ಶೋಭಿತಾಗೆ ಸಿನಿಮಾ ಆಫರ್.. ಹೆಂಡ್ತಿ ಮೇಲೆ ಸಿಟ್ಟಾದ್ರಾ ನಾಗಾ ಚೈತನ್ಯ? – ಮದುವೆ ಬೆನ್ನಲ್ಲೇ ಮನಸ್ತಾಪ ಶುರು?
ಟಾಲಿವುಡ್ ನಟ ನಾಗಚೈತನ್ಯ.. ನಟಿ ಸಮಂತಾಗೆ ಡಿವೋರ್ಸ್ ಕೊಟ್ಟಾಗಿನಿಂದ ಹಾಟ್ ಟಾಪಿಕ್ ಆಗಿದ್ದಾರೆ. ಇವರು ಕೂತ್ರೂ ನಿಂತ್ರೂ ಸುದ್ದಿಯಾಗ್ತಾರೆ.. ಇತ್ತೀಚೆಗಷ್ಟೇ ಶೋಭಿತಾರನ್ನ ಪ್ರೀತಿಸಿ ಮದುವೆ ಆಗಿದ್ದಾರೆ.. ಮದುವೆ ಆದ ಬಳಿಕ ನಾಗಾಚೈತನ್ಯ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ.. ಇದೀಗ ಶೋಭಿತಾಗೂ ಸಿನಿಮಾದಲ್ಲಿ ಆಫರ್ ಗಳು ಬರ್ತಿವೆಯಂತೆ.. ಸಿನಿಮಾದಲ್ಲಿ ಆಕ್ಟ್ ಮಾಡಲು ನಟಿಗೂ ಮನಸಿದ್ಯಂತೆ.. ಆದ್ರೀಗ ಇವರಿಬ್ಬರ ಮಧ್ಯೆ ಇದೇ ವಿಚಾರವಾಗಿ ಮನಸ್ತಾಪ ಎದ್ದಿದೆ ಅಂತಾ ಹೇಳಲಾಗ್ತಿದೆ.. ಅಷ್ಟಕ್ಕೂ ಶೋಭಿತಾ ತೆಗೆದುಕೊಂಡ ನಿರ್ಧಾರ ಏನು? ನಾಗಚೈತನ್ಯ ಸಿಟ್ಟು ಮಾಡಿಕೊಂಡಿದ್ದು ಹೌದಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2025 – ಯಾವ ವಸ್ತುಗಳು ಅಗ್ಗ? ಯಾವುದು ದುಬಾರಿ?
ಟಾಲಿವುಡ್ ನಟ ನಾಗ ಚೈತನ್ಯ-ಶೋಭಿತಾ ಧೂಳಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಮದ್ಯೆ ಆಗ್ತಿದ್ದಂತೆ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರಂತೆ ಈ ವಿಷಯ ಇದ್ದಕ್ಕಿದ್ದಂತೆ ಹಾಟ್ ಟಾಪಿಕ್ ಆಗುತ್ತಲಿದೆ.
ಸಮಂತಾ ಅವರೊಂದಿಗಿನ ವಿಚ್ಛೇದನದ ನಂತರ, ಶೋಭಿತಾ ಅವರನ್ನು ನಾಗ ಚೈತನ್ಯ ಮದ್ಯೆ ಆಗಿ ಹೊಸ ಜೀವನ ನಡೆದುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಸೋಭಿತಾ-ನಾಗ ಚೈತನ್ಯ ವಿವಾಹ ಸಮಾರಂಭಕೆಲವೇ ಅತಿಥಿಗಳೊಂದಿಗೆ ನಡೆದಿತ್ತು. ಈ ಮದುವೆ ಸಂಭ್ರಮಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಟ್ರೆಂಡ್ ಆಗಿವೆ.
ಸೋಭಿತಾ-ನಾಗ ಚೈತನ್ಯ ದಂಪತಿ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ತಲೆದೂರಿವೆ ಎಂಬ ಮಾತು ಹೊರಬಿದ್ದಿದೆ. ಇದಕ್ಕೆ ಪ್ರಮುಖ ಕಾರಣ ಚೈತು ಪತ್ನಿ ಸೋಭಿತಾ ಎನ್ನಲಾಗಿದೆ. ಮದುವೆಯ ನಂತರವೂ ಶೋಭಿತಾ ಅವರಿಗೆ ಸಿನಿಮಾ ಆಫರ್ಗಳು ಬರುತ್ತಿವೆ. ಅದೂ ಹೆಚ್ಚಾಗಿ ಬಾಲಿವುಡ್ ನಿಂದ. ಹಾಗಾಗಿಯೇ ಅವರನ್ನು ಮುಂಬೈಗೆ ಶಿಫ್ಟ್ ಮಾಡುವ ಪ್ಲಾನ್ ಇದೆ ಎಂಬ ಮಾತು ಕೇಳಿಬರುತ್ತಿದೆ. ಸ್ವಲ್ಪ ದಿನ ಕಾಯೋಣ ಎಂದು ಚೈತು ಹೇಳುತ್ತಿದ್ದಾರಂತೆ. ಈ ವಿಚಾರವನ್ನು ನಾಗಾರ್ಜುನ ಕೂಡ ಸಂಪರ್ಕಿಸಿದ್ದಾರಂತೆ, ಆದರೆ ಅವರು ನಿರ್ಧಾರವನ್ನು ಇಬ್ಬರಿಗೂ ಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಸಮಂತಾ ವಿಚಾರದಲ್ಲೂ ಇದೇ ಆಗಿತ್ತು. ಚೈತು-ಸಮಂತಾ ಮದುವೆಯ ನಂತರ ಪ್ರತ್ಯೇಕ ಮನೆಯಲ್ಲಿ ವಾಸ ಮಾಡುವ ಉದ್ದೇಶದಿಂದ ಫ್ಲಾಟ್ ತೆಗೆದುಕೊಂಡಿದ್ದರು ಎಂಬ ಮಾತು ಕೇಳಿಬಂದಿತ್ತು. ಅದು ಬಿಟ್ಟರೆ ಈಗ ಶೋಭಿತಾ ವಿಚಾರದಲ್ಲೂ ಅದೇ ಆಗುತ್ತಿದೆ ಎಂಬ ಮಾತು ಟಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದೆಡೆ ಇತ್ತೀಚೆಗೆ ಶೋಭಿತಾ ಅವರ ಗ್ಲಾಮರ್ ಶೋ ಕೂಡ ಹಾಟ್ ಟಾಪಿಕ್ ಆಗುತ್ತಿದೆ. ಶೋಭಿತಾ ಅವರ ಹಲವು ಫೋಟೋಗಳು ವೈರಲ್ ಆಗಿವೆ. ಈ ಲೆಕ್ಕಾಚಾರ ನೋಡಿದರೆ ಸೋಭಿತಾ ಮದುವೆಯ ನಂತರ ಸಮಂತಾ ಅವರ ಹಾಗೇ ಸಿನಿಮಾ ಮಾಡಲು ರೆಡಿಯಾಗುತ್ತಿದ್ದಾರಂತೆ. ಇದೆಲ್ಲ ಕಂತೆ ಸುದ್ದಿಯಾಗಿದೆ.. ಆದರೆ ಈ ಜೋಡಿಯಿಂದ ಅಥವಾ ಕುಟುಂಬಸ್ಥರು ಯಾವುದೇ ಸ್ಪಷ್ಟನೆ ನೀಡಿಲ್ಲ.