ ಕೈ ಹಾಕಿದ್ದಾಳೆ. ಭಾಗ್ಯ ಕೆಲಸ ಸಿಕ್ಕಿಲ್ಲ ಅನ್ನೋ ಬೇಜಾರಿನಲ್ಲಿ ಹೋಗ್ತಿರುವಾಗ ಜೋಕರ್ ವೇಷ ತೊಟ್ಟಿರುವ ಕೆಲವರು ರೆಸಾರ್ಟ್ ಮುಂದೆ ಕುಣಿತಾ ಇರ್ತಾರೆ . ಜೋಕರ್ ವೇಷ ತೊಟ್ಟು ಜನರನ್ನು ನಗಿಸುವ ಕೆಲಸಕ್ಕೆ ಭಾಗ್ಯಾ ಸೇರಿಕೊಂಡಿದ್ದಾಳೆ. ರೆಸಾರ್ಟ್ ಗೆ ಬಂದವರನ್ನೆಲ್ಲಾ ನಗಿಸುವ ಕೆಲಸ ಮಾಡಿದ್ದಾಳೆ.. ಆದ್ರೆ, ಈ ವಿಚಾರ ಮನೆಯವರಿಗೆ ಗೊತ್ತಿಲ್ಲ. ಈ ವಿಚಾರ ಗೊತ್ತಾದ್ರೆ ಮನೆಯವರು ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋದು ಇದೀಗ ವೀಕ್ಷಕರನ್ನ ಕಾಡ್ತಿದೆ.
ಮತ್ತೊಂದ್ಕಡೆ ಮನೆಯವರನ್ನ ತನ್ನ ಪರ ಮಾಡಿಕೊಳ್ತೇನೆ ಅಂತಾ ತಾಂಡವ್ ಭಾಗ್ಯಗೆ ಸವಾಲ್ ಹಾಕಿದ್ದಾನೆ.. ಇದ್ರ ಮೊದಲ ಭಾಗವಾಗಿ ತಾಂಡವ್ ತನ್ವಿಯನ್ನ ಒಲಿಸಿಕೊಳ್ಳಲು ಮುಂದಾಗಿದ್ದಾನೆ.. ಮೊದ್ಲು ಆಕೆಯ ಕಾಲೇಜ್ ಫೀಸ್ ಕಟ್ಟಿದ್ದ.. ಈಗ ತನ್ವಿ ಬರ್ತಡೇ ಸೆಲಬ್ರೇಟ್ ಮಾಡಿದ್ದಾನೆ. ಇದ್ರಿಂದಾಗಿ ಆಕೆ ಫುಲ್ ಇಂಪ್ರೆಸ್ ಆಗಿದ್ದಾಳೆ. ಹೀಗಾಗಿ ತನ್ವಿ ತಾಂಡವ್ ಕಡೆ ವಾಲೋದು ಫಿಕ್ಸ್ ಆಗಿದೆ.
ಆದ್ರೀಗ ಸೀರಿಯಲ್ ಸ್ಟೋರಿ ನೋಡಿ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ಭಾಗ್ಯ ಮುಂದೆ ಏನ್ ಕೆಲ್ಸಾ ಮಾಡ್ಬೇಕು ಅಂತಾ ವೀಕ್ಷಕರ ಬಳಿ ಪ್ರಶ್ನೆ ಮಾಡಲಾಗಿತ್ತು.. ಇದಕ್ಕೆ ನಾಲ್ಕು ಆಪ್ಷನ್ ಬೇರೆ ನೀಡಲಾಗಿತ್ತು.. ಜನರ ಅಭಿಪ್ರಾಯ ಕೇಳಿದ್ಮೇಲೆ ಸ್ಟೋರಿ ಯಾಕೆ ಚೇಂಜ್ ಮಾಡಿದ್ದು? ವೀಕ್ಷಕರ ಅಭಿಪ್ರಾಯಕ್ಕೆ ಬೆಲೆ ಇಲ್ವಾ? ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.. ಇನ್ನೂ ಕೆಲವರು ಸೀರಿಯಲ್ ಡೈರೆಕ್ಟರ್ ಗೆ ಕತೆನಾ ಹೇಗೆ ಮುಂದೆ ತೆಗೆದುಕೊಂಡು ಹೋಗ್ಬೇಕು ಅಂತಾ ಗೊತ್ತಾಗ್ತಿಲ್ಲ ಅಂತಾ ಕಾಣ್ಸುತ್ತೆ.. ಹೀಗಾಗಿ ಏನೇನೋ ಟ್ವಿಸ್ಟ್ ಕೊಟ್ಟು ಸೀರಿಯಲ್ ನ ರಬ್ಬರ್ ತರ ಎಳಿತಿದ್ದಾರೆ.. ಭಾಗ್ಯ ಹೊಸ ಹೋಟೆಲ್ ಓಪನ್ ಮಾಡಿದ್ರೆ ಚೆನ್ನಾಗಿ ಇರ್ತಿತ್ತು.. ಆದ್ರೆ ಈಗ ಜೋಕರ್ ಮಾಡಿ ಬಿಟ್ಟಿದ್ದಾರೆ.. ಈ ಧಾರವಾಹಿನೆ ಒಂದು ಜೋಕು. ಅದ್ರಲ್ಲಿ ಜೋಕರ್ ಬೇರೆ ಬೇಕಿತ್ತಾ? ಅಂತಾ ಕಾಮೆಂಟ್ ಮಾಡಿದ್ದಾರೆ.. ಮತ್ತೆ ಕೆಲವರು ಈ ಸೀರಿಯಲ್ ಡೈರೆಕ್ಟರ್ ಗೆ ಯಾರ್ ಮೇಲೆ ಅಷ್ಟೆಲ್ಲಾ ಸಿಟ್ಟೊ ಗೊತ್ತಿಲ್ಲ.. ಭಾಗ್ಯ ಮೇಲೆ ಸಿಟ್ಟೋ ವೀಕ್ಷಕರ ಮೇಲೆ ಸಿಟ್ಟೋ.. ಒಟ್ನಲ್ಲಿ ಆ ಪಾಪದ ಭಾಗ್ಯಳ ಬದುಕನ್ನು ಮೂರಾಬಟ್ಟೆ ಮಾಡ್ತಾ ಇದ್ದಾರೆ.. ಅವರಿಗೊಂದು ದೊಡ್ಡ ಧನ್ಯವಾದ ಹೇಳ್ಬೇಕು… ಸೀರಿಯಲ್ ನೋಡೋ ಹುಚ್ಚನ್ನು ಬಿಡಿಸಿದ್ದಕ್ಕೆ… ಯಾರ್ಯಾರ ಕೈಲಿ ಕೂಡಾ ಆಗದೇ ಇದ್ದ ಸಾಧನೆ ಮಾಡಿದ್ದಕ್ಕೆ ಅಂತಾ ಹೇಳಿದ್ದಾರೆ.. ಇನ್ನು ಕೆಲವರು ಬಾಗ್ಯಳಿಗೆ ರುಚಿಯಾಗಿ ಅಡುಗೆ ಮಾಡಲು ಬರುತ್ತದೆ.. ಭರತನಾಟ್ಯ ಮಾಡಲು ಬರುತ್ತದೆ. ಬಟ್ಟೆ ಹೊಲೆಯುತ್ತಾಳೆ ಕಷ್ಟಗಳನ್ನು ದೈರ್ಯವಾಗಿ ಎದುರಿಸುವ, ಒಬ್ಬ ಸ್ವಾಭಿಮಾನಿ. ಹೆಣ್ಣು ಮಗಳಿಗೆ ಸ್ವಂತ ದುಡಿಮೆ ಮಾಡಲು ದಾರಿ ತೋರಿಸುವ ಬದಲು. ಈ ರೀತಿ ವೇಷ ಹಾಕಿ ಕುಣಿಸುವ ಅಗತ್ಯ ಇದ್ಯಾ ಅಂತಾ ಪ್ರಶ್ನೆ ಮಾಡಿದ್ದಾರೆ.