ಮಹಾಕುಂಭಮೇಳದಲ್ಲಿ 3ನೇ ಪುಣ್ಯ ಸ್ನಾನ – ಮುಗಿಲು ಮುಟ್ಟಿದ ಹರ್ ಹರ್ ಮಹಾದೇವ್’ ಘೋಷಣೆ
ತ್ರಿವೇಣಿ ಸಂಗಮದ ಘಾಟ್‌ಗಳ ಮೇಲೆ ತೀವ್ರ ನಿಗಾ

ಮಹಾಕುಂಭಮೇಳದಲ್ಲಿ 3ನೇ ಪುಣ್ಯ ಸ್ನಾನ – ಮುಗಿಲು ಮುಟ್ಟಿದ ಹರ್ ಹರ್ ಮಹಾದೇವ್’ ಘೋಷಣೆತ್ರಿವೇಣಿ ಸಂಗಮದ ಘಾಟ್‌ಗಳ ಮೇಲೆ ತೀವ್ರ ನಿಗಾ

ಮಹಾಕುಂಭಮೇಳದ 21ನೇ ದಿನದ ಮೂರನೇ ಮತ್ತು ಅಂತಿಮ ಪುಣ್ಯ ಸ್ನಾನವು ಸೋಮವಾರ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿದೆ. ಮಂತ್ರಗಳ ಪಠಣ-‘ಹರ್ ಹರ್ ಮಹಾದೇವ್’ ಘೋಷಣೆಗಳು ಮುಗಿಲು ಮುಟ್ಟಿದೆ.

ಭಾನುವಾರ ಬೆಳಿಗ್ಗೆ 9:44 ಕ್ಕೆ ಬಸಂತ್ ಪಂಚಮಿ ಆರಂಭವಾಗುತ್ತಿದ್ದಂತೆ, ಸಾಮಾನ್ಯ ಭಕ್ತರು ಅಮೃತ ಸ್ನಾನವನ್ನು ಪ್ರಾರಂಭಿಸಿದರು. ಇಂದು ಬೆಳಿಗ್ಗೆ 5 ಗಂಟೆಯಿಂದ ಸಾಧುಗಳು ಪುಣ್ಯ ಸ್ನಾನವನ್ನು ಆರಂಭಿಸಿದರು.

ಈ ನಡುವೆ ಮೌನಿ ಅಮಾವಾಸ್ಯೆಯಂದು ಮಹಾ ಕುಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಹಿನ್ನೆಲೆ ಇಂಂದು ನಡೆಯುತ್ತಿರುವ ಅಮೃತ ಸ್ನಾನದ ಮೇಲೆ ಉತ್ತರಪ್ರದೇಶ ಸರ್ಕಾರ ಹದ್ದಿನ ಕಣ್ಣು ಇಟ್ಟಿದೆ. ತ್ರಿವೇಣಿ ಸಂಗಮದ ಘಾಟ್‌ಗಳ ಮೇಲೆ ನಿಗಾ ವಹಿಸಿರುವ ಪೊಲೀಸರು ಯಾವುದೇ ಅವಘಡಗಳಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಮಹಾಕುಂಭದ ಎಲ್ಲಾ 25 ಸೆಕ್ಟರ್‌ಗಳು ಹಾಗೂ 30 ಪಾಂಟೂನ್ ಸೇತುವೆಗಳು ಮತ್ತು ಪ್ರಮುಖ ಬ್ಯಾರಿಕೇಡ್ ವಲಯಗಳ ಮೇಲ್ವಿಚಾರಣೆ ನಡೆಸಲಾಗಿದೆ. ಕಂಟ್ರೋಲ್ ರೂಂ ಮೂಲಕ ಕುಂಭ ಕಮಾಂಡ್ ತಂಡದಿಂದ ಮೇಲ್ವಿಚಾರಣೆ ನಡೆಸಲಾಗಿದೆ.

 

Kishor KV