ಕಾಂಗ್ರೆಸ್ ನಿಂದ AAP ಆಪರೇಷನ್? – 30 ಶಾಸಕರು ಹಾರಲು ಸಜ್ಜು?
ಕೇಜ್ರಿವಾಲ್ ಕನಸು ಭಗ್ನ!!
10 ವರ್ಷಗಳ ಕಾಲ ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಈಗ ನೆಲ ಕಚ್ಚುವ ಹಂತಕ್ಕೆ ಬಂದು ನಿಂತಿದೆ. ದೆಹಲಿಯಲ್ಲಿ ಯಾರ್ ಬಂದ್ರೂ ಆಪ್‌ನ್ನ ಅಧಿಕಾರದಿಂದ ಕೆಳಗಿಳಿಸೋಕೆ ಆಗಲ್ಲ ಅಂತ ಎಲ್ಲಾರು ಅಂದ್ಕೊಂಡಿದ್ರು. ಆದ್ರೆ ಅದನ್ನ ಬಿಜೆಪಿ ಸುಳ್ಳು ಮಾಡಿದೆ.. ಸುಮಾರು 27 ವರ್ಷಗಳ ಬಳಿಕ ದೆಹಲಿ ಅಧಿಕಾರವನ್ನ ಬಿಜೆಪಿ ಹಿಡಿದಿದೆ. ಇದರಿಂದ ಕೇಜ್ರಿವಾಲ್‌ಗೆ ಭಾರಿ ಹಿನ್ನಡೆ ಆಗಿದೆ. ಈಗ ಪಂಜಾಬ್‌ನಲ್ಲಿ ಮಾತ್ರ ಆಪ್ ಅಧಿಕಾರದಲ್ಲಿರೋದು.. ಆದ್ರೆ ಅಲ್ಲೂ ಕೂಡ ಆಪರೇಷನ್ ಕಾಂಗ್ರೆಸ್ ನಡೆಯುತ್ತಿದೆ ಅನ್ನೋ ಸುದ್ದಿ ಅಲ್ಲೋಲ ಕಲ್ಲೋಲ ಮಾಡಿದೆ. ಇದು ಅರವಿಂದ್ ಕೇಜ್ರಿವಾಲ್ ತಲೆನೋವು ಹೆಚ್ಚಿಸಿದೆ. ಆಪ್ ಸರ್ಕಾರ ಇರುವ ಪಂಜಾಬ್ನಲ್ಲಿ 30 ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ.. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರು ಶಾಸಕರ ಸಭೆ ಕರೆದಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುತ್ತಿದ್ದಂತೆಯೇ ಆಮ್ ಆದ್ಮಿ ಪಾರ್ಟಿಗೆ ಪಂಜಾಬ್‌ನಲ್ಲೂ ಆತಂಕ ಎದುರಾಗಿದೆ. ಆಮ್ ಆದ್ಮಿ ಪಾರ್ಟಿಯ ಭದ್ರಕೋಟೆ ದೆಹಲಿಯಲ್ಲಿ ಎಎಪಿ ಸೋತಿದೆ. ಇದರ ಬೆನ್ನಲ್ಲೇ ಪಂಜಾಬ್ ಎಎಪಿಯಲ್ಲೂ ದೊಡ್ಡ ಬಾಂಬ್ ಸಿಡಿದಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಎಎಪಿ ಹೀನಾಯ ಸೋಲು ಕಂಡಿದೆ. ಕಳೆದ ಎರಡು ಅವಧಿಯಿಂದಲೂ ಎಎಪಿ ದೆಹಲಿಯಲ್ಲಿ ಅಧಿಕಾರದಲ್ಲಿ ಇದೆ. ಇದೀಗ ಪಂಜಾಬ್‌ನಲ್ಲೂ ಬಿಕ್ಕಟ್ಟು ಎದುರಾಗಿದೆ ಎನ್ನಲಾಗುತ್ತಿದೆ.
ಆಪ್ ಈಗ ಅಧಿಕಾರದಲ್ಲಿರೋ ಒಂದೇ ಒಂದಏಕೈಕ ರಾಜ್ಯ ಎಂದರೆ ಅದು ಪಂಜಾಬ್. ದೆಹಲಿಯಲ್ಲಿ ಅಧಿಕಾರ ಹಿಡಿದ ಎಎಪಿ ನಿಧಾನವಾಗಿ ಪಂಜಾಬ್‌ನಲ್ಲೂ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು. ರೈತರ ಚಳುವಳಿ ಹಾಗೂ ದೆಹಲಿಯಲ್ಲಿ ಮೊದಲ ಅವಧಿಯಲ್ಲಿ ನೀಡಿದ್ದ ಉತ್ತಮ ಆಡಳಿತ ಎಎಪಿಯನ್ನು ಕೈಹಿಡಿದಿತ್ತು. ಆದರೆ ಇದೀಗ ಪಂಜಾಬ್‌ನಲ್ಲೂ ಎಎಪಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪಂಜಾಬ್‌ನ ಸಚಿವರು ಮತ್ತು ಶಾಸಕರು ಸಹ ಇದ್ದರು. ದೆಹಲಿಯಲ್ಲಿ ಕಳೆದ ಎರಡು ಅವಧಿಯಿಂದಲೂ ಎಎಪಿ ಸರ್ಕಾರ ಅಧಿಕಾರದಲ್ಲಿ ಇತ್ತು. ಆದರೆ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೂರನೇ ಬಾರಿ ಅಧಿಕಾರಕ್ಕೆ ಬರುವ ಎಎಪಿ ಕನಸು ಈಡೇರಿಲ್ಲ. ಈ ರೀತಿ ಇರುವಾಗಲೇ ಪಂಜಾಬ್‌ನಲ್ಲೂ ಎಎಪಿಗೆ ಸಂಕಷ್ಟ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್ ಎಎಪಿ ಘಟಕದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಜೋರಾಗಿದೆ ಇದೇ ಕಾರಣಕ್ಕೆ ಸಭೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ದೆಹಲಿ ವಿಧಾನಸಭೆ ಚುನಾವಣೆಯ ಸೋಲು ಪಂಜಾಬ್ ಸರ್ಕಾರದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಎಎಪಿ ಅಮೋಘ ಗೆಲುವು ಸಾಧಿಸಿತ್ತು. ಆದರೆ ಈ ರಾಜ್ಯದಲ್ಲಿ 2027ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದು ಅತ್ಯಂತ ಸವಾಲಿನಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ. ಚುನಾವಣೆಗೆ ಇನ್ನೂ ಸುದೀರ್ಘ 2 ವರ್ಷ ಇರುವಾಗಲೇ ಇಲ್ಲಿ ಬಿಕ್ಕಟ್ಟು ಹಾಗೂ ಭಿನ್ನಾಭಿಪ್ರಾಯ ಜೋರಾಗಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರ ವಿರುದ್ಧ ಪಂಜಾಬ್‌ನ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಸಭೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಆಮ್ ಆದ್ಮಿ ಪಾರ್ಟಿಯು ಅತ್ಯಂತ ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಪಕ್ಷವಾಗಿ ಬೆಳೆಯಿತು. ಪ್ರಾದೇಶಿಕ ಪಕ್ಷದಿಂದ ರಾಷ್ಟ್ರೀಯ ಪಕ್ಷವಾಗಿ ಬದಲಾಯಿತು. ದೆಹಲಿಯ ನಂತರ ಪಂಜಾಬ್‌ನಲ್ಲೂ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು. ಈ ಪಕ್ಷವನ್ನು ಭಾರತದ ಸ್ಟಾರ್ಟ್ ಅಪ್ ಪಾರ್ಟಿ ಅಂತಲೇ ಕರೆಯಲಾಗುತ್ತದೆ. ಆದರೆ, ಈಗ ಪಂಜಾಬ್ ರಾಜ್ಯದಲ್ಲೂ ಸರ್ಕಾರ ಬೀಳುವ ಆತಂಕ ಎದುರಾಗಿದೆ. ಇಲ್ಲಿ ಕಾಂಗ್ರೆಸ್ ಆಪರೇಷನ್ ಮಾಡುತ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ.
ಕಾಂಗ್ರೆಸ್ ಕೈಯಲ್ಲಿ 30 ಆಪ್ ಶಾಸಕರು
ಪಂಜಾಬ್ನಲ್ಲಿ ಮೊದಲ ಬಾರಿ ಅಧಿಕಾರ ಹಿಡಿದಿರುವ ಆಪ್‌ನ ಗದ್ದುಗೆ ಅಲುಗಾಡುವ ಸಮಯ ಬಂದಿದೆ. ಆಮ್ ಆದ್ಮಿ ಪಕ್ಷ ಮಹಾರಾಷ್ಟ್ರದಲ್ಲಿ ಶಿವಸೇನೆ ಒಡೆದು ಎರಡು ಹೋಳಾದಂತೆ ಆಗಲಿದೆ. ಸಿಎಂ ಭಗವಂತ್ ಮಾನ್ ಪಂಜಾಬ್‌ನ ಏಕನಾಥ್ ಶಿಂಧೆ ಆಗಲಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಅಂಶವನ್ನು ಹೊರಬಿದ್ದಿದೆ. ಪಂಜಾಬ್‌ನ ಕಾಂಗ್ರೆಸ್ ನಾಯಕ ಪರ್ತಾಪ್ ಸಿಂಗ್ ಭಜ್ವಾ ಇಂತಹದೊಂದು ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. . ಈಗಾಗಲೇ ಆಪ್ ಪಕ್ಷದ 30 ಶಾಸಕರು ಕಾಂಗ್ರೆಸ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಯಾವಾಗ ಬೇಕಾದರು ಅವರು ಬೇರೆ ಕಡೆ ವಾಲುವ ಸಾಧ್ಯತೆ ಇದೆ. ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಒಡೆದು ಎರಡು ಹೋಳಾಗುವ ದಿನ ಬಹಳ ದೂರವಿಲ್ಲ ಎಂದು ಹೇಳಿದ್ದಾರೆ. ನನ್ನ ಜೊತೆ ಆಮ್ ಆದ್ಮಿ ಪಕ್ಷದ ಶಾಸಕರು ಬಹಳ ದಿನದಿಂದಲೂ ಸಂಪರ್ಕದಲ್ಲಿದ್ದಾರೆ. ನಾನು ಪಂಜಾಬ್‌ನ ಕಾಂಗ್ರೆಸ್ ಅಧ್ಯಕ್ಷನಾದ ಸಮಯದಲ್ಲಿ ಅಮರಿಂದರ್ ಸಿಂಗ್ ಅವರು 28 ಕಾಂಗ್ರೆಸ್ ನಾಯಕರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರು. ಅವರಿಗೆ ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂತು. ಅವರಿಗೆ ಗೊತ್ತು ನಾವು ವಾಪಸ್ ಕಾಂಗ್ರೆಸ್ಗೆ ಬರುವುದಿಲ್ಲ ಎಂದು. ಆದ್ರೆ ಸದ್ಯ ಪಂಜಾಬ್‌ನ ಆಮ್ ಆದ್ಮಿ ಪಕ್ಷದಲ್ಲಿ ದೆಹಲಿಯ ನಾಯಕರ ಬಗ್ಗೆ ಅಸಮಾಧಾನವಿದೆ. ದೆಹಲಿ ಆಪ್ ಹಾಗೂ ಪಂಜಾಬ್ ಆಪ್ಗಳ ನಡುವೆ ಸಂಘರ್ಷಗಳು ಶುರುವಾಗಿವೆ. ಪಂಜಾಬ್‌ನ ಮುಖ್ಯಮಂತ್ರಿ ಭಗವಂತ್ ಮಾನ್ ಈಗಾಗಲೇ ಕೇಂದ್ರ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದಾರೆ. ಯಾವಾಗ ಮಹಾರಾಷ್ಟ್ರ ವಿಮಾನ ಚಂಡಿಗಢನಲ್ಲಿ ಲ್ಯಾಂಡ್ ಆಗುತ್ತೋ ಆವತ್ತೆ ಭಗವಂತ ಮಾನ್ ಪಂಜಾಬ್‌ನ ಏಕನಾಥ ಶಿಂಧೆಯಾಗಿ ಆ ವಿಮಾನದಲ್ಲಿ ಮೊದಲ ಪ್ರಯಾಣಿಕರಾಗಿ ಹೊರಡಲಿದ್ದಾರೆ ಎಂದು ಭಜ್ವಾ ಹೇಳಿದ್ದಾರೆ. ಜಾಬ್ನ ಆಪ್ ಸರ್ಕಾರ ಅಲ್ಲಾಡುತ್ತಿರುವ ಭೂಮಿಯ ಮೆಲೆ ನಿಂತಿದೆ. ಪಕ್ಷದ ಪ್ರತಿ ಶಾಸಕನಿಗೂ ಗೊತ್ತು ಇಲ್ಲಿ ನಮಗೆ ಭವಿಷ್ಯವಿಲ್ಲ ಅಂತ. ನನಗೆ ಹಲವಾರು ಶಾಸಕರು ಈಗಲೂ ಕೂಡ ಸಂಪರ್ಕದಲ್ಲಿದ್ದಾರೆ. ಸುಮಾರು ಒಂದು ವರ್ಷದಿಂದ ಸಂಪರ್ಕದಲ್ಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ವಿಜಯ ಸಾಧಿಸಿದ ಕೇಂದ್ರ ಸರ್ಕಾರ ಇದನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಮುಂದೆ ದೊಡ್ಡ ದೊಡ್ಡ ಸಂಗತಿಗಳು ಪಂಜಾಬ್ನಲ್ಲಿ ಘಟಿಸಲಿವೆ ಬೇಕಿದ್ದರೆ ಕಾದು ನೋಡಿ ಎಂದು ಪರ್ತಾಪ್ ಸಿಂಗ್ ಭಜ್ವಾ ಹೇಳಿಕೆ ನೀಡಿದ್ದಾರೆ.
ಮಾನ್ ಸರ್ಕಾರಕ್ಕೆ ಕೌಂಟ್‌ಡೌನ್
ಪಂಜಾಬ್‌ನಲ್ಲಿ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ ಹಾಗೇ ಕೇಜ್ರಿವಾಲ್ ಮತ್ತು ಮಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಪಕ್ಷದಲ್ಲಿ ಊಹಾಪೋಹಗಳೆದ್ದಿವೆ. ಪಂಜಾಬ್ ಅನ್ನು ಭಗವಂತ್ ಮಾನ್ ಆಡಳಿತ ನಡೆಸುತ್ತಿಲ್ಲ, ಬದಲಾಗಿ ದೆಹಲಿಯಲ್ಲಿ ಕುಳಿತು ಅರವಿಂದ್ ಕೇಜ್ರಿವಾಲ್ ಆಡಳಿತ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಲ್ಲಿ, ಬಿಜೆಪಿ ನಾಯಕ ತರುಣ್ ಚುಗ್ ಅವರು ಪಂಜಾಬ್‌ನಲ್ಲಿ ಮಾನ್ ಸರ್ಕಾರದ ಕೌಂಟ್‌ಡೌನ್ ಪ್ರಾರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಈ ಭಗವಂತ್ ಮಾನ್ ಸಿಎಂ ಆಗಿದ್ರು ಇವರ ಮಾತುಗಳನ್ನ ಆಪ್‌ನ ಶಾಸಕರು ಕೇಳುತ್ತಿಲ್ಲ, ಜೋಕರ್‌ನಂತೆ ಇವರಿದ್ದಾರೆ. ಭಗವಂತ್ ಮಾನ್ ದೆಹಲಿಯಲ್ಲಿ ಪ್ರಚಾರ ಮಾಡಿದ್ದ 12ಕ್ಕೆ 12 ಕ್ಷೇತ್ರದಲ್ಲಿ ಎಎಪಿ ಸೋಲು ಕಂಡಿದೆ. ಅದರಲ್ಲಿ ಅರವಿಂದ್ ಕೇಜ್ರಿವಾಲ್ ಕ್ಷೇತ್ರವೂ ಇತ್ತು. ಒಂದ್ಕಡೆ ಕಾಂಗ್ರೆಸ್ ಕೈಯಲ್ಲಿ ಆಪ್ ಶಾಸಕರಿದ್ದಾರೆ ಅನ್ನೋ ಸುದ್ದಿಯಿದ್ದರೆ ಮತ್ತೊಂದ್ಕಡೆ ಭಗವಂತ್ ಮಾನ್ ಆಡಳಿತ ಸರಿ ಇಲ್ಲ ಅನ್ನೋ ಮಾತು ಕೇಳಿ ಬರ್ತಿದೆ.