ಅಪ್ಪ ಕ್ಯಾಬ್‌ ಡ್ರೈವರ್‌, ಮಗ ಹೀರೋ! – ಶ್ರಾವಣಿ ಸುಬ್ರಮಣ್ಯ ಸುಬ್ಬುಗೆ ಆಡಿಷನ್‌ ನಲ್ಲೇ ಅವಮಾನ, ಬಾಡಿಶೇಮಿಂಗ್!‌    

ಅಪ್ಪ ಕ್ಯಾಬ್‌ ಡ್ರೈವರ್‌, ಮಗ ಹೀರೋ! – ಶ್ರಾವಣಿ ಸುಬ್ರಮಣ್ಯ ಸುಬ್ಬುಗೆ ಆಡಿಷನ್‌ ನಲ್ಲೇ ಅವಮಾನ, ಬಾಡಿಶೇಮಿಂಗ್!‌    

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಟಿ ಆರ್‌ ಪಿ ರೇಸ್‌ ನಲ್ಲೂ ಮುಂದಿದೆ. ಇದೀಗ ಶ್ರಾವಣಿ ಸುಬ್ಬು ಜೊತೆ ಮದುವೆ ಆಗಿದೆ ಅಂತಾ ಹೇಳಿ ಆತನ ಮನೆಗೆ ಬಂದಿದ್ದಾಳೆ.. ಆದ್ರೆ ಸುಬ್ಬು ಮಾತ್ರ ಆಕೆಯನ್ನ ಹೆಂಡತಿಯಾಗಿ ಸ್ವೀಕರಿಸೋದಿಕ್ಕೆ ರೆಡಿಯಿಲ್ಲ.. ಇದೀಗ ಸುಬ್ಬು ಅಲಿಯಾಸ್‌ ಸುಬ್ರಮಣ್ಯ ಪಾತ್ರ ವೀಕ್ಷಕರಿಗೆ ಸಖತ್‌ ಇಷ್ಟ ಆಗಿದೆ.. ಆ ಪಾತ್ರ ಮಾಡ್ತಿರುವ ನಟನ ಬಗ್ಗೆ ತಿಳಿದುಕೊಳ್ಳು ಉತ್ಸುಕರಾಗಿದ್ದಾರೆ. ಅಂದ್ಹಾಗೆ ಸುಬ್ಬು ಪಾತ್ರ ಮಾಡ್ತಿರೋ ಹ್ಯಾಂಡ್ಸಮ್‌ ನಟ ಅಮೋಘ್‌ ಆದಿತ್ಯಾ.. ಸೀರಿಯಲ್‌ ಗೂ ಬರೋದಿಕ್ಕೆ ಮುನ್ನ ಸಾಕಷ್ಟು ಅವಮಾನದ ಜೊತೆಗೆ ಏಳುಬೀಳುಗಳನ್ನ ಕಂಡಿದ್ದಾರೆ.

ಇದನ್ನೂ ಓದಿ: ಬಿಳಿ ಹೊದಿಕೆ ಮೇಲೆ ರಕ್ತಜಲಪಾತ – ಪ್ರಕೃತಿಯ ಈ ವಿಸ್ಮಯಕ್ಕೆ ಕಾರಣವೇನು?

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಮದನ್‌ ನ ಮದುವೆಯಾಗಬೇಕಿದ್ದ ಶ್ರಾವಣಿ ಈಗ ತಾನು ಸುಬ್ಬುನ ಮದುವೆ ಆಗಿದ್ದೀನಿ ಅಂತಾ ಸುಳ್ಳು ಹೇಳಿದ್ಲು.. ಇದ್ರಿಂದಾಗಿ ತವರು ಮನೆಯ ಬಾಗಿಲು ಶ್ರಾವಣಿಗೆ ಬಂದ್‌ ಆಗಿದೆ..ಇದೀಗ ಸುಬ್ಬು ಮನೆಯಲ್ಲಿ ಇದ್ದಾಳೆ.. ಆದ್ರೆ ಸುಬ್ಬು ಶ್ರಾವಣಿಯನ್ನ ಹೆಂಡತಿಯಾಗಿ ಒಪ್ಪಿಕೊಳ್ಳಲು ತಯಾರಿಲ್ಲ.. ಸದಾ ಸೈಲೆಂಟ್‌ ಆಗಿರ್ತಿದ್ದ.. ಮೇಡಂ ಮೇಡಂ ಅಂತಾ ಹೇಳ್ತಾ ಶ್ರಾವಣಿಗೆ ಶ್ರೀರಕ್ಷೆಯಾಗಿದ್ದ ಸುಬ್ಬು ಈಗ ಫುಲ್‌ ವೈಲೆಂಟ್‌ ಆಗಿದ್ದಾನೆ.. ಆಕೆಯನ್ನ ಕಂಡು ಉರಿದು ಬೀಳ್ತಿದ್ದಾನೆ.. ಆದ್ರೆ ಶ್ರಾವಣಿ ಹೇಗೆ ಸುಬ್ಬುವನ್ನ ಒಲಿಸಿಕೊಳ್ತಾಳೆ. ಅವರಿಬ್ರು ಹೇಗೆ ಒಂದಾಗ್ತಾರೆ ಅನ್ನೋದೇ ಸಿರಿಯಲ್‌ ಸ್ಟೋರಿ.. ಇದೀಗ ಸುಬ್ಬು ಪಾತ್ರ ಮಾಡ್ತಿರುವ ಅಮೋಘ್‌ ಆದಿತ್ಯ ಆಕ್ಟಿಂಗ್ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ..

ಅಂದ್ಹಾಗೆ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಸುಬ್ಬುವಾಗಿ ಮೋಡಿ ಮಾಡುತ್ತಿರುವ ಅಮೋಘ್ ಆದಿತ್ಯ 1995ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ್ರು.. ಆದರೆ, ಬೆಳೆದಿದೆಲ್ಲಾ ಬೆಂಗಳೂರಿನಲ್ಲಿಯೇ. ಟಿಪಿಕಲ್‌ ಮಿಡಲ್‌ ಕ್ಲಾಸ್‌ನಿಂದ ಬಂದ ಈ ಹುಡುಗ ಸಾಕಷ್ಟು ಕಷ್ಟ ಕಂಡಿದ್ದಾರೆ.. ಅಮೋಘ್ ತಂದೆ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಾರಂತೆ. ತಂದೆಯ ದುಡಿಮೆಯಿಂದಲೇ ಅವರ ಮನೆ ನಡೆಯುತ್ತಿದೆಯಂತೆ. ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನಲ್ಲಿ ಓದಿರುವ ಅಮೋಘ್‌, ಬಿಕಾಂ ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿದ್ದಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಇವರು, ಸಿನಿಮಾ ಡೈರೆಕ್ಷನ್ ಟೀಮ್ನಲ್ಲಿ ಅಸೋಸಿಯೇಟ್ ಕೆಲಸ ಮಾಡಿದ್ದರು. ನಂತರ ದೃಶ್ಯಂ, ಸರ್ವಂ ತಂಡದ ಜೊತೆಗೆ ನಟನೆ ಕಲಿತು, ರಾಮಾರ್ಜುನ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ.

ಅಮೋಘ್ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ ಶಾಂತಂ ಪಾಪಂ ಧಾರಾವಾಹಿಯಿಂದ. ಆರಂಭದಲ್ಲಿ ನಟನೆಗೆ ಮನೆಯವರ ಬೆಂಬಲವಿರಲಿಲ್ಲ. ಈ ನಟನೆ ಅದು ಇದು ನಮಗೆ ಆಗಲ್ಲ. ದುಡ್ಡಿದ್ದವರಷ್ಟೇ ಇದೆಲ್ಲವನ್ನು ಮಾಡಬಹುದು. ನಮಗೇಕೆ ಅಂತ ಪ್ರಶ್ನಿಸುತ್ತಿದ್ದರು. ಆದರೆ, ಅಮೋಘ್‌ ತಂಗಿ ಮತ್ತು ಸ್ನೇಹಿತರು ಅವರಿಗೆ ಸಪೋರ್ಟಿವ್‌ ಆಗಿದ್ರು.. ಆಡಿಷನ್‌ ಗೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಬಟ್ಟೆ ಕೊಡಿಸಿದೆಲ್ಲಾ ನನ್ನ ಸ್ನೇಹಿತರೇ ಅಂತ ಅಮೋಘ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಶಾಂತಂ ಪಾಪಂ ಬಳಿಕ ಹೂಮಳೆ ಧಾರಾವಾಹಿಯಲ್ಲಿ ಅಭಿನಯಿಸಿದ ಅಮೋಘ್, ನಂತರ ದೊರೆಸಾನಿ, ಸತ್ಯ, ಗೀತಾದಲ್ಲಿ ಸೈಕೋಪಾತ್ ವಿಲನ್ ಆಗಿ, ಅಂತರಪಟದಲ್ಲೂ ವಿಲನ್, ಲಕ್ಷ್ಮೀ ಟಿಫನ್ ರೂಮ್ನಲ್ಲಿ ಸೀರಿಯಲ್ಗಳಲ್ಲಿ ಫೋಷಕ ಪಾತ್ರಗಳಲ್ಲಿ ನಟಿಸಿದರು. ಇವೆಲ್ಲಾ ಸೀರಿಯಲ್ಗಳಲ್ಲಿ ನಟಿಸಿದ್ದರಿಂದ ಶ್ರಾವಣಿ ಸುಬ್ರಮಣ್ಯದಲ್ಲಿ ಹೀರೋ ಪಾತ್ರ ಸಿಕ್ಕಿತ್ತಂತೆ.

ಅಮೋಘ್ ಆರಂಭದಲ್ಲಿ ಸೀರಿಯಲ್ವೊಂದಕ್ಕೆ ಆಡಿಷನ್ ಕೊಟ್ಟು ಎಲ್ಲವೂ ಓಕೆ ಆಗಿತ್ತಂತೆ. ಆದರೆ, ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಸ್ ಇಲ್ಲವೆಂಬ ಕಾರಣಕ್ಕೆ ರಿಜೆಕ್ಟ್ ಆಗಿದ್ದರಂತೆ. ಇನ್ನೊಂದು ಧಾರಾವಾಹಿ ತಂಡ ಶಾರ್ಟ್ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡಿತ್ತಂತೆ. ಹಲವಾರು ಕಡೆ ಬಾಡಿ ಶೆಮಿಂಗ್‌ ಕೂಡ ಮಾಡಿದ್ರು.. ಆದ್ರೆ ಏನೂ ಕೇಳದೇ, ನಾನು ಹೇಗಿದ್ದೇನೋ ಹಾಗೆ ಒಪ್ಪಿಕೊಂಡಿದ್ದು ಶ್ರಾವಣಿ ಸುಬ್ರಮಣ್ಯ ತಂಡ.. ಈ ಸೀರಿಯಲ್‌ ಗೆ ಬಂದ ಬಳಿಕ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ.. ಹಣಕಾಸಿನ ವಿಚಾರದಲ್ಲೂ ಸುಧಾರಣೆ ಕಂಡಿದೆ ಅಂತ ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಸಾಕಷ್ಟು ಅವಮಾನ, ಕಷ್ಟಗಳನ್ನ ನೋಡಿಕೊಂಡು ಬೆಳದ ಅಮೋಘ್‌ ಆದಿತ್ಯ ಈಗ ಸೀರಿಯಲ್‌ ಹೀರೋ ಆಗಿ ಮಿಂಚುತ್ತಿದ್ದಾರೆ.. ಸುಬ್ಬು ಪಾತ್ರದ ಮೂಲಕ ಮನರಂಜನೆ ನೀಡುತ್ತಿದ್ದು.. ಕನ್ನಡಿಗರ ಮನೆಮಗ ಆಗಿದ್ದಾರೆ. ಇದೀಗ ಅಮೋಘ್‌ ಆದಿತ್ಯಗೆ ಬೆಟ್ಟದಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ, ನಟನೆಯಲ್ಲಿ ಇನ್ನಷ್ಟು ಖ್ಯಾತಿ ಗಳಿಸಲಿ ಅನ್ನೋದೇ ಎಲ್ಲರ ಆಶಯ.

Shwetha M

Leave a Reply

Your email address will not be published. Required fields are marked *