ದೇಶದ ಟಾಪ್ 10 ಪ್ರಭಾವಿ ವ್ಯಕ್ತಿಗಳು ಯಾರೆಲ್ಲಾ?
ಮೋದಿ, ರಾಹುಲ್ಗೆ ಎಷ್ಟನೇ ಸ್ಥಾನ?

ದೇಶದ ಟಾಪ್ 10 ಪ್ರಭಾವಿ ವ್ಯಕ್ತಿಗಳು ಯಾರೆಲ್ಲಾ?ಮೋದಿ, ರಾಹುಲ್ಗೆ ಎಷ್ಟನೇ ಸ್ಥಾನ?

ಭಾರತ ಮಹಾನ್ ವ್ಯಕ್ತಿಗಳು ಹುಟ್ಟಿದ ಬೀಡು. ದೇಶ ರಾಜಕೀಯ ಕ್ಷೇತ್ರ, ರಕ್ಷಣೆ ಕ್ಷೇತ್ರ, ವ್ಯಾವಹಾರ ಕ್ಷೇತ್ರದಲ್ಲಿ ಸಾಕಷ್ಟು ಜನ ಸಾಧನೆ ಮಾಡಿದ್ದಾರೆ. ತುಂಬಾ ಪವರ್ ಹೊಂದಿದವರು ಇದ್ದಾರೆ. ಹಾಗಿದ್ರೆ ಈಗ ನಮ್ಮ ದೇಶದಲ್ಲಿ ಯಾರು ಪ್ರಭಾವಿ ವ್ಯಕ್ತಿಗಳು? ಮೋದಿ ರಾಹುಲ್ ಗಾಂಧಿ ಟಾಪ್‌10ರಲ್ಲಿ ಎಷ್ಟನೇ ಸ್ಥಾನ ಪಡೆದಿದ್ದಾರೆ ಅನ್ನೋದನ್ನ  ನೋಡೋಣ..

 ಪ್ರಧಾನಿ ಮೋದಿಯೇ ಭಾರತ ಟಾಪ್ 1 ಪ್ರಭಾವಿ 

ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಪ್ರಧಾನಿ ದಾಖಲೆ ಬರೆದಿದ್ದಾರೆ. ಅಲ್ಲದೇ ನಮ್ಮ ದೇಶದ ಪ್ರಭಾವಿ ವ್ಯಕ್ತಿ ಕೂಡ ಅವರೇ ಆಗಿದ್ದಾರೆ. 2001 ರಲ್ಲಿ ಗುಜರಾತ್ ಸಿಎಂ ಆದ ಮೋದಿ ಆಮೇಲೆ ರಾಜಕೀಯದಲ್ಲಿ ಹಿಂದೆ ತಿರುಗಿ ನೋಡಿಲೇ ಇಲ್ಲ. 2014 ರ ತನಕ ಗುಜರಾತ್ ಸಿಎಂ ಆಗಿದ್ದರು.. ಆಮೇಲೆ ದೇಶದ ಚುಕ್ಕಾಣಿಯಲ್ಲಿ ನರೇಂದ್ರ ಮೋದಿ ಹಿಡಿದ್ರು. 2014 ರಲ್ಲಿ ಪ್ರಧಾನಿ ಕುರ್ಚಿ ಹತ್ತಿದ ಮೋದಿ ಸತತ 3 ನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನ ನಡೆಸುತ್ತಿದ್ದಾರೆ. 2014 ರಿಂದ ಇಲ್ಲಿ ತನಕ ಮೋದಿ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತ ಗುರುತಿಸಿಕೊಳ್ಳುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜಕಾರಣದ ಹೊರತಾಗಿ ಶ್ರೀ ನರೇಂದ್ರ ಮೋದಿಯವರು ವಿಶೇಷ ಆಸಕ್ತಿ ಹೊಂದಿರುವ ಇನ್ನೊಂದು ಕ್ಷೇತ್ರವೆಂದರೆ, ಅದು ಬರವಣಿಗೆ. ಅವರು ಕವನ ಸಂಕಲನಗಳೂ ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದಾರೆ,ಅವರ ದಿನಚರಿ ಯೋಗಾಭ್ಯಾಸದೊಂದಿಗೆ ಪ್ರಾರಂಭವಾಗುತ್ತದೆ.ಇದು ಅವರ ಬಿಡುವಿಲ್ಲದ ದಿನಚರಿಯಲ್ಲಿ ಅವರ ದೇಹ ಮತ್ತು ಮನಸ್ಸನ್ನು ಶಾಂತಿಯ ಶಕ್ತಿಯನ್ನು ತುಂಬುತ್ತದೆಯಂತೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವೀಟ್‌ನಲ್ಲಿ 95.6 ಮಿಲಿಯನ್ ಫಾಲೋವರ್ಸ್‌ ಅನ್ನು ಹೊಂದಿದ್ದಾರೆ.

 ಅಮಿತ್ ಶಾ ದೇಶದ 2ನೇ ಪ್ರಭಾವಿ ವ್ಯಕ್ತಿ

ಪ್ರಧಾನಿ ನರೇಂದ್ರ ಮೋದಿ ನಂತರ ಮತ್ತೊಬ್ಬ ಫ್ರಭಾವಿ ಭಾರತೀಯ ವ್ಯಕ್ತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಿದ್ದಾರೆ. ಅವರು ಬಿಜೆಪಿಯ ಚಾಣಕ್ಷ್ಯ ಅಂತಲೇ ಪ್ರಖ್ಯಾತಿ ಹೊಂದಿದ್ದಾರೆ. ಇವರನ್ನ ಚುನಾವಣೆ ಚಾಣುಕ್ಯ ಎಂದಲೇ ಕರೆಯಲಾಗುತ್ತೆ.  2019ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ನ ಗಾಂಧಿ ನಗರ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಗೃಹ ಸಚಿವರು. ಗೃಹ ಸಚಿವರಾದ ಬಳಿಕ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2014 ರಲ್ಲಿ ಬಿಜೆಪಿಯ ಅಭೂತಪೂರ್ವ ಯಶಸ್ಸಿಗೆ ಅಮಿತ್ ಅವರೇ ಕಾರಣರೆಂದು ಹೇಳಲಾಗುತ್ತದೆ. ಉತ್ತರ ಪ್ರದೇಶ, ಗುಜರಾತ್ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಇವರ ರಣತಂತ್ರಗಳೇ ಕಾರಣ ಎಂಬ ಮಾತುಗಳಿವೆ. ಗುಜರಾತ್ ವಿಧಾನಸಭೆಗೆ ಎರಡು ಬಾರಿ ಶಾಸಕ ಆಯ್ಕೆಯಾಗಿದ್ದ ಅಮಿತ್ ಶಾ ನರೇಂದ್ರ ಮೋದಿ ಅವರ ಅತಿ ನಂಬಿಕಸ್ಥರಲ್ಲಿ ಒಬ್ಬರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಮಿತ್ ಶಾ ರಾಜ್ಯದ ಗೃಹ ಸಚಿವರಾಗಿದ್ದರು. ಪಿವಿಸಿ ಪೈಪುಗಳ ಬೃಹತ್ ಉದ್ಯಮದ ಒಡೆಯರಾಗಿರುವ ಶಾ, ಅಹಮದಾಬಾದ್‌ನಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದರು. ಸಂಘದ ನಿಕಟ ಒಡನಾಟದ ಕಾರಣದಿಂದ 1982 ರಲ್ಲಿ ಇವರು ನರೇಂದ್ರ ಮೋದಿಯವರ ಸಂಪರ್ಕಕ್ಕೆ ಬಂದರು. ಸಂಘ ಪರಿವಾರದ ವಿದ್ಯಾರ್ಥಿ ಘಟಕದ ನಾಯಕನಾಗಿ ರಾಜಕೀಯ ಆರಂಭಿಸಿದ ಶಾ 1986 ರಲ್ಲಿ ಬಿಜೆಪಿ ಸೇರಿದರು. ನಂತರ ಬಿಜೆಪಿಯ ಏಳಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪಕ್ಷದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾದರು.

 3 ನೇ ಪ್ರಭಾವಿ ವ್ಯಕ್ತಿ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಪ್ರಭಾವಿ ವ್ಯಕ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮೋದಿ ಸಾಕಷ್ಟು ಆಪ್ತರಾಗಿರೋ ಇವರು ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದಾರೆ. ಹಿಂದೂತ್ವಕ್ಕಾಗಿ ಸಾಕಷ್ಟು ಹೋರಾಟಗಳನ್ನ ಮಾಡಿದ್ದಾರೆ.

 

 ಎಸ್ ಜೈಶಂಕರ್ ಕೂಡ ಪವರ್ ಫುಲ್ ಲೀಡರ್ 

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ತಮ್ಮ ಬಲವಾದ ರಾಜತಾಂತ್ರಿಕ ಕೌಶಲ್ಯದಿಂದ ನಾಗರಿಕರನ್ನು ಮೆಚ್ಚಿಸಿದ್ದಾರೆ. ವಿದೇಶದ ಜೊತೆ ಒಳ್ಳೆಯ ಸಂಬಂಧವನ್ನ ಹೊಂದಿರೋ ಇವರು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದಾರೆ.

ಯೋಗಿ ಕೂಡ ಪವರ್ ಫುಲ್ ಲೀಡರ್ 

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೂಡ ದೇಶದ ಪ್ರಭಾವಿ ವ್ಯಕ್ತಿಯಾಗಿದ್ದಾರೆ.  ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯದಿಂದ ಬಂದಾಗ ಅವರ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚುತ್ತದೆ. ಅದ್ರಲ್ಲೂ ಮಹಾ ಕುಂಭಮೇಳದ ನಂತ್ರ ಯೋಗಿ ಹೆಸರು ವಿಶ್ವ ಮಟ್ಟದಲ್ಲಿ ಕೇಳುತ್ತಿದೆ.

 ರಾಜನಾಥ್ ಸಿಂಗ್ ಕೂಡ ಪ್ರಭಾವಿ

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪ್ರಧಾನಿ ಮೋದಿಯವರ ಸಂಪುಟದಲ್ಲಿ ಅತ್ಯಂತ ಹಿರಿಯ ನಾಯಕರಾಗಿದ್ದಾರೆ. ಅವರ ಪ್ರಭಾವಶಾಲಿಯಿಂದಾಗಿ, ಅಲ್ಲದೆ, ಅವರು ಎಲ್ಲಾ ಪಕ್ಷಗಳ ನಾಯಕರಿಂದಲೂ ಮೆಚ್ಚುಗೆ ಪಡೆಯುತ್ತಿದ್ದಾರೆ.

 8 ಭಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮಹಿಳಾ ಹಣಕಾಸು ಸಚಿವೆ ಎನಿಸಿಕೊಂಡಿದ್ದಾರೆ.  ಈ ಬಾರಿ ಸೇರಿ ಒಟ್ಟು 8 ಭಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಅತೀ ಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದ ವ್ಯಕ್ತಿ ನಿರ್ಮಲಾ ಸೀತಾರಾಮನ್ ಆಗಿದ್ದಾರೆ.

 

ಬಿಜೆಪಿ ರಾಷ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದೇಶದ ಅತಿದೊಡ್ಡ ಸಂಘಟನೆಗೆ ಕಮಾಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು 101 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಟಾಪ್ 10 ಪ್ರಭಾವಿ ಭಾರತೀಯರಲ್ಲಿ ಗೌತಮ್ ಅದಾನಿ ಏಕೈಕ ಉದ್ಯಮಿ ಆಗಿದ್ದಾರೆ. ಅವರ ನಾಯಕತ್ವದಲ್ಲಿ ಗುಂಪು ಸ್ವಾಧೀನಗಳು ಮತ್ತು ಗ್ರೀನ್‌ಫೀಲ್ಡ್ ಯೋಜನೆಗಳ ಸರಣಿಯ ಮೂಲಕ ವೇಗವಾಗಿ ಬೆಳೆದಿದೆ. ಅದಾನಿ ಅವರ ಹತ್ತಿರದ ಪ್ರತಿಸ್ಪರ್ಧಿ ಬಿಲಿಯನೇರ್ ಮುಖೇಶ್ ಅಂಬಾನಿ 100 ಪವರ್‌ಫುಲ್ ಭಾರತೀಯರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 16ನೇ ಸ್ಥಾನದಲ್ಲಿದ್ರೆ,  ಅರವಿಂದ್ ಕೇಜ್ರಿವಾಲ್ ಅವರು 18ನೇ  ಸ್ಥಾನದಲ್ಲಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಚೇಂಜ್ ಆಗಲಿದ್ದು, 2025 ರಲ್ಲಿ ಈ ಟಾಪ್ 10 ರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಕಾದು ನೋಡಬೇಕಿದೆ..

Kishor KV

Leave a Reply

Your email address will not be published. Required fields are marked *