ರಿಂಕು ಮನೆಗೆ ಬರಲ್ವಂತೆ ಅಪ್ಪ- ಅಮ್ಮ! – ಸಂಸದೆಯ ಮದ್ವೆಯಾಗೋದೇ ಕಾರಣ?

ಟೀಂ ಇಂಡಿಯಾದ ಡ್ಯಾಷಿಂಗ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಸಂಸದೆ ಪ್ರಿಯಾ ಸರೋಜ್ ಜೊತೆ ಮದ್ವೆ ಆಗ್ತಾರೆ ಎಂಬ ಸುದ್ದಿ ಈಗಾಗ್ಲೇ ಜೋರು ಸದ್ದು ಮಾಡ್ತಿದೆ.. ಈಗಾಗ್ಲೇ ಮದುವೆ ಮಾತುಕತೆ ನಡೆದಿದ್ದು, ನಿಶ್ಚಿತಾರ್ಥಕ್ಕೂ ಪ್ಲ್ಯಾನ್ ಮಾಡ್ಕೊಂಡಿದ್ದಾರೆ.. ಇದರ ನಡುವೆಯೇ ರಿಂಕು ಸಿಂಗ್ ಕಟ್ಟಿಸಿರುವ ಹೊಸ ಮನೆಗೆ ಬರೋದಿಕ್ಕೆ ಅವರ ಅಪ್ಪ ಅಮ್ಮ ನಿರಾಕರಿಸಿದ್ದಾರಂತೆ.. ಹಾಗಿದ್ರೆ ರಿಂಕು ಅಪ್ಪ ಅಮ್ಮ ಮಗನ ಕಟ್ಟಿಸಿರು ಐಷಾರಾಮಿ ಬಂಗಲೆಗೆ ಬರೋದಿಕ್ಕೆ ಒಪ್ಕೊಳ್ತಿಲ್ಲ ಏಕೆ? ಮಗನ ಮನೆ ಬದಲು ತಾವಿದ್ದ ಹಳೆ ಮನೆಯೇ ಸಾಕು ಅಂತ ಹೇಳ್ತಿರೋದೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವೈಟ್ ಬಾಲ್ ನಲ್ಲೂ HITಮ್ಯಾನ್ ಠುಸ್ – ಹೀರೋ & ವಿಲನ್ ಹರ್ಷಿತ್ ರಾಣಾ
ರಿಂಕು ಸಿಂಗ್.. ಕಳೆದ ಐಪಿಎಲ್ ನಲ್ಲಿ ರಿಂಕು ಅದ್ಬುತ ಪ್ರದರ್ಶನ ನೀಡಿ, ಇಡೀ ವಿಶ್ವ ಕ್ರಿಕೆಟ್ ತನ್ನತ್ತ ನೋಡುವಂತೆ ಮಾಡಿದ್ದ ಕ್ರಿಕೆಟಿಗ.. ಕೆಕೆಆರ್ ಟೀಂನಲ್ಲಿ ರಿಂಕು ಸಿಂಗ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ರು.. ಇದ್ರಿಂದಾಗಿ ರಿಂಕು ಟಿ20ಯಲ್ಲಿ ಟೀಂ ಇಂಡಿಯಾದಲ್ಲೂ ಚಾನ್ಸ್ ಪಡೆದಿದ್ದಾರೆ.. ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡುತ್ತಲೇ ಬಹುಬೇಡಿಕೆಯ ಆಟಗಾರ ಆಗಿರುವ ರಿಂಕು ಈಗ 3.5 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದ್ದರು.. ತಮ್ಮ ತವರೂರು ಉತ್ತರಪ್ರದೇಶದ ಅಲಿಗಢ್‌ನಲ್ಲೇ ರಿಂಕು ಈ ಐಷಾರಾಮಿ ಮನೆ ಖರೀದಿ ಮಾಡಿದ್ದಾರೆ.. ಅದ್ರ ಬೆನ್ನಲ್ಲೇ ತಂದೆಗೆ ಐಶರಾಮಿ ಬೈಕ್ ಕೊಡಿಸಿ ಸುದ್ದಿಯಾಗಿದ್ರು.. ಈಗಾಗ್ಲೇ ಸಾಮಾಜಿಕ ಜಾಲತಾಣಗಳಲ್ಲಿ ರಿಂಕು ಮನೆ, ತಂದೆಗೆ ಕೊಡಿಸಿದ್ದ ಬೈಕ್ ನ ಫೋಟೋಗಳು ವೈರಲ್ ಆಗಿವೆ.. ಇದರ ಬೆನ್ನಲ್ಲೇ ರಿಂಕು ಸಿಂಗ್, ಉತ್ತರಪ್ರದೇಶದ ಸಂಸದೆ ಪ್ರಿಯಾ ಸರೋಜ್ ಅವರನ್ನು ವಿವಾಹವಾಗುತ್ತಾರೆ ಎಂದು ಸುದ್ದಿಯಾಗುತ್ತಿದೆ.. 26 ವರ್ಷದ ಯುವ ಸಂಸದೆಯ ಜೊತೆಗಿನ್ನೂ ಮದುವೆ ಮಾತುಕತೆಯಷ್ಟೇ ನಡೆಯುತ್ತಿದೆ ಎಂದು ಅವರ ಕುಟುಂಬ ವರ್ಗ ಹೇಳ್ತಿದೆ.. ಆದ್ರೆ ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ರಿಂಕು ಖರೀದಿಸಿದ ಹೊಸ ಮನೆಗೆ ನಾವ್ ಬರೋದಿಲ್ಲ ಎಂದು ರಿಂಕು ಸಿಂಗ್ ಅವರ ಅಪ್ಪ ಅಮ್ಮ ಹೇಳ್ತಿದ್ದಾರಂತೆ..
ಹೌದು, ಇಷ್ಟಕ್ಕೂ ರಿಂಕು ಸಿಂಗ್ ಅಪ್ಪ ಖಾನ್‌ಚಂದ್ರ ಸಿಂಗ್ ಎಲ್‌ಪಿಜಿ ಸಿಲಿಂಡರ್ ಡೆಲಿವರಿ ಕೆಲಸ ಮಾಡ್ತಿದ್ದವರು.. ಐವರು ಮಕ್ಕಳನ್ನು ಹೊಂದಿದ ಬಡ ಕುಟುಂಬ ಅವರದ್ದು.. ಅಪ್ಪ ಗ್ಯಾಸ್ ಸಿಲಿಂಡರ್ ಮಾಡುತ್ತಿದ್ದ ಐಷಾರಾಮಿ ಬಂಗಲೆಗಳ ಸಾಲಿನಲ್ಲೇ ಮಗ ರಿಂಕು ಮನೆ ಖರೀದಿ ಮಾಡಿದ್ದೂ ಸುದ್ದಿಯಾಗಿತ್ತು.. ಆದ್ರೀಗ ರಿಂಕು ಮನೆಗೆ ಬರಲ್ಲ ಅಂತ ಅವರ ಅಮ್ಮ ಅಮ್ಮ ಹೇಳ್ತಿರೋದಕ್ಕೆ ಒಂದು ಭಾವನಾತ್ಮಕ ಕಾರಣವಿದೆ.. ಇದು ಮಗನ ವಿರುದ್ಧದ ಬೇಸರವಾಗಲಿ ಅಥವಾ ಭಾವೀ ಸೊಸೆಯ ಬಗ್ಗೆ ಭಯವಾಗಲೀ ಅಲ್ಲ.. ಬದಲಿಗೆ ತಾವು ಹುಟ್ಟಿ ಬೆಳೆದ ಮನೆ ಬಿಟ್ಟು ಬರಲ್ಲ ಎಂಬ ಬಡಕುಟುಂಬದ ಭಾವನಾತ್ಮಕ ಬಂಧನವೇ ಇದಕ್ಕೆ ಕಾರಣವಂತೆ..
ರಿಂಕು ಅಪ್ಪ ಅಮ್ಮ ಹೊಸ ಮನೆಗೆ ಬರದೇ ಇರೋದಿಕ್ಕೆ ಕಾರಣ ಏನಂದರೆ, ಮಗ ಇಷ್ಟೆಲ್ಲಾ ದೊಡ್ಡ ಸಾಧನೆ ಮಾಡಿದ್ದು ತಾವಿದ್ದ ಮನೆಯಲ್ಲೇ.. ಈ ಮನೆಯ ಅದೃಷ್ಟದಿಂದಲೇ ಮಗನಿಗೆ ಕ್ರಿಕೆಟ್‌ನಲ್ಲಿ ಒಳ್ಳೆಯ ಅವಕಾಶ ಬಂದಿದೆ ಎನ್ನುವುದು ರಿಂಕು ಅಪ್ಪ ಅಮ್ಮನ ಬಲವಾದ ನಂಬಿಕೆ.. ಇದೊಂದೇ ಕಾರಣಕ್ಕೆ ನಾವೇನಿದ್ದರೂ ಹಳೇ ಮನೆಯಲ್ಲೇ ಇರುತ್ತೇವೆ. ನೀನು ಖರೀದಿಸಿರುವ ಹೊಸ ಮನೆಯಲ್ಲಿ ಸಂಸಾರ ಕಟ್ಟಿಕೊಂಡು ಸುಖವಾಗಿರುವ ಎಂದು ರಿಂಕುವಿನ ಅಪ್ಪ ಅಮ್ಮ ಹಾರೈಸುತ್ತಿದ್ದಾರಂತೆ.. ಆದ್ರೆ ಅಪ್ಪ-ಅಮ್ಮನ ಮನವೊಲಿಸಿ ತನ್ನ ಮನೆಗೆ ರಿಂಕು ಕರೆದೊಯ್ಯುತ್ತಾರಾ ಎನ್ನುವುದನ್ನು ಮುಂದೆ ನೋಡಬೇಕಿದೆ.