ಉಗುರಲ್ಲೇ ಜಾಮೂನು ತಿನ್ನಿಸಿದ ಸೂರಜ್ – ನಿವೇದಿತಾಗೆ ಬಾಯ್ಸ್ ರಿವೇಂಜ್

ಉಗುರಲ್ಲೇ ಜಾಮೂನು ತಿನ್ನಿಸಿದ ಸೂರಜ್ – ನಿವೇದಿತಾಗೆ ಬಾಯ್ಸ್ ರಿವೇಂಜ್

ದಿನಕ್ಕೊಂದು ಬಟ್ಟೆ ಹಾಕಿ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ, ವಿಡಿಯೋ ಪೋಸ್ಟ್‌  ಮಾಡೋ ಬಿಗ್‌ ಬಾಸ್‌ ಕನ್ನಡ ಖ್ಯಾತಿಯ ನಿವೇದಿತಾ ಗೌಡ ಈಗ ʼBoys v/s Girlsʼ ಶೋನಲ್ಲಿ ಭಾಗವಹಿಸ್ತಿದ್ದಾರೆ. ಇದೀಗ ಈ ಶೋ ನಲ್ಲಿ ನಿವೇದಿತಾ ಗೌಡ ಸಖಲ್‌ ಹೈಲೈಟ್‌ ಆಗಿದ್ದಾರೆ. ಅವರ ಉಗುರನ್ನ ಇಟ್ಕೊಂಡು ಬಾಯ್ಸ್‌ ಸರಿಯಾಗೇ ಗೋಳು ಹೊಯ್ಕೊಳ್ತಿದ್ದಾರೆ.. ಇದೀಗ ನಿವೇದಿತಾಗೆ ಬಾಯ್ಸ್‌ ಸ್ಪೆಷಲ್‌ ಗುಲಾಬ್‌ ಜಾಮೂನ್‌ ತಿನ್ನಿಸಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ಫ್ರಾನ್ಸ್​ನಲ್ಲಿ ನರೇಂದ್ರ ಮೋದಿ –  ಭಾರತೀಯರಿಂದ ಅದ್ಧೂರಿ ಸ್ವಾಗತ   

ಕಲರ್ಸ್‌ ಕನ್ನಡದಲ್ಲಿ ಈಗ ಬಾಯ್ಸ್‌ ವರ್ಸಸ್‌ ಗರ್ಲ್‌ ಶೋ ಪ್ರಸಾರವಾಗ್ತಿದೆ.  ಈ ಶೋ ನಲ್ಲಿ ಹೆಚ್ಚು ಮನರಂಜನೆ ಸಿಗುತ್ತೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ವೀಕ್ಷಕರಿಗೆ ಆರಂಭದಲ್ಲೇ ನಿರಾಸೆ ಮೂಡಿದೆ. ಈ ಶೋ ನಲ್ಲಿ ಮನರಂಜನೆಗಿಂತ ಜಾಸ್ತಿ ಡಬಲ್‌ ಮೀನಿಂಗ್‌ ಡೈಲಾಗ್ಸ್‌, ಓವರ್‌ ಆಕ್ಟಿಂಗ್‌, ಅತಿರೇಕದ ಸಂಭಾಷಣೆ ವೀಕ್ಷಕರಿಗೆ ಇರುಸುಮುರುಸು ಉಂಟಾಗುವಂತೆ ಮಾಡಿದೆ. ಶೋ ನ ಮೊದಲ ಸಂಚಿಕೆಯಲ್ಲಿ ನಿವೇದಿತಾ ಗೌಡ ಉಗುರು ಸಖತ್‌ ಹೈಲೈಟ್‌ ಆಗಿತ್ತು.. ನಿವೇದಿತಾ ಎರಡ್ಮೂರು ಇಂಚಿನ ಉಗುರನ್ನ ತೋರಿಸಿ ಇದ್ರಲ್ಲೇ ಮುದ್ದೆ ತಿಂತೀನಿ.. ಇದ್ರಲ್ಲೇ ಫ್ರೂಟ್ಸ್‌ ಕಟ್‌ ಮಾಡ್ತಿದ್ದೀನಿ ಅಂತಾ ಹೇಳಿದ್ರು.. ಅದಾದ್ಮೇಲೆ ಉಗುರಿನಲ್ಲೇ ಬಾಳೆಹಣ್ಣು ಕಟ್‌ ಮಾಡಿ ಬಾಯ್ಸ್‌ ಗೆ ತಿನ್ನಿಸಿದ್ರು.. ಇದೀಗ ಕಳೆದ ಸಂಚಿಕೆಯಲ್ಲೂ ನಿವೇದಿತಾ ಉಗುರು ಚರ್ಚೆಯಲ್ಲಿತ್ತು.. ನಿವೇದಿತಾಗೆ ಬಾಯ್ಸ್‌ ಉಗುರಲ್ಲೇ ಠಕ್ಕರ್‌ ಕೊಟ್ಟಿದ್ದಾರೆ.

ಹೌದು, ಶೋನ ಮೊದಲ ಸಂಚಿಕೆಯಲ್ಲಿ ನಿವೇದಿತಾ ಗೌಡ ಬಾಯ್ಸ್‌ ಗೆ ಚಾಲೆಂಜ್‌ ಹಾಕಿದ್ರು..  ನಿವೇದಿತಾ ಉಗುರು ನೋಡಿ, ಗಮ್‌ನಲ್ಲಿ ಅಂಟಿಸಿಕೊಂಡು ಬಂದಿರೋದು ಎಂದು ಹೇಳಿದ್ರು..  ಆಗ ಮುಂದಿನ ವಾರ ಇದೇ ತರಹ ನೇಲ್ಸ್ ಹಾಕಿಕೊಂಡು ಬಂದು 24 ಗಂಟೆ, ಶೂಟಿಂಗ್ ಮುಗಿಯೋ ತನಕ ಇದ್ದರೆ, ನಾವು ಗರ್ಲ್ಸ್ ನೀವು ಹೇಳಿದ ಹಾಗೇ ಕೇಳ್ತೀವಿ  ಅಂತ ನಿವೇದಿತಾ ಗೌಡ ಸವಾಲೆಸೆದಿದ್ರು.. ನಿವೇದಿತಾ ಸವಾಲ್‌ ಅನ್ನ ಸೂರಜ್‌ ಸ್ವೀಕರಿಸಿದ್ದಾರೆ.. ನಿವೇದಿತಾರಂತೆ ಆರ್ಟಿಫಿಶಿಯಲ್‌ ಉಗುರನ್ನ ಸೂರಜ್‌ ಹಾಕಿಕೊಂಡು ಬಂದಿದ್ದು, ಆಕೆಯನ್ನ  ಸೂರಜ್‌ ಹಾಗೂ ಮಂಜು ಸರಿಯಾಗೇ ಗೋಳು ಹೊಯ್ಕೊಂಡಿದ್ದಾರೆ. ಉರುರಿನಲ್ಲೇ ಆಕೆಗೆ ಜಾಮೂನ್‌ ತಿನ್ನಿಸಿದ್ದಾರೆ.

ಸೂರಜ್‌ ಈ ಸಂಚಿಕೆಯಲ್ಲಿ ಹೆಣ್ಣಿನ ವೇಷ ಹಾಕಿಕೊಂಡು ಬಂದಿದ್ರು. ಬಳಿಕ ಜಾಮೂನ್‌ ತಂದು ನಿವೇದಿತಾಗೆ ತಿನ್ನಿಸಲು ಮುಂದಾದ್ರು. ಆದ್ರೆ ನಿವೇದಿತಾ ಸೂರಜ್‌ ಮೂಗಿಗೆ ಕೈ ಹಾಕಿದ್ದಾರೆ.. ಲೆಫ್ಟ್‌ ಹಾಂಡ್‌ ನಲ್ಲಿ ತಿಂತೀನಿ ಅಂದ್ರು. ಆದ್ರೆ ಮಂಜು ಆಕೆಯನ್ನ ಹಿಂಡ್ಕೊಂಡು ಜಾಮೂನು ತಿನ್ನಿಸಿದ್ದಾರೆ. ಬಳಿಕ ಶುಭಪೂಂಜಾಗೂ ಜಾಮೂನು ತಿನ್ನಿಸಿದ್ದಾರೆ.. ಇದೀಗ ನಿವೇದಿತಾಗೆ ಯಾಕಾದ್ರೂ ಬಾಯ್ಸ್‌ ಗೆ ಬಾಳೆ ಹಣ್ಣು ತಿನ್ನಿಸಿದ್ನೋ ಅಂತಾ ಅನ್ನಿಸಿದೆ. ಇನ್ನು ಈ ಸಂಚಿಕೆಯಲ್ಲಿ ಹನುಮಂತ ಕಾಣಿಸಿಕೊಂಡಿಲ್ಲ. ಹನುಮಂತ ಶೋ ಬಿಟ್ರಾ ಅಂತಾ ವೀಕ್ಷಕರು ಕೇಳ್ತಿದ್ದಾರೆ. ಕೆಲವರು ನಿವೇದಿತಾ ಉಗುರನ್ನ ನೋಡಿ ಹೆದರಿದ್ದಾರೆ. ಹಾಗಾಗಿ ಶೋ ಬಿಟ್ಟು ಹೋಗಿದ್ದಾರೆ ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.  ಆದ್ರೆ ಹನುಮಂತ ಯಾಕೆ ಶೋ ಗೆ ಬಂದಿಲ್ಲ ಅನ್ನೋ ಕಾರಣ ರಿವೀಲ್‌ ಆಗಿಲ್ಲ. ಮುಂದಿನ ಸಂಚಿಕೆಯಲ್ಲಿ ಮತ್ತೆ ಬರಬಹುದು ಅಂತಾ ಹೇಳಲಾಗ್ತಿದೆ.

ಆದ್ರೀಗ ಈ ಸೀನ್‌ ನೋಡಿದ ವೀಕ್ಷಕರು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.. ಹೆಣ್ಮಕ್ಳು ಎಷ್ಟೊಂದ್ ಸಾಧನೆ ಮಾಡಿದ್ದಾರೆ.. ಈ ಶೋನಿಂದ ಹೆಣ್ಮಕ್ಳ ಮಾನ ಮರ್ಯಾದೆ ಹೋಗುತ್ತಿದೆ. ತುಂಬಾ ಚೀಪಾಗಿ ತೋರಿಸ್ತಿದ್ದಾರೆ.. ಇದೆಲ್ಲ ನಿಮಗೆ ಬೇಕಾಗಿತ್ತಾ.   ಬರಿ ಮೈಮಟಾ ತೋರ್ಸೋದು. ಅಪ್ಡೇಟ್ ಆಗಿದ್ದೀವಿ ಅಂತ ಕುಡಿಯೋದು.  ಶೋಕಿ ಮಾಡೋದನ್ನೇ ತೋರಿಸಿತ್ತಾರೆ. ಈ ಶೋ  ಮುಂದೆ ಹೆಣ್ಣು ಮಕ್ಕಳ ಮೇಲೆ ತುಂಬಾ ಪರಿಣಾಮ ಬೀಳುತ್ತೆ ಅಂತಾ ಕಾಮೆಂಟ್‌ ಮಾಡಿದ್ದಾರೆ. ನಿವೇದಿತಾ ಳಿಂದ ಏನು ನೋಡಿ ಕಲಿಬೇಕು ಹೇಳಿ. ಮೊದಲು ಅವಳನ್ನ ಶೋ ನಿಂದ ತೆಗೆದುಹಾಕಿ. ಜನ ನೋಡ್ತಾರೆ ಅನ್ನೋ ಕಾನ್ಫಿಡೆನ್ಸ್ ಏನು ಬೇಕಾದ್ರು ತೋರಿಸ್ತಾರೆ. ಇಂತದ್ದನ್ನೆಲ್ಲಾ ಮನರಂಜನೆ ಅಂತ ನೋಡೋ ಜನ ಬದಲಾಗೋ ವರೆಗೂ ಇವೆಲ್ಲಾ ಎಗ್ಗಿಲ್ಲದೇ ನಡೀತಾ ಇರುತ್ತೆ ಅಂತಾ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *