ಜಯಂತ್‌ ಹುಚ್ಚಾಟ ಜಾನು ರಿವೇಂಜ್‌! – ಸೈಕೋಪತಿ CCTV ಠುಸ್‌
ಚಿನ್ನುಮರಿ ಮಾಸ್ಟರ್‌ ಪ್ಲ್ಯಾನ್‌ ಸಕ್ಸಸ್‌

ಜಯಂತ್‌ ಹುಚ್ಚಾಟ ಜಾನು ರಿವೇಂಜ್‌! – ಸೈಕೋಪತಿ CCTV ಠುಸ್‌ಚಿನ್ನುಮರಿ ಮಾಸ್ಟರ್‌ ಪ್ಲ್ಯಾನ್‌ ಸಕ್ಸಸ್‌

ಸೈಕೋಪತಿ ಜಯಂತ್‌ ಗೆ ಅದ್ಯಾಕೋ ಈಗ ಟೈಮ್‌ ಸರಿಯಾಗಿಲ್ಲ ಅನ್ಸುತ್ತೆ.. ಒಂದಾದ ಮೇಲೊಂದು ಪ್ಲ್ಯಾನ್‌ ಉಲ್ಟಾ ಹೊಡಿತಿದೆ. ಜಾಹ್ನವಿ, ಅಜ್ಜಿ ಮೇಲೆ ಒಂದು ಕಣ್ಣಿಟ್ಟಿರ್ಬೇಕು ಅಂತಾ ಜಯಂತ್‌ ಮನೆತುಂಬಾ ಸಿಸಿಟಿವಿ ಹಾಕಿದ್ದ.. ಆದ್ರೀಗ ಆ ಸಿಸಿಟಿವಿಯೇ ಕೈಕೊಟ್ಟಿದೆ. ಇದ್ರಿಂದಾಗಿ ಆತನಿಗೆ ತಲೆ ಕೆಟ್ಟು ಹೋಗಿದೆ. ಹಾಗಾದ್ರೆ ಸಿಸಿಟಿವಿಗೆ ಏನಾಯ್ತು? ಜಾಹ್ನವಿ ಮಾಸ್ಟರ್‌ ಪ್ಲ್ಯಾನ್‌ ವರ್ಕ್ಸ್‌ ಆಯ್ತಾ? ಜಯಂತ್‌ ಗೆ ಕಾದಿದ್ಯಾ ಮಾರಿ ಹಬ್ಬ? ಇದೀಗ ಜಾಹ್ನವಿ ಮೇಲೆ ಕಣ್ಣಿಡಲು ಜಯಂತ್‌ ಏನ್‌ ಮಾಡ್ತಾನೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಬೆಂಗಳೂರು Vs ಗುಜರಾತ್ ಕದನಕ್ಕೆ ಕೌಂಟ್ ಡೌನ್ – ಸ್ಮೃತಿ ಮಂದಾನ ಪಡೆ ಹೇಗಿದೆ?

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಜಾಹ್ನವಿ ಮೇಲೆ ಕಣ್ಣಿಡಲು ಜಯಂತ್‌ ಮನೆಯ ಸುತ್ತಮುತ್ತ ಸಿಸಿಟಿವಿ ಹಾಕಿದ್ದ. ಆದ್ರೆ ಇದೀಗ ಅಜ್ಜಿಗೆ ತನ್ನ ಸತ್ಯ ಗೊತ್ತಾಗಿದೆ.. ಎಲ್ಲಿ ಎಚ್ಚರವಾಗಿಬಿಟ್ಟರೆ ತನ್ನ ಮತ್ತೊಂದು ಮುಖವನ್ನು ಬಯಲು ಮಾಡುತ್ತಾರೆ ಅನ್ನೋ ಭಯದಲ್ಲಿ ಜಯಂತ್ ದಿನ ಕಳೆಯುತ್ತಿದ್ದಾನೆ. ಹೀಗಾಗಿ ಇಷ್ಟು ದಿನ ಮನೆ ಹೊರಗೆ ಮಾತ್ರ ಇರುತ್ತಿದ್ದ ಸಿಸಿಟಿವಿಯನ್ನು ಮನೆಯೊಳಗೆ ಕೂಡ ಜಯಂತ್ ಅಳವಡಿಸಿದ್ದಾನೆ. ಆದ್ರೀಗ ಆತನಿಗೆ ಅದೇ ಮುಳುವಾಗಿದೆ. ಇದೀಗ ಜಾಹ್ನವಿ ಜಯಂತ್‌ ಮೇಲೆಯೇ ಡೌಟ್‌ ಪಡಲು ಶುರುಮಾಡಿದ್ದಾಳೆ.

ಹೌದು, ಅಜ್ಜಿ ರೂಮ್‌ ನಲ್ಲಿ ಕ್ಯಾಮೆರಾ ಹಾಕಿದ್ದನ್ನು ನೋಡಿ, ಜಯಂತ್‌ ಅಜ್ಜಿ ಕಾಳಜಿ ಮಾಡ್ತಿದ್ದಾನೆ ಅಂತಾ ಜಾನು ಅಂದ್ಕೊಂಡಿದ್ಲು.. ಆದ್ರೆ ಮನೆಯ ಪ್ರತಿಯೊಂದು ವಸ್ತುವಿನಲ್ಲಿ ಕ್ಯಾಮೆರಾ ನೋಡಿ ಜಾನು ಶಾಕ್ ಆಗಿದ್ದಾಳೆ. ಜಯಂತ್‌ನ ಪ್ರಶ್ನೆ ಮಾಡಿದ್ರೆ, ತನ್ನ ಮೇಲೆ ಜೋರು ಮಾಡುತ್ತಾನೆ.. ಅಲ್ಲದೆ ಸತ್ಯ ಮುಚ್ಚಿಡುವ ಪ್ರಯತ್ನ ಮಾಡುತ್ತಾನೆ ಅನ್ನೋ ಆಲೋಚನೆಯಲ್ಲಿದ್ದಾಳೆ ಜಾನು.  ಆದ್ರೀ ಜಯಂತ್‌ ಆಫೀಸ್‌ ಮುಗಿಸಿಕೊಂಡು ಬರ್ತಿದ್ದಂತೆ ಜಾನು ಆತನಿಗೆ ಶಾಕ್‌ ಕೊಟ್ಟಿದ್ದಾಳೆ.

ಜಯಂತ್‌ ಆಫೀಸ್‌ ಮುಗಿಸಿಕೊಂಡು  ಮನೆಗೆ ಬಂದಾಗ ಇಡೀ ಮನೆ ಲೈಟ್‌ ಆಫ್ ಆಗಿರುತ್ತದೆ. ಗಾಬರಿಯಲ್ಲಿ ಅಕ್ಕ ಪಕ್ಕ ನೋಡುತ್ತಲೇ ಯಾಕೆ ಕತ್ತಲಲ್ಲಿ ಕೂತಿದ್ದೀರಿ.. ಮನೆಯಲ್ಲಿ ಕರೆಂಟ್‌ ಇಲ್ವಾ ಎಂದು ಜಯಂತ್ ಪ್ರಶ್ನಿಸಿದ್ದಾನೆ. ಆಗ ಮನಸೆಲ್ಲಾ ಕತ್ತಲಾಗಿರುವಾಗ ಮನೆಯಲ್ಲಿ ಬೆಳಕಿದ್ದು ಏನ್‌ ಪ್ರಯೋಜನ ಎಂದು ಹೇಳಿದ್ದಾಳೆ.  ಬಳಿಕ ಏನಾಗಿದೆ ಅಂತಾ ಗೊತ್ತಿಲ್ಲ ಅಂತಾ ಹೇಳಿದ್ದಾಳೆ. ಯಾವಾಗಲು ಹೀಗೆ ಆಗಲ್ಲ ಅಲ್ವಾ?  ಆಗ ಕಳ್ಳರು ಬಂದ್ರೆ ಏನ್‌ ಗತಿ.. ವಯಸ್ಸಾದವರು ಮನೆಯಲ್ಲಿದ್ದಾರೆ ಎಂದು ಜಯಂತ್‌ ಹೇಳಿದ್ದಕ್ಕೆ, ನಮ್ಮ ಮನೆಯಲ್ಲಿ ಪೇಷೆಂಟ್‌ ಇದ್ದಾರೆ ಅಂತಾ ಅವರಿಗೇನು ಸಿಸಿಟಿವಿಯಲ್ಲಿಕಾಣುತ್ತಾ ಅಂತಾ ಹೇಳಿದ್ದಾಳೆ ಜಾಹ್ನವಿ. ಜಾನು ಸಿಸಿಟಿವಿ ಇರುವುದು ಗೊತ್ತಾಗಿದೆ ಎಂದು ಸುಳಿವು ಕೊಟ್ಟರೂ ಜಯಂತ್ ಗಮನ ಮಾತ್ರ ಇದ್ದಿದ್ದು ಕರೆಂಟ್ ಮೇಲೆ. ಮೊದಲು ಚೆಕ್ ಮಾಡುತ್ತೀನಿ ಎಂದು ಬಾಗಿಲು ಬಳಿ ಹೋಗಿ ನೋಡಿದಾಗ ಫ್ಯೂಸ್ ಟ್ರಿಪ್ ಆಗಿರುವುದು ಕಾಣಿಸುತ್ತದೆ. ಅಯ್ಯೋ ಈ ಸಮಯದಲ್ಲಿ ಮನೆಗೆ ಯಾರಾದರೂ ಬಂದಿದ್ರಾ ಎಂದು ಜಯಂತ್‌ಗೆ ಮತ್ತೊಮ್ಮೆ ಅನುಮಾನ ಶುರುವಾಗುತ್ತದೆ. ಬಿಸಿ ಬಿಸಿ ಕಾಫಿ ಮಾಡಿಕೊಡುತ್ತೀನಿ ಎಂದು ಜಾನು ಎದ್ದು ಅಡುಗೆ ಮನೆ ಕಡೆ ಹೋದಾಗ ಜಯಂತ್ ಗಾಬರಿಯಲ್ಲಿ ಮೊಬೈಲ್ ನೋಡಿದ್ದಾನೆ. ಅಲ್ಲಿಗೆ ಜಯಂತ್ ಮೊಬೈಲ್‌ನಲ್ಲಿ ಸಿಸಿಟಿವಿ ಕ್ಲಿಪ್‌ಗಳನ್ನು ನೋಡುತ್ತಿದ್ದಾನೆ ಅನ್ನೋದು ಜಾನುಗೆ ತಿಳಿಯುತ್ತದೆ.   ಆದ್ರೆ ಜಯಂತ್‌ ಗೆ ಮಾತ್ರ ಫೋನ್‌ ನಲ್ಲಿ ಯಾವುದೇ ಸಿಸಿಟಿವಿ ಫೂಟೇಜ್ ಕಾಣಿಸೋದಿಲ್ಲ.. ಹಾಗಾದ್ರೆ ಸಿಸಿಟಿವಿ ಏನಾಯ್ತು ಅಂತಾ ಜಯಂತ್‌ ಗೆ ಕಾಡೋದಿಕ್ಕೆ ಶುರುವಾಗಿದೆ.

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ಸಿಸಿಟಿವಿಗೆ ಜಾಹ್ನವಿ ಏನೋ ಮಾಡಿದ್ದಾಳೆ. ಜಯಂತ್‌ ಗೆ ಇನ್ನುಮುಂದೆ ಸರಿಯಾಗೇ ಪಾಠ ಕಲಿಸ್ತಾಳೆ. ಜಯಂತ್‌ ಜಾಹ್ನವಿ ಹೇಳಿದ ಹಾಗೇ ಕೇಳ್ಕೊಂಡು ಇರೋ ತರ ಮಾಡ್ತಾಳೆ ಅಂತಾ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಜಯಂತ್‌ ಗೆ ಅಲ್ಲ ಜಾನುಗೆ ಮಾರಿ ಹಬ್ಬ ಕಾದಿದೆ. ಸಿಸಿಟಿವಿ ಆಕೆಯೇ ಹಾಳು ಮಾಡಿದ್ದಾಳೆ ಅಂತಾ ಗೊತ್ತಾದ್ರೆ ಜಯಂತ್‌ ಸುಮ್ಮನೆ ಬಿಡೋದಿಲ್ಲ.. ಆಕೆಗೆ ಒಂದು ಗತಿ ಕಾಣಿಸಿಬಿಡ್ತಾನೆ ಅಂತಾ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *