ಬಾಂಗ್ಲಾದಲ್ಲಿ ಹೊಸ ಕಾರ್ಯಾಚರಣೆ – ಏನಿದು ‘ಆಪರೇಷನ್ ಡೆವಿಲ್ ಹಂಟ್’
![ಬಾಂಗ್ಲಾದಲ್ಲಿ ಹೊಸ ಕಾರ್ಯಾಚರಣೆ – ಏನಿದು ‘ಆಪರೇಷನ್ ಡೆವಿಲ್ ಹಂಟ್’](https://suddiyaana.com/wp-content/uploads/2025/02/dab2jpg_1739158825422.webp)
ಬಾಂಗ್ಲಾದೇಶ ಪದೇ ಪದೆ ಒಂದಿಲ್ಲೊಂದು ವಿಷ್ಯಕ್ಕೆ ಸುದ್ದಿಯಾಗ್ತಾನೆ ಇರುತ್ತೆ. ಅಲ್ಲಿ ಕೆಲ ನರರಾಕ್ಷಸರ ಅಟ್ಟಹಾಸ ಮರೆಯುತ್ತಿದ್ದರೆ. ಹಾಗೇ ಯೂನಸ್ ಸರ್ಕಾರ ತನಗೆ ಹೇಗ್ ಬೇಕು ಹಾಗೇ ಆಳ್ವಿಕೆ ಮಾಡುತ್ತಿದೆ. ಶೇಕ್ ಹಸೀನಾ ಬಾಂಗ್ಲಾ ಬಿಟ್ಟ ಮೇಲೆ ಅಲ್ಪಸಂಖ್ಯಾಂತರ ಮೇಲೆ ದಾಳಿಗಳು ಹೆಚ್ಚಾಗಿ ನಡೆಯುತ್ತಿವೆ.ಇದು ವಿಶ್ವ ಮಟ್ಟದಲ್ಲಿ ಚರ್ಚೆ ಕೂಡ ಆಗುತ್ತಿದೆ. ಹಾಗೇ ಯೂನಸ್ ಸರ್ಕಾರದ ವಿರುದ್ಧ ಕೂಡ ಪ್ರತಿಭಟನೆಗಳು ನಡೆಯುತ್ತಿವೆ.. ಈ ನಡುವೆ ಬಾಂಗ್ಲಾ ಸರ್ಕಾರ 1308 ಜನರನ್ನ ಬಂಧಿಸಿದೆ.. ಯಾಕೆ ಅವರನ್ನ ಅರೆಸ್ಟ್ ಮಾಡಿದ್ದು ಅನ್ನೋದನ್ನ ತಿಳಿದುಕೊಳ್ಳಣ ನಾನು ಶಿವರಾಜ್ ಬಾಣಂಕಿ.. ನೀವು ಸುದ್ದಿಯಾನದ ಸಬ್ಸ್ಕೈಬರ್ ಆಗೋದನ್ನ ಮರೆಯಬೇಡಿ..
ಬಾಂಗ್ಲಾದೇಶದ ಭದ್ರತಾ ಪಡೆ ಹೊಸದಾಗಿ “ಆಪರೇಷನ್ ಡೆವಿಲ್ ಹಂಟ್” ಎಂಬ ಹೆಸರಿನಡಿ 1,308 ಜನರನ್ನು ಬಂಧಿಸಿವೆ. ರಾಷ್ಟ್ರದಲ್ಲಿನ ತೀವ್ರ ವಿಧ್ವಂಸಕತೆಯ ಮಧ್ಯೆ ರಾತ್ರೋರಾತ್ರಿ ಈ ಆಪರೇಷನ್ ಮಾಡಲಾಗಿದೆ. ಕಳೆದ ನಾಲ್ಕು ದಿನಗಳಿಂದ ಬಾಂಗ್ಲಾದಲ್ಲಿ ದೊಡ್ಡ ಮಟ್ಟದಲ್ಲಿ ಗಲಾಟೆ ಆಗುತ್ತಿದೆ.. ಈ ನಡುವೆ ಮಧ್ಯಂತರ ಸರ್ಕಾರವು ‘ಎಲ್ಲಾ ದೆವ್ವಗಳನ್ನು’ ಬೇರು ಸಹಿತ ಕಿತ್ತೊಗೆಯುವವರೆಗೂ ಈ ಆಪರೇಷನ್ನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದೆ. ಏನಿದು ಡೆವಿಲ್ ಹಂಟ್.. ದೇವ್ವಗಳ ಭೇಟೆ ಅನ್ನೋದನ್ನ ನೋಡೋಣ ಬನ್ನಿ..
ಏನಿದು ಡೆವಿಲ್ ಹಂಟ್?
ಕಾರ್ಯಾಚರಣೆಯ ಗುರಿಗಳ ಬಗ್ಗೆ ಗೃಹ ವ್ಯವಹಾರಗಳ ಸಲಹೆಗಾರ ಎಂಡಿ ಜಹಾಂಗೀರ್ ಆಲಂ ಚೌಧರಿ ಹೇಳಿದ್ದು ಹೀಗೆ. “ದೆವ್ವ’ ಎಂದರೆ ಏನು? ಅದು ದುಷ್ಟ ಶಕ್ತಿಗಳನ್ನು ಸೂಚಿಸುತ್ತದೆ. ಈ ಕಾರ್ಯಾಚರಣೆಯು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವ, ಕಾನೂನು ಮುರಿಯವ, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಎಸಗುವವರನ್ನು ಗುರಿಯಾಗಿರಿಸಿಕೊಂಡಿದೆ ಎಂದು ಹೇಳಿದ್ದಾರೆ.
ಢಾಕಾದ ಹೊರವಲಯದಲ್ಲಿರುವ ಅವಾಮಿ ಲೀಗ್ ನಾಯಕನ ಮನೆಯಲ್ಲಿ ನಡೆದ ಕೆಲ ವಿಧ್ವಂಸಕ ಕೃತ್ಯಗಳ ಸಂದರ್ಭದಲ್ಲಿ ವಿದ್ಯಾರ್ಥಿ ಕಾರ್ಯಕರ್ತರು ಗಾಯಗೊಂಡಿದ್ದರು. ಇದಾದ ನಂತರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಈ “ಆಪರೇಷನ್ ಡೆವಿಲ್ ಹಂಟ್” ಗೆ ಆದೇಶ ನೀಡಿದೆ. ಸೇನಾ ಪಡೆಗಳು, ಪೊಲೀಸರು ಮತ್ತು ಅವರ ವಿಶೇಷ ಘಟಕಗಳನ್ನು ಒಳಗೊಂಡ ಜಂಟಿ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸಿದ 24 ಗಂಟೆಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರಮುಖವಾಗಿ 274 ಜನರನ್ನು ಬಂಧಿಸಲಾಗಿದೆ.
ಇನ್ನು ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ನ 81 ಕಾರ್ಯಕರ್ತರನ್ನು ಢಾಕಾದ ಹೊರವಲಯದಲ್ಲಿರುವ ಗಾಜಿಪುರದಿಂದ ಬಂಧಿಸಲಾಗಿದೆ. ಈ ವೇಳೆ ಅಲ್ಲಿ ಘರ್ಷಣೆ ಕಂಡಿದ್ದು ಕೂಡಲೇ ಆಪರೇಷನ್ ಡೆವಿಲ್ ಹಂಟ್ಗೆ ಆದೇಶ ನೀಡಲು ಅಧಿಕಾರಿಗಳನ್ನು ಪ್ರೇರೇಪಿಸಿತು ಎಂದು ಹೇಳಲಾಗಿದೆ.
ಮೀಸಲಾತಿ ವಿಚಾರವಾಗಿ ಭುಗಿಲೆದ್ದ ಆಕ್ರೋಶ, ವಿದ್ಯಾರ್ಥಿಗಳ ಚಳವಳಿ ಶೇಖ್ ಹಸೀನಾ ಸರ್ಕಾರವನ್ನು ಕಿತ್ತೊಗೆದು, ಅವರನ್ನು ದೇಶದಿಂದ ಹೊರಹೋಗುವಂತೆ ಮಾಡಿದೆ. ಆಗ ಆರಂಭವಾದ ಹಿಂಸಾಚಾರ ಹೊಸ ಮಧ್ಯಂತರ ಸರ್ಕಾರ ಬಂದ ಮೇಲೂ ಮುಂದುವರೆದಿದೆ. ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿ ಮುಂದುವರೆದಿದೆ. ಈ ನಡುವೆ ಮೊನ್ನೆ ಮೊನ್ನೆ ಬಾಂಗ್ಲಾ ದೇಶದ ಮೊದಲ ಪ್ರಧಾನಿ ನಿವಾಸದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ. ಹೀಗೆ ಈ ದಾಳಿ ಹೆಚ್ಚಾಗುತ್ತಿದ್ದಂತೆ ಎಚ್ಚತ್ತೆ ಯೂನಸ್ ಸರ್ಕಾರ ಆಪರೇಷನ್ ಡೇವಿಲ್ಗೆ ಕೈ ಹಾಕಿದೆ. ದೇಶದಲ್ಲಿ ಕಿಚ್ಚು ಹಚ್ಚುವರನ್ನ ಅರೆಸ್ಟ್ ಮಡಲಾಗುತ್ತಿದೆ.
ಶೇಕ್ ಹಸೀನಾ ಬಾಷಣದಿಂದ ಹೆಚ್ಚಾದ ದಂಗೆ
ಕಲೆ ದಿನಗಳ ಹಿಂದೆ ಶೇಕ್ ಹಸೀನಾ ಆನ್ಲೈನ್ ಬಾಷಣ ಮಾಡಿದ್ರು. ಇದರಿಂದ ಮತ್ತೆ ಬಾಂಗ್ಲಾ ದೇಶ ಹೊತ್ತಿ ಉರಿದಿದೆ. ಢಾಕಾದಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ವು. ಪ್ರತಿಭಟನೆ ಹೇಗಿತ್ತು ಅಂದ್ರೆ ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ ಮತ್ತು ಅವರ ನಿವಾಸವನ್ನ ಧ್ವಂಸಗೊಳಿಸಲಾಗಿದೆ. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಕ್ರೇನ್ ಮೂಲಕ ಮನೆ ಧ್ವಂಸಗೊಳಿಸಿದ್ರು.. ಹೀಗಾಗಿ ಬಾಂಗ್ಲಾದಲ್ಲಿ ಕಿಚ್ಚು ಹೊತ್ತುತ್ತಿದ್ದಂತೆ ಬಾಂಗ್ಲಾ ಸರ್ಕಾರ ಡಿವಿಲ್ ಆಪರೇಷನ್ ಶುರುಮಾಡಿದೆ.. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರು ಜೊತೆ ಶೇಕ್ ಹಸೀನಾ ಅವರ ಅವಾಮಿ ಲೀಗ್ ನಾಯಕರನ್ನೂ ಅರೆಸ್ಟ್ ಮಾಡಲಾಗುತ್ತಿದೆ. ಬಾಂಗ್ಲಾ ಸಂಪೂರ್ಣವಾಗಿ ಧಗಧಗಿಸುತ್ತಿದೆ.. ಈ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ. ನಮಸ್ಕಾರ..