RCB ಕ್ಯಾಪ್ಟನ್ ಕೊಹ್ಲಿ ಟ್ರೆಂಡ್ – ವಿರಾಟ್ ಗೆ ನಾಯಕತ್ವ ನೀಡ್ಬೇಕಿತ್ತಾ?   

RCB ಕ್ಯಾಪ್ಟನ್ ಕೊಹ್ಲಿ ಟ್ರೆಂಡ್ – ವಿರಾಟ್ ಗೆ ನಾಯಕತ್ವ ನೀಡ್ಬೇಕಿತ್ತಾ?   

2025ರ ಐಪಿಎಲ್ ಮೆಗಾ ಹಬ್ಬ ಮಾರ್ಚ್ 21 ರಿಂದ ಆರಂಭವಾಗಲಿದೆ. ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನನ್ನು ಘೋಷಣೆ ಮಾಡಲಾಗಿದೆ. ಆರ್‌ಸಿಬಿಯ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾಗಳಲ್ಲಿ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಆಗ್ಬೇಕು ಎಂಬ ಟ್ರೆಂಡ್ ಶುರುವಾಗಿದೆ. ನಮ್ಮ ನಾಯಕನಾಗಿ ಕಿಂಗ್ ಕೊಹ್ಲಿ ಅವರ ಹೆಸರನ್ನೇ ಘೋಷಣೆ ಮಾಡಬೇಕೆಂದು ಅಭಿಮಾನಿಗಳು ಡಿಮ್ಯಾಂಡ್ ಮಾಡ್ತಿದ್ದಾರೆ. ಬಗ್ಗೆ ಒಂದಷ್ಟು ಮಿಮ್ಸ್ ಗಳು ಕೂಡ ವೈರಲ್ ಆಗಿವೆ.

ಇದನ್ನೂ ಓದಿ :  ರಜತ್ ಪಾಟೀದಾರ್ ಗೆ RCB ಪಟ್ಟಾಭಿಷೇಕ – ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ ಕಟ್ಟಿದ್ದೇಕೆ?  

2025ರ ಐಪಿಎಲ್​ಗೆ ಕಿಂಗ್ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಆಗ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ನಿರೀಕ್ಷೆ ಮಾಡಿದ್ರು. ಆದ್ರೆ ಅಂತಿಮವಾಗಿ ರಜತ್ ಪಾಟೀದಾರ್ ನಾಯಕನಾಗಿದ್ದಾರೆ. ಆದ್ರೆ ನಮಗೆ ಕಿಂಗ್ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಆಗಬೇಕು ಎಂದು ಎಕ್ಸ್ ಖಾತೆಯಲ್ಲಿ ನಲ್ಲಿ ಮಿಮ್ಸ್ ಹಾಗೂ ವಿರಾಟ್ ಕೊಹ್ಲಿಯವರು ಫೋಟೊವನ್ನು ಪೋಸ್ಟ್ ಮಾಡಲಾಗ್ತಿದೆ. ಆರ್‌ಸಿಬಿ ಕ್ಯಾಪ್ಟನ್ ಅನೌನ್ಸೆಂಟ್ ಡೇ ಎಂಬ ಟೆಕ್ಸ್​​ಟ್​ನೊಂದಿಗೆ  ಸೂಪರ್ ಸ್ಟಾರ್ ರಜನಿಕಾಂತ್ ಇರುವ ಮಿಮ್ಸ್ ವೊಂದು ಹಂಚಿಕೊಂಡಿದ್ದಾರೆ.

ಹೀಗೆ  ವೆರೈಟಿ ವೆರೈಟಿ ಮಿಮ್ಸ್ ಗಳು Rcbcaptain ಹ್ಯಾಷ್​ಟ್ಯಾಗ್ ಹೆಸರಿನಲ್ಲಿ ಟೆಂಡ್‌ ಆಗುತ್ತಿವೆ. ಆದ್ರೆ ಇದಕ್ಕೆ ತಲೆಕೆಡಿಸಿಕೊಳ್ಳದ ಕಿಂಗ್ ವಿರಾಟ್ ಕೊಹ್ಲಿ ಆರ್​ಸಿಬಿಯ ನೂತನ ಕ್ಯಾಪ್ಟನ್​ಗೆ ವಿಶ್ ಮಾಡಿದ್ದಾರೆ. ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ವಿಡಿಯೋದಲ್ಲಿ ವಿರಾಟ್ ಮಾತನಾಡಿದ್ದಾರೆ. ರಜತ್ ಪಾಟೀದಾರ್ ಅವರನ್ನು ವಿರಾಟ್ ಕೊಹ್ಲಿ ಅಭಿನಂದಿಸಿದ್ದು, ತನ್ನನ್ನು ಸೇರಿದಂತೆ ತಂಡವನ್ನು ಮುನ್ನಡೆಸಲು ಪಾಟೀದಾರ್ ಅರ್ಹರಾಗಿದ್ದಾರೆ. ಫ್ರಾಂಚೈಸಿಯಲ್ಲಿ ನೀವು ಬೆಳೆದ ರೀತಿ ಮತ್ತು ನಿಮ್ಮ ಪ್ರದರ್ಶನದಿಂದಾಗಿ ನೀವು ನಿಜವಾಗಿಯೂ ಆರ್‌ಸಿಬಿಯ ಎಲ್ಲ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ದೇಶದಾದ್ಯಂತ ಇರುವ ಅಭಿಮಾನಿಗಳು ನಿಮ್ಮ ಆಟವನ್ನು ನೋಡಲು ತುಂಬಾ ಸಂತೋಷಪಡುತ್ತಾರೆ. ತಂಡದ ಇತರ ಸದಸ್ಯರು ನಿಮ್ಮ ಹಿಂದೆಯೇ ಇರುತ್ತಾರೆ ಮತ್ತು ನಿಮಗೆ ನಮ್ಮೆಲ್ಲರ ಬೆಂಬಲವಿದೆ ಎಂದಿದ್ದಾರೆ.

ಇನ್ನು ಆರ್​ಸಿಬಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿರೋ ರಜತ್ ಪಾಟಿದಾರ್​ಗೆ ಫಾಫ್ ಡುಪ್ಲೆಸಿಸ್ ಕೂಡ ವಿಶ್ ಮಾಡಿದ್ದಾರೆ. ಅಧಿಕೃತವಾಗಿ ನಾನು ಜವಾಬ್ದಾರಿಯನ್ನು ನಿಮಗೆ ಹಸ್ತಾಂತರಿಸುತ್ತಿದ್ದೇನೆ. ಆರ್​ಸಿಬಿಗೆ ನಾಯಕನಾಗಿರುವುದು ನಿಜಕ್ಕೂ ವಿಶೇಷ. ಕ್ಯಾಪ್ಟನ್ ಆಗಲು ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ನಾಯಕತ್ವದ ನೊಗ ಹೊರುತ್ತಿದ್ದೀರಿ. ಚೆನ್ನಾಗಿ ಆಡೋದನ್ನ ಮರೆಯದಿರಿ. ಸಿಕ್ಸರ್​​ಗಳನ್ನು ಬಾರಿಸುತ್ತಲೇ ಇರಿ ಎಂದು ಶುಭ ಹಾರೈಸಿದ್ದಾರೆ. ಇನ್ನು 2022 ರಿಂದ ಫಾಫ್ ಆರ್​​ಸಿಬಿ ನಾಯಕರಾಗಿ ಮೂರು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ರು.

ಆರ್​ಸಿಬಿ ಕ್ಯಾಪ್ಟನ್ ಆಗಿರೋ ರಜತ್ ತಮ್ಮ ಫೀಲಿಂಗ್ಸ್​ನ ಶೇರ್ ಮಾಡಿಕೊಂಡಿದ್ದಾರೆ. ಅದೇ ವಿಡಿಯೋವನ್ನ ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ತಮಗೆ ಕ್ಯಾಪ್ಟನ್ಸಿ ಸಿಕ್ಕಿರೋ ಖುಷಿಯಲ್ಲಿ ಮಾತ್ನಾಡಿದ್ದಾರೆ. ಹಾಯ್, ನಾನು ನಿಮ್ಮ ಕ್ಯಾಪ್ಟನ್ ರಜತ್ ಪಾಟಿದಾರ್. ಅನೇಕ ಲೆಜೆಂಡರ್ಸ್ ಆರ್​​ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಈಗ, ನಾನು ಕ್ಯಾಪ್ಟನ್ ಆಗಿರೋದಕ್ಕೆ ತುಂಬಾ ಹೆಮ್ಮೆ ಆಗುತ್ತಿದೆ. ನನ್ನ ಕ್ಯಾಪ್ಟನ್ಸಿ ಸ್ವಲ್ಪ ಡಿಫ್ರೆಂಟ್ ಆಗಿದೆ. ನಾನು ತುಂಬಾ ಶಾಂತ ಸ್ವಭಾವದ ವ್ಯಕ್ತಿ. ಆದರೆ ಪರಿಸ್ಥಿತಿಗೆ ತಕ್ಕಂತೆ ಏನು ಬೇಕು? ಏನು ಬೇಡ ಅನ್ನೋದನ್ನು ಅರ್ಥ ಮಾಡಿಕೊಳ್ಳಬಲ್ಲೇ. ಭಾವನೆಗಳನ್ನು ಹೆಚ್ಚಾಗಿ ವ್ಯಕ್ತಪಡಿಸುವುದಿಲ್ಲ, ಹಾಗಂತ ಒತ್ತಡದ ಸಂದರ್ಭಗಳಲ್ಲಿ ಭಯಪಡಲ್ಲ. ಇದೇ ನನ್ನ ಶಕ್ತಿ ಎಂದಿದ್ದಾರೆ. ಹಾಗೇ ಕಳೆದ 3-4 ವರ್ಷಗಳಿಂದ ಆರ್‌ಸಿಬಿ ಅಭಿಮಾನಿಗಳು ಸಾಕಷ್ಟು ಪ್ರೀತಿ, ಬೆಂಬಲ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಆರ್‌ಸಿಬಿ ಪರ ಆಡಲು ನಾನು ಅದೃಷ್ಟಶಾಲಿ. ಆರ್​​ಸಿಬಿ ಸೇರಿದ ಮೇಲೆ ನನಗೆ ಒಳ್ಳಯದಾಗಿದೆ. ಆರ್​ಸಿಬಿಗೆ ಧನ್ಯವಾದ ಹೇಳುತ್ತೇನೆ ಎಂದು ಭಾವುಕರಾಗಿದ್ದಾರೆ.

Shantha Kumari