ಇಂಗ್ಲೆಂಡ್ ವಿರುದ್ಧ ಏಕದಿನ ಗೆದ್ರೆ ಚಾಂಪಿಯನ್ಸ್ ಟ್ರೋಫಿ – ಟ್ರಯಲ್ ಸರಣಿ PASS ಆಗ್ತಾರಾ?

ಇಂಗ್ಲೆಂಡ್ ವಿರುದ್ಧ ಏಕದಿನ ಗೆದ್ರೆ ಚಾಂಪಿಯನ್ಸ್ ಟ್ರೋಫಿ – ಟ್ರಯಲ್ ಸರಣಿ PASS ಆಗ್ತಾರಾ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಗೆದ್ದಿದೆ. ಅದ್ರಲ್ಲೂ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ, ಬಲಿಷ್ಠ ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 150 ರನ್​ಗಳಿಂದ ಮಣಿಸಿ ತನ್ನ ಅಜೇಯ ಸರಣಿ ಗೆಲುವಿನ ಓಟವನ್ನು ಮುಂದುವರೆಸಿತು. ಈ ಮೂಲಕ ಕಳೆದ ಆರು ವರ್ಷಗಳಿಂದ ಭಾರತ ತವರಿನಲ್ಲಿನ ಚುಟುಕು ಸಮರದ ವಿಜಯಯಾತ್ರೆ ಮುಂದುವರಿದಿದೆ. ಇದೀಗ ಮೂರು ದಿನಗಳ ಏಕದಿನ ಪಂದ್ಯವನ್ನ ಇಂಗ್ಲೆಂಡ್ ವಿರುದ್ಧ ಆಡಲಿದೆ. ಅತ್ತ ಭಾರತ ತಂಡ ಏಕದಿನ ಸರಣಿ ಗೆದ್ದು ಕಮ್​ಬ್ಯಾಕ್ ಮಾಡೋ ಯೋಜನೆಯಲ್ಲಿದ್ರೆ ಟಿ20 ಸರಣಿಯ ಸೋಲಿನ ಸೇಡನ್ನು ತೀರಿಸಿಕೊಳ್ಳೋಕೆ ಇಂಗ್ಲೆಂಡ್​ಕೂಡ ಭರ್ಜರಿ ತಂತ್ರವನ್ನೇ ರೂಪಿಸಿದೆ.

ಇದನ್ನೂ ಓದಿ : 96 ಎಸೆತಗಳಲ್ಲಿ 12 ರನ್ ಗಳಿಸಿದ್ದ ರಾಹುಲ್ ದ್ರಾವಿಡ್ – ಟೆಸ್ಟ್ ಕ್ರಿಕೆಟ್ ಆಡೋದೇ ಹಿಂಗೆ!

ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಇದೇ ಫೆಬ್ರವರಿ 6 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯೊಂದಿಗೆ ಟೀಂ ಇಂಡಿಯಾದ ಸ್ಟಾರ್ & ಸೀನಿಯರ್ ಪ್ಲೇಯರ್ಸ್ ಮತ್ತೊಮ್ಮೆ ಮೈದಾನಕ್ಕೆ ಇಳಿಯಲಿದ್ದಾರೆ. 2024ರ ವರ್ಷದಲ್ಲಿ ಆಡಿದ್ದ ಒಂದೇ ಒಂದು ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಭಾರತ ಬರೋಬ್ಬರಿ 6 ತಿಂಗಳ ಬಳಿಕ ಮತ್ತೆ ಒಡಿಐ ಫಾರ್ಮೆಟ್ ಆಡಲಿದೆ. ಹಾಗೇ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗಳನ್ನ ಸೋತಿರೋ ಭಾರತಕ್ಕೆ ಈ ಸರಣಿ ತುಂಬಾನೇ ಇಂಪಾರ್ಟೆಂಟ್ ಆಗಿದೆ. ಮೊದಲ ಪಂದ್ಯ ಫೆಬ್ರವರಿ 6 ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗ್ಲೇ ಟೀಮ್ ಇಂಡಿಯಾ ಆಟಗಾರರು ನಾಗ್ಪುರಕ್ಕೆ ತೆರಳಿದ್ದಾರೆ. ಎರಡನೇ ಪಂದ್ಯವು ಫೆಬ್ರವರಿ 9 ರಂದು ಕಟಕ್‌ನಲ್ಲಿ ನಡೆಯಲಿದ್ದು, ಮೂರನೇ ಮತ್ತು ಕೊನೆಯ ಪಂದ್ಯ ಫೆಬ್ರವರಿ 12 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ಆರಂಭವಾಗಲಿವೆ.

ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ಸ್​ಗೆ ಇದು ವರ್ಷದ ಮೊದಲ ಸರಣಿ. ಈಗಾಗ್ಲೇ ಟಿ20 ಫಾರ್ಮೆಟ್​ಗೆ ಗುಡ್ ಬೈ ಹೇಳಿರುವ  ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೇ ಚುಟುಕು ಫಾರ್ಮೆಟ್​ನಿಂದ ಹೊರಗೆ ಉಳಿದಿರೋ ಶುಭಮನ್ ಗಿಲ್, ಕೆ.ಎಲ್.ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಈ ಸರಣಿ ಮೂಲಕ ಮತ್ತೆ ನೀಲಿ ಜೆರ್ಸಿ ತೊಡಲಿದ್ದಾರೆ. ಆದ್ರೆ ತಂಡದಲ್ಲಿರೋ ಬಹುತೇಕ ಬ್ಯಾಟರ್ಸ್ ಕಳಪೆ ಫಾರ್ಮ್​ನಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧವೂ ಬ್ಯಾಟ್ ಬೀಸಿಲ್ಲ. ಆಸ್ಟ್ರೇಲಿಯಾ ಸರಣಿಯಲ್ಲೂ ಫ್ಲ್ಯಾಪ್ ಶೋ. ಹೀಗಾಗೇ ಎಚ್ಚೆತ್ತುಕೊಂಡಿದ್ದ ಬಿಸಿಸಿಐ ಡೊಮೆಸ್ಟಿಕ್ ಕ್ರಿಕೆಟ್ ಆಡ್ಲೇಬೇಕು ಅಂತಾ ಟೀಂ ಇಂಡಿಯಾ ಪ್ಲೇಯರ್ಸ್​​ಗೆ ವಾರ್ನಿಂಗ್ ಕೊಟ್ಟಿತ್ತು. ಅದ್ರಂತೆ ಈ ಬಾರಿ ಎಲ್ರೂ ರಣಜಿ ಅಖಾಡಕ್ಕೆ ಧುಮುಕಿದ್ರು. ಬಟ್ ಇಲ್ಲೂ ರನ್ ಗಳಿಸೋಕೆ ತಿಣುಕಾಡಿದ್ರು. ಲೋಕಲ್ ಬೌಲರ್ಸ್ ಎದುರೇ ನಾನ್ ಬ್ಯಾಟರ್ಸ್ ಥರ ವಿಕೆಟ್ ಕೈಚೆಲ್ಲಿದ್ರು.

ಆಸಿಸ್ ಸರಣಿಯಲ್ಲಿ ಮೂರು ಪಂದ್ಯಗಳಿಂದ ಬರೀ 31 ರನ್ ರಳಿಸಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ರಣಜಿಯಲ್ಲೂ ಮುಗ್ಗರಿಸಿದ್ರು. ಮುಂಬೈ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 19 ಎಸೆತಗಳನ್ನ ಎದುರಿಸಿ ಜಸ್ಟ್ 3 ರನ್ ​ಗಳಿಸಿ ಔಟಾಗಿದ್ರು. ಇತ್ತ ಯಶಸ್ವಿ ಜೈಸ್ವಾಲ್ ಕೂಡ ಕೇವಲ 4 ರನ್​ಗಳಿಸಿ ವಿಕೆಟ್ ಕೊಟ್ಟಿದ್ರು. ಶ್ರೇಯಸ್ ಅಯ್ಯರ್ ಕೂಡ 11 ಗಳಿಸಿ ಪೆವಿಲಿಯನ್ ಸೇರ್ಕೊಂಡಿದ್ರು. ಟೀಂ ಇಂಡಿಯಾದ ಯಂಗ್ ಪ್ರಿನ್ಸ್, ಫ್ಯೂಚರ್ ಕ್ಯಾಪ್ಟನ್ಸ್ ಅಂತಾನೇ ಕರೆಸಿಕೊಳ್ತಿರೋ ಶುಭ್​ಮನ್ ಗಿಲ್ ಮತ್ತು ರಿಷಭ್ ಪಂತ್​ರದ್ದೂ ಇದೇ ಕಥೆ. ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿದ ಶುಭ್​ಮನ್ ಗಿಲ್ ಕೇವಲ 4 ರನ್​ ಗಳಿಸಲಷ್ಟೇ ಸಾಧ್ಯವಾಗಿತ್ತು. ಅತ್ತ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಬ್ಯಾಟ್ ಬೀಸಿದ್ದ ರಿಷಭ್ ಪಂತ್ ಕಲೆಹಾಕಿರುದ್ದು ಕೇವಲ 1 ರನ್ ಮಾತ್ರ. ಇನ್ನು ಕಿಂಗ್ ವಿರಾಟ್ ಕೊಹ್ಲಿ ಬಗ್ಗೆ ಹೇಳೋದೇ ಬೇಡ. ಕೊಹ್ಲಿ 13 ವರ್ಷಗಳ ಬಳಿಕ ರಣಜಿ ಅಂಗಳಕ್ಕೆ ಇಳಿದಿದ್ದು ಇಡೀ ಜಗತ್ತಿಗೇ ಗೊತ್ತಾಗಿತ್ತು. ಆ ಮಟ್ಟಿಗೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಜನಜಾತ್ರೆಯೇ ಸೇರಿತ್ತು. ಬಟ್ ಕೊಹ್ಲಿ ಸಿಡಿಸಿದ್ದು 6 ರನ್ ಅಷ್ಟೇ. ಕೊಹ್ಲಿ ಔಟ್ ಆಗ್ತಿದ್ದಂತೆ ಇಡೀ ಮೈದಾನವೇ ಖಾಲಿ ಆಗಿತ್ತು. ಇನ್ನು ಕೆಎಲ್ ರಾಹುಲ್ ಕೂಡ ಕರ್ನಾಟಕ ಪರ ರಣಜಿ ಆಡಿದ್ರು. ಆದ್ರೆ ಕೆಎಲ್ ಕೂಡ 37 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರು. ಹೀಗಾಗಿ ಈ ಸ್ಟಾರ್ ಪ್ಲೇಯರ್ಸ್ ಎಲ್ರೂ ಹೇಗೆ ಆಡ್ತಾರೆ ಅನ್ನೋ ಕ್ಯೂರಿಯಾಸಿಟಿ ಜಾಸ್ತಿಯಾಗ್ತಿದೆ. ಹಾಗೇ ಈ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿ ಮೇಲೆ ಹೆಚ್ಚಿನ ನಿರೀಕ್ಷೆ ಮತ್ತು ಜವಾಬ್ದಾರಿಗಳೂ ಇವೆ.

Shantha Kumari

Leave a Reply

Your email address will not be published. Required fields are marked *