ಬಾಸ್ ಯಾರೆಂದು ತೋರಿಸಿದ ಟ್ರಂಪ್ – ಬೆದರಿದ ಪನಾಮ, ಚೀನಾ ಒಪ್ಪಂದ ಕ್ಯಾನ್ಸಲ್
ಕಡಲ್ಗಾಲುವೆ ಇತಿಹಾಸವೇನು?
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ವಾಪಸ್ ಬಂದ ಬಳಿಕ ಹಿಂದಿನ ಅವಧಿಗಿಂತಲೂ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಪನಾಮ ಕಾಲುವೆಯನ್ನು ವಶಕ್ಕೆ ತೆಗೆದುಕೊಳ್ಳುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ. ಇದೇ ಹೊತ್ತಲ್ಲಿ, ಪನಾಮ ದೇಶ ಅಮೆರಿಕದ ಒತ್ತಡಕ್ಕೆ ತಲೆಬಾಗಿ, ಹೇಳಿದಂತೆ ಕೇಳಲು ನಿರ್ಧರಿಸಿದೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಅಂದ್ರೆ BRI ಎನ್ನುವ ಜಾಗತಿಕ ಮಹಾ ಯೋಜನೆಯಿಂದ ಪನಾಮ ಹೊರಬರಲು ನಿರ್ಧರಿಸಿದೆ.
ಪನಾಮ ಲ್ಯಾಟಿನ್ ಅಮೆರಿಕದ ದಕ್ಷಿಣ ತುದಿಯಲ್ಲಿದೆ. ದಕ್ಷಿಣ ಅಮೆರಿಕದ ಖಂಡಕ್ಕೆ ಹೊಂದಿಕೊಂಡಂತಿದೆ. ಇಲ್ಲಿಯೇ 82 ಕಿಮೀ ಉದ್ದದ ಕೃತಕ ಕಾಲುವೆಯೊಂದಿದೆ. ಇದು ಕೆರೆಬಿಯನ್ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರಕ್ಕೆ ಕೊಂಡಿಯಾಗಿ ಈ ಕಾಲುವೆ ಇದೆ. 20ನೇ ಶತಮಾನದ ಆರಂಭದಲ್ಲಿ ಅಮೆರಿಕವೇ ಈ ಕಾಲುವೆ ನಿರ್ಮಿಸಿತ್ತು. ಹಡಗುಗಳ ಸಾಗಾಟಕ್ಕೆಂದು ನಿರ್ಮಿಸಿರುವ ಕಾಲುವೆ ಇದಾಗಿತ್ತು. 20ನೇ ಶತಮಾನದ ಎಪ್ಪತ್ತರ ದಶಕದವರೆಗೂ ಈ ಕಾಲುವೆಯ ಪೂರ್ಣ ನಿಯಂತ್ರಣ ಅಮೆರಿಕದ ಬಳಿಯೇ ಇತ್ತು. ನಂತರ ಅದನ್ನು ಪನಾಮಕ್ಕೆ ಬಿಟ್ಟುಕೊಡಲಾಯಿತು. ಪನಾಮ ದೇಶವು 2017ರಲ್ಲಿ ಚೀನಾದ ಬಿಆರ್ಐ ಯೋಜನೆಗೆ ಕೈ ಜೋಡಿಸಿದೆ. ಇದರ ಬೆನ್ನಲ್ಲೇ ಪನಾಮ ಕಾಲುವೆಯ ನಿಯಂತ್ರಣವನ್ನು ಚೀನಾ ಮಾಡುತ್ತಿದೆ ಎಂಬುದು ಈಗ ಅಮೆರಿಕಕ್ಕೆ ಕಣ್ಣ ಕೆಂಪಾಗಿಸಿದೆ. ತನ್ನ ಬುಡಕ್ಕೆ ಶತ್ರು ಬಂದು ಕೂರುವುದನ್ನು ಯಾರು ಸಹಿಸಿಯಾರು? ಅಂತೆಯೇ ಅಮೆರಿಕ ಇದೀಗ ಪನಾಮ ಕೆನಾಲ್ ಅನ್ನು ಮತ್ತೆ ವಶಕ್ಕೆ ಪಡೆಯುವ ಬೆದರಿಕೆ ಹಾಕಿದೆ. ಶಕ್ತಿಶಾಲಿ ಅಮೆರಿಕವನ್ನು ಎದುರು ಹಾಕಿಕೊಳ್ಳುವಷ್ಟು ಶಕ್ತಿ ಮತ್ತು ಬೆಂಬಲ ಪನಾಮ ದೇಶಕ್ಕೂ ಇಲ್ಲವೇ ಇಲ್ಲ. ಹೀಗಾಗಿ, ವಿಶ್ವದ ದೊಡ್ಡಣ್ಣನ ಮುಂದೆ ಪನಾಮ ತಲೆ ಬಾಗೋಕೆ ರೆಡಿಯಾಗಿದೆ.
ಟ್ರಂಪ್ ಪನಾಮಗೆ ಎಚ್ಚರಿಕೆ ಕೊಟ್ಟಿದ್ದೇನು?
ಆಕ್ರೋಶ ಹೊರ ಹಾಕಿದ ಟ್ರಂಪ್ ಪನಾಮ ದೇಶ ಬಹಳ ಪ್ರಮಾದ ಮಾಡಿದ್ದಾರೆ. ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಪನಾಮ ಕಾಲವೆಯನ್ನು ಚೀನಾ ನಡೆಸುತ್ತಿದೆ. ನಾವು ಇದನ್ನು ಕೊಟ್ಟಿದ್ದು ಪನಾಮಗೆ ಹೊರತು ಚೀನಾಕ್ಕಲ್ಲ. ಕಾಲುವೆಯನ್ನು ಮೂರ್ಖತನದಿಂದ ಪನಾಮ ದೇಶಕ್ಕೆ ಕೊಟ್ಟೆವು. ಇದನ್ನು ಈಗ ಮತ್ತೆ ಅಮೆರಿಕಕ್ಕೆ ಕೊಡದೇ ಹೋದರೆ ಬಹಳ ದೊಡ್ಡ ಬೆಳವಣಿಗೆ ನಡೆಯಲಿದೆ,’ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಪನಾಮ ಪೋರ್ಟ್ಸ್ ಕಂಪನಿ ಮೇಲೆ ಡೌಟ್…
ಪನಾಮ ಪೋರ್ಟ್ಸ್ ಎನ್ನುವ ಕಂಪನಿಯೊಂದು ಕಾಲುವೆಯಲ್ಲಿ ಎರಡು ಟರ್ಮಿನಲ್ಗಳನ್ನು ನಿರ್ವಹಿಸುತ್ತಿದೆ. ಈ ಕಂಪನಿಯು ಚೀನಾದ ಸಿ.ಕೆ. ಹಚಿನ್ಸನ್ ಹೋಲ್ಡಿಂಗ್ಸ್ನ ಅಂಗಸಂಸ್ಥೆಯಾದ ಹಚಿನ್ಸನ್ ಪೋರ್ಟ್ಸ್ನ ಒಂದು ಭಾಗವಾಗಿದೆ. ಈ ಹಚಿನ್ಸನ್ ಪೋರ್ಟ್ಸ್ ವಿಶ್ವಾದ್ಯಂತ 24 ದೇಶಗಳಲ್ಲಿ 53 ಪೋರ್ಟ್ಗಳನ್ನು ಆಪರೇಟ್ ಮಾಡುತ್ತದೆ. ಈ ಪನಾಮ ಪೋರ್ಟ್ಸ್ ಬಗ್ಗೆ ಅಮೆರಿಕ ಆಡಿಟಿಂಗ್ ನಡೆಸುತ್ತಿದೆ. ಮಾಧ್ಯಮ ವರದಿ ಪ್ರಕಾರ ಹಚಿನ್ಸನ್ ಸಂಸ್ಥೆಯು ಈ ಪನಾಮ ಕಾಲುವೆಯ ನಿಯಂತ್ರಣ ಹೊಂದಿಲ್ಲ. ಹಡಗುಗಳಿಂದ ಸರಕುಗಳ ಕಂಟೇನರ್ಗಳನ್ನು ಲೋಡ್ ಮಾಡುವುದು, ಅನ್ಲೋಡ್ ಮಾಡುವುದು, ಇಂಧನ ಸರಬರಾಜು ಮಾಡುವುದು ಈ ಕೆಲಸಗಳನ್ನು ಮಾಡುತ್ತಿದೆ ಎನ್ನಲಾಗಿದೆ.
ರೋಚಕ ಇತಿಹಾಸ ಹೊಂದಿದೆ ಪನಾಮ ಕಾಲುವೆ
ಪನಾಮ ಕಾಲುವೆ ಮತ್ತು ಅಪ್ರತಿಮ ಎಂಜಿನಿಯರಿಂಗ್ ಪನಾಮ ಕಾಲುವೆ ರಚನೆ ಹಿಂದೆ ರೋಚಕ ಮತ್ತು ದೊಡ್ಡ ಇತಿಹಾಸವೇ ಇದೆ. ಕೆರಿಬಿಯನ್ ಸಮುದ್ರ ಮತ್ತು ಪೆಸಿಫಿಕ್ ಸಾಗರಕ್ಕೆ ಈ ಕಾಲುವೆ ಶಾರ್ಟ್ ಕಟ್ ಆಗಿದೆ. ಇದಿಲ್ಲದೇ ಹೋಗಿದ್ದರೆ ಹಡಗುಗಳು ಅಮೆರಿಕದ ನ್ಯೂಯಾರ್ಕ್ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗಲು ದಕ್ಷಿಣ ಅಮೆರಿಕದ ಕೆಳಗಿನಿಂದ ಬಳಸಿ ಸುತ್ತಿಕೊಂಡು ಹೋಗಬೇಕಿತ್ತು. ಸುಮಾರು 21,000 ಕಿಮೀ ದೂರ ಸಾಗಬೇಕಿತ್ತು. ಅದೂ ಆ ಹಾದಿ ಬಹಳ ಕಠಿಣ ಮತ್ತು ಭಯಾನಕವಾದುದಾಗಿದೆ. ಹೀಗಾಗಿ, ಪನಾಮ ಕಾಲುವೆಯನ್ನು ನಿರ್ಮಿಸಲಾಯಿತು. ಇದರಿಂದ 10,000ಕ್ಕೂ ಹೆಚ್ಚು ಕಿಮೀ ದೂರ ಉಳಿಸಲು ಸಾಧ್ಯವಾಗಿದೆ.
ಆದರೆ, ಈ ಕಾಲುವೆ ನಿರ್ಮಾಣ ಅಷ್ಟು ಸುಲಭವಿರಲಿಲ್ಲ. ಸಾಕಷ್ಟು ಸವಾಲುಗಳಿದ್ದವು. ಫ್ರೆಂಚರು ಮೊದಲಿಗೆ ಈ ಸಾಹಸಕ್ಕೆ ಕೈಹಾಕಿ ಸುಟ್ಟುಕೊಂಡರು. ಆ ಬಳಿಕ ಅಮೆರಿಕ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡು ಹತ್ತು ವರ್ಷದಲ್ಲಿ ಕಾಲುವೆ ನಿರ್ಮಾಣ ಮಾಡಿದರು. ಸಾವಿರಾರು ಕಾರ್ಮಿಕರು ಈ ಕಾರ್ಯದಲ್ಲಿ ಬಲಿಯಾಗಿದ್ದಾರೆ. ಈ ಕೃತಕ ಕಾಲುವೆಯು ಹಡಗುಗಳನ್ನು ಏರಿಸಲು ಮತ್ತು ಇಳಿಸಲು ಲಾಕಿಂಗ್ ಸಿಸ್ಟಂ ಹೊಂದಿದೆ. ಇದು ಎಂಜನಿಯರಿಂಗ್ ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾದ ಬಳಿಕ ಒಂದಿಲ್ಲೊಂದು ಸಹಾಸಕ್ಕೆ ಕೈ ಹಾಕುತ್ತಿದ್ದಾರೆ. ಅಮೆರಿಕದ ಓಟದ ದಿಕ್ಕನ್ನೇ ಬದಲಾಯಿಸೋಕೆ ಹೋಗುತ್ತಿದ್ದಾರೆ. ಆದ್ರೆ ಇದು ಅಮೆರಿಕಕ್ಕೆ ಸಾಕಷ್ಟು ಎಫೆಕ್ಟ್ ಕೂಡ ಆಗಲಿದೆ ಅನ್ನೋ ಮಾತು ಕೇಳಿ ಬರ್ತಿದೆ. ವಿಶ್ವದ ದೊಡ್ಡನ ಆಟ ಯಾರು ಕೂಡ ಊಹಿಸೇಕೆ ಆಗಲ್ಲ ಅನ್ನೋದು ಸತ್ಯ.