ಸಂಜುಗೆ ಟೀಂ ಇಂಡಿಯಾ ಬಸ್ ಮಿಸ್ – ಕರಿಯರ್ ಮುಗಿಸುತ್ತಾ ಸತತ ಸೋಲು?
ಸ್ಯಾಮ್ಸನ್ ಗೆ ಸೊಕ್ಕು ಜಾಸ್ತಿ ಎಂದಿದ್ಯಾರು?
![ಸಂಜುಗೆ ಟೀಂ ಇಂಡಿಯಾ ಬಸ್ ಮಿಸ್ – ಕರಿಯರ್ ಮುಗಿಸುತ್ತಾ ಸತತ ಸೋಲು?ಸ್ಯಾಮ್ಸನ್ ಗೆ ಸೊಕ್ಕು ಜಾಸ್ತಿ ಎಂದಿದ್ಯಾರು?](https://suddiyaana.com/wp-content/uploads/2025/02/recent_photo_1738240826.jpg)
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡೆರಡು ಶತಕ ಸಿಡಿಸಿ ಸಂಚಲನ ಮೂಡಿಸಿದ್ದ ಸಂಜು ಸ್ಯಾಮ್ಸನ್ಗೆ, ಇನ್ನು ಮುಂದೆ ಭಾರತ ಟಿ20 ತಂಡದಲ್ಲಿ ಖಾಯಂ ಓಪನರ್ ಅಂತಾನೇ ಹೇಳಲಾಗ್ತಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಬರುವ ಹೊತ್ತಿಗೆ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಇಂಗ್ಲೆಂಡ್ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲೂ ಸಂಜು ಫೇಲ್ಯೂರ್ ಅನುಭವಿಸಿದ್ದಾರೆ. ಅದರಲ್ಲೂ ಎಲ್ಲಾ ಪಂದ್ಯಗಳಲ್ಲೂ ಸಂಜು ಒಂದೇ ರೀತಿಯಾಗಿ ವಿಕೆಟ್ ಒಪ್ಪಿಸಿರುವುದು ಅವರ ಕ್ರಿಕೆಟ್ ಕರಿಯರ್ಗೆ ಅಪಾಯವಾಗೋ ಹಿಂಟ್ ಕೊಡ್ತಿದೆ. ಕೆಲ ಮಾಜಿ ಕ್ರಿಕೆಟಿಗರೂ ಇದನ್ನೇ ಹೇಳ್ತಿದ್ದಾರೆ.
ಇದನ್ನೂ ಓದಿ : ವೈಟ್ ಬಾಲ್ ನಲ್ಲೂ HITಮ್ಯಾನ್ ಠುಸ್ – ಹೀರೋ & ವಿಲನ್ ಹರ್ಷಿತ್ ರಾಣಾ
ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಆರ್ ಅಶ್ವಿನ್ ಸಂಜು ಸ್ಯಾಮ್ಸನ್ ವಿರುದ್ಧ ಸಿಟ್ಟಾಗಿದ್ದಾರೆ. ಇದೇ ಥರ ಪರ್ಫಾಮೆನ್ಸ್ ಕೊಡ್ತಾ ಇದ್ರೆ ಟೀಂ ಇಂಡಿಯಾ ಬಸ್ ಮಿಸ್ ಮಾಡಿಕೊಳ್ತೀರಿ ಅಂತಾ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯವಾಗಿದ್ದು, ಸರಣಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಪ್ರಶಸ್ತಿ ತನ್ನದಾಗಿಸಿಕೊಳ್ತು. ಆದ್ರೆ ಹ್ಯಾಟ್ರಿಕ್ ಶತಕ ಸಿಡಿಸಿದ್ದ ತಂಡದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಯನ್ರಿಂದ ಈ ಸರಣಿಯಲ್ಲಿ ಹೇಳಿಕೊಳ್ಳುವಂತಹ ಒಂದೂ ಪ್ರದರ್ಶನ ಮೂಡಿ ಬಂದಿಲ್ಲ. ಇದೇ ಕಾರಣಕ್ಕೆ ಅಶ್ವಿನ್ ಸ್ಟಾರ್ ಬ್ಯಾಟರ್ ವಿರುದ್ಧ ಕಿಡಿಕಾರಿದ್ದು ಮಾತ್ರವಲ್ಲದೇ ಹೀಗೇ ಮುಂದುವರೆದರೆ ತಂಡದ ಆಯ್ಕೆಯಿಂದ ದೂರ ಉಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ 2024ರ ಅಕ್ಟೋಬರ್-ನವೆಂಬರ್ ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟಿ20 ಸರಣಿಗಳಲ್ಲಿ ಸತತ ಮೂರು ಶತಕಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಅಲ್ಲದೆ ತಾವು ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಆಗುವ ಮುನ್ಸೂಚನೆ ಕೂಡ ನೀಡಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಐದು ಇನ್ನಿಂಗ್ಸ್ಗಳಲ್ಲಿ ಕೇವಲ 51 ರನ್ಗಳನ್ನು ಗಳಿಸಿ ನಿರಾಶೆ ಮೂಡಿಸಿದ್ದಾರೆ. ಇಡೀ ಸರಣಿಯಲ್ಲಿ ಈಡನ್ ಗಾರ್ಡನ್ಸ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅವರು ಗಳಿಸಿದ 26 ರನ್ ಗಳೇ ಹೈಯೆಸ್ಟ್ ಸ್ಕೋರ್. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅನಗತ್ಯ ಶಾಟ್ ಗಳಿಂದಾಗಿ ಔಟಾಗಿದ್ದು, ಇದು ಆರ್ ಅಶ್ವಿನ್ ಅವರ ಟೀಕೆಗೆ ಕಾರಣವಾಗಿದೆ.
ಇನ್ನು ಸಂಜು ಕಳಪೆ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾ ವಿಶ್ವಕಪ್ ಹೀರೋ ಕೃಷ್ಣಮಾಚಾರಿ ಶ್ರೀಕಾಂತ್ ಟೀಕಿಸಿದ್ದಾರೆ. ಸಂಜು ಸ್ಯಾಮ್ಸನ್ ಐದು ಬಾರಿ ಒಂದೇ ರೀತಿ ಔಟ್ ಆದ್ರು. ಅವ್ರು ಈಗೋ ತೋರಿಸ್ತಿದ್ದಾರೆ ಅಂತ ನನಗೆ ಅನ್ಸುತ್ತೆ. ಶಾರ್ಟ್ ಬಾಲ್ಗೆ ಎಷ್ಟು ಸಲ ಔಟ್ ಆದ್ರೂ ಅದೇ ಶಾಟ್ ಆಡ್ತಾರೆ. ಭಾರತ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ದಾರಾ ಅಥವಾ ಈಗೋ ತೋರಿಸ್ತಿದ್ದಾರಾ ಗೊತ್ತಿಲ್ಲ. ಸಂಜು ಸ್ಯಾಮ್ಸನ್ ಕಳಪೆ ಬ್ಯಾಟಿಂಗ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸಂಜು ಸ್ಯಾಮ್ಸನ್ ಯಾಕೆ ಆಯ್ಕೆ ಆಗಿಲ್ಲ ಅಂತ ನಾವು ಚರ್ಚೆ ಮಾಡಿದ್ವಿ. ಅವರು ಹೀಗೇ ಆಡ್ತಿದ್ರೆ ಧನ್ಯವಾದ ಹೇಳಿ ತಂಡದಿಂದ ಕಳಿಸಬಹುದು. ಯಶಸ್ವಿ ಜೈಸ್ವಾಲ್ ಟಿ20 ಪಂದ್ಯಗಳಲ್ಲಿ ಆಡ್ತಾರೆ ಎಂದಿದ್ದಾರೆ.