ಸೀತಾ ಸುಬ್ಬಿ ಮಹಾ ಸಂಗಮ.. ಭಾರ್ಗವಿಗೆ ಮಾರಿ ಹಬ್ಬ? – ಸೀತಾರಾಮ ಸೀರಿಯಲ್ ಎಂಡ್?
![ಸೀತಾ ಸುಬ್ಬಿ ಮಹಾ ಸಂಗಮ.. ಭಾರ್ಗವಿಗೆ ಮಾರಿ ಹಬ್ಬ? – ಸೀತಾರಾಮ ಸೀರಿಯಲ್ ಎಂಡ್?](https://suddiyaana.com/wp-content/uploads/2025/02/3-1.png)
ಸಿಹಿಯನ್ನ ಕಳೆದುಕೊಂಡ ಮೇಲೆ ಸೀತಾ ಮೆಂಟಲೀ ವೀಕ್ ಆಗಿದ್ಲು.. ಅವಳ ನೆನಪಲ್ಲೇ ಕೊರಗುತ್ತಿದ್ಲು.. ಈ ಬೆನ್ನಲ್ಲೇ ಭಾರ್ಗವಿ ಆಕೆಯ ಮೇಲೆ ಹುಚ್ಚಿ ಪಟ್ಟ ಕಟ್ಟಿ, ಮನೆಯಿಂದ ಆಚೆ ಹಾಕಲು ಟ್ರೈ ಮಾಡಿದ್ಲು.. ಆದ್ರೀಗ ಸೀತಾ ಮಡಿಲಿಗೆ ಸಿಹಿ ರೂಪದ ಸುಬ್ಬಿ ಸೇರಿದ್ದಾಳೆ. ಈ ಬೆನ್ನಲ್ಲೇ ಸೀತಾ ತನ್ನ ವಿರುದ್ಧ ಕುತಂತ್ರ ರೂಪಿಸುತ್ತಿದ್ದ ಭಾರ್ಗವಿಗೆ ಸರಿಯಾಗೇ ಬಿಸಿ ಮುಟ್ಟಿಸಿದ್ದಾಳೆ.. ಹಾಗಾದ್ರೆ ಸೀತಾ ಸರಿ ಹೋದ್ಲಾ? ಸುಬ್ಬಿ ರಹಸ್ಯ ಬಯಲಾಗುತ್ತಾ? ಕುತಂತ್ರ ಭಾರ್ಗವಿಗೆ ಗೇಟ್ ಪಾಸ್ ಸಿಗುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರೋಹಿತ್ ಠುಸ್.. ಗಿಲ್ ಕಮಾಲ್ – 451 ದಿನಗಳ ನಂತ್ರ ಕೊಹ್ಲಿ ಫಿಫ್ಟಿ
ಸೀತಾ ರಾಮ ಸೀರಿಯಲ್‌ಸದ್ಯ ಹೊಸ ತಿರುವು ಪಡೆದುಕೊಂಡಿದೆ. ಭಾರ್ಗವಿ ಸೀತಾಳನ್ನ ಮುಗಿಸಲು ಪ್ಲ್ಯಾನ್ ಮಾಡಿದ್ಲು.. ಆದ್ರೆ ಬಲಿಯಾಗಿದ್ದು ಮಾತ್ರ ಸಿಹಿ.. ಮಗಳು ಸಾಯ್ತಿದ್ದಂತೆ ಸೀತಾಗೆ ಆಘಾತ ಆಗಿದೆ. ಮಗಳ ನೆನಪಲ್ಲೇ ಸೀತಾ ದಿನ ಕಳಿತಾ ಇದ್ಲು.. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ಲು.. ಇದನ್ನೇ ಭಾರ್ಗವಿ ಅಡ್ವಾಂಟೇಜ್ ಆಗಿ ತೆಗೆದುಕೊಂಡ್ಲು.. ಸೀತಾಗೆ ಮಾನಸಿಕ ಸ್ಥೈರ್ಯ ತುಂಬೋ ಬದಲು.. ಆಕೆಯಗೆ ಮತ್ತಷ್ಟು ತೊಂದರೆ ಕೊಟ್ಲು.. ಸೀತಾಗೆ ಮನಸಿಗೆ ನೋವಾಗುವಂತೆ ವರ್ತಿಸಿ, ಆಕೆ ಮೇಲೆ ಹುಚ್ಚಿ ಪಟ್ಟ ಕಟ್ಟಿದ್ಲು.. ಇದ್ರಿಂದ ಕೆರಳಿದ ಸೀತಾ, ಭಾರ್ಗವಿ ಕುತ್ತಿಗೆಗೆ ಚೂರಿ ಹಿಡಿದಿದ್ರು.. ಅಷ್ಟೊತ್ತಿಗೆ ಸೀರಿಯಲ್ ಡೈರೆಕ್ಟರ್ ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ. ಇದೀಗ ಸಿಹಿ ರೂಪದಲ್ಲಿರೋ ಸುಬ್ಬಿ ಸೀತಾ ಮಡಿಲಿಗೆ ಸೇರಿದ್ದಾಳೆ.
ಸಿಹಿಯನ್ನು ಅತಿಯಾಗಿ ಪ್ರೀತಿಸಿದ್ದಳು ಸೀತಾ. ಸಿಹಿ ಸಾಯ್ತಿದ್ದಂತೆ ಆಕೆ ಗೊಂಬೆಯನ್ನೇ ಸಿಹಿ ಎಂದು ಮುದ್ದಾಡುತ್ತಿದ್ದಳು. ಅಷ್ಟರಮಟ್ಟಿಗೆ ಸೀತಾ ಮಾನಸಿಕವಾಗಿ ಕುಗ್ಗಿದ್ದಾಳೆ. ಇದೀಗ ಭಾರ್ಗವಿ ಸೀತಾ ಕೆರಳುವಂತೆ ಮಾತನಾಡಿದ್ದಾಳೆ. ಆವತ್ತೇ ನಿನ್ನ ಮಗಳು ಸತ್ತಿದ್ದಿದ್ದರೆ, ಈ ತಲೆ ನೋವೇ ಇರುತ್ತಿರಲಿಲ್ಲ ಎಂದು ತನ್ನೊಳಗಿನ ಕೋಪ ತಾಪವನ್ನು ಭಾರ್ಗವಿ ಸೀತಾಳ ಮುಂದೆಯೇ ಹೊರಹಾಕಿದ್ದಾಳೆ. ಆಗ ಸೀತಾ ಟೇಬಲ್ ಮೇಲಿದ್ದ ಚಾಕುವನ್ನು ಹಿಡಿದು, ಭಾರ್ಗವಿಯ ಕೊರಳಿಗೆ ಹಿಡಿದಿದ್ದಾಳೆ. ಅಷ್ಟರಲ್ಲಿ ಸೂರ್ಯಪ್ರಕಾಶ್ ಮತ್ತು ವಿಶ್ವನ ಆಗಮನವಾಗಿದೆ. ಸೀತಾ ಮಾನಸಿಕವಾಗಿ ತುಂಬ ನೋವಲ್ಲಿದ್ದಾಳೆ. ಅವಳನ್ನು ಹೇಗಾದರೂ ಮಾಡಿ, ಆಸ್ಪತ್ರೆಗೆ ಕಳಿಸಿಕೊಡಿ ಅಪ್ಪಾಜಿ ಎಂದು ಸೂರ್ಯಪ್ರಕಾಶ್ ಬಳಿ ಬೇಡಿದ್ದಾನೆ ವಿಶ್ವ. ಸೀತಾಳ ವರ್ತನೆ ಕಂಡು ಮನೆ ಮಂದಿಯೂ ಫುಲ್ ಶಾಕ್ ಆಗಿದ್ರು.. ಅದಾದ್ಮೇಲೆ ಆಕೆಯನ್ನ ಹುಚ್ಚಾಸ್ಪತ್ರೆಗೆ ಕರ್ಕೊಂಡು ಹೋಗಲು ಸಿದ್ದತೆ ನಡೆಸಿದ್ರು.. ಅಷ್ಟೊತ್ತಿಗೆ ರಾಮ್ ನ ಎಂಟ್ರಿಯಾಗಿದೆ. ಆತ ಜೊತೆಯಲ್ಲಿ ಸಿಹಿಯ ರೂಪದಲ್ಲಿನ ಸುಬ್ಬಿಯನ್ನೂ ಆತ ಕರೆತಂದಿದ್ದಾನೆ. ಅಷ್ಟರಲ್ಲಿ ಸಿಹಿ ನಿನಗೆ ಸೀತಮ್ಮ ಬೇಕೋ ಬೇಡೋ ಎಂದು ಸುಬ್ಬಿಯನ್ನು ಕೇಳಿದ್ದಾಳೆ. ತಕ್ಷಣ ಕಾರ್‌ನಿಂದ ಇಳಿದ ಸುಬ್ಬಿ ಸೀತಮ್ಮ ಎಂದು ಜೋರಾಗಿ ಕೂಗಿದ್ದಾಳೆ.. ಸೀತಮ್ಮ ಎಂದು ಕೂಗುತ್ತಿದ್ದಂತೆ, ಸೀತಾಳ ಕಣ್ಣು ಅರಳಿವೆ, ಕಿವಿ ನಿಮಿರಿವೆ. ಸಿಹಿಯನ್ನೇ ಹೋಲುವ ಹುಡುಗಿ ಮತ್ತೆ ದೇಸಾಯಿ ಕುಟುಂಬಕ್ಕೆ ಎಂಟ್ರಿಯಾಗುತ್ತಿದ್ದಂತೆ, ಭಾರ್ಗವಿ, ತಾತ, ವಿಶ್ವ, ಸಾಧನಾ ಅಚ್ಚರಿಗೊಂಡಿದ್ದಾರೆ.
ಭಾರ್ಗವಿಯಂತೂ ಸಿಹಿಯನ್ನ ನೋಡುತ್ತಿದ್ದಂತೆ, ಶಾಕ್‌ಗೆ ಒಳಗಾಗಿದ್ದಾಳೆ. ಅದ್ದೇಗೆ ಈ ಸಿಹಿ ಬದುಕಿ ಬರಲು ಸಾಧ್ಯ ಎಂದೇ ಯೋಚನೆ ಮಾಡುತ್ತಿದ್ದಾಳೆ ಭಾರ್ಗವಿ. ಯಾಕಂದ್ರೆ ಸಿಹಿ ಸತ್ತಿದ್ದು, ಅವಳ ಅಂತ್ಯ ಸಂಸ್ಕಾರವನ್ನು ಮಾಡಿದ್ದನ್ನೆಲ್ಲಾ ಭಾರ್ಗವಿ ಕಣ್ಣಾರೆ ನೋಡಿದ್ದಾಳೆ. ಸೀತಾಗೆ ಹುಚ್ಚು ಹೆಚ್ಚಾಗಿದೆ ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕು ಎನ್ನುವಾಗ ಸಿಹಿ ಬಂದಿದ್ದು ಆಕೆಗೆ ಶಾಕಿಂಗ್ ಆಗಿದೆ. ಮುಂದೇನು ಮಾಡಬೇಕು ಎಂಬುದು ಆಕೆಗೂ ತಿಳಿಯದಂತೆ ಆಗಿದೆ. ಮುಂದೆ ಮಾರಿ ಹಬ್ಬ ಗ್ಯಾರಂಟಿ ಎಂದು ವೀಕ್ಷಕರು ಮಾತನಾಡಿಕೊಂಡಿದ್ದಾರೆ.
ಇನ್ನು ನೇರವಾಗಿ ಸೀತಮ್ಮನ ಬಳಿ ಓಡಿ ಬಂದು, ಬಿಗಿಯಾದ ಅಪ್ಪುಗೆ ನೀಡಿದ್ದಾಳೆ ಸಿಹಿ ರೂಪದಲ್ಲಿರುವ ಸುಬ್ಬಿ. ಇದೀಗ ಸಿಹಿಯ ಸಾವಿನ ರಹಸ್ಯ ಇನ್ನಾದರೂ ಬಯಲಾಗುತ್ತಾ? ಭಾರ್ಗವಿಯ ಮತ್ತೊಂದು ಮುಖದ ಅನಾವರಣ ಯಾವಾಗ? ಸುಬ್ಬಿ ಮಿಸ್ಸಿಂಗ್ ಆಗಿದ್ದು ಹೇಗೆ? ಇದೆಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.
ಇದೀಗ ಸೀರಿಯಲ್ ಪ್ರೋಮೋ ನೋಡಿದ ವೀಕ್ಷಕರು ಆದಷ್ಟು ಬೇಗ ಸೀರಿಯಲ್ ಎಂಡ್ ಆಗುತ್ತೆ ಅಂತಾ ಹೇಳ್ತಿದ್ದಾರೆ. ಅದಕ್ಕೆ ಕಾರಣವನ್ನು ಕೂಡ ಹೇಳಿದ್ದಾರೆ.. ಇನ್ನು ಸೀರಿಯಲ್ ನಲ್ಲಿ ಭಾರ್ಗವಿ ಕುತಂತ್ರ ಮನೆಯವರಿಗೆ ಗೊತ್ತಾಗೊಂದು ಬಾಕಿ.. ಅದಾದ್ಮೇಲೆ ಸಿಹಿ ಸಾವಿನ ರಹಸ್ಯ ರಿವೀಲ್ ಆದ್ರೆ ಸ್ಟೋರಿ ಮುಗಿದಂಗೆ ಲೆಕ್ಕ.. ಸೋ ಆದಷ್ಟು ಬೇಗ ಸೀರಿಯಲ್ ಎಂಡ್ ಆಗುತ್ತೆ ಅಂತಾ ಕಾಮೆಂಟ್ ಮಾಡ್ತಿದ್ದಾರೆ.