ಬಾಗಿಲು ಮುಚ್ಚಿದ NIRMA! – ನಿರ್ಮಾ ಪೌಡರ್ ಮುಗಿಸಿದ್ಯಾರು?
ಹಳ್ಳಿ ಹಳ್ಳಿ ತಲುಪಿದ್ದು ಎಡವಿದ್ದೆಲ್ಲಿ??
![ಬಾಗಿಲು ಮುಚ್ಚಿದ NIRMA! – ನಿರ್ಮಾ ಪೌಡರ್ ಮುಗಿಸಿದ್ಯಾರು?ಹಳ್ಳಿ ಹಳ್ಳಿ ತಲುಪಿದ್ದು ಎಡವಿದ್ದೆಲ್ಲಿ??](https://suddiyaana.com/wp-content/uploads/2025/02/images-3.jpg)
ನಿರ್ಮಾ.. ನಿರ್ಮಾ.. ವಾಷಿಂಗ್ ಪೌಡರ್ ನಿರ್ಮಾ.. ಹಾಲಿನಂತ ಬಿಳಪು.. ನಿರ್ಮಾದಿಂದ ಬಂತು.. ಅಂದಾದ ಬಟ್ಟೆಗೆ ಪಳಪಳ ನಿರ್ಮಾ.. ಎಲ್ಲರ ಮೆಚ್ಚಿನಿ ನಿರ್ಮಾ.. ವಾಷಿಂಗ್ ಪೌಡರ್ ನಿರ್ಮಾ.. 2000ಕ್ಕೂ ಮುಂಚೆ ಹುಟ್ಟಿದವರು ಈ ಹಾಡನ್ನ ಕೇಳದೇ ಇರಲು ಚಾನ್ಸ್ ಇಲ್ಲ.. ಟಿವಿ ಹಾಕಿದ್ರೆ, ರೆಡಿಯೋ ಹಾಕಿದ್ರೆ ಈ ಹಾಡು ಬರ್ತಿತ್ತು.. ಹಾಗೇ ಈ ಹಾಡು ಕೂಡ ಎಲ್ಲರಿಗೂ ಈಗಲು ನೆನಪಿದೆ.. ನಮ್ಮ ಜೀವನದಲ್ಲಿ ಮರೆಯದ ಒಂದು ಆ್ಯಡ್ ಇದ್ರೆ ಅದು ಇದೇ.. ಒಂದು ಕಾಲದಲ್ಲಿ ದೊಡ್ಡ ಸಾಮಾಜ್ರ್ಯವನ್ನೇ ಈ ನಿರ್ಮಾ ಕಂಪನಿ ಕಟ್ಟಿತ್ತು.
ಅಂದಹಾಗೇ ಅದು 1969ನೇ ಇಸವಿ ಇರಬೇಕು. ಆಗ ಗುಜರಾತಿನ ಇಪ್ಪತ್ತನಾಲ್ಕು ವರ್ಷದ ಯುವಕ ತನ್ನ ಸೈಕಲ್ನಲ್ಲಿ ಮನೆಯಲ್ಲಿ ತಯಾರಿಸಿದ ವಾಷಿಂಗ್ ಪೌಡರ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದ. ಮನೆ ಮನೆಗೆ ಹೋಗಿ ತನ್ನ ವ್ಯವಹಾರ ಮಾಡುತ್ತಿದ್ದ. ಅಂದು ಅವನು ಪ್ರಾರಂಭಿಸಿದ ವ್ಯಾಪಾರ, ನಂತರದ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಒಂದು ದೊಡ್ಡ ಬ್ರಾಂಡ್ ಆಯ್ತು.. ಹಣ ಹರಿದು ಬರೋಕೆ ಶುರುವಾಯ್ತು. ಆದರೆ, ಆ ಬ್ರಾಂಡ್ ಮೌಲ್ಯ ಒಂದು ದಿನ ದಿಢೀರನೇ ಕುಸಿಯಿತು. ದಶಕಗಳಿಂದ ಭಾರತೀಯ ಗೃಹಿಣಿಯರ ನೆಚ್ಚಿನ ವಾಷಿಂಗ್ ಪೌಡರ್ ಆಗಿ ಉಳಿದಿದ್ದ ‘ನಿರ್ಮಾ’ದ ಕಥೆ ಇದು. ನಿರ್ಮಾಗೆ ಏನಾಯಿತು? ನಿರ್ಮಾವನ್ನು ನಾಶಮಾಡಿದ್ದು ಯಾರು?
ಕರ್ಸನ್ ಭಾಯ್ ಪಟೇಲ್ ಎಂಬ ಯುವಕ ಗುಜರಾತಿನ ಸರ್ಕಾರಿ ಸಂಸ್ಥೆಯಲ್ಲಿ ರಸಾಯನಶಾಸ್ತ್ರಜ್ಞನಾಗಿ ಕೆಲಸ ಮಾಡುತ್ತಿದ್ದ. ಅಲ್ಲಿ ಸಿಗುತ್ತಿರುವ ಸಂಬಳ ಕುಟುಂಬ ನೋಡಿಕೊಳ್ಳಲು ಆಗಲ್ಲ ಅಂತ ಅನ್ಕೊಂಡ.. ನಾನೇ ಏನಾದ್ರೂ ಮಾಡಬೇಕು.. ಬ್ಯುಸೆನೆಸ್ ಮಾಡಬೇಕು ಅಂದ್ಕೊಂಡ.. ಕರ್ಸನ್ ಭಾಯ್ ಪಟೇಲ್ ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ಪ್ಲ್ಯಾನ್ ಮಾಡಿದ್ರು. ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದ ಕರ್ಸನ್, ಆ ರೂಟ್ನಲ್ಲೇ ಹೋದ್ರೆ ಒಳ್ಳೆಯದ್ದು ಅನ್ಕೊಂಡಿದ್ದ.. ಕೆಲಸ ಗೊತಿತ್ತು.. ಅನುಭವ ಇತ್ತು.. ಆಗ ಅವರು ವಾಷಿಂಗ್ ಸೋಡಾ ಮತ್ತು ಇತರ ಕೆಲವು ರಾಸಾಯನಿಕಗಳನ್ನು ಬೆರೆಸಿ ವಾಷಿಂಗ್ ಪೌಡರ್ ತಯಾರಿಸಿದರು.
ನಿರ್ಮಾ ಎಂದು ಮಗಳ ಹೆಸರಿಟ್ಟರು
ಸಕಷ್ಟು ಫೇಲ್ಯೂರ್ ಆದ್ರೂ ಛಲ ಬಿಡಲಿಲ್ಲ.. ಹಲವು ಬಾರಿ ವಿಫಲವಾದ ನಂತರ, ಅವರು ಪರಿಣಾಮಕಾರಿ ಉತ್ಪನ್ನವನ್ನು ತಯಾರಿಸಿದರು. ಬಳಿಕ ತಮ್ಮ ವಾಷಿ ಪೌಡರ್ಗೆ ನಿರ್ಮಾ ಎಂದು ಹೆಸರಿಟ್ರು.. ಅಲ್ಲದೆ, ಆ ಪೌಡರ್ ತುಂಬಾ ಕಮ್ಮಿ ಬೆಲೆಯಗಾಗಿದ್ರು ಪಾಕ್ಕ ರಿಸಲ್ಟ್ ಇತ್ತು.. ಕರ್ಸನ್ ಭಾಯ್ ತಮ್ಮ ಒಂದು ವರ್ಷದ ಮಗಳು ನಿರುಪಮಾ ಹೆಸರಿನಿಂದ ನಿರ್ಮಾ ಎಂಬ ಪದವನ್ನು ತನ್ನ ಪ್ರಾಡಕ್ಟ್ಗೆ ಇಟ್ಟರು. ಮುಂದೆ ಇದೇ ಹೆಸರು ಪ್ರಸಿದ್ಧಿಯಾಯಿತು.
ಪ್ಲಾಸ್ಟಿಕ್ ಚೀಲದಲ್ಲಿ ಮರಾಟ
ಪ್ಲಾಸ್ಟಿಕ್ ಚೀಲಗಳಲ್ಲಿ ವಾಷಿಂಗ್ ಪೌಡರ್ ತುಂಬಿಸಿ, ಸೈಕಲ್ಗಳಲ್ಲಿ ಮನೆ ಮನೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ, ಸಾಮಾನ್ಯ ಜನರು ಬಟ್ಟೆ ಒಗೆಯಲು ಹಳದಿ ಸೋಪ್ ಬಾರ್ಗಳನ್ನು ಬಳಸುತ್ತಿದ್ದರು. ಆದರೆ, ಇವು ಕಠಿಣ ಕಲೆಗಳನ್ನು ತೆಗೆದುಹಾಕಲು ಸೂಕ್ತವಾಗಿರಲಿಲ್ಲ. ಅವರ ಬಳಿಗೆ ಬಂದ ನಿರ್ಮಾ ಬಹಳ ಬೇಗನೆ ಯಶಸ್ಸು ಗಳಿಸಿತು. ಎಲ್ಲ ಕಡೆ ನಿರ್ಮಾದ್ದೇ ಕಾರು ಬಾರು ಶುರುವಾಗಿತ್ತು
ನಿರ್ಮಾ ಮುಂದೆ ಸರ್ಫ್ ಗಢಗಢ
ಆ ಸಮಯದಲ್ಲಿ ಡಿಟರ್ಜೆಂಟ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದ ಸರ್ಫ್, ನಿರ್ಮಾದ ಆಗಮನದಿಂದ ನಡುಗಿತು. ಸರ್ಫ್ ಅನ್ನು ಕೆಜಿಗೆ 15 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಆ ಸ್ಥಳದಲ್ಲಿ ನಿರ್ಮಾ ಕೇವಲ 3.50 ರೂ.ಗೆ ಗ್ರಾಹಕರನ್ನು ತಲುಪಿತು. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾದಂತೆ, ಕರ್ಸನ್ ಭಾಯ್ ಅಹಮದಾಬಾದ್ನಲ್ಲಿ ಒಂದು ಸಣ್ಣ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದರು. ಕಂಪನಿ ಬೆಳೆಯುತ್ತಾ ಹೋಯಿತು. ಭಾರತೀಯ ಜಾಹೀರಾತಿನಲ್ಲಿ ಇಂದಿಗೂ ಸೂಪರ್ ಹಿಟ್ ಎನಿಸಿಕೊಂಡಿರುವ ‘ವಾಷಿಂಗ್ ಪೌಡರ್ ನಿರ್ಮಾ’ ಹಾಡು ಕೂಡ ಹೊರಹೊಮ್ಮಿತು. ನಿರ್ಮಾ ಪೌಡರ್ ಗುಜರಾತ್ನಿಂದ ಭಾರತದಾದ್ಯಂತ ದಿನಸಿ ಅಂಗಡಿಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿತು. ಉತ್ತಮವಾಗಿ ವ್ಯವಹಾರವನ್ನು ನಡೆಸಿತು. ನಿರ್ಮಾ ವಾಷಿಂಗ್ ಪೌಡರ್ ಮಾರುಕಟ್ಟೆಯ 60 ಪ್ರತಿಶತವನ್ನು ವಶಪಡಿಸಿಕೊಂಡಿತು.
ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯ
ನಿರ್ಮಾದಲ್ಲಿ ಶೇ. 65 ರಷ್ಟು ವಾಷಿಂಗ್ ಸೋಡಾ ಇತ್ತು. ಇದು ಗುಜರಾತ್ನ ಸ್ಥಳೀಯ ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿತ್ತು. ಆದರೆ, ಪುಡಿಯಲ್ಲಿ ಬಿಳಿಚುವಿಕೆ ಅಥವಾ ಸುಗಂಧ ದ್ರವ್ಯ ಇರಲಿಲ್ಲ. ಇದು ಅದರ ಪ್ರತಿಸ್ಪರ್ಧಿಗಳಿಗೆ ನಿಜವಾದ ಟ್ರಂಪ್ ಕಾರ್ಡ್ ಆಗಿತ್ತು. ಅದರ, ಪ್ರಮುಖ ಪ್ರತಿಸ್ಪರ್ಧಿ ಸರ್ಫ್ನ ಪೋಷಕ ಕಂಪನಿಯಾದ HLL, ನಿರ್ಮಾದ ದೌರ್ಬಲ್ಯಗಳು ಏನೆಂದು ಕಂಡುಹಿಡಿಯಲು ವ್ಯಾಪಕ ಸಂಶೋಧನೆ ನಡೆಸಿತು. ಈ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಿದ್ರು.. ನಿರ್ಮಾವನ್ನು ನಿರ್ನಾಮ ಮಾಡೋಕೆ ಡಿಸೈಡ್ ಮಾಡಿದ್ರು.
ನಿರ್ಮಾ ಬಳಕೆದಾರರು ವಾಸನೆ ಬರುವ ಬಟ್ಟೆಗಳು ಮತ್ತು ಕೈಗಳಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳಂತಹ ಕೆಲವು ಆರೋಪ ಎದುರಿಸುತಿತ್ತು. ಇದನ್ನು ಕಂಡುಕೊಂಡ HLL, ಆ ಸಮಸ್ಯೆಗಳನ್ನು ಎತ್ತಿ ತೋರಿಸುವ ಜಾಹೀರಾತು ಅಭಿಯಾನವನ್ನು ನಡೆಸಿತು. ಅವರು ತಮ್ಮ ಹೊಸ ಡಿಟರ್ಜೆಂಟ್ಗಳಲ್ಲಿ ಸುಗಂಧ ಮತ್ತು ಕಡಿಮೆ ಬೆಲೆಗಳನ್ನು ಸಹ ಪರಿಚಯಿಸಿದರು. ವೀಲ್, ಘಾಟಿ ಮತ್ತು ಏರಿಯಲ್ ಈ ರೀತಿ ರೂಪುಗೊಂಡ ಬ್ರಾಂಡ್ಗಳಾಗಿದ್ದವು. …
ಅಂತಿಮವಾಗಿ, ನಿರ್ಮಾ ಸೋಪ್ ಪೌಡರ್ ತಯಾರಿಕೆಯಿಂದ ಹಿಂದೆ ಸರಿಯಿತು. ಆದಾಗ್ಯೂ, ಅದು ಸೋಡಾ ಬೂದಿ ಮತ್ತು ಸಿಮೆಂಟ್ ಉತ್ಪಾದನೆ ಮತ್ತು ಶಿಕ್ಷಣ ಕ್ಷೇತ್ರದತ್ತ ತಿರುಗಿತು. ಇದು ಈ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಿತು. ನಿರ್ಮಾ ಪರಿಮಳ ಇರಲಿಲ್ಲ ನಿಜ. ಆದ್ರೆ ಅದು ಬಡವರಿಗೆ ಬಹಳ ಕಡಿಮೆ ಬೆಲೆಗೆ ಸಿಗುತಿತ್ತು. ಇದು ನಿರ್ಮಾದ ಏಳು ಬೀಳಿನ ಕಥೆ..