ಚಾಂಪಿಯನ್ ಆಗಿ ನಿವೃತ್ತಿ – ರೋಹಿತ್ ಶರ್ಮಾಗೆ ಬಿಸಿಸಿಐನಿಂದಲೂ ಡೆಡ್ ಲೈನ್?
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಶುರು ಮಾಡಿರೋ ಟೀಂ ಇಂಡಿಯಾ ಸರಣಿ ಗೆಲ್ಲೋದ್ರ ಜೊತೆ ಜೊತೆಗೆ ಚಾಂಪಿಯನ್ಸ್ ಟ್ರೋಫಿಗೂ ರೆಡಿಯಾಗ್ಬೇಕಿದೆ. ಇಲ್ಲಿ ಏನ್ ಪರ್ಫಾಮೆನ್ಸ್ ಕೊಡ್ತಾರೋ ಅದೇ ರಿಸಲ್ಟ್ ಅಲ್ಲೂ ಕೂಡ ನಿರೀಕ್ಷೆ ಮಾಡಬಹುದು. ಸೋ ಬ್ಯಾಟಿಂಗ್ ಲೈನಪ್ ಇಂಪ್ರೂವ್ ಆಗ್ಲೇ ಬೇಕಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಕಮ್ ಬ್ಯಾಕ್ ಮಾಡೋಕೆ ಇದು ಬೆಸ್ಟ್ ಚಾನ್ಸ್ ಕೂಡ ಹೌದು. ಅದೆಲ್ಲಕ್ಕಿಂತ ಹೆಚ್ಚಾಗಿ ಹಿಟ್ಮ್ಯಾನ್ಗೆ ಅಸಲಿ ಚಾಲೆಂಜ್. ಯಾಕಂದ್ರೆ ಇದೇ ಟೂರ್ನಿಯೇ ಅವ್ರ ಲಾಸ್ಟ್ ಟೂರ್ನಿ ಆಗಬಹುದು. ಬಿಸಿಸಿಐ ಈಗಾಗ್ಲೇ ಷರತ್ತು ಹಾಕಿದೆ ಎನ್ನಲಾಗಿದೆ.
ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಕಂಗೆಟ್ಟ ಆಸ್ಟ್ರೇಲಿಯಾ – ಕ್ಯಾಪ್ಟನ್ ಸೇರಿ 5 ಪ್ಲೇಯರ್ಸ್ ಔಟ್!
ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಚುಟುಕು ಫಾರ್ಮೆಟ್ಗೆ ಗುಡ್ ಬೈ ಹೇಳಿದ್ರು. ಸದ್ಯ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ತಂಡವನ್ನ ಮುನ್ನಡೆಸ್ತಿದ್ದಾರೆ. ಆದ್ರೆ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದೊಂದಿಗೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೂ ವಿದಾಯ ಹೇಳುವುದು ಗ್ಯಾರಂಟಿ ಎನ್ನಲಾಗಿದೆ. ಯಾಕಂದ್ರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ಭಾರತ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದೇ ಕಾರಣಕ್ಕೆ ಚಾಂಪಿಯನ್ಸ್ ಟ್ರೋಫಿಯ ಬಳಿಕ ನಿವೃತ್ತಿ ಘೋಷಿಸುವಂತೆ ರೋಹಿತ್ ಶರ್ಮಾಗೆ ಸೂಚಿಸಿದೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ಹೊರ ಬಿದ್ದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ಅಂತಿಮ ಪಂದ್ಯವೇ ರೋಹಿತ್ ಶರ್ಮಾ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಏಕದಿನ ಮ್ಯಾಚ್ ಆಗಿರಲಿದೆ. ಆ ಬಳಿಕ ರೋಹಿತ್ ಶರ್ಮಾ ವಿದಾಯ ಘೋಷಿಸದೇ ಇದ್ರೂ ಕೂಡ ಅವ್ರನ್ನ ಏಕದಿನ ತಂಡದ ಆಯ್ಕೆಗೆ ಪರಿಗಣಿಸುವ ಸಾಧ್ಯತೆಯಿಲ್ಲ.
ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಸದ್ಯ 37 ವರ್ಷ ವಯಸ್ಸು. 2027ಕ್ಕೆ ಏಕದಿನ ವಿಶ್ವಕಪ್ ನಡೆಯಲಿದೆ. ಈ ವೇಳೆಗೆ 39 ವರ್ಷ ವಯಸ್ಸಾಗಲಿದೆ. ಸೋ ಮುಂದಿನ ಏಕದಿನ ವಿಶ್ವಕಪ್ಗಾಗಿ ರೋಹಿತ್ರನ್ನ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿಯೇ ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ರೋಹಿತ್ ಶರ್ಮಾಗೆ ಬಿಸಿಸಿಐ ಕಡೆಯಿಂದ ನಿವೃತ್ತಿ ಸೂಚನೆ ನೀಡಲಾಗಿದೆ. ಈ ಬಾರಿಯ ಟೂರ್ನಿಯ ಬಳಿಕ ಗೌರವಯುಯವಾಗಿ ವಿದಾಯ ಹೇಳಿಬಿಡಿ ಎಂಬ ಸಂದೇಶ ಕೊಟ್ಟಿದ್ದಾರೆ. ತಂಡದ ಸೆಲೆಕ್ಟರ್ಸ್ ಮತ್ತು ಮಂಡಳಿಯ ಸದಸ್ಯರು ರೋಹಿತ್ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ನಂತರ ತಮ್ಮ ಭವಿಷ್ಯದ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕೆಂದು ರೋಹಿತ್ಗೆ ಹೇಳಿದ್ದಾರೆ. ಸೋ ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಟೂರ್ನಮೆಂಟ್ ನಂತರ, ಟೀಮ್ ಇಂಡಿಯಾದಲ್ಲಿ ಬದಲಾವಣೆ ಪಕ್ಕಾ ಎನ್ನಲಾಗಿದೆ.
ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಕಡೆಯಿಂದ ಏಕದಿನದಿಂದಲೂ ಬಿಸಿಸಿಐ ನಿವೃತ್ತಿಯ ನಿರೀಕ್ಷೆಯಲ್ಲಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಫಾರ್ಮ್ ಕಳ್ಕೊಂಡಿದ್ದ ರೋಹಿತ್ರನ್ನ ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯೂ ಇಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಮುಂದಿನ ನಿರ್ಧಾರ ತೆಗೆದುಕೊಳ್ಳಿ ಎಂದಿದೆ. ಬಹುಶಃ ಭಾರತದ ಪರ ಚಾಂಪಿಯನ್ಸ್ ಟ್ರೋಫಿಯೇ ರೋಹಿತ್ ಶರ್ಮಾ ಪಾಲಿಗೆ ಕೊನೇಯ ಟೂರ್ನಿಯೂ ಆಗಬಹುದು.
ರೋಹಿ್ತ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಸೂಪರ್ ಸ್ಟಾರ್ಸ್. ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡ್ತಿದ್ದಾರೆ. ಆದ್ರೆ ಕೆಲವು ತಿಂಗಳುಗಳಿಂದ ಸತತ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಪ್ರದರ್ಶನದ ಮೇಲೆ ಎಲ್ಲರ ಗಮನ ಇದೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದ್ದು ಕಮ್ ಬ್ಯಾಕ್ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದ್ರಿಲ್ಲಿ ರೋಹಿತ್ ಶರ್ಮಾ ಹೆಸರು ನಿವೃತ್ತಿಯ ರೇಸ್ನಲ್ಲಿ ಕೇಳಿ ಬರ್ತಿದ್ರೂ ಕೂಡ ವಿರಾಟ್ ಕೊಹ್ಲಿ ಹೆಸರು ಬಂದಿಲ್ಲ. ಅದಕ್ಕೆ ಕಾರಣ ಇಬ್ಬರ ನಡುವಿನ ಏಜ್ ಗ್ಯಾಪ್. ಸದ್ಯ ಕೊಹ್ಲಿಗೆ 35 ವರ್ಷ ವಯಸ್ಸು. ಅಲ್ದೇ ಇಂದಲ್ಲ ನಾಳೆ ಫಾರ್ಮ್ ಕಂಡುಕೊಳ್ಳಬಹುದು. ಟೀಂ ಇಂಡಿಯಾದ ಐಕಾನ್ ಆಟಗಾರನನ್ನ ಇಷ್ಟು ಬೇಗ ಮೈದಾನದಿಂದ ಹೊರ ಕಳಿಸೋಕೆ ಬಿಸಿಸಿಐ ಕೂಡ ಸಿದ್ಧವಿಲ್ಲ. ಇದೇ ಕಾರಣಕ್ಕೆ ರೋಹಿತ್ ನಿವೃತ್ತಿ ಬಯಸಿದ್ರೂ ಕೊಹ್ಲಿ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.