ಕಾಡಿಬೇಡಿ ಗಂಡನ ಕಿಡ್ನಿ ಮಾರಿಸಿದ್ಲು! ಪತಿಗೆ ಕೈ ಕೊಟ್ಟು ಲವರ್ ಜೊತೆ ಜೂಟ್!
ನವರಂಗಿ ಮಾತು ಕೇಳಿ ಪೆದ್ದನಾದ ಗಂಡ

ಕಾಡಿಬೇಡಿ ಗಂಡನ ಕಿಡ್ನಿ ಮಾರಿಸಿದ್ಲು! ಪತಿಗೆ ಕೈ ಕೊಟ್ಟು ಲವರ್ ಜೊತೆ ಜೂಟ್!ನವರಂಗಿ ಮಾತು ಕೇಳಿ ಪೆದ್ದನಾದ ಗಂಡ

ಹಣಕ್ಕಾಗಿ ನಮ್ಮ ಜನ ಎಷ್ಟು ಕೀಳುಮಟ್ಟಕ್ಕೆ ಬೇಕಾದರೂ ಇಳಿತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಕಿಲಾಡಿ ಲೇಡಿಯ ಖರಾಮತ್ತು ನಡೆದಿದೆ. ಬರೋಬ್ಬರಿ 10 ಲಕ್ಷಕ್ಕೆ ಗಂಡನ ಒಂದು ಕಿಡ್ನಿಯನ್ನು ಮಾರಾಟ ಮಾಡಿದ ಹೆಂಡತಿ ಹಣ ತನ್ನ ಕೈಗೆ ಸಿಗುತ್ತಿದ್ದಂತೆ ಮಣ್ಣು ತಿನ್ನೋ ಕೆಲಸ ಮಾಡಿದ್ದಾಳೆ.

ಹೌದು, ಸಂಸಾರದ ಟ್ರ್ಯಾಕ್​ನ ಜೊತೆಯಲ್ಲೇ ತನ್ನದೊಂದು ಸೈಡ್ ಟ್ರ್ಯಾಕ್ ಕೂಡ ನಡೆಸ್ತಿದ್ದ  ಈ ಕಿಲಾಡಿ ಲೇಡಿ, ಕಾಡಿಬೇಡಿ, ಕಾಟ ಕೊಟ್ಟು ತನ್ನ ಗಂಡನ ಕಿಡ್ನಿಯನ್ನೂ ಮಾರಿಸಿದ್ದಳು. ಈಕೆಗೆ ಮದುವೆಯಾಗಿದ್ರೂ ರವಿದಾಸ್​ ಅನ್ನೋನ ಜೊತೆ ಲವ್ವಿ-ಡವ್ವಿ ಇತ್ತು. ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಈ ಮಹಿಳೆ ಗಂಡನ ಕಿಡ್ನಿ ಮಾರೋ ಪ್ಲಾನ್ ಮಾಡಿದ್ದಾಳೆ.  ಮನೆಯಲ್ಲಿ ಹಣಕಾಸಿನ ತೊಂದರೆ ಇದೆ. ಮಗಳ ಓದು, ಮದುವೆಗಾಗಿ ಹಣ ಬೇಕು ಎಂದು ಗಂಡನಿಗೆ ಕಿಡ್ನಿ ಮಾರಲು ಒತ್ತಾಯಿಸಿದ್ದಾಳೆ. ಕಿಡ್ನಿ ಮಾರಾಟ ಮಾಡಿ ಅಂತ ಪದೇ ಪದೇ ಗಂಡನಿಗೆ ಕಾಟ ಕೊಟ್ಟಿದ್ದ ಪತ್ನಿ ಮಾತನ್ನು ಈ ಬಡಪಾಯಿ ಗಂಡ ನಂಬಿದ್ದಾನೆ.

ಹೆಂಡತಿ ಮಾತು ನಂಬಿದ ಗಂಡ ಕಳೆದ 3 ತಿಂಗಳ‌ ಹಿಂದೆ ₹10 ಲಕ್ಷಕ್ಕೆ ತನ್ನ ಕಿಡ್ನಿ ಮಾರಿದ್ದಾನೆ. ಕಿಡ್ನಿಯನ್ನು ಮಾರಿ ಬಂದಿದ್ದ ಹಣವನ್ನು ಪತ್ನಿ ಕೈಗೆ ಕೊಟ್ಟಿದ್ದಾನೆ. 10 ಲಕ್ಷ ರೂಪಾಯಿಯಲ್ಲಿ ಮಗಳ ಶಿಕ್ಷಣ, ಮದುವೆ ಮಾಡಬಹುದು. ಉಳಿದ ಹಣದಲ್ಲಿ ಆರಾಮಾಗಿ ಜೀವನ ಸಾಗಿಸಲು ಯೋಚನೆಯನ್ನು ಮಾಡಿದ್ದ ಗಂಡನಿಗೆ ಬಿಗ್ ಶಾಕ್ ಎದುರಾಗಿತ್ತು.

ಹಣ ಕೈ ಸೇರುತ್ತಿದ್ದಂತೆ ನಾಟಕವಾಡಿ ಕಿಲಾಡಿ ಹೆಂಡತಿ ಈ ಹಣವನ್ನು ಬೆಳಗ್ಗೆ ಬ್ಯಾಂಕಿಗೆ ಜಮಾ ಮಾಡುತ್ತೇನೆ ಎಂದು ಹೇಳಿ ತನ್ನ ಬಳಿ ಇರಿಸಿಕೊಂಡಿದ್ದಾಳೆ. ಮನೆಯಲ್ಲಿದ್ದ ₹10 ಲಕ್ಷ ನೋಡಿದ ಮಹಿಳೆ ಕಂತೆ, ಕಂತೆ ಹಣ ತೆಗೆದುಕೊಂಡು ಲವರ್ ಜೊತೆ ಎಸ್ಕೇಪ್ ಆಗಿದ್ದಾಳೆ. ತನ್ನ ಪ್ರಿಯಕರ ರವಿದಾಸ್​ ಜೊತೆ ಓಡಿ ಹೋಗಿ ಬ್ಯಾಕರ್​ಪುರದಲ್ಲಿ ಹೊಸ ಸಂಸಾರ ಆರಂಭಿಸಿದ್ದಾಳೆ. ಸಾಕಷ್ಟು ದಿನ ತನ್ನ ಹೆಂಡತಿ ಎಲ್ಲಿ ಹೋದ್ಲು ಅಂತ ಕಿಡ್ನಿ ಕಳೆದುಕೊಂಡ ಗಂಡ ಹುಡುಕಿದ್ದಾನೆ..

ಆದ್ರೆ ಕೆಲ ದಿನಗಳ ಹಿಂದೆ ತನ್ನ ಹೆಂಡತಿ ರವಿದಾಸ್ ಎಂಬ ವ್ಯಕ್ತಿಯೊಂದಿಗೆ ಬಾರೇಕ್‌ಪುರದ ಸುಭಾಷ್ ಕಾಲೋನಿಯಲ್ಲಿ ವಾಸಿಸುತ್ತಿರುವುದು ಗಂಡನಿಗೆ ತಿಳಿದಿದೆ.  ನಂತ್ರ ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದಾನೆ.  ಪತಿ ಪತ್ನಿಯನ್ನ ಬಾ ಎಂದು ಕರೆದಿದ್ದಾನೆ. ನಾನು ಬರಲ್ಲ.. ಬೇಕಾದ್ರೆ ಡಿವೋರ್ಸ್​ ಕೊಡ್ತೀನಿ ಎಂದು ಮಹಿಳೆ ಹೇಳಿದ್ದಾಳೆ. ಪೊಲೀಸ್​ ಠಾಣೆಗೆ ದೂರು ನೀಡಿರುವ ಪತಿಗೆ ಈಗ ಅತ್ತ ಪತ್ನಿಯೂ ಇಲ್ಲ.. ಇತ್ತ ಕಿಡ್ನಿಯೂ, ಹಣವೂ ಇಲ್ಲ ಎಂದು ಕಂಗಾಲಾಗಿದ್ದಾನೆ. ಇದನ್ನ ನೋಡಿದ್ರೆ ನಿಜಕ್ಕೂ ನಮಗ್ಗೆ ತಮಾಷೆ ಅನ್ಸುತ್ತೆ.. ಆದ್ರೆ ಇದರ ಬಗ್ಗೆ ಯೋಚಿಸಿದ್ರೆ ಎಷ್ಟು ಭಯ ಆಗುತ್ತೆ ಅಲ್ವಾ.. ತನ್ನ ಮಕ್ಕಳಿಗಾಗಿ, ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಗಂಡ ಅಷ್ಟು ದೊಡ್ಡ ತ್ಯಾಗ ಮಾಡಿದ್ರೆ, ಹೆಂಡತಿ ಗಂಡನ ಜೀವದ ಜೊತೆ ಚೆಲ್ಲಾಟವಾಡಿ ಬೇರೆಯವರ ಜೊತೆ ಹೋಗಿದ್ದು ನಿಜಕ್ಕೂ ದುರಂತ..

Kishor KV

Leave a Reply

Your email address will not be published. Required fields are marked *