ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಕಂಗೆಟ್ಟ ಆಸ್ಟ್ರೇಲಿಯಾ – ಕ್ಯಾಪ್ಟನ್ ಸೇರಿ 5 ಪ್ಲೇಯರ್ಸ್ ಔಟ್!
ಐಸಿಸಿಯ ಮಹಾಕದನ ಫೆಬ್ರವರಿ 19ರಿಂದ ಶುರುವಾಗಲಿದೆ. ಚಾಂಪಿಯನ್ಸ್ ಟ್ರೋಫಿಗಾಗಿ 8 ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ಟೂರ್ನಿಯಲ್ಲಿ ಒನ್ ಆಫ್ ದಿ ಬೆಸ್ಟ್ ಅಂಡ್ ಸ್ಟ್ರಾಂಗ್ ಟೀಂ ಆಗಿರುವ ಆಸ್ಟ್ರೇಲಿಯಾಗೆ ಟೂರ್ನಿ ಆರಂಭಕ್ಕೂ ಮುನ್ನವೇ ಏಟು ಬಿದ್ದಿದೆ. ಇಂಜುರಿ ಭೂತ ಒಬ್ಬೊಬ್ಬರನ್ನೇ ಆವರಿಸಿಕೊಳ್ತಿದೆ. ಇದೀಗ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ಟೂರ್ನಿಯಲ್ಲಿ ಆಡುವುದು ಅನುಮಾನ ಎಂದು ಆಸ್ಟ್ರೇಲಿಯಾ ಕೋಚ್ ಆ್ಯಂಡ್ರೂ ಮೆಕ್ ಡೊನಾಲ್ಡ್ ಹೇಳಿದ್ದಾರೆ.
ಇದನ್ನೂ ಓದಿ : ಬುಮ್ರಾ ಬದಲಿಗೆ ಹರ್ಷಿತ್ ರಾಣಾ? – ಶಿಷ್ಯನ ಮೇಲೆ ಗಂಭೀರ್ ಹುಚ್ಚು ಪ್ರೀತಿ?
ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ಟೀಮ್ನಲ್ಲಿ. ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಆರೋನ್ ಹಾರ್ಡಿ, ಜೋಶ್ ಹ್ಯಾಝಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್ವೆಲ್, ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಆ್ಯಡಂ ಝಂಪಾ. ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಝಲ್ವುಡ್ ಸ್ಥಾನ ಪಡೆದಿದ್ರು. ಆದ್ರೆ ಈ 15 ಆಟಗಾರರ ಪೈಕಿ ಐವರಿಗೆ ಇಂಜುರಿ ಭೂತ ಬೆನ್ನೇರಿದೆ. ಅದ್ರಲ್ಲಿ ಈಗಾಗ್ಲೇ ಮೂವರು ಆಟಗಾರರು ತಂಡದಿಂದ ಹೊರ ಬಿದ್ದಿದ್ದಾರೆ. ಇನ್ನಿಬ್ಬರು ಡೇಂಜರ್ ಝೋನ್ನಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಆಡೋದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಪಾದದ ನೋವಿನಿಂದ ಬಳಲುತ್ತಿರುವ ಕಮಿನ್ಸ್ ಐಸಿಸಿ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ದೃಢಪಡಿಸಿದ್ದಾರೆ. ಇದ್ರ ಜೊತೆಗೆ ಕಾಲಿನ ಹಿ೦ಭಾಗದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜೋಶ್ ಹ್ಯಾಝಲ್ವುಡ್ ಕೂಡ ಸಂಪೂರ್ಣ ಫಿಟ್ನೆಸ್ ಸಾಧಿಸಿಲ್ಲ. ಹ್ಯಾಜಲ್ವುಡ್ ಸಹ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಈ ಮೂಳಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ಇಬ್ಬರು ವೇಗಿಗಳು ಕಣಕ್ಕಿಳಿಯುವುದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ.
ಆಸ್ಟ್ರೇಲಿಯಾ ತಂಡದ ಜವಾಬ್ದಾರಿಯನ್ನ ಪ್ಯಾಟ್ ಕಮಿನ್ಸ್ ಹೊತ್ತಿದ್ರು. ಹೀಗಾಗಿ ತಂಡದಿಂದ ಹೊರಗುಳಿದ್ರೆ ಬದಲಿ ಆಟಗಾರನೊಂದಿಗೆ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹೊಸ ನಾಯಕ ಮುನ್ನಡೆಸ್ತಾರೆ ಅನ್ನೋ ಚರ್ಚೆಯೂ ಶುರುವಾಗಿದೆ. ಅಲ್ದೇ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡವು ಎಲ್ಲಾ ಟೂರ್ನಿಗಳಲ್ಲೂ ಯಶಸ್ಸು ಸಾಧಿಸಿದೆ. ಅದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಗಿರಬಹುದು ಅಥವಾ ಏಕದಿನ ವಿಶ್ವಕಪ್ ಆಗಿರಬಹುದು. ಇತ್ತೀಚೆಗೆ ಮುಗಿದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಗಿರಬಹುದು. ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ಪ್ರದರ್ಶನ ನೀಡುತ್ತಲೇ ಬಂದಿದೆ. ಇದೀಗ ಚಾಂಪಿಯನ್ಸ್ ಟ್ರೋಫಿಗೆ ಕಮಿನ್ಸ್ ಆಡದೇ ಇದ್ರೆ ಆಸ್ಟ್ರೇಲಿಯಾ ತಂಡಕ್ಕೆ ಬಹುದೊಡ್ಡ ಸೆಟ್ ಬ್ಯಾಕ್ ಆಗಲಿದೆ.
ಚಾಂಪಿಯನ್ಸ್ ಟ್ರೋಫಿಗೆ ಟೀಂ ಅನೌನ್ಸ್ ಆದಾಗ್ಲೇ ಬೆನ್ನಿನ ಗಾಯದಿಂದಾಗಿ ಮಿಚೆಲ್ ಮಾರ್ಷ್ ಹೊರ ಬಿದ್ದಿದ್ರು. ಇದು ಆಸ್ಟ್ರೇಲಿಯಾಕ್ಕೆ ಮೊದಲ ಹೊಡೆತ. ಮಿಚೆಲ್ ಮಾರ್ಷ್ ಅವರ ಬದಲಿ ಆಟಗಾರನನ್ನು ಆಸ್ಟ್ರೇಲಿಯಾ ಇನ್ನೂ ಕೂಡ ಘೋಷಣೆ ಮಾಡಿಲ್ಲ. ಬ್ಯೂ ವೆಬ್ಸ್ಟರ್ ಅವರನ್ನು ODI ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದ್ರ ನಡುವೆ ಆರನ್ ಹಾರ್ಡಿ ಮತ್ತು ಮಾರ್ಕಸ್ ಸ್ಟೊಯಿನಿಸ್ ಕೂಡ ಗಾಯಗೊಂಡಿರೋದು ಆಸಿಸ್ ತಂಡಕ್ಕೆ ಆತಂಕ ತಂದಿದೆ. ಹಾರ್ಡಿ ತೊಡೆಸಂದು ಸಮಸ್ಯೆ ಎದುರಿಸ್ತಾ ಇದ್ರೆ ಸ್ಟೊಯಿನಿಸ್ ಮಂಡಿರಜ್ಜು ನೋವಿನಿಂದ ಬಳಲ್ತಿದ್ದಾರೆ. ಹೀಗಾಗಿ ಈ ಇಬ್ಬರು ಕೂಡ ಚಾಂಪಿಯನ್ಸ್ ಟ್ರೋಫಿ ಆಡೋದು ಡೌಟಿದೆ.