ದೆಹಲಿಯಲ್ಲಿ ಅರಳಿದ ಕಮಲ ಕೇಜ್ರಿವಾಲ್ ಭವಿಷ್ಯ ಮುಗಿತಾ!?
ಬಿಜೆಪಿ ಗದ್ದುಗೆ ಏರಲು ಕಾರಣವೇನು?

ದೆಹಲಿಯಲ್ಲಿ ಅರಳಿದ ಕಮಲ ಕೇಜ್ರಿವಾಲ್ ಭವಿಷ್ಯ ಮುಗಿತಾ!?ಬಿಜೆಪಿ ಗದ್ದುಗೆ ಏರಲು ಕಾರಣವೇನು?

 

ಇಡೀ ದೇಶವೇ ಎದುರು ನೋಡುತ್ತಿರುವ ದೆಹಲಿ ಚುನಾವಣೆ 2025ರ ಫಲಿತಾಂಶ ಹೊರ ಬಿದ್ದಿದೆ.  ಈ ಬಾರಿ ಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೆ ಎಂಬುದು ತೀವ್ರ ಕುತೂಹಲ ಹುಟ್ಟಿಸಿತ್ತು.. ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ಬಿಜೆಪಿಗೆ ಸ್ಪಷ್ಟ ಬಹುಮತ ಅಂತ ಹೇಳಿದ್ವು. ಈಗ ಮತಗಟ್ಟೆ ಸಮೀಕ್ಷೆಗಳು ನಿಜವಾಗಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ.

ದೆಹಲಿಯಲ್ಲಿ ಸ್ಪಷ್ಟ ಬಹುಮತ ಪಡೆದ ಬಿಜೆಪಿ

ಹೌದು ದೆಹಲಿ ವಿಧಾನಸಭಾ ಎಲೆಕ್ಷನ್‌ನಲ್ಲಿ ಬಿಜೆಪಿ ಸ್ಪಷ್ಟ ಬಹುತ ಪಡೆದಿದ್ದು ಮ್ಯಾಜಿನ್ ನಂ ದಾಟಿ45 ಕ್ಕೂ ಹೆಚ್ಚು ಸೀಟ್ ಗೆದ್ದಿದೆ. ಅಂದ್ರೆ 47 ಸೀಟ್ ಗೆದ್ದಿದೆ. ಸುಮಾರು 27 ವರ್ಷಗಳ ಬಳಿಕ ದೆಹಲಿಯಲ್ಲಿ ಕಮಲ ಅರಳಿದೆ. ಇದು ಬಿಜೆಪಿ ಪಾಳಯದ ಸಂತಸಕ್ಕೆ ಕಾರಣವಾಗಿದೆ.

 

ಅರವಿಂದ್ ಕೇಜ್ರಿವಾಲ್‌ಗೆ ಸೋಲು 

 

ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್​ಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಇದರೊಂದಿಗೆ ಆಡಳಿತಾರೂಢ ಎಎಪಿಗೆ ಹಾಗೂ ಕೇಜ್ರಿವಾಲ್​ಗೆ ಭಾರೀ ಮುಖಭಂಗವಾದಂತಾಗಿದೆ. ಸತತ ಎರಡು ಬಾರಿ ದೆಹಲಿಯ ಗದ್ದುಗೆ ಏರಿದ್ದ ಎಎಪಿ ಮತ್ತು ಕೇಜ್ರಿವಾಲ್​ಗೆ ಈ ಬಾರಿ ಅಬಕಾರಿ ನೀತಿ ಹಗರಣದಿಂದ ಭಾರಿ ಹಿನ್ನಡೆಯಾಗಿತ್ತು. ಅದು ಮತದಾನದ ಮೇಲೂ ಪರಿಣಾಮ ಬೀರಿದಂತಿದೆ. ಅಲ್ಲದೇ ಯಾವು ಫ್ರೀ ಯೋಜನೆ ಕೂಡ ಕೇಜ್ರಿವಾಲ್ ಕೈ ಹಿಡಿದಿಲ್ಲ..

ಶಿಷ್ಯನ ಮೇಲೆ ಅಣ್ಣ ಹಜಾರೆ ಕಿಡಿ

ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಆಪ್‌ ಪಕ್ಷದ ಸೋಲಿಗೆ ಅರವಿಂದ್‌ ಕೇಜ್ರಿವಾಲ್‌ ಅವರೇ ಕಾರಣ ಎಂದಿದ್ದಾರೆ. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅರವಿಂದ್‌ ಕೇಜ್ರಿವಾಲ್‌ ಹಾಗೂ ಅವರ ಇತರ ಸಹಚರರು ಬಳಿಕ ಅಣ್ಣಾ ಹಜಾರೆ ಅವರ ವಿರೋಧದ ನಡುವೆಯೂ ಆಮ್‌ ಆದ್ಮಿ ಪಕ್ಷವನ್ನು ಕಟ್ಟಿದ್ದರು. ಆ ಬಳಿಕ ಚುನಾವಣೆಯಲ್ಲೂ ಗೆದ್ದು ದೆಹಲಿಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಚಳುವಳಿಯ ಲಾಭ ಪಡೆದು ರಾಜಕೀಯ ಉದ್ಧೇಶದ ಪಕ್ಷವನ್ನು ನಿರ್ಮಿಸಿದ ಬಳಿಕ ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್‌ ಅವರಿಂದ ಅಂತರ ಕಾಯ್ದುಕೊಂಡಿದ್ದರು.

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಎಎಪಿಯ ಕಳಪೆ ಪ್ರದರ್ಶನಕ್ಕೆ ಅದರ ನಾಯಕತ್ವ ಮತ್ತು ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿದ್ದೇ ಕಾರಣ ಎಂದು ಹೇಳಿದರು. “ಚುನಾವಣಾ ಅಭ್ಯರ್ಥಿಗಳು ಬಲವಾದ ವ್ಯಕ್ತಿತ್ವ, ಒಳ್ಳೆಯ ಆಲೋಚನೆಗಳು ಮತ್ತು ಸ್ವಚ್ಛ ಇಮೇಜ್ ಹೊಂದಿರಬೇಕು ಎಂದು ನಾನು ಬಹಳ ಸಮಯದಿಂದ ಹೇಳುತ್ತಿದ್ದೇನೆ. ಆದರೆ ಎಎಪಿಗೆ ಅದು ಇರಲಿಲ್ಲ. ಅವರು ಮದ್ಯ ಮತ್ತು ಹಣದ ಹಗರಣಗಳಲ್ಲಿ ಸಿಲುಕಿಕೊಂಡರು, ಇದು ಅರವಿಂದ್ ಕೇಜ್ರಿವಾಲ್ ಅವರ ಇಮೇಜ್‌ಗೆ ಕಳಂಕ ತಂದಿತು. ಅದಕ್ಕಾಗಿಯೇ ಅವರು ಚುನಾವಣೆಯಲ್ಲಿ ಕಡಿಮೆ ಮತಗಳನ್ನು ಪಡೆಯುತ್ತಿದ್ದಾರೆ” ಎಂದು ಹಜಾರೆ ಹೇಳಿದರು.

 

ಭಾರೀ ಹಣಾಹಣಿಯಿಂದ ಕೂಡಿದ್ದ ರಾಷ್ಟ್ರ ರಾಜಧಾನಿ ನವದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಈ ಬಾರಿಯೂ ಶೂನ್ಯ ಸಂಪಾದಿಸಿದೆ. ಒಂದು ಕಾಲದಲ್ಲಿ ಸತತ ಮೂರು ಬಾರಿ ಅಧಿಕಾರ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್‌‍ ಈ ಬಾರಿಯಾದರೂ ಒಂದಿಷ್ಟು ಕ್ಷೇತ್ರಗಳನ್ನು ಗೆಲ್ಲಬಹುದೆಂಬ ಮಾತುಗಳು ಕೇಳಿಬಂದಿದ್ದವು. ಹೀಗಾಗಿಯೇ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌‍ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಅನೇಕ ದಿಗ್ಗಜರು ಭರ್ಜರಿ ಪ್ರಚಾರ ನಡೆಸಿದ್ದರು. ಆದ್ರೆ ಒಂದೇ ಒಂದು ಕ್ಷೇತ್ರದಲ್ಲಿ ಅವರು ಗೆದ್ದಿಲ್ಲ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ ಹೀನಾಯ ಸೋಲು ಕಂಡಿದ್ದು, ಒಂದೂ ಕ್ಷೇತ್ರವನ್ನೂ ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಈ ಹಿಂದೆ 2015 ಮತ್ತು 2020ರ ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿ ಒಂದು ಸ್ಥಾನವನ್ನು ಗೆಲ್ಲದೇ ಸೋಲು ಕಂಡಿತ್ತು. ಈ ಬಾರಿಯಾದರೂ ಒಂದಿಷ್ಟು ಕ್ಷೇತ್ರಗಳನ್ನು ಗೆಲ್ಲುವುದಕ್ಕಾಗಿಯೇ ದಿಲ್ಲಿ ಮತದಾರರಿಗೆ ಕರ್ನಾಟಕದ ಗ್ಯಾರಂಟಿಗಳನ್ನು ಪರಿಚಯಿಸಿತ್ತು. ವಿದ್ಯಾವಂತ ನಿರುದ್ಯೋಗಿಗಳಿಗೆ ವಾರ್ಷಿಕ ಎಂಟೂವರೆ ಸಾವಿರ, ದೆಹಲಿಯಾದ್ಯಂತ ಇಂದಿರಾ ಕ್ಯಾಂಟೀನ್‌ ಮೂಲಕ 5 ರೂ. ದರದಲ್ಲಿ ರುಚಿಭರಿತ ಊಟ, ಮಹಿಳೆಯರಿಗೆ ಪ್ರತಿ ತಿಂಗಳು ಎರಡೂವರೆ ಸಾವಿರ ಜಾತಿ ಜನಗಣತಿ ಹೀಗೆ ಹಲವಾರು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆದರೆ ದೆಹಲಿ ಮತದಾರರು ಇದಕ್ಕೆ ಸೊಪ್ಪು ಹಾಕದೆ 70 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎಎಪಿ ಅಬ್ಬರದ ನಡುವೆ ಕಾಂಗ್ರೆಸ್‌‍ ಧೂಳಿಪಟವಾಗಿದೆ. ಕಡೇ ಪಕ್ಷ ಐದು ಸ್ಥಾನವನ್ನಾದರೂ ಗೆದ್ದೇ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಸತತವಾಗಿ 15 ವರ್ಷ ದೆಹಲಿಯಲ್ಲಿ ರಾಜ್ಯಭಾರ ಮಾಡಿದ ಕಾಂಗ್ರೆಸ್ ಮತ್ತೊಮ್ಮೆ ಕಳಪೆ ಸಾಧನೆಯತ್ತ ಸಾಗುತ್ತಿದೆ. ಸತತವಾಗಿ, ಮೂರು ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ. 1998 ರಿಂದ 2013ರವರೆಗೆ ಹದಿನೈದು ವರ್ಷ ದೆಹಲಿಯಲ್ಲಿ ಆಳಿದ ಕಾಂಗ್ರೆಸ್, ಮತ್ತೆ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಈ ಬಾರಿಯ ಚುನಾವಣೆಯಲ್ಲಿ 2-3 ಸ್ಥಾನವನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಮತ್ತು, ಮತಗಟ್ಟೆ ಸಮೀಕ್ಷೆಗಳು ಕೂಡಾ ಅದನ್ನೇ ಹೇಳಿತ್ತು.

 ಯಾರೆ ಆಗ್ತಾರೆ ದೆಹಲಿ ಸಿಎಂ?

ದೆಹಲಿ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಗೆದಿದ್ದು, 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಖ್ಯಾತ ಬೋಜ್‌ಪುರಿ ಗಾಯಕ, ನಟ ಹಾಗೂ ವರ್ಣರಂಜಿತ ರಾಜಕಾರಣಿ ಮನೋಜ್‌ ತಿವಾರಿ ಅವರ ಹೆಸರು ದಿಲ್ಲಿಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ರೇಸ್‌ನಲ್ಲಿ ಮುನ್ನೆಲೆಗೆ ಬಂದಿದೆ. ದೆಹಲಿಯಲ್ಲಿ 27 ವರ್ಷದ ಬಳಿಕ ಅಧಿಕಾರದ ಗದ್ದುಗೆ ಹಿಡಿಯುತ್ತಿರುವ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಗೂ ವರ್ಚಸ್ವಿ ಮುಖಂಡರೊಬ್ಬರ ಹುಡುಕಾಟದಲ್ಲಿದೆ. ಪೂರ್ವಾಂಚಲ ಮತದಾರರ ಬೆಂಬಲ ಹೊಂದಿರುವ ಮನೋಜ್‌ ತಿವಾರಿಗೆ ಸಿಎಂ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಶಾನ್ಯ ದೆಹಲಿ ಲೋಕಸಭಾ ಸದಸ್ಯರಾಗಿರುವ ಮನೋಜ್‌ ತಿವಾರಿ ಅವರು ಈ ಬಾರಿಯ ದೆಹಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಆದರೆ, ಬಿಜೆಪಿ ಹೈಕಮಾಂಡ್‌ ಮನೋಜ್‌ ತಿವಾರಿ ಅವರ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಮನೋಜ್‌ ತಿವಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಒಲವು ತೋರಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ದೆಹಲಿಯಲ್ಲಿ ಬಿಜೆಪಿ ಗೆಲುವಿನತ್ತ ಹೆಜ್ಜೆ ಹಾಕುತ್ತಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಮನೋಜ್‌ ತಿವಾರಿ ಅವರ ಹೆಸರು ಟ್ರೆಂಡ್‌ ಆಗುತ್ತಿದೆ.

ಬಿಜೆಪಿ ಗೆಲುವಿಗೆ  ಕಾರಣವೇನು?

ಚುನಾವಣೆ ಹೊಸ್ತಿಲಲ್ಲೇ, ಆಮ್ ಆದ್ಮಿ ಪಕ್ಷದಲ್ಲಿ ಒಂದೇ ದಿನ ಪಕ್ಷದ ಏಳೂ ಹಾಲಿ ಶಾಸಕರು ರಾಜೀನಾಮೆ ನೀಡಿದ್ದು, ಪಕ್ಷಕ್ಕೆ ಭಾರೀ ಹಿನ್ನಡೆ ಆಗಲು ಪ್ರಮುಖ ಕಾರಣವಾದರೆ, ಇದೇ ಬಿಜೆಪಿ ಪಕ್ಷದ ಮತಗಳ ಪ್ರಮಾಣದ ಚೇತರಿಕೆಗೂ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು 2020ರಲ್ಲಿ ಎಎಪಿಯವರು ಉಚಿತ ನೀರು, ಉಚಿತ ವಿದ್ಯುತ್ ಮತ್ತು ಉತ್ತಮ ಶಾಲೆಗಳಿಗೆ ಭರವಸೆ ನೀಡಿ ಗೆದ್ದು ಬಂದರು. ಆದರೆ, ಆಡಳಿತಕ್ಕೆ ಬಂದ ಮೇಲೆ ಕಳೆದ ಐದು ವರ್ಷಗಳಲ್ಲಿ ಇವರ ಆಡಳಿತ ನೋಡಿದ್ದು ಕೊಟ್ಟ ಭರವಸೆ ಈಡೇರಿಸಲು ಅವರು ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆಮ್ ಆದ್ಮಿ ಪಾರ್ಟಿ – ಬಿಜೆಪಿ – ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟರೂ, ಆಮ್ ಆದ್ಮಿ ಮತ್ತು ಬಿಜೆಪಿ ಮಧ್ಯೆ ಬಹುತೇಕ ನೇರ ಸ್ಪರ್ಧೆ ಏರ್ಪಟ್ಟಿತ್ತು. ಇದು ಸಹ ಮತಗಳ ಕ್ರೋಢೀಕರಣ ಕಾರಣವಾಯ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಆಪ್ – ಕಾಂಗ್ರೆಸ್ ಪಾರ್ಟಿಗಳು, ಚುನಾವಣಾ ಪ್ರಚಾರದಲ್ಲಿ ಪರಸ್ಪರ ಸ್ಪರ್ಧೆಗಿಳಿದಿದ್ದು, ಕೇಜ್ರಿವಾಲ್​ ವಿರುದ್ಧ ರಾಹುಲ್​ ನೇರ ವಾಗ್ದಾಳಿ ಮಾಡಿದ್ದು ಬಿಜೆಪಿ ನೆರವಾಗಿದೆ. ಯಮುನಾ ನದಿ ಕಲುಷಿತ ನೀರಿನ ವಿಚಾರವೂ ಈ ಚುನಾವಣೆಯಲ್ಲಿ ಪ್ರಭಾವ ಬೀರಿದೆ. ದಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್​ದೇವ್​ ಎಲ್ಲ ಸ್ಥಳೀಯ ನಾಯಕರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಿದ್ದು, ಪಕ್ಷಕ್ಕೆ ಭಾರಿ ಲಾಭ ತಂದುಕೊಟ್ಟಿದೆ. ಅಷ್ಟೇ ಅಲ್ಲ ಈ ಬಾರಿ ಬಿಜೆಪಿ ವ್ಯವಸ್ಥಿತವಾಗಿ ತಳಮಟ್ಟದ ಪ್ರಚಾರ ನಡೆಸಿದ್ದು ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅರವಿಂದ್​ ಕೇಜ್ರಿವಾಲ್ ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿ ಹೇಳಿದ್ದು ಕೂಡಾ ಕೆಲಸ ಮಾಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Kishor KV

Leave a Reply

Your email address will not be published. Required fields are marked *