ಇವರೇ ವಿಶ್ವದ ಶ್ರೀಮಂತ ರಾಜಕಾರಣಿ – 58 ವಿಮಾನ, 700 ಕಾರ್, 20 ಅರಮನೆ
ಎಲಾನ್ ಮಾಸ್ಕ್ಗೆ ಪುಟಿನ್ ಪೈಪೋಟಿ

ಇವರೇ ವಿಶ್ವದ ಶ್ರೀಮಂತ ರಾಜಕಾರಣಿ – 58 ವಿಮಾನ, 700 ಕಾರ್, 20 ಅರಮನೆಎಲಾನ್ ಮಾಸ್ಕ್ಗೆ ಪುಟಿನ್ ಪೈಪೋಟಿ

ಟೆಸ್ಲಾ ಕಂಪನಿ,  ಎಕ್ಸ್ ಪ್ಲಾಟ್‌ಫಾರಂ ಮಾಲೀಕ ಎಲಾನ್  ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ರಾಜಕೀಯ ನಾಯಕರೊಬ್ಬರು ಎಲಾನ್ ಮಸ್ಕ್ ಆಸ್ತಿಗೆ ಪೈಪೋಟಿ ನೀಡುತ್ತಿದ್ದಾರೆ. ಈ ರಾಜಕೀಯ ನಾಯಕ ವಿಶ್ವದ ಶ್ರೀಮಂತ ರಾಜಕಾರಣಿ ಎಂದು ಕರೆಸಿಕೊಂಡಿದ್ದಾರೆ. ಅವರು ಯಾರಂದ್ರೆ  ರಷ್ಯಾ ಅಧ್ಯಕ್ಷರಾಗಿರವ ಪುಟಿನ್, ಇವರು ಶ್ರೀಮಂತ ರಾಜಕೀಯ ಮುಖಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟು ಮಾತ್ರವಲ್ಲ ಪುಟಿನ್ ವಿಶ್ವದ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ. ರಷ್ಯಾದ ಅಧ್ಯಕ್ಷರಾಗಿರುವ ಪುಟಿನ್ ವಾರ್ಷಿಕ 1,40,000 ಡಾಲರ್  ಅಂದ್ರೆ ಸುಮಾರು 1 ಕೋಟಿ 17 ಲಕ್ಷ ಸಂಬಳ ಪಡೆಯುತ್ತಾರೆ. ಇವರ ಬಳಿ  700 ಕಾರ್, 58 ವಿಮಾನ, 20 ಅರಮನೆ , 200 ಬಿಲಿಯನ್ ಡಾಲರ್ ಆಸ್ತಿ ಇದೆ ಎಂದು ವರದಿಯಾಗಿದೆ. ವಾರ್ಷಿಕವಾಗಿ 1 ಕೋಟಿ ರೂ.ಗಳಿಗೂ ಅಧಿಕ ಸಂಬಳ ಪಡೆಯುತ್ತಿದ್ದಾರೆ. ಸಂಬಳ ಸೇರಿದಂತೆ ವಿವಿಧ ಮೂಲಗಳಿಂದಲೂ ನಿರಂತರ ಆದಾಯವನ್ನು  ಪಡೆಯುತ್ತಿದ್ದಾರೆ.

2007ರಲ್ಲಿ ಯುಎಸ್ ಸೆನೆಟ್ ಜ್ಯುಡಿಷಿಯಲ್‌ಗೆ ಸಲ್ಲಿಸಿದ ವರದಿ ಪ್ರಕಾರ, ಪುಟಿನ್ 200 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಆದು ಆಗಲೇ ಈಗ ಆಸ್ತ್ರಿ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ. ವಿಶ್ವದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ  ಮಾಡುವ ಫೋರ್ಬ್ಸ್‌ಗೂ ವ್ಲಾಡಿಮಿರ್ ಪುಟಿನ್ ಆಸ್ತಿಯ ಪರಿಶೀಲನೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪುಟಿನ್ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಕೆಲ ವರದಿಗಳ ಪ್ರಕಾರ, ಅಮೆಜಾನ್ ಸ್ಥಾಪಕ ಬೆಜೊಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಮತ್ತು ಫ್ರಾನ್ಸ್ ಶ್ರೀಮಂತ ವ್ಯಕ್ತಿಯಾಗಿರುವ ಬರ್ನಾಲ್ಡ್ ಅರ್ನಾಲ್ಡ್ ಅವರಿಗಿಂತಲೂ ವ್ಲಾಡಿಮಿರ್ ಪುಟಿನ್ ಶ್ರೀಮಂತ ಎಂದು ಹೇಳಲಾಗುತ್ತದೆ.

ಪುಟಿನ್ 20 ಕ್ಕೂ ಹೆಚ್ಚು ಐಷಾರಾಮಿ ಅರಮನೆ, 58 ವಿಮಾನ ಮತ್ತು 700 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಪುಟಿನ್ ಬಳಿ 900 ಕೋಟಿ ಮೌಲ್ಯದ ಯಾಚ್ ಹೌಸ್ ಕೂಡ ಇದೆ.  ಅಷ್ಟೇ ಅಲ್ಲ ಸಾಕಷ್ಟು $60,000 ಮತ್ತು $500,000 ಮೌಲ್ಯದ  ಐಷಾರಾಮಿ ವಾಚ್‌ಗಳನ್ನ ಹೊಂದಿದ್ದಾರೆ.

1 ಬಿಲಿಯನ್ ಡಾಲರ್‌ ಮೌಲ್ಯದ ಕಪ್ಪು ಸಮುದ್ರದ ಕರಾವಳಿಯಲ್ಲಿ 1,90,000 ಚದರ ಅಡಿ ಅರಮನೆಯನ್ನು ಹೊಂದಿದ್ದಾರೆ. ಮನೆಯಲ್ಲಿ ಈಜುಕೊಳ, ಜಿಮ್, ಸಿನಿಮಾ, ಕ್ಯಾಸಿನೊ ಸೇರಿದಂತೆ ಎಲ್ಲಾ ಐಷಾರಾಮಿಗಳಿವೆ. ಇವರ ಬಳಿ 22 ಬೋಗಿಗಳ ಬುಲೆಟ್ ಪ್ರೂಫ್ ರೈಲು ಕೂಡ ಇದೆ. ಇದನ್ನು ಘೋಸ್ಟ್ ಟ್ರೈನ್ ಎಂದೂ ಕರೆಯುತ್ತಾರೆ. ಅರಮನೆಯಲ್ಲಿ ಬಂಕರ್‌ಗಳನ್ನು ಸಹ ನಿರ್ಮಿಸಲಾಗಿದೆ ಎಂದು ವರದಿಗಳು ಹೇಳಿವೆ.

Kishor KV

Leave a Reply

Your email address will not be published. Required fields are marked *