ಪಾಕ್ ಸೇನೆ – ಉ*ಗ್ರರ ಕಾದಾಟ- ಬಲೂಚಿಸ್ತಾನ ನಿಯಂತ್ರಣ ಕಳೆದುಕೊಳ್ತಾ?
ಉ*ಗ್ರರಾಷ್ಟ್ರಕ್ಕೆ ಉಗ್ರರೇ ಕಂಟಕ!

ಪಾಕ್ ಸೇನೆ – ಉ*ಗ್ರರ ಕಾದಾಟ- ಬಲೂಚಿಸ್ತಾನ ನಿಯಂತ್ರಣ ಕಳೆದುಕೊಳ್ತಾ?ಉ*ಗ್ರರಾಷ್ಟ್ರಕ್ಕೆ ಉಗ್ರರೇ ಕಂಟಕ!

 

ಪಾಪಿ ಪಾಕಿಸ್ತಾನದ ಸ್ಥಿತಿ ಹೇಗ್ ಆಗಿದೆ ಅಂದ್ರೆ ಅತ್ತ ಧರಿ, ಇತ್ತು ಪುಲಿ ಎನ್ನುವಂತಾಗಿದೆ.. ಒಂದ್ಕಡೆ ದೇಶ ನಡಿಸೋಕೆ ಹಣವಿಲ್ಲ, ಮತ್ತೊಂದ್ಕಡೆ ದೇಶವನ್ನ ಶತ್ರುಗಳಿಂದ ಕಾಪಾಡಿಕೊಳ್ಳುವುದಕ್ಕೆ ಆಗದಂತಹ ಸ್ಥಿತಿಯಲ್ಲಿ ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನವಿದೆ. ಜಟ್ಟಿ ಬಿದ್ದರು  ಮೀಸೆ ಮಣ್ಣಾಗಿಲ್ಲ ಅನ್ನೋ ತರ ಆಡುತ್ತಿದೆ ಪಾಕಿಸ್ತಾನ.. ಪಾಕಿಸ್ತಾನ ಯಾರಿಗೆ ಹಾಲೆರದು ಸಾಕಿತ್ತೋ ಅವರೇ ಈಗ ಪಾಕಿಸ್ತಾನವನ್ನ ಕಚ್ಚುತ್ತಿದ್ದಾರೆ.. ಭಯೋತ್ಪದಕರ ನೆಲವಾದ ಪಾಕ್‌ನಲ್ಲಿ ಅವರಿಂದಲೇ ಕಂಟಕ ಎದುರಾಗಿದೆ.. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಂಡುಕೋರರ ಚಟುವಟಿಕೆ ನಡೆಸುತ್ತಿರುವ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಪಾಕ್ ಸೇನೆ ಮೇಲೆ ಮುಗಿ ಬೀಳುತ್ತಿದೆ. ಈ ಬಲೂಚಿಸ್ತಾನದ ಮೇಲೆ ಪಾಕ್ ತನ್ನ ಹಿಡಿತವನ್ನ ಕಳೆದುಕೊಳ್ಳುತ್ತಿದೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಅಕ್ಷರಶಃ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿದ್ದು, ಪ್ರತ್ಯೇಕತಾವಾದಿಗಳ ಕೈ ಮೇಲಾಗುತ್ತಿದೆ. ಇದಕ್ಕೆ ಪಾಕ್ ಸೈನಿಕರು ಸಾವನ್ನಪ್ಪಿರುವುದೇ ಸಾಕ್ಷಿ ಎನ್ನಲಾಗುತ್ತಿದೆ.

ಕಳೆದ 2-3 ದಿನಗಳ  ಹಿಂದೆ ಪ್ರತ್ಯೇಕತಾವಾದಿಗಳು ಪಾಕಿಸ್ತಾನ ಸೇನೆಗೆ ಮರ್ಮಾಘಾತ ನೀಡುತ್ತಿದ್ದು,  ಪಾಕಿಸ್ತಾನ ಸೈನಿಕರು ಸೇರಿದಂತೆ ಬರೊಬ್ಬರಿ 41 ಮಂದಿ ಹತರಾಗಿದ್ದಾರೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಮತ್ತು ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಪಾಕಿಸ್ತಾನದ ಸೈನಿಕರು ಸೇರಿ 41 ಮಂದಿ ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಸಂಖ್ಯೆಯನ್ನು ಅಲ್ಲಗಳೆದಿರುವ ಪಾಕಿಸ್ತಾನ ಸೇನೆ ಸತವರೆಲ್ಲರೂ ಪಾಕಿಸ್ತಾನ ಸೈನಿಕರಲ್ಲ. 18 ಭದ್ರತಾ ಸಿಬ್ಬಂದಿ ಮತ್ತು 23 ಪಾಕ್ ಮೂಲದ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ತೇಪೆ ಹಾಕುವ ಕೆಲಸ ಮಾಡಿದೆ. ಅಂದ್ರೆ ಇಲ್ಲಿ ತನ್ನ ಸೇನೆಯೇ ಸ್ಟ್ರಾಂಗ್ ಇದೆ ಅನ್ನೋದನ್ನ ವಿಶ್ವದ ಮುಂದೆ ದೊಡ್ಡ ನಾಟಕವಾಡುತ್ತಿದೆ.. ಮೃತಪಟ್ಟ ಸೈನಿಕರನ್ನ ಭಯೋತ್ಪಾದಕರ ಲೆಕ್ಕಕ್ಕೆ ಸೇರಿಸಿದ್ರಾ ಅನ್ನೋ ಅನುಮಾನ ದಟ್ಟವಾಗಿ ಕಾಡುತ್ತಿದೆ.

ಇನ್ನು ಬಲೂಚಿಸ್ತಾನದಲ್ಲಿ ಪಾಕ್ ಸೇನೆಯ ಮಾಹಿತಿ ಅನ್ವಯವೇ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಎರಡೂ ಕಡೆಯ ನಡುವಿನ ಘರ್ಷಣೆ ನಡೆದಿದೆ ಎನ್ನಲಾಗಿದೆ. ಇನ್ನು ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಗೆ ಹಿನ್ನಡೆಯಾಗುತ್ತಿದೆ ಎಂಬ ವಿಚಾರದ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಬಲೂಚಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಾಂತ್ಯದಲ್ಲಿ ಪ್ರಸ್ತುತ ಇರುವ ಭದ್ರತಾ ಪರಿಸ್ಥಿತಿಯ ಕುರಿತು ಸೇನಾ ಮುಖ್ಯಸ್ಥರಿಗೆ ಸಮಗ್ರ ಮಾಹಿತಿ ನೀಡಿದ್ದಾರೆ.

 ಪಾಪಿ ಪಾಕ್‌ಗೆ ಇದೆಲ್ಲಾ ಬೇಕಿತ್ತಾ?

ಇನ್ನೂ ತನಗೆ ಈಗ ಸ್ಥಿತಿ ಬರೋದಕ್ಕೆ ಕಾರಣವೇ ಪಾಕಿಸ್ತಾನ.. ಒಂದು ಕಾಲದಲ್ಲಿ ಭಯೋತ್ಪಾದಕರಿಗೆ ನೆರುವು ನೋಡುತ್ತಿದ್ದು ಇದೇ ಪಾಕಿಸ್ತಾನ.. ತನ್ನ ಶತ್ರು ದೇಶದ  ಮೇಲೆ ಅಟ್ಯಾಕ್ ಮಾಡೋಕೆ ಇದೇ  ಭಯೋತ್ಪಾದಕರನ್ನ ಪಾಕ್ ಬಳಸಿಕೊಳ್ಳುತಿತ್ತು.. ಆದ್ರೆ ಈಗ ಗುರುವಿಗೆ ತಿರುಮಂತ್ರವಾಗಿದ್ದು, ಗಡಿಯಲ್ಲಿ ಅಟ್ಯಾಕ್ ಮೇಲೆ ಅಟ್ಯಾಕ್ ಆಗುತ್ತಿದೆ. ಇದ್ರಲ್ಲಿ ಅಮಾಯಕ ಸೈನಿಕರು ಪ್ರಾಣ ಬಿಡುತ್ತಿದ್ದು, ಪಾಕ್ ಏನ್ ಆಗಿಲ್ಲ ಅನ್ನೋ ರೇಂಜ್‌ಗೆ ಜಗತ್ತಿನ ಮುಂದೆ ಬಿಲ್ಡಪ್ ಕೊಡ್ತಿದೆ.. ಭಾರತ ಬದ್ಧ ವೈರಿ ತನ್ನ ಅಂತ್ಯವನ್ನ ತಾನೇ ಬರೆದುಕೊಳ್ಳುತ್ತಿದೆ. ಒಂದ್ಕಡೆ ಆರ್ಥಿಕ ಪರಿಸ್ಥಿತಿ ಪಾಕ್‌ನಲ್ಲಿ ಕಂಪ್ಲೀಟ್ ಆಗಿ ಹದಗೆಟ್ಟು ಹೋಗಿದೆ. ಎಷ್ಟೇ ಸರ್ಕಸ್ ಮಾಡಿ ಸರ್ಕಾರ ನಡೆಸುತ್ತಿವರ ಪಾಕ್‌ಗೆ ಭಯೋತ್ಪಾದಕರು ದೊಡ್ಡ ತಲೆನೋವು ಆಗಿದ್ದಾರೆ..

 ಬಡ್ಡಿ ಕಡಿತಗೊಳಿಸಿದ್ರೂ ಚೇತರಿಸಿಕೊಳ್ಳದ ಆರ್ಥಿಕತೆ

ಬಡ್ಡಿದರವನ್ನು ಶೇ.10ರಷ್ಟು ಭಾರೀ ಕಡಿತಗೊಳಿಸಿದ್ರೂ ಹಾಲಿ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಪಾಕ್‌ ಆರ್ಥಿಕತೆಗೆ ಚೇತರಿಕೆ ಕಂಡಿಲ್ಲ. ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನ ಬ್ಯಾಂಕ್‌ ಜ.27ರಂದು ಬಡ್ಡಿದರವನ್ನು ಶೇ.1ರಷ್ಟು ಇಳಿಸಿದ್ದು, ಇದರಿಂದ ಬಡ್ಡಿದರ ಶೇ.12ಕ್ಕೆ ಇಳಿಕೆಯಾಗಿದೆ. ಜೂನ್‌ನಲ್ಲಿ ಶೇ22ರಷ್ಟಿದ್ದ ಬಡ್ಡಿದರ ಈವರೆಗೆ ಒಟ್ಟಾರೆ ಶೇ.10ರಷ್ಟು ಕಡಿತಗೊಂಡಂತಾಗಿದೆ. ಬಡ್ಡಿದರ ಕಡಿತದಿಂದ ಮಾರುಕಟ್ಟೆಗೆ ಹಣದ ಹರಿವು ಹೆಚ್ಚಾಗಿ, ಬೆಳವಣಿಗೆಗೆ ಪ್ರೋತ್ಸಾಹ ಸಿಗುವ ನಿರೀಕ್ಷೆ ಇತ್ತು. ಬಡ್ಡಿದ ತೀವ್ರ ಇಳಿಮುಖದ ಹೊರತಾಗಿಯೂ ಕಳೆದ ಏಳು ತಿಂಗಳಲ್ಲಿ ಹಣಕಾಸು ವಿಸ್ತರಣೆಯು ಋಣಾತ್ಮಕವಾಗಿಯೇ ಇದೆ. ನಿಯಮಿತವಾಗಿ ಬಡ್ಡಿದರ ಇಳಿಸಿದ ಪರಿಣಾಮ ಬ್ಯಾಂಕ್‌ಗಳಿಂದ ಲಿಕ್ವಿಡಿಟಿಯು ಖಾಸಗಿ ಕ್ಷೇತ್ರಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹರಿದುಹೋಗುವಂತೆ ಮಾಡಿದೆ. ಇಷ್ಟಾದರೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವಲ್ಲಿ ಇದು ವಿಫಲವಾಗಿದೆ ಅನ್ನೋ ಬಗ್ಗೆ ವರದಿಯಾಗಿದೆ. ಒಂದ್ಕಡೆ ಚೇತರಿಸಿಕೊಳ್ಳದ ಆರ್ಥಿಕತೆ ಮತ್ತೊಂದ್ಕಡೆ ಭಯೋತ್ಪಾದಕರ ಕಾಟದಿಂದ ಶತ್ರುರಾಷ್ಟ್ರ ಪಾಕ್ ಕಂಗೆಟ್ಟು ಹೋಗಿದೆ..

Kishor KV

Leave a Reply

Your email address will not be published. Required fields are marked *