ಬಿಳಿ ಹೊದಿಕೆ ಮೇಲೆ ರಕ್ತಜಲಪಾತ – ಪ್ರಕೃತಿಯ ಈ ವಿಸ್ಮಯಕ್ಕೆ ಕಾರಣವೇನು?
ಹಿಮದ ಮೇಲೆ ಕೆಂಪು ನೀರು ಯಾಕೆ?

ಬಿಳಿ ಹೊದಿಕೆ ಮೇಲೆ ರಕ್ತಜಲಪಾತ – ಪ್ರಕೃತಿಯ ಈ ವಿಸ್ಮಯಕ್ಕೆ ಕಾರಣವೇನು?ಹಿಮದ ಮೇಲೆ ಕೆಂಪು ನೀರು ಯಾಕೆ?

ಭೂಮಿ ಮೇಲೆ ನಮಗೆ ಗೊತ್ತಿಲ್ಲದ ಸಾಕಷ್ಟು ವಿಚಾರಗಳಿವೆ.. ಹಾಗೇ ಅಂಟಾರ್ಟಿಕವೂ ಅಪರೂಪದ ವಿದ್ಯಾಮಾನಕ್ಕೆ ಆಗಾಗ ಸಾಕ್ಷಿಯಾಗುತ್ತಲೇ ಇರುತ್ತದೆ. ಭೂಮಿಯ ಮೇಲಿನ ಅತ್ಯಂತ ಅಸಾಮಾನ್ಯ ಸ್ಥಳಗಳಲ್ಲಿ ಒಂದಾದ ಅಂಟಾರ್ಕ್ಟಿಕಾದ ಆಳದಲ್ಲಿ, ಹಲವು ವಿಲಕ್ಷಣ ನೈಸರ್ಗಿಕ ಅದ್ಭುತವಿದೆ.. ಅಲ್ಲಿನ ಕೆಲವೊಂದು ವಿಸ್ಮಯಗಳು ವಿಜ್ಞಾನಿಗಳ ಸಂಶೋಧನೆಗೂ ನಿಲುಕದ ವಿಚಾರವಾಗಿದೆ. ಅಂತಹ ಒಂದು ವಿಸ್ಮಯದ ಬಗ್ಗೆ ತಿಳಿಯೋಣ ಬನ್ನಿ

ನೀವು ನಿಲಿ, ಬಿಳಿ ಜಲಪಾತಗಳನ್ನ ನೋಡಿ ಇರ್ತೀರಾಯ.. ಯಾವತ್ತು ಆದ್ರೂ  ಕೆಂಪು ಜಲಪಾತವನ್ನ ನೋಡಿದ್ದೀರಾ..ಇದೇ ನೋಡಿ  ಕೆಂಪು ಜಲಪಾತ.. vis flow.. ಈ ರಕ್ತಕೆಂಪು ಬಣ್ಣದ ಫಾಲ್ಸ್  ಟೇಲರ್ ಗ್ಲೇಸಿಯರ್‌ನಿಂದ ಲೇಕ್ ಬೊನ್ನಿಗೆ ಹರಿಯುತ್ತದೆ. ಇದು ಹಿಮಾವೃತವಾದ ಪ್ರದೇಶದ ಇದು ಬಳಹ ಸುಂದರವಾದಿ ಕಾಣುತ್ತೆ.. ಇದರ ವಿಶಿಷ್ಟವೆನಿಸುವ ನೋಟ ಹಾಗೂ ಹಾಗೂ ಅದರ ಹಿಂದಿನ ನಿಗೂಢತೆ ಅಂಟಾರ್ಕ್ಟಿಕಾದ ಅಂದವನ್ನ ಹೆಚ್ಚಿಸಿದೆ. ಒಂದು ಶತಮಾನಕ್ಕೂ ಮೊದಲೇ ಇದನ್ನು ಕಂಡುಹಿಡಿಯಲಾಗಿದ್ದರೂ ಇಂದಿಗೂ ಇದು ತನ್ನ ಕುತೂಹಲವನ್ನು ಹಿಡಿದಿಟ್ಟುಕೊಂಡಿದೆ.

ರಕ್ತ ಜಲಪಾತದ ಕಂಡಿದ್ದು ಯಾವಾಗ?

1911ರಲ್ಲಿ, ಆಸ್ಟ್ರೇಲಿಯಾದ ಭೂವಿಜ್ಞಾನಿ ಥಾಮಸ್ ಗ್ರಿಫಿತ್ ಟೇಲರ್ ಅವರು ಟೇಲರ್ ಕಣಿವೆಯಲ್ಲಿ ಅನ್ವೇಷಿಸುತ್ತಾ ಹೊರಟಾಗ ಈ ವಿಚಿತ್ರವೆನಿಸುವ ದೃಶ್ಯವನ್ನು ಪತ್ತೆ ಮಾಡಿದ್ರು. ಇದು ಅವರು ನೋಡಿದ ಬೇರೆ ಯಾವುದೇ ಜಲಪಾತದಂತೆ ಇರಲಿಲ್ಲ,  ವಿಶಾಲವಾದ, ಹಿಮಾವೃತವಾದ ಭೂಮಿಯ ನಡುವೆ, ಅವರು ರಕ್ತದಂತೆ ದಟ್ಟ ಕೆಂಪು ಬಣ್ಣದಲ್ಲಿ ನೀರಿನ ಹರಿವು ನೋಡಿದ್ರು. ಇದು ಅವರಿಗೆ ಜೀವನದಲ್ಲಿ ಎಂದೂ ಮರೆಯಲಾಗದ ದೃಶ್ಯ ಎನಿಸಿತ್ತು. ಜೊತೆಗೆ ಈ ಅನ್ವೇಷಣೆಯೂ ಅದರ ಅಸಾಮಾನ್ಯ ಬಣ್ಣದ ರಹಸ್ಯ ಮತ್ತು ಅದು ಎಲ್ಲಿಂದ ಬಂತು ಎಂಬುದನ್ನು  ಕಂಡು ಹಿಡಿಯೋಕೆ ಶುರುಮಾಡಿದ್ರು..

ನೀರಿನ ಬಣ್ಣ ಕೆಂಪು ಯಾಕೆ?

ಈ ಜಲಪಾತದಲ್ಲೇಕೆ ರಕ್ತದಂತಹ ಕೆಂಪು ನೀರು ಹರಿಯುತ್ತಿದೆ ಎಂಬುದನ್ನು ವಿಜ್ಞಾನಿಗಳಿಗೆ ವರ್ಷಗಳವರೆಗೆ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಮೊದಲಿಗೆ, ಕೆಂಪು ಪಾಚಿ ನೀರಿನ ಬಣ್ಣಕ್ಕೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದ್ರೆ ಮುಂದುವರೆದ ಸಂಶೋಧನೆ ಇದಕ್ಕೆ ಬೇರೆಯದೇ ಕಾರಣವನ್ನು ನೀಡಿತು. ಇತ್ತೀಚಿನ ವರದಿಯ ಪ್ರಕಾರ  ಕೆಂಪು ಬಣ್ಣವು ಲಕ್ಷಾಂತರ ವರ್ಷಗಳಿಂದ ಹಿಮನದಿಯ ಅಡಿಯಲ್ಲಿ ಮುಚ್ಚಿಹೋಗಿರುವ ಕಬ್ಬಿಣದ ಸಮೃದ್ಧತೆಯಿಂದ ಬರುತ್ತಿದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ನೀರು ಭೂಮಿಯ ಮೇಲ್ಭಾಗವನ್ನು ತಲುಪಿ ಆಮ್ಲಜನಕದೊಂದಿಗೆ ಬೆರೆತಾಗ ಅದು ಆಕ್ಸಿಡೀಕರಣದ ಮೂಲಕ ಕೆಂಪಾಗಿ ಬದಲಾಗುತ್ತದೆ. ಅಂದರೆ ಕಬ್ಬಿಣದ ತುಕ್ಕು ಹಿಡಿದಂತಹ ಪ್ರಕ್ರಿಯೆಯೇ ಈ ಜಲಪಾತದ ನೀರು ಕೆಂಪಾಗೋಕೆ ಕಾರಣ ಎನ್ನಲಾಗುತ್ತಿದೆ.

 ಹಿಮಪಾತದ ಪರಿಸ್ಥಿತಿಯಲ್ಲಿ ನೀರು ಹೇಗೆ ಹರಿಯುತ್ತದೆ?

ರಕ್ತ ಜಲಪಾತದ ಮತ್ತೊಂದು ವಿಶೇಷತೆ ಎಂದರೆ ಅಂಟಾರ್ಕ್ಟಿಕಾದ ತೀವ್ರ ಶೀತದ ನಡುವೆಯೂ ಈ ಜಲಪಾತದ ನೀರು ಮಾತ್ರ ದ್ರವವಾಗಿಯೇ ಉಳಿದಿರುತ್ತದೆ. ಅಂಟಾರ್ಟಿಕಾದಲ್ಲಿ ಸಾಮಾನ್ಯವಾಗಿ ತಾಪಮಾನವೂ ಮೈನಸ್ 19 ಡಿಗ್ರಿಗೆ ಇಳಿದಿರುತ್ತದೆ. ಇದು ನೀರಿನ ಸಾಮಾನ್ಯ ಘನೀಕರಣ ಸ್ಥಿತಿಗಿಂತಲೂ ಕಡಿಮೆ. ಇಂತಹ ಸ್ಥಿತಿಯಲ್ಲಿ ನೀರು ಹರಿಯುವುದು ಅಸಾಧ್ಯವಾಗಿರುತ್ತದೆ. ಆದರೂ ಈ ರಕ್ತಜಲಪಾತ ಜಲರೂಪದಲ್ಲಿರುವುದು ವಿಸ್ಮಯವುಂಟು ಮಾಡುತ್ತದೆ. ಆದರೆ ಈ ವಿಸ್ಮಯಕ್ಕೂ 2003ರಲ್ಲಿ ಸಂಶೋಧಕರು ಕಾರಣ ಹುಡುಕಿದ್ದಾರೆ. ಈ ನೀರಿನಲ್ಲಿ ಸಮುದ್ರದ ನೀರಿನಲ್ಲಿರುವ ಉಪ್ಪಿಗಿಂತಲೂ ಎರಡು ಪಟ್ಟು ಹೆಚ್ಚಿರುತ್ತದೆಯಂತೆ  ಈ ಹೆಚ್ಚು ಉಪ್ಪಿನ ಅಂಶವೇ ಈ ನೀರನ್ನು ಮಂಜುಗಡ್ಡಯಾಗದಂತೆ ತಡೆಯುತ್ತದೆಯಂತೆ. ಹೀಗಾಗಿ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಈ ರಕ್ತ ಜಲಪಾತವೂ ದ್ರವರೂಪದಲ್ಲಿ ಹರಿಯುತ್ತದೆ.

ಕೆಂಪು ನೀರಿನಲ್ಲಿ ಸೂಕ್ಷ್ಮಜೀವಿಗಳ ವಾಸ

ಈ ಕೆಂಪು ಜಲಪಾತವೂ ಅನೇಕ ಸಣ್ಣಜೀವಿಗಳಿಗೆ ನೆಲೆಯಾಗಿದೆ. ಹಿಮನದಿಯ ಆಳದಲ್ಲಿ, ನೀರಿನಲ್ಲಿ ಸೂರ್ಯನ ಬೆಳಕು ಅಥವಾ ಆಮ್ಲಜನಕವಿಲ್ಲದ ಸ್ಥಳದಲ್ಲಿ, ಬ್ಯಾಕ್ಟೀರಿಯಾದ ವಿಶಿಷ್ಟ ಸಮುದಾಯವಿದೆಯಂತೆ.. ನಮ್ಮ ಜಗತ್ತಿನ ಮೇಲೆ ಇಂತಹ ಸಾಕಷ್ಟು ವಿಸ್ಮಯಗಳಿವೆ.

 

Kishor KV

Leave a Reply

Your email address will not be published. Required fields are marked *