ರೋಹಿತ್ ಠುಸ್.. ಗಿಲ್ ಕಮಾಲ್ – 451 ದಿನಗಳ ನಂತ್ರ ಕೊಹ್ಲಿ ಫಿಫ್ಟಿ
ಸ್ಲಾಟ್ ಚೇಂಜ್ ಬೆನ್ನಲ್ಲೇ ಸಿಡಿದ KL

ರೋಹಿತ್ ಠುಸ್.. ಗಿಲ್ ಕಮಾಲ್ – 451 ದಿನಗಳ ನಂತ್ರ ಕೊಹ್ಲಿ ಫಿಫ್ಟಿಸ್ಲಾಟ್ ಚೇಂಜ್ ಬೆನ್ನಲ್ಲೇ ಸಿಡಿದ KL

ಇಂಗ್ಲೆಂಡ್ ವಿರುದ್ಧ ಕೊನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ. ರವೀಂದ್ರ ಜಡೇಜಾ ಬದಲಿಗೆ ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಬದಲಿಗೆ ವಾಷಿಂಗ್ಟನ್ ಸುಂದರ್ ಮತ್ತು ಶಮಿ ಬದಲಿಗೆ ಅರ್ಶ್ದೀಪ್ ಸಿಂಗ್ ಅವರಿಗೆ ಅವಕಾಶ ಸಿಕ್ಕಿದೆ. ಟಾಸ್ ಗೆದ್ದ ಇಂಗ್ಲೆಂಡ್ ಕ್ಯಾಪ್ಟನ್ ಜೋಸ್ ಬಟ್ಲರ್ ಬೌಲಿಂಗ್ ಚೂಸ್ ಮಾಡ್ಕೊಂಡ್ರು. ಅದ್ರಂತೆ ಭಾರತ ಮೊದಲು ಬ್ಯಾಟಿಂಗ್​ಗೆ ಇಳೀತು. ಟೀಂ ಇಂಡಿಯಾ ಪರ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಶುಬ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದ ರೋಹಿತ್ ಶರ್ಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿತ್ತು. ಆದ್ರೆ ಇಂದಿನ ಪಂದ್ಯದಲ್ಲಿ ರೋಹಿತ್ ನಿರಾಸೆ ಮೂಡಿಸಿದ್ರು.

ಇದನ್ನೂ ಓದಿ : ಬೂಮಾಸ್ತ್ರವಿಲ್ಲದ ಭಾರತ ಬಲಹೀನ – ಚಾಂಪಿಯನ್ಸ್ ಟ್ರೋಫಿ ಮಿಸ್ಸಾಗುತ್ತಾ?

ಕಳೆದ ಪಂದ್ಯದಲ್ಲಿ ಅಮೋಘ ಶತಕದೊಂದಿಗೆ ಫಾರ್ಮ್ ಗೆ ಮರಳಿದ್ದ ನಾಯಕ ರೋಹಿತ್ ಶರ್ಮಾ ಇಲ್ಲೂ ಕೂಡ ದೊಡ್ಡ ಇನ್ನಿಂಗ್ಸ್ ನ ನಿರೀಕ್ಷೆಯಲ್ಲಿದ್ದರು. ಆದ್ರೆ ಅದು ಸಾಧ್ಯವಾಗಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಒಂದಂಕಿಗೆ ಸುಸ್ತಾದ್ರು. ಮಾರ್ಕ್ ವುಡ್ ಎಸೆದ ಚೆಂಡು ರೋಹಿತ್ ಬ್ಯಾಟ್‌ನ ಅಂಚಿಗೆ ತಗುಲಿ ನೇರವಾಗಿ ಫಿಲ್ ಸಾಲ್ಟ್ ಕೈ ಸೇರಿತು. ಈ ಮೂಲಕ 2 ಬಾಲ್​ಗಳನ್ನ ಫೇಸ್​ ಮಾಡಿ 1 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನು 12 ರನ್ ಗಳಿಸಿದ್ರೂ ಕೂಡ 11 ಸಾವಿರ ರನ್ ಗಳ ಮೈಲಿಗಲ್ಲು ತಲುಪಿದ ಸಾಧನೆ ಮಾಡಿದಂತಾಗಿತ್ತು. ರೋಹಿತ್​ರ ಈ ಸಾಧನೆ ನೋಡಲು ಅಭಿಮಾನಿಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿವರೆಗೆ ಕಾಯಬೇಕಾಗಿದೆ. ಇನ್ನು ಶುಭ್​ಮನ್ ಗಿಲ್ ಇವತ್ತಿನ ಪಂದ್ಯದಲ್ಲಿ ಮತ್ತೆ ಹೀರೋ ಆದ್ರು. ಅವ್ರನ್ನ ಯಾಕೆ ಕ್ರಿಕೆಟ್​ನಲ್ಲಿ ಅಹಮದಾಬಾದ್ ಪ್ರಿನ್ಸ್ ಅಂತಾ ಕರೆಯುತ್ತಾರೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ಶುಭ್​ಮನ್ ಗಿಲ್ ಇಂದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ರು. 102 ಎಸೆತಗಳಲ್ಲಿ 14 ಬೌಂಡರಿ ಹಾಗೇ 3 ಸಿಕ್ಸರ್​ಗಳ ಮೂಲಕ 112 ರನ್ ಗಳನ್ನ ಬಾರಿಸಿದ್ರು. ಹಾಗೇ ಇದೇ ಪಂದ್ಯದ ಮೂಲಕ ಶುಭಮನ್ ಗಿಲ್ ಮೊದಲ 50 ಏಕದಿನ ಪಂದ್ಯಗಳಲ್ಲಿ 2,500 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ದೇ ಗಿಲ್​ರನ್ನ ಅಹಮದಾಬಾದ್ ಪ್ರಿನ್ಸ್ ಅಂತಾನೇ ಕರೆಯಲಾಗುತ್ತೆ. ಯಾಕಂದ್ರೆ ಗಿಲ್ ಈ ಕ್ರೀಡಾಂಗಣದಲ್ಲೇ ಅತೀ ಹೆಚ್ಚು ರನ್​ಗಳನ್ನ ಸ್ಕೋರ್ ಮಾಡಿದ್ದಾರೆ.

ಇನ್ನು ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವ್ರ ಬ್ಯಾಟಿಂಗ್ ಮೇಲೆಯೂ ಸಾಕಷ್ಟು ನಿರೀಕ್ಷೆಗಳಿತ್ತು. ಈ ಪಂದ್ಯದಲ್ಲಿ ಆಫ್ ಸೆಂಚುರಿ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. 55 ಎಸೆತಗಳಲ್ಲಿ 7 ಫೋರ್, 1 ಸಿಕ್ಸ್​ನೊಂದಿಗೆ 52 ರನ್ ಗಳಿಸಿದ ವಿರಾಟ್ ಕೊಹ್ಲಿ ಕ್ಯಾಚ್ ಕೊಟ್ಟು ಔಟ್ ಆದ್ರು. ಈ ಮೂಲಕ 451 ದಿನಗಳ ನಂತರ ಏಕದಿನದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ. ವಿರಾಟ್ ತಮ್ಮ ಕೊನೆಯ ಅರ್ಧಶತಕವನ್ನು 2023 ರ ನವೆಂಬರ್ 19 ರಂದು ಗಳಿಸಿದ್ದರು. 2023 ರ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಲೆಗ್ ಸ್ಪಿನ್ ವಿರುದ್ಧ ಔಟಾಗುತ್ತಿರುವುದು ಇದು ನಾಲ್ಕನೇ ಬಾರಿ.  ಟೀಂ ಇಂಡಿಯಾ ಪರ ಕಳೆದ ಎರಡು ಪಂದ್ಯಗಳಲ್ಲೂ ಅದ್ಭುತ ಬ್ಯಾಟಿಂಗ್ ಮಾಡಿದ್ದ ಶ್ರೇಯಸ್ ಅಯ್ಯರ್ ಇಂದಿನ ಪಂದ್ಯದಲ್ಲೂ ಮಿಂಚಿದ್ರು. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 59 ರನ್ ಬಾರಿಸಿದ್ದ ಶ್ರೇಯಸ್ 2ನೇ ಪಂದ್ಯದಲ್ಲಿ 44 ರನ್ ಸಿಡಿಸಿದ್ರು. ಇದೀಗ ಮೂರನೇ ಏಕದಿನ ಪಂದ್ಯದಲ್ಲೂ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ರು. 64 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್ ಮೂಲಕ 78 ರನ್ ಬಾರಿಸಿ ಔಟಾದ್ರು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲೂ ಪ್ಲೇಯಿಂಗ್ 11ನಲ್ಲಿ ಆಡೋದು ಕನ್ಫರ್ಮ್ ಮಾಡಿಕೊಂಡ್ರು.

ಕಳೆದ ಎರಡು ಪಂದ್ಯಗಳಲ್ಲೀ ಅತೀ ಹೆಚ್ಚು ಚರ್ಚೆಯಾಗಿದ್ದ ವಿಚಾರ ಇದೇ. ಯಾಕಂದ್ರೆ ಬ್ಯಾಟ್ಸ್​ಮನ್ ಆಗಿರೋ ಕೆಎಲ್ ರಾಹುಲ್​ರನ್ನ ಆರನೇ ಕ್ರಮಾಂಕದಲ್ಲಿ ಆಡಿಸಲಾಗ್ತಿತ್ತು. ಬೌಲಿಂಗ್ ಆಲ್ ರೌಂಡರ್ ಆಗಿರುವ ಅಕ್ಷರ್ ಪಟೇಲ್​ರನ್ನ 5ನೇ ಸ್ಲಾಟ್​ನಲ್ಲಿ ಕಣಕ್ಕಿಳಿಸಿತ್ತು ಮ್ಯಾನೇಜ್​ಮೆಂಟ್. ಇದು ಮಾಜಿ ಕ್ರಿಕೆಟರ್ಸ್ ಹಾಗೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬೆನ್ನಲ್ಲೇ ಎಚ್ಚೆತ್ತತಿರೋ ಮ್ಯಾನೇಜ್​ಮೆಂಟ್ ಕೆಎಲ್ ರಾಹುಲ್​ರನ್ನ 5ನೇ ಸ್ಲಾಟ್​ನಲ್ಲೇ ಕಣಕ್ಕಿಳಿಸಿದೆ. ಹಾಗಂತ ಅಕ್ಷರ್ ಪಟೇಲ್ 6ನೇ ಸ್ಥಾನದಲ್ಲೂ ಕಣಕ್ಕಿಳಿಯಲಿಲ್ಲ. 6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸಿದ್ದಾರೆ.

Shantha Kumari

Leave a Reply

Your email address will not be published. Required fields are marked *