ನಿರೀಕ್ಷೆಗೂ ಮೀರಿ ಹರಿದು ಬಂದ ಭಕ್ತಸಾಗರ – ಮಹಾಕುಂಭಮೇಳದ ಹೊಸ ದಾಖಲೆ!
ಪ್ರಯಾಗ್ ರಾಜ್ ನಲ್ಲಿ 144 ವರ್ಷದ ಬಳಿಕ ಮಹಾಕುಂಭಮೇಳ ನಡೆಯುತ್ತಿದೆ. ಇದೀಗ ತ್ರಿವೇಣಿ ಸಂಗಮದಲ್ಲಿ ಪವಿತ್ರ ಪುಣ್ಯ ಸ್ನಾ ಮಾಡಲು ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಸ್ಥಳೀಯ ಆಡಳಿತಕ್ಕೆ ನಿರ್ವಹಣೆ ಮಾಡುವುದೇ ಕಷ್ಟವಾಗಬೇಕು.. ಅಷ್ಟರ ಮಟ್ಟಿಗೆ ಭಕ್ತರು ಪ್ರಯಾಗರಾಜ್ನತ್ತ ತೆರಳುತ್ತಿದ್ದಾರೆ. ಮಹಾ ಕುಂಭಮೇಳದಲ್ಲಿ ಇಲ್ಲಿವರೆಗೂ 43 ಕೋಟಿಗೂ ಹೆಚ್ಚು ಜನರು ಅಮೃತ ಸ್ನಾನ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಫ್ರಾನ್ಸ್ನಲ್ಲಿ ನರೇಂದ್ರ ಮೋದಿ – ಭಾರತೀಯರಿಂದ ಅದ್ಧೂರಿ ಸ್ವಾಗತ
ಮಹಾ ಕುಂಭಮೇಳಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಕೋಟ್ಯಾಂತರ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಇದೀಗ ಸರ್ಕಾರಿ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ಇನ್ನು ಎರಡು ಮೂರು ದಿನ ಪ್ರಯಾಗರಾಜ್ನತ್ತ ಪ್ರಯಾಣ ಬೆಳಸಬೇಡಿ. ಈಗಾಗಲೇ ಭಕ್ತಕೋಟಿಯಿಂದ ಇದು ತುಂಬಿ ಹೋಗಿದೆ ಎಂದು ಹೇಳಿದ್ದಾರೆ. ಇದೀಗ ಮಹಾ ಕುಂಭಮೇಳದಲ್ಲಿ ಈವರೆಗೆ 43 ಕೋಟಿಗೂ ಹೆಚ್ಚು ಜನರು ಅಮೃತ ಸ್ನಾನ ಮಾಡಿದ್ದಾರೆ. ಕೇವಲ 45 ದಿನಗಳಲ್ಲಿ ಇಷ್ಟೊಂದು ಭಕ್ತರು ಗಂಗೆಯಲ್ಲಿ ಮಿಂದು ಹೋಗಿದ್ದಾರೆ. ಮಹಾಕುಂಭ ಮುಗಿಯಲು ಇನ್ನೂ 16 ದಿನಗಳು ಬಾಕಿ ಇವೆ. ಅಲ್ಲಿಯವರೆಗೆ ಗಂಗೆಯಲ್ಲಿ ಪವಿತ್ರ ಸ್ನಾನ ಕೈಗೊಂಡವರ ಸಂಖ್ಯೆ ಸುಮಾರು 50 ಕೋಟಿಗೂ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜ.13 ರಿಂದ ಮಹಾ ಕುಂಭಮೇಳ ಆರಂಭವಾಗಿದೆ. ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಸಾಧು-ಸಂತರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಫೆ.26 ರ ವರೆಗೆ ಕುಂಭಮೇಳ ನಡೆಯಲಿದೆ.