ಸಂಗೀತ ಸರಸ್ವತಿಗೆ ಸ್ವರಾಭಿಷೇಕ – ವೀಣಾ ವಾಣಿ ಸಂಗೀತ ಶಾಲೆಯಿಂದ ಗಾನ ವೈಭವ

ಸಂಗೀತ ಸರಸ್ವತಿಗೆ ಸ್ವರಾಭಿಷೇಕ – ವೀಣಾ ವಾಣಿ ಸಂಗೀತ ಶಾಲೆಯಿಂದ ಗಾನ ವೈಭವ

ನೂರಾರು ಮಕ್ಕಳಿಂದ ಏಕಕಾಲದಲ್ಲಿ ಗಿಟಾರ್, ಕೀ ಬೋರ್ಡ್‌ಗಳಿಂದ ರಾಷ್ಟ್ರಗೀತೆ, ವೀಣೆ ತಬಲಗಳ ನಾದದಲ್ಲಿ ತಾಯಿ ಭಾರತಿಗೆ ನಮನ.. ಸುಸ್ವರದಲ್ಲಿ ನಾಡಗೀತೆಯ ನಾದ. ಇದು ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಶ್ರೀ ವೀಣಾವಾಣಿ ಸಂಗೀತ ಶಾಲೆಯ 50ನೇ ವಾರ್ಷಿಕೋತ್ಸವ  ಮತ್ತು ಗಣರಾಜ್ಯೋತ್ಸವದ ಅಂಗವಾಗಿ ನಡೆದ ಮಕ್ಕಳ ಸಂಗೀತ ರಾಗ ಸಂಗಮ ಸಂಭ್ರಮ.

ಇದನ್ನೂ ಓದಿ: ಶೋಭಿತಾಗೆ ಸಿನಿಮಾ ಆಫರ್.. ಹೆಂಡ್ತಿ ಮೇಲೆ ಸಿಟ್ಟಾದ್ರಾ ನಾಗಾ ಚೈತನ್ಯ? – ಮದುವೆ ಬೆನ್ನಲ್ಲೇ ಮನಸ್ತಾಪ ಶುರು?

ಬನಶಂಕರಿ ಎರಡನೇ ಹಂತ ಬಿಡಿಎ ಕಾಂಪ್ಲೆಕ್ಸ್ ಪಾರ್ಕ್ ಬಳಿ ಭಾನುವಾರ ಬೆಳಗ್ಗೆ ನಡೆದ ಗಾನ ವೈಭವ ಸಂಗೀತ ಪ್ರಿಯರ ಮನ ಸೆಳೆದಿತ್ತು. ಈ ಸಂಗೀತ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಗಾಯಕರು, 100 ಮಂದಿ ಗಿಟಾರ್ ನುಡಿಸುವವರು, 100 ಮಂದಿ ಕೀಬೋರ್ಡ್ ನುಡಿಸುವವರು ಹಾಗೂ ವೀಣೆ ನುಡಿಸುವವರು, ವೈಲಿನ್ ನುಡಿಸುವವರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದ್ರು.

ಈ ಸಂಗೀತ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಪದ್ಮನಾಭ ಕ್ಷೇತ್ರದ ಶಾಸಕರಾದ ಆರ್. ಅಶೋಕ್ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಈ ವೇಳೆ ಮಕ್ಕಳ ಸಂಗೀತ ಗಾಯನಕ್ಕೆ ಮನಸೋತರು. ಇದೇ ವೇಳೆ ಮಾತನಾಡಿದ ಆರ್. ಅಶೋಕ್, ಮಕ್ಕಳ ಸಂಗೀತ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಹಾಗೆಯೇ ಪಾರ್ಕ್‌ನಲ್ಲಿದ್ದ ಸಂಗೀತ ಕಾರಂಜಿ ಬಗ್ಗೆ ಮಾತನಾಡಿ ನೆರೆದಿದ್ದವರಿಗೆ ಕಾರಂಜಿ ಸಂಗೀತ ವೈಭವವನ್ನ ತೋರಿಸಿದ್ರು.

ಇನ್ನು ಶ್ರೀ ವೀಣಾ ವಾಣಿ ಸಂಗೀತ ಶಾಲೆಯ ಮುಖ್ಯಸ್ಥರಾದ ಗಿರೀಶ್ ಅವ್ರು ಕೂಡಾ ತಾಯಿ ಭಾರತಿಗೆ ಸ್ವರಾಭಿಷೇಕ ಮಾಡಿರುವ ಬಗ್ಗೆ ಹೆಮ್ಮೆಯಿಂದ ಮಾತಾಡಿದರು. ಸಂಗೀತದ ಮೂಲಕ ನೆರೆದಿದ್ದವರನ್ನ ಗಾಯನದ ಮೂಲಕ ಮನ ಸೆಳೆದ ಮಕ್ಕಳು ಕೂಡಾ ತಮ್ಮ ಅನಿಸಿಕೆಯನ್ನ ಹಂಚಿಕೊಂಡ್ರು.

ಶ್ರೀ ವೀಣಾವಾಣಿ ಸಂಗೀತ ಶಾಲೆ ಹಲವು ಸಾಧನೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಮಕ್ಕಳು ಬರೀ ಸಂಗೀತ ಮಾತ್ರವಲ್ಲ, ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಗೀತ ಶಾಲೆಗೂ ಕೀರ್ತಿ ತಂದಿದ್ದಾರೆ. ಜೊತೆಗೆ ಸಂಗೀತದಲ್ಲೇ ಗಿನ್ನಿಸ್ ರೆಕಾರ್ಡ್ ಕೂಡಾ ಮಾಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಏಕಕಾಲದಲ್ಲಿ ನೂರಾರು ಮಕ್ಕಳು ಸಂಗೀತ ಸರಸ್ವತಿಗೆ ಸ್ವರಾಭಿಷೇಕ ಮಾಡಿದ್ರು.

Shwetha M

Leave a Reply

Your email address will not be published. Required fields are marked *